ಮುಂಬೈನಿಂದ ಕೆಕೆಆರ್ ಪಾಲಾದ ಸಿದ್ದೇಶ್ ಲಾಡ್: ಮುಂಬೈ ಸೇರಿದ ಹೊಸ ಬೌಲರ್

Team Udayavani, Nov 15, 2019, 4:18 PM IST

ಮುಂಬೈ:  ಹಾಲಿ ಐಪಿಎಲ್ ಚಾಂಪಿಯನ್ ಮುಂಬೈ ಇಂಡಿಯನ್ಸ್ ತನ್ನ ಒಬ್ಬ ಆಟಗಾರನ ಬಿಟ್ಟುಕೊಟ್ಟು, ಮತ್ತೋರ್ವ ಬೌಲರ್ ನನ್ನು ತಂಡಕ್ಕೆ ಸೇರಿಸಿ ಕೊಂಡಿದೆ. ಮುಂಬೈ ಬ್ಯಾಟ್ಸಮನ್ ಸಿದ್ದೇಶ್ ಲಾಡ್ ಅವರನ್ನು ಮುಂಬೈ ಇಂಡಿಯನ್ಸ್ ಬಿಟ್ಟುಕೊಟ್ಟಿದೆ.

ಮುಂದಿನ ಆವೃತ್ತಿಯಲ್ಲಿ ಸಿದ್ದೇಶ್ ಲಾಡ್ ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಲಿದ್ದಾರೆ. ದೇಶೀಯ ಕ್ರಿಕಟ್ ನಲ್ಲಿ ಮಿಂಚಿದ್ದರೂ ಸರಿಯಾದ ಐಪಿಎಲ್ ಅವಕಾಶಕ್ಕಾಗಿ ಕಾಯುತ್ತಿರುವ ಸಿದ್ದೇಶ್ ಗೆ ಕೊಲ್ಕತ್ತಾದಲ್ಲಿ ಹೆಚ್ಚಿನ ಅವಕಾಶ ಸಿಗುವ ನಿರೀಕ್ಷೆಯಿದೆ.

ಮುಂಬೈ ಮರಳಿದ ಕುಲಕರ್ಣಿ

ಈ ಮೊದಲು ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದ ಬೌಲರ್ ಧವಳ್ ಕುಲಕರ್ಣಿ ಮತ್ತೆ ಮುಂಬೈಗೆ ಮರಳಿದ್ದಾರೆ. ಅವರು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಕಳೆದ ಕೆಲವು ವರ್ಷಗಳಿಂದ ಆಡುತ್ತಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ