ವಿಂಡೀಸ್ ಸರಣಿಗೆ ಭಾರತ ತಂಡ ಪ್ರಕಟ: ಧವನ್ ಸೇಫ್ ; ಭುವಿ ಎಂಟ್ರಿ, ರೋಹಿತ್ ಗಿಲ್ಲ ರೆಸ್ಟ್

Team Udayavani, Nov 21, 2019, 9:24 PM IST

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಮುಂಬಯಿ: ಪ್ರವಾಸಿ ವೆಸ್ಟ್ ವಿಂಡೀಸ್ ವಿರುದ್ಧ ನಡೆಯಲಿರುವ ಟಿ20 ಮತ್ತು ಏಕದಿನ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ವಿರಾಟ್ ಕೊಹ್ಲಿ ಅವರೇ ಏಕದಿನ ಮತ್ತು ಟಿ20 ತಂಡಗಳನ್ನು ಮುನ್ನಡೆಸಲಿದ್ದಾರೆ. ಮತ್ತು ಉಪ ಕಪ್ತಾನನ ಹೊಣೆಗಾರಿಕೆ ರೋಹಿತ್ ಶರ್ಮಾ ಅವರ ಹೆಗಲಿಗೇರಿದೆ. ಅಷ್ಟೇನೂ ಫಾರ್ಮ್ ನಲ್ಲಿ ಇಲ್ಲದ ಶಿಖರ್ ಧವನ್ ಅವರನ್ನು ಕೈಬಿಡಬಹುದು ಮತ್ತು ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಬಹದೆಂಬ ನಿರೀಕ್ಷೆಯನ್ನು ಆಯ್ಕೆಗಾರರು ಹುಸಿಮಾಡಿದ್ದಾರೆ.

ಗಾಯಗೊಂಡು ತಂಡದಿಂದ ಹೊರಗುಳಿದಿದ್ದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಟಿ20 ಮತ್ತು ಏಕದಿನ ತಂಡಗಳಿಗೆ ಮರಳಿದ್ದಾರೆ. ಇನ್ನು ಟಿ20 ತಂಡದಲ್ಲಿ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಸ್ಥಾನ ಪಡೆದಿದ್ದಾರೆ. ಜುಲೈ 2017ರಲ್ಲಿ ತನ್ನ ಕೊನೆಯ ಟಿ20 ಪಂದ್ಯವನ್ನು ಆಡಿದ್ದ ಮಹಮ್ಮದ್ ಶಮಿ ಅವರು ಮತ್ತೆ ಟಿ20 ತಂಡಕ್ಕೆ ಮರಳಿದ್ದು ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಗೆ ಟಿಕೆಟ್ ಗಿಟ್ಟಿಸುವಲ್ಲಿ ಶಮಿಗೆ ಈ ಸರಣಿ ಮಹತ್ವದ್ದೆಣಿಸಲಿದೆ.

ಏಕದಿನ ತಂಡ: ವಿರಾಟ್ ಕೊಹ್ಲಿ (ಕಪ್ತಾನ), ರೋಹಿತ್ ಶರ್ಮಾ (ಉಪ ಕಪ್ತಾನ), ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಭ್ ಪಂತ್, ಮನೀಶ್ ಪಾಂಡೆ, ಶ್ರೇಯಸ್ ಐಯ್ಯರ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಶಿವಂ ದುಬೆ, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮಹಮ್ಮದ್ ಶಮಿ, ದೀಪಕ್ ಚಾಹರ್ ಮತ್ತು ಭುವನೇಶ್ವರ್ ಕುಮಾರ್

ಟಿ20 ತಂಡ: ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ಶಿಖರ್ ಧವನ್, ರಿಷಭ್ ಪಂತ್, ಮನೀಶ್ ಪಾಂಡೆ, ಶ್ರೇಯಸ್ ಐಯ್ಯರ್, ಶಿವಂ ದುಭೆ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಮಹಮ್ಮದ್ ಶಮಿ.

ಭಾರತ ಮತ್ತು ವೆಸ್ಟ್ ವಿಂಡೀಸ್ ನಡುವಿನ ಟಿ20 ಸರಣಿ ಡಿಸೆಂಬರ್ 06ರಿಂದ ಪ್ರಾರಂಭಗೊಳ್ಳಲಿದೆ. ಇದಾದ ಬಳಿಕ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಮೂರು ಟಿ20 ಪಂದ್ಯಗಳು ಕ್ರಮವಾಗಿ ಮುಂಬಯಿ (ಡಿ.06), ತಿರುವನಂತಪುರಂ (08) ಮತ್ತು ಹೈದ್ರಾಬಾದ್ (11) ಗಳಲ್ಲಿ ನಡೆಯಲಿವೆ.

ಪ್ರಥಮ ಏಕದಿನ ಪಂದ್ಯ ಡಿಸೆಂಬರ್ 15ರಂದು ಚೆನ್ನೈನಲ್ಲಿ ನಡೆಯಲಿದೆ. ಎರಡನೇ ಏಕದಿನ ಡಿಸೆಂಬರ್ 18ರಂದು ವಿಶಾಖಪಟ್ಟಣದಲ್ಲಿ ನಡೆಯಲಿದೆ ಮತ್ತು ಅಂತಿಮ ಏಕದಿನ ಡಿಸೆಂಬರ್ 22ರಂದು ಕಟಕ್ ನಲ್ಲಿ ನಡೆಯಲಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ