Asian Games ಕ್ರಿಕೆಟ್: ಪಾಕ್ ಗೆ ಸೋಲುಣಿಸಿದ ಅಫ್ಘಾನ್; ಫೈನಲ್ ನಲ್ಲಿ ಭಾರತಕ್ಕೆ ಎದುರಾಳಿ
Team Udayavani, Oct 6, 2023, 4:16 PM IST
ಹ್ಯಾಂಗ್ ಝೂ: ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಸೆಮಿ ಫೈನಲ್ ಟಿ-20 ಸೆಮಿ ಫೈನಲ್ ಪಂದ್ಯದಲ್ಲಿ ಅಫ್ಘಾನಿಸ್ಥಾನ ತಂಡವು ಪಾಕಿಸ್ಥಾನದ ವಿರುದ್ಧ 4 ವಿಕೆಟ್ ಗಳ ಜಯ ಸಾಧಿಸಿ ಫೈನಲ್ ಗೆ ಲಗ್ಗೆ ಇಟ್ಟಿದೆ. ಅ.8ರಂದು ಫೈನಲ್ ನಲ್ಲಿ ಭಾರತ ತಂಡ ಚಿನ್ನಕ್ಕಾಗಿ ಅಫ್ಘಾನ್ ಎದುರು ಸೆಣಸಲಿದೆ.
ಅಫ್ಘಾನಿಸ್ಥಾನ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ಥಾನ 18ಓವರ್ ಗಳಲ್ಲಿ 115 ಕ್ಕೆ ಸರ್ವ ಪತನ ಕಂಡಿತು. ಆರಂಭಿಕ ಆಟಗಾರ ಒಮೈರ್ ಯೂಸುಫ್ ಅವರದ್ದೇ 24 ರನ್ ಗರಿಷ್ಠ ಸ್ಕೋರ್. ಅಫ್ಘಾನ್ ಬಿಗಿ ಬೌಲಿಂಗ್ ನಲ್ಲಿ ಫರೀದ್ ಅಹ್ಮದ್ 3, ಕೈಸ್ ಅಹ್ಮದ್ ಮತ್ತು ಜಹೀರ್ ಖಾನ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಅಫ್ಘಾನ್ ಸುಲಭ ಜಯ ಸಾಧಿಸಿತು.17.5 ಓವರ್ ಗಳಲ್ಲಿ6 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿ ಜಯ ಸಾಧಿಸಿತು. ನೂರ್ ಅಲಿ ಜದ್ರಾನ್ 39, ನಾಯಕ ಗುಲ್ಬದಿನ್ ನೈಬ್ ಔಟಾಗದೆ 26 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.