Udayavni Special

ರಾಹುಲ್–ಮಯಾಂಕ್ ಭರ್ಜರಿ ಬ್ಯಾಟಿಂಗ್ ಜೊತೆಯಾಟ: ರಾಯಲ್ಸ್ ಬೆವರಿಳಿಸಿದ ‘ಹುಡುಗರು’!

ಈ ಬಾರಿಯ ಡ್ರೀಂ ಇಲೆವೆನ್ IPL ಕೂಟದಲ್ಲಿ ದಾಖಲಾಯಿತು ಕನ್ನಡಿಗರದ್ದೇ ಎರಡು ಶತಕ! ; ರಾಜಸ್ಥಾನ್ ರಾಯಲ್ಸ್ ಗೆಲುವಿಗೆ 224 ರನ್ ಗುರಿ

Team Udayavani, Sep 27, 2020, 9:07 PM IST

Mayank-01

ಶಾರ್ಜಾ: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಭರ್ಜರಿ ಶತಕ ಬಾರಿಸಿ ಕೊಹ್ಲಿ ಪಡೆಯ ಹೆಡೆಮುರಿ ಕಟ್ಟಿದ್ದ ಕೆ.ಎಲ್. ರಾಹುಲ್ (69) ಹಾಗೂ ಕನ್ನಡ ನಾಡಿನ ಇನ್ನೊಬ್ಬ ಬ್ಯಾಟಿಂಗ್ ತಾರೆ ಮಯಾಂಕ್ ಅಗರ್ವಾಲ್ (106) ನಡುವಿನ ಭರ್ಜರಿ ಜೊತೆಯಾಟದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಇಂದಿನ ಐಪಿಎಲ್ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು 223 ರನ್ ಗಳ ಭರ್ಜರಿ ಮೊತ್ತವನ್ನು ದಾಖಲಿದೆ.

ಕಳೆದ ಪಂದ್ಯದಲ್ಲಿ ರಾಹುಲ್ ಭರ್ಜರಿ ಶತಕ ಬಾರಿಸಿ ಮಿಂಚಿದರೆ ಈ ಪಂದ್ಯದಲ್ಲಿ ಮಯಾಂಕ್ ಅಗರ್ವಾಲ್ (106) ಶತಕದ ಸಾಧನೆ ಮಾಡಿದರು. ಈ ಮೂಲಕ ಅರಬ್ ನಾಡಿಗೆ ಶಿಫ್ಟ್ ಆಗಿರುವ ಈ ಬಾರಿಯ ಐಪಿಎಲ್ ಕೂಟದಲ್ಲಿ ಇಂದಿನವರೆಗೆ ದಾಖಲಾದ ಎರಡೂ ಶತಕಗಳನ್ನು ಕರ್ನಾಟಕದ ‘ಹುಡುಗರೇ’ ಬಾರಿಸಿರುವುದು ವಿಶೇಷ!

ಇವರಿಬ್ಬರ ನಡುವಿನ ಭರ್ಜರಿ 183 ರನ್ ಗಳ ಓಪನಿಂಗ್ ಪಾರ್ಟನರ್ ಶಿಪ್ ನಿಂದಾಗಿ ಕಿಂಗ್ಸ್ ಇಲವೆನ್ ಪಂಜಾಬ್ ನಿಗದಿತ 20 ಓವರ್ ಗಳಲ್ಲಿ 02 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿ ರಾಜಸ್ಥಾನ ರಾಯಲ್ಸ್ ಗೆಲುವಿಗೆ 224 ರನ್ ಗಳ ಸವಾಲನ್ನು ನೀಡಿದೆ.

ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ಗೆಲ್ಲಿಸಿದ ರಾಹುಲ್ ಸ್ಪೋಟಕ ಬ್ಯಾಟಿಂಗ್!

ರಾಜಸ್ಥಾನ್ ರಾಯಲ್ಸ್ ಕಪ್ತಾನ ಸ್ಟೀವನ್ ಸ್ಮಿತ್ ಅವರು ಟಾಸ್ ಗೆದ್ದು ಕಿಂಗ್ಸ್ ಇಲವನ್ ಪಂಜಾಬ್ ತಂಡವನ್ನು ಬ್ಯಾಟಿಂಗ್ ಗೆ ಇಳಿಸಿದರು. ಆದರೆ ಓಪನಿಂಗ್ ಜೋಡಿಯಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ರಾಯಲ್ಸ್ ತಂಡದ ಲೆಕ್ಕಾಚಾರವನ್ನು ಸಂಪೂರ್ಣ ಉಲ್ಟಾ ಮಾಡಿದರು.

ಬೆಂಗಳೂರು ವಿರುದ್ಧದ ಕಳೆದ ಪಂದ್ಯದಲ್ಲಿ ರಾಹುಲ್ ಅಬ್ಬರಿಸಿದ್ದರೆ ಇಲ್ಲಿ ಮಯಾಂಕ್ ಅಬ್ಬರಿಸಿದರು. ರಾಯಲ್ಸ್ ಬೌಲರ್ ಗಳನ್ನು ಬೆಂಡೆತ್ತಿದ ಮಯಾಂಕ್ ಕೇವಲ 50 ಎಸೆತಗಳಲ್ಲಿ 10 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 106 ರನ್ ಗಳಿಸಿ ಶಾರ್ಜಾ ಮೈದಾನದಲ್ಲಿ ವಿಜೃಂಭಿಸಿದರು.

ಇನ್ನೊಂದೆಡೆ ಮಯಾಂಕ್ ಗೆ ಸೂಕ್ತ ಸಾಥ್ ನೀಡಿದ ರಾಹುಲ್ 54 ಎಸೆತಗಳಲ್ಲಿ 69 ರನ್ ಬಾರಿಸಿದರು. ಕರುನಾಡ ಈ ಜೋಡಿ 17ನೇ ಓವರ್ ವರೆಗೆ ಕ್ರೀಸ್ ಆಕ್ರಮಿಸಿಕೊಂಡಿತ್ತು. ಬಳಿಕ 9 ಎಸೆತಗಳ ಅಂತರದಲ್ಲಿ ಇವರಿಬ್ಬರೂ ಔಟಾದರು.

ಪಂಜಾಬ್ ಬ್ಯಾಟಿಂಗ್ ಇನ್ನಿಂಗ್ಸ್ ನ ಕೊನೆಯಲ್ಲಿ ಕಿಚ್ಚು ಹಚ್ಚಿದ ನಿಕೊಲಸ್ ಪೂರಣ್ (25) ಭರ್ಜರಿ ಆಟವಾಡಿದ ಕಾರಣ ಕಿಂಗ್ಸ್ ಪಂಜಾಬ್ 223 ರನ್ ಗಳ ಭರ್ಜರಿ ಮೊತ್ತ ಕಲೆಹಾಕಲು ಸಾಧ್ಯವಾಯಿತು. ಇನ್ನಿಂಗ್ಸ್ ನ ಅಂತಿಮ ಓವರ್ ಗಳಲ್ಲಿ ರಾಜಸ್ಥಾನ ಬೌಲರ್ ಗಳನ್ನು ಕಾಡಿದ ಪೂರಣ್ ಅವರು ಕೇವಲ 8 ಎಸೆತಗಳಲ್ಲಿ ಔಟಾಗದೇ 25 ರನ್ ಬಾರಿಸಿದರು, ಸಿಡಿಸಿದ್ದು 03 ಸಿಕ್ಸರ್. ಗ್ಲೆನ್ ಮ್ಯಾಕ್ಸ್ ವೆಲ್ 13 ರನ್ ಗಳಿಸಿ ಔಟಾಗದೇ ಉಳಿದರು.

ಇಂದು ರಾಜಸ್ಥಾನ ಬೌಲರ್ ಗಳ ಎಕಾನಮಿ ರೇಟ್ ಡಬ್ಬಲ್ ಫಿಗರ್ ನಲ್ಲಿತ್ತು. ಅಂಕಿತ್ ರಜಪೂತ್ ಮತ್ತು ಟಾಮ್ ಕರನ್ ಅವರು ತಲಾ 1 ವಿಕೆಟ್ ಪಡೆದರು. ರಾಹುಲ್ ತೆವಾಟಿಯಾ 1 ಓವರ್ ನಲ್ಲಿ 19 ರನ್ ನೀಡಿ ದುಬಾರಿಯೆಣಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ಅಣೆಕಟ್ಟು ನಿರ್ವಹಣೆಗೆ 10 ಸಾವಿರ ಕೋಟಿ

ಅಣೆಕಟ್ಟು ನಿರ್ವಹಣೆಗೆ 10 ಸಾವಿರ ಕೋಟಿ

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

IPL

IPL 2020 : ಕೊಲ್ಕತ್ತಾ – ಚೆನ್ನೈ ಮುಖಾಮುಖಿ : ಕೆಕೆಆರ್‌ಗೆ ಕಂಟಕವಾಗಿ ಪರಿಣಮಿಸಿದ ಚೆನ್ನೈ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

ಅಡಿಗಡಿಗೂ ನನಗೆ ತೊಂದರೆ ನೀಡುತ್ತಿರುವುದೇಕೆ? ನಾನು ಮಾಡಿರುವ ಅನ್ಯಾಯವಾದರೂ ಏನು?: ಕುಸುಮಾ

haveri

ಹಾವೇರಿ: ಇಂದು 45 ಜನರಿಗೆ ಕೋವಿಡ್ ಪಾಸಿಟಿವ್; 50 ಮಂದಿ ಗುಣಮುಖ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

ಆಸೀಸ್‌ ತಂಡಕ್ಕೆ ಆಲ್‌ರೌಂಡರ್‌ ಗ್ರೀನ್‌ ಸೇರ್ಪಡೆ

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

“ಸೂರ್ಯ ಟೀಮ್‌ ಇಂಡಿಯಾದಲ್ಲಿ ಇರಬೇಕಿತ್ತು’

IPL

IPL 2020 : ಕೊಲ್ಕತ್ತಾ – ಚೆನ್ನೈ ಮುಖಾಮುಖಿ : ಕೆಕೆಆರ್‌ಗೆ ಕಂಟಕವಾಗಿ ಪರಿಣಮಿಸಿದ ಚೆನ್ನೈ

chennai

ಚೆನ್ನೈ ವಿರುದ್ಧದ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ KKR: ಟಾಸ್ ಗೆದ್ದ ಧೋನಿ ಪಡೆ

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ವಿವಾದ!

ಡಿಆರ್‌ಎಸ್‌ಗೆ ಮನವಿ ಬೇಡ: ಅಂಪೈರ್‌ರಿಂದಲೇ ಸಲಹೆ, ಅನಿಲ್‌ ಚೌಧರಿ ವಿವಾದ!

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

UDUPIಉಡುಪಿ ನಗರಸಭೆ; ಸುಮಿತ್ರಾ ನಾಯಕ್‌ ಅಧ್ಯಕ್ಷೆ , ಲಕ್ಷ್ಮೀ ಉಪಾಧ್ಯಕ್ಷೆಯಾಗಿ ಆಯ್ಕೆ

ಉಡುಪಿ ನಗರಸಭೆ; ಸುಮಿತ್ರಾ ನಾಯಕ್‌ ಅಧ್ಯಕ್ಷೆ , ಲಕ್ಷ್ಮೀ ಉಪಾಧ್ಯಕ್ಷೆಯಾಗಿ ಆಯ್ಕೆ

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ಮುಗಿಯಿತು ಸ್ವಾಭಿಮಾನಿ ವಿದ್ಯಾರ್ಥಿಯ “ಕೂಲಿ ಬದುಕು’

ದೇಗುಲ ನಿರ್ಮಿಸಲು ನಿಷೇಧವಿಲ್ಲ: ಪಾಕ್‌ ಸಮಿತಿ

ದೇಗುಲ ನಿರ್ಮಿಸಲು ನಿಷೇಧವಿಲ್ಲ: ಪಾಕ್‌ ಸಮಿತಿ

ಅಣೆಕಟ್ಟು ನಿರ್ವಹಣೆಗೆ 10 ಸಾವಿರ ಕೋಟಿ

ಅಣೆಕಟ್ಟು ನಿರ್ವಹಣೆಗೆ 10 ಸಾವಿರ ಕೋಟಿ

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

ಟ್ರಂಪ್‌ಗೆ ದೊಡ್ಡ ಸವಾಲೊಡ್ಡುತ್ತಿರುವ ಜೋ ಬೈಡೆನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.