ಎರಡನೇ T20: ಟೀಂ ಇಂಡಿಯಾ ಗೆಲುವಿಗೆ 154 ರನ್ ಗುರಿ

Team Udayavani, Nov 7, 2019, 8:50 PM IST

ರಾಜ್ ಕೋಟ್: ಇಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಗೆಲುವಿಗೆ 154 ರನ್ ಗಳ ಗುರಿ ಲಭಿಸಿದೆ. ಟಾಸ್ ಗೆದ್ದ ಭಾರತ ಬಾಂಗ್ಲಾವನ್ನು ಬ್ಯಾಟಿಂಗ್ ಗೆ ಇಳಿಸಿತು. 20 ಓವರುಗಳ ಮುಕ್ತಾಯಕ್ಕೆ ಬಾಂಗ್ಲಾ 06 ವಿಕೆಟುಗಳನ್ನು ಕಳೆದುಕೊಂಡು 153 ರನ್ ಗಳಿಸಿತು.

ಬಾಂಗ್ಲಾ ಆರಂಭಿಕರಾದ ಲಿಟನ್ ದಾಸ್ (29) ಮತ್ತು ಮುಹಮ್ಮದ್ ನಯೀಮ್ (36) ತಂಡಕ್ಕೆ ಉತ್ತಮ ಆರಂಭವನ್ನು ಒದಗಿಸಿದರು. ಮೊದಲ ವಿಕೆಟಿಗೆ ಈ ಜೋಡಿ 60 ರನ್ ಗಳ ಅಮೂಲ್ಯ ಭಾಗೀದಾರಿಕೆ ಒದಗಿಸಿದರು.

ಬಳಿಕ ಸೌಮ್ಯ ಸರ್ಕಾರ್ (30) ಬಿರುಸಿನ ಆಟಕ್ಕೆ ಇಳಿದಿದ್ದರಿಂದ ಬಾಂಗ್ಲಾ ಭಾರೀ ಮೊತ್ತ ಪೇರಿಸುವ ಸೂಚನೆ ಲಭಿಸಿತ್ತು. ಆದರೆ 20 ಎಸೆತಗಳಲ್ಲಿ 30 ರನ್ ಸಿಡಿಸಿದ್ದ ಸೌಮ್ಯ ಸರ್ಕಾರ್ ಔಟಾಗುವುದರೊಂದಿಗೆ ಬಾಂಗ್ಲಾ ರನ್ ಓಟಕ್ಕೆ ಕಡಿವಾಣ ಬಿತ್ತು. ಬಾಂಗ್ಲಾ ಬ್ಯಾಟಿಂಗ್ ಸರದಿಯಲ್ಲಿ ಮಿಂಚಿದ ಇನ್ನೊಬ್ಬ ಬ್ಯಾಟ್ಸ್ ಮನ್ ಕಪ್ತಾನ ಮುಹಮದುಲ್ಲಾ 30 ರನ್ ಗಳಿಸಿದರು.

ಭಾರತದ ಪರ ಉತ್ತಮ ದಾಳಿ ಸಂಘಟಿಸಿದ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರು 02 ವಿಕೆಟ್ ಗಳಿಸಿದರು. ದೀಪಕ್ ಚಾಹರ್, ಖಲೀಲ್ ಅಹಮ್ಮದ್, ವಾಷಿಂಗ್ಟನ್ ಸುಂದರ್ ತಲಾ ಒಂದು ವಿಕೆಟ್ ಪಡೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ