5 ನೇ ಏಕದಿನದಲ್ಲೂ ಕೊಹ್ಲಿ ಪಡೆಗೆ ಸೋಲು ; 3-2 ರಿಂದ ಆಸೀಸ್‌ಗೆ ಸರಣಿ 


Team Udayavani, Mar 13, 2019, 3:48 PM IST

90.jpg

ಹೊಸದಿಲ್ಲಿ : ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ  ಬುಧವಾರ ನಡೆದ ಸರಣಿ ನಿರ್ಣಾಯಕ  5ನೇ ಏಕದಿನ ಪಂದ್ಯದಲ್ಲಿ   ಪ್ರವಾಸಿ ಆಸ್ಟ್ರೇಲಿಯಾ ತಂಡ  ಭಾರತ ತಂಡವನ್ನು 35 ರನ್‌ಳಿಂದ ಮಣಿಸಿ ಸರಣಿಯನ್ನು 3-2 ಅಂತರದಿಂದ ಗೆದ್ದು ಸಂಭ್ರಮಿಸಿದೆ. ವಿಶ್ವಕಪ್‌ ಸರಣಿಗೂ ಮುನ್ನ ಆಸೀಸ್‌ಗೆ ಈ ಗೆಲುವು ಭಾರೀ ಉತ್ಸಾಹವನ್ನು ತಂದಿಟ್ಟಿದೆ. 

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಆಸೀಸ್‌ ನಿಗದಿತ 50 ಓವರ್‌ಗಳಲ್ಲಿ  9 ವಿಕೆಟ್‌ ನಷ್ಟಕ್ಕೆ  272 ರನ್‌ಗಳಿಸಿತು.273 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ನಿಗದಿತ 50 ಓವರ್‌ಗಳಲ್ಲಿ 237 ರನ್‌ಗಳಿಗೆ ಆಲೌಟಾಗುವ ಮೂಲಕ ಸೋಲನ್ನೊಪ್ಪಿತು. 

ಭಾರತ 15 ರನ್‌ ಆಗುವಷ್ಟರಲ್ಲಿ ಶಿಖರ್‌ ಧವನ್‌ ವಿಕೆಟ್‌ ಕಳೆದುಕೊಂಡು ಆರಂಭಿಕ ಅಘಾತಕ್ಕೆ ಸಿಲುಕಿತು. 68 ರನ್‌ ಆಗುವಷ್ಟರಲ್ಲಿ ಕಪ್ತಾನ ಕೊಹ್ಲಿಯನ್ನು ಕಳೆದುಕೊಂಡು ಇನ್ನಷ್ಟು ಅಘಾತ ಎದುರಿಸಿತು. 132 ರನ್‌ ಆಗುವಷ್ಟರಲ್ಲಿ 6 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತು. 

7 ವಿಕೆಟ್‌ಗೆ ಜೊತೆಯಾದ ಕೆದಾರ್‌ ಜಾಧವ್‌ ಮತ್ತು ಭುವನೇಶ್ವರ್‌ ಭರ್ಜರಿ 91 ರನ್‌ಗಳ ಜೊತೆಯಾಟವಾಡಿ ಗೆಲುವಿನ ಆಸೆ ಜೀವಂತವಾಗಿರಿಸಿದರು. ಆದರೆ 44 ರನ್‌ಗಳಿಸಿದ್ದ ಜಾಧವ್‌ ಮತ್ತು 46 ರನ್‌ಗಳಿಸಿದ್ದ ಭುವನೇಶ್ವರ್‌ ಕುಮಾರ್‌ ಒಬ್ಬರ ಹಿಂದೆ ಒಬ್ಬರು ನಿರ್ಗಮಿಸಿದರು. 

ರೋಹಿತ್‌ ಶರ್ಮಾ 56, ಶಿಖರ್‌ ಧವನ್‌ 12, ವಿರಾಟ್‌ ಕೊಹ್ಲಿ 20 , ರಿಷಭ್‌ ಪಂತ್‌ 16, ವಿಜಯ್‌ ಶಂಕರ್‌ 16 ರನ್‌ಗಳಿಸಿದರೆ ರವೀಂದ್ರ ಜಡೇಜಾ ಶೂನ್ಯಕ್ಕೆ ಔಟಾದರು, ಮೊಹಮ್ಮದ್‌ ಶಮಿ 3 ,ಕುಲದೀಪ್‌ ಯಾದವ್‌ 8, ಬುಮ್ರಾ 1 ರನ್‌ಗಳಿಸಿದರು. 

ಆಸೀಸ್‌ ಬೌಲಿಂಗ್‌ನಲ್ಲಿ ಝಂಪಾ 3 ವಿಕೆಟ್‌, ಕ್ಯುಮಿನ್ಸ್‌ , ರಿಚರ್ಡ್‌ಸನ್‌ ಮತ್ತು ಸ್ಟೊಯ್‌ನಿಸ್‌ ತಲಾ 2 ವಿಕೆಟ್‌ ಪಡೆದರು. ನಥನ್‌ ಲಯನ್‌ 1 ವಿಕೆಟ್‌ ಪಡೆದರು. 

ಆಸೀಸ್‌ ಪರ  ಆರಂಭಿಕ ಆಟಗಾರ ಉಸ್ಮಾನ್‌ ಖ್ವಾಜಾ  ಭರ್ಜರಿ ಶತಕ ಸಿಡಿಸಿದರು. ಅವರು 100 ರನ್‌ಗಳಿಸಿ ಔಟಾದರು. ಅರೋನ್‌ ಫಿಂಚ್‌ 27, ಹ್ಯಾಂಡ್ಸ್‌ಕೊಂಬ್‌ 52, ಮ್ಯಾಕ್ಸ್‌ವೆಲ್‌ 1, ಸ್ಟೊಯ್‌ನೀಸ್‌ 20, ಟರ್ನರ್‌ 20, ಅಲೆಕ್ಸ್‌ ಕೆರೆ 3 , ರಿಚರ್ಡ್‌ಸನ್‌ ಅಜೇಯ  29, ಪ್ಯಾಟ್‌ ಕ್ಯುಮಿನ್ಸ್‌ 15 ಮತ್ತು ನಥನ್‌ ಲಯನ್‌ 1 ರನ್‌ ಕೊಡುಗೆ ಸಲ್ಲಿಸಿದರು. 

ಭಾರತದ ಪರ ಬೌಲಿಂಗ್‌ನಲ್ಲಿ ಭುವನೇಶ್ವರ್‌ ಕುಮಾರ್‌ 3 , ಮೊಹಮದ್‌ ಶಮಿ 2, ಕುಮದೀಪ್‌ ಯಾದವ್‌ 1 ರವೀಂದ್ರ ಜಡೇಜಾ 2 ವಿಕೆಟ್‌ ಪಡೆದರು. 

ಟಾಪ್ ನ್ಯೂಸ್

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

1-qeqqew

I.N.D.I.A;ಗಂಡೇ ವಿಧಾನಸಭೆ ಕ್ಷೇತ್ರದಿಂದ ಕಲ್ಪನಾ ಸೊರೇನ್‌ ಕಣಕ್ಕೆ?

Ashwin Vaishnav

Train ಪ್ರಯಾಣಿಕರಿಗೆ ಇನ್ನು 20 ರೂ.ಗಳಲ್ಲಿ ಊಟ!

1-sadguru

Sadhguru; ಕಾವೇರಿ ಕಾಲಿಂಗ್‌ ಮೂಲಕ 10.9 ಕೋಟಿ ಸಸಿಗಳ ನಾಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

IPL: ಎಲ್ಲೆ ಮೀರಿ ವಿಕೆಟ್‌ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್‌ ಸಲಾಂಗೆ ಛೀಮಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

33

Lok Sabha polls: ಹಂತ-1ರ ಮತದಾನಕ್ಕೆ ಭರ್ಜರಿ ಸಿದ್ಧತೆ

voter

ಈ ಲೋಕ ಚುನಾವಣೆ ವಿಶ್ವದಲ್ಲೇ ಅತ್ಯಂತ ದುಬಾರಿ ಚುನಾವಣೆ!

1-weeewq

Hyderabad: ಓವೈಸಿ ಪ್ರತಿಸ್ಪರ್ಧಿ, ಬಿಜೆಪಿಯ ಮಾಧವಿ ಆಸ್ತಿ 221.37 ಕೋಟಿ ರೂ.

1-weewewqe

Emotional; 11 ವರ್ಷ ಬಳಿಕ ಗಲ್ಲಿಗೆ ಗುರಿಯಾದ ಮಗಳನ್ನು ಭೇಟಿಯಾದ ತಾಯಿ!

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Archery World Cup: ಆರ್ಚರಿ ವಿಶ್ವಕಪ್‌ ರಿಕರ್ವ್‌ ವಿಭಾಗದಲ್ಲೂ ಭಾರತ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.