ಈ ಮೂವರು ಭಾರತೀಯರ ವಿಕೆಟ್ ಹ್ಯಾಟ್ರಿಕ್ ರೂಪದಲ್ಲಿ ಪಡೆಯಬೇಕು: ಶಹೀನ್ ಶಾ ಅಫ್ರಿದಿ ಮಹದಾಸೆ
Team Udayavani, Jan 29, 2022, 3:54 PM IST
ಇಸ್ಲಮಾಬಾದ್: ಕಳೆದ ಟಿ20 ವಿಶ್ವಕಪ್ ನ ಆರಂಭಿಕ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಮಿಂಚಿದ್ದ ಶಹೀನ್ ಶಾ ಅಫ್ರಿದಿ ಇದೀಗ ತನ್ನ ಮಹದಾಸೆಯೊಂದನ್ನು ಹೇಳಿಕೊಂಡಿದ್ದಾರೆ. ತನಗೆ ಹ್ಯಾಟ್ರಿಕ್ ರೂಪದಲ್ಲಿ ಮೂವರು ಭಾರತೀಯರ ವಿಕೆಟ್ ಪಡೆಯಬೇಕು ಎಂದು ಅಫ್ರಿದಿ ಹೇಳಿದ್ದಾರೆ.
ನಿಮ್ಮ ಕನಸಿನ ಹ್ಯಾಟ್ರಿಕ್ ಬಗ್ಗೆ ಹೇಳಿ ಎಂದು ಕೇಳಿದಾಗ 21 ವರ್ಷದ ಪಾಕಿಸ್ಥಾನಿ ವೇಗದ ಬೌಲರ್ “ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿ” ಎಂದು ಹೇಳಿದ್ದರು.
ವೃತ್ತಿ ಜೀವನದಲ್ಲಿ ಪಡೆದ ಅತ್ಯಂತ ಅಮೂಲ್ಯ ವಿಕೆಟ್ ಯಾವುದು ಎಂದು ಕೇಳಿದಾಗ ಶಹೀನ್ ಶಾ ಅಫ್ರಿದಿ ಅವರು ‘ಅದು ವಿರಾಟ್ ಕೊಹ್ಲಿ’ ವಿಕೆಟ್ ಎಂದರು.
ಇದನ್ನೂ ಓದಿ:ಇಂದು ಅಂಡರ್ 19 ಕ್ವಾರ್ಟರ್ ಫೈನಲ್: ಬಾಂಗ್ಲಾ ವಿರುದ್ಧ ಭಾರತಕ್ಕೆ ಸೇಡಿನ ಪಂದ್ಯ
ಕಳೆದ ಅಕ್ಟೋಬರ್ ನಲ್ಲಿ ದುಬೈನಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ಪಾಕಿಸ್ಥಾನ 10 ವಿಕೆಟ್ ಅಂತರದ ಗೆಲುವು ಸಾಧಿಸಿತ್ತು. ವಿಶೇಷವೆಂದರೆ, ಈ ಪಂದ್ಯದಲ್ಲಿ ಶಹೀನ್ ಶಾ ಅಫ್ರಿದಿ ಅವರು ರೋಹಿತ್ ಶರ್ಮಾ, ಕೆ.ಎಲ್.ರಾಹುಲ್ ಮತ್ತು ವಿರಾಟ್ ಕೊಹ್ಲಿ ವಿಕೆಟ್ ಪಡೆದು ಪಂದ್ಯದ ಗತಿ ಬದಲಾಯಿಸಿದ್ದರು. ಆದರೆ ಅದು ಹ್ಯಾಟ್ರಿಕ್ ಆಗಿರಲಿಲ್ಲ.