ಡಬ್ಲ್ಯುಟಿಎ ಆಕ್ಲೆಂಡ್ ಕ್ಲಾಸಿಕ್: ವೀನಸ್ ವಿಲಿಯಮ್ಸ್ಗೆ ಸೋಲು
Team Udayavani, Jan 5, 2019, 12:30 AM IST
ಆಕ್ಲೆಂಡ್: ಅಮೆರಿಕದ ವೀನಸ್ ವಿಲಿಯಮ್ಸ್ “ಡಬ್ಲ್ಯುಟಿಎ ಆಕ್ಲೆಡ್ ಕ್ಲಾಸಿಕ್’ ಟೂರ್ನಿಯ ಕ್ವಾರ್ಟರ್ ಫೈನಲ್ನಲ್ಲಿ ಅಘಾತಕಾರಿ ಸೋಲನುಭವಿಸಿದ್ದಾರೆ. ಶುಕ್ರವಾರ ನಡೆದ ಪಂದ್ಯದಲ್ಲಿ ವಿಲಿಯಮ್ಸ್ ಕೆನಡಾದ ಯುವ ಟೆನಿಸ್ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ವಿರುದ್ಧ 7-6 (7-1), 1-6, 3-6 ಸೆಟ್ಗಳಿಂದ ಎಡವಿದರು.
18 ವರ್ಷದ ಬಿಯಾಂಕಾ ವಿಶ್ವ ರ್ಯಾಂಕಿಂಗ್ನಲ್ಲಿ 152ನೇ ಸ್ಥಾನದಲ್ಲಿದ್ದಾರೆ. ಅವರು ತನಗಿಂತ 20 ವರ್ಷ ಹಿರಿಯ ಆಟಗಾರ್ತಿ ಹಾಗೂ 7 ಬಾರಿಯ ಗ್ರ್ಯಾನ್ಸ್ಲಾಮ್ ವಿಜೇತ ವಿಲಿಯಮ್ಸ್ಗೆ ಅಘಾತವಿಕ್ಕಿ ಅಚ್ಚರಿಯ ಫಲಿತಾಂಶ ದಾಖಲಿಸಿದರು.
ಇದು ಬಿಯಾಂಕಾ ಅವರ 2ನೇ ದೊಡ್ಡ ಬೇಟೆ. ಕ್ವಾರ್ಟರ್ ಫೈನಲ್ ಹಾದಿಯಲ್ಲಿ ಬಿಯಾಂಕಾ ಅಗ್ರ ಶ್ರೇಯಾಂಕಿತೆ ಹಾಗೂ ವಿಶ್ವ ರ್ಯಾಂಕಿಂಗ್ನಲ್ಲಿ 3ನೇ ಸ್ಥಾನದಲ್ಲಿರುವ ಕ್ಯಾರೊಲಿನ್ ವೋಜ್ನಿಯಾಕಿ ವಿರುದ್ಧ ಗೆದ್ದಿದ್ದರು. ಬಿಯಾಂಕ ಸೆಮಿಫೈನಲ್ನಲ್ಲಿ ತೈವಾನ್ನ ಶಿಶ್ ಶು ವೀ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೂಲಿಯಾ ಜಾರ್ಜಸ್ ಕೆನಡಾದ ಯುಗೇನಿ ಬೌಶಾರ್ಡ್ ಅವರನ್ನು 3-6, 6-3, 7-6 (8-6)ರಿಂದ ಸೋಲಿಸಿದರು. ಸೆಮಿಫೈನಲ್ನಲ್ಲಿ ಅವರು ಸ್ಲೋವಾಕಿಯದ ವಿಕ್ಟೋರಿಯಾ ಕುಜೊ¾àವಾ ವಿರುದ್ಧ ಆಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 World Cup; ಐರ್ಲೆಂಡ್ ಎದುರು ಪಾಕ್ ಗೆ ಗೆಲುವಿನ ಸಮಾಧಾನ
ODI ಸ್ಮೃತಿ ಮಂಧನಾ ಅಮೋಘ ಶತಕ; ಮಂಕಾದ ದಕ್ಷಿಣ ಆಫ್ರಿಕಾ
Team India; ಅಶಿಸ್ತಿನ ಕಾರಣದಿಂದ ತಂಡದಿಂದ ಹೊರಬಿದ್ದರೇ ಗಿಲ್; ಸ್ಪಷ್ಟನೆ ನೀಡಿದ ಕೋಚ್
T20 WC: ಹೋರಾಡಿ ಸೋತು ಹೊರಬಿದ್ದ ಸ್ಕಾಟ್ಲೆಂಡ್; ಆಸೀಸ್ ಗೆಲುವಿನಿಂದ ಸೂಪರ್8 ಗೆ ಆಂಗ್ಲರು
David Wiese: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಡೇವಿಡ್ ವೀಸ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.