COMEDK UGET Result: ಬೆಂಗಳೂರಿನ ಬಾಲಸತ್ಯ ಸರವಣನ್‌ಗೆ ಫ‌ಸ್ಟ್‌ ರ್‍ಯಾಂಕ್‌

ಅಗ್ರ 10 ರ್‍ಯಾಂಕಿಂಗ್‌ನಲ್ಲಿ ಕರ್ನಾಟಕಕ್ಕೆ 8 ರ್‍ಯಾಂಕ್‌ ; ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಪ್ರವೇಶ ಪರೀಕ್ಷೆ

Team Udayavani, May 25, 2024, 6:14 AM IST

COMEDK: ಬೆಂಗಳೂರಿನ ಬಾಲಸತ್ಯ ಸರವಣನ್‌ಗೆ ಫ‌ಸ್ಟ್‌ ರ್‍ಯಾಂಕ್‌

ಬೆಂಗಳೂರು: ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಪ್ರವೇಶಕ್ಕಾಗಿ ಕಾಮೆಡ್‌- ಕೆ ನಡೆಸಿದ್ದ ಯುಜಿಇಟಿ ಪರೀಕ್ಷೆ ಫ‌ಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಬೆಂಗಳೂರಿನ ಬಾಲಸತ್ಯ ಸರವಣನ್‌ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕರ್ನಾಟಕದ 150 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳು ಸೇರಿದಂತೆ ದೇಶದೆಲ್ಲೆಡೆ ಇರುವ ಒಟ್ಟು 190 ಖಾಸಗಿ ಇಂಜಿನಿಯರಿಂಗ್‌ ಕಾಲೇಜುಗಳ ಸುಮಾರು 22 ಸಾವಿರ ಎಂಜಿನಿಯರಿಂಗ್‌ ಸೀಟುಗಳ ಪ್ರವೇಶಾತಿಗಾಗಿ ಈ ಪರೀಕ್ಷೆಯನ್ನು ಮೇ 12 ರಂದು ದೇಶಾದ್ಯಂತ ನಡೆಸಲಾಗಿತ್ತು. ಒಟ್ಟು 1,03,799 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಅಗ್ರ ಹತ್ತು ರ್‍ಯಾಂಕಿಂಗ್‌ನಲ್ಲಿ 8 ರ್‍ಯಾಂಕಿಂಗ್‌ ಕರ್ನಾಟಕಕ್ಕೆ ಲಭಿಸಿದೆ. ರಾಜ್ಯದ ಬಾಲಸತ್ಯ ಸರವಣನ್‌ ಮೊದಲ ರ್‍ಯಾಂಕ್‌ ಪಡೆದಿದ್ದರೆ ಬಳಿಕದ ರ್‍ಯಾಂಕ್‌ಗಳನ್ನು ರಾಜ್ಯದವರೇ ಆದ ದೇವಾಂಶ್‌ ತ್ರಿಪಾಠಿ, ಸನಾ ತಬಸ್ಸುಮ್‌, ಪ್ರಕೇತ್‌ ಗೋಯೆಲ್  ಪಡೆದಿದ್ದಾರೆ. ಐದನೇ ರ್‍ಯಾಂಕ್‌ ಹಿಮಾಚಲ ಪ್ರದೇಶದ ಮಾನಸ್‌ ಸಿಂಗ್‌ ರಜಪೂತ್‌, ಆರನೇ ರ್‍ಯಾಂಕ್‌ ಆಂಧ್ರ ಪ್ರದೇಶದ ಗಣಿಪಿಸೆಟ್ಟಿ ನಿಶ್ಚಲ್‌ ಅವರಿಗೆ ಲಭಿಸಿದೆ. ಆ ಬಳಿಕದ ರ್‍ಯಾಂಕ್‌ಗಳು ಕ್ರಮವಾಗಿ ರಾಜ್ಯದವೇ ಆದ ನಿಕೇತ್‌ ಪ್ರಕಾಶ್‌ ಅಚಂತಾ, ನೇಹಾ ಪ್ರಭು, ಜಗದೀಶ್‌ ರೆಡ್ಡಿ ಮಾರ್ಲ ಮತ್ತು ಈಶ್ವರ್‌ ಚಂದ್ರ ರೆಡ್ಡಿ ಮುಲ್ಕಾ ಅವರಿಗೆ ಸಂದಿದೆ.

ಶೇ.90 ರಿಂದ ಶೇ. 100ರ ಮಧ್ಯೆ 10,575 ವಿದ್ಯಾರ್ಥಿಗಳು ಅಂಕ ಪಡೆದಿದ್ದು ಈ ಪೈಕಿ 3,126 ಮಂದಿ ಕರ್ನಾಟಕದವರು. ಶೇ. 80 ರಿಂದ ಶೇ. 90ರ ಮಧ್ಯೆ 10,538 ವಿದ್ಯಾರ್ಥಿಗಳ ಅಂಕ ಗಳಿಸಿದ್ದು ಈ ಪೈಕಿ 2,749 ವಿದ್ಯಾರ್ಥಿಗಳು ಕರ್ನಾಟಕಕ್ಕೆ ಸೇರಿದವರಾಗಿದ್ದಾರೆ.

ಶುಕ್ರವಾರವೇ ಮಧ್ಯಾಹ್ನ ಮೂರು ಗಂಟೆಯ ಬಳಿಕ ಕಾಮೆಡ್‌ ಕೆ ವೆಬ್‌ಸೈಟ್‌ನಲ್ಲಿ ಫ‌ಲಿತಾಂಶ ಅಭ್ಯರ್ಥಿಗಳಿಗೆ ಲಭ್ಯವಾಗಿದೆ.

ಮೇ 12ರಂದು 191 ನಗರಗಳಲ್ಲಿರುವ 264 ಪರೀಕ್ಷಾ ಕೇಂದ್ರಗಳಲ್ಲಿ ಮೂರು ಸೆಷನ್‌ಗಳಲ್ಲಿ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಒಟ್ಟು 1.18 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು ಈ ಪೈಕಿ 1.03 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆದವರಲ್ಲಿ 35,124 ಮಂದಿ ಕರ್ನಾಟಕದವರು ಮತ್ತು 68,675 ಕರ್ನಾಟಕೇತರ ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.

ಕೌನ್ಸೆಲಿಂಗ್‌ ನೋಂದಣಿ ಆರಂಭ:
ಕೌನ್ಸೆಲಿಂಗ್‌ ನೋಂದಣಿ ಮತ್ತು ಡಾಕ್ಯುಮೆಂಟ್‌ ಅಪ್‌ಲೋಡ್‌ ಪ್ರಕ್ರಿಯೆ ಮೇ 24 ರ ಸಂಜೆ 4 ರಿಂದ ಪ್ರಾರಂಭವಾಗಿದೆ. ಅಭ್ಯರ್ಥಿಗಳ ಶೇಕಡವಾರು ಅಂಕ ಹಾಗೂ ರ್‍ಯಾಂಕ್‌ ಆಧಾರದ ಮೇಲೆ ಶಾರ್ಟ್‌ ಲಿಸ್ಟ್‌ ಮಾಡಿ ಕೌನ್ಸಿಲಿಂಗ್‌ ನಡೆಸುವುದಾಗಿ ಕಾಮೆಡ್‌-ಕೆಯ ಕಾರ್ಯಕಾರಿ ನಿರ್ದೇಶಕ ಡಾ. ಎಸ್‌. ಕುಮಾರ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಟಾಪ್ ನ್ಯೂಸ್

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

1-MPP

Madhya Pradesh:ಡಿಸ್ಟಿಲರಿಯಲ್ಲಿದ್ದ 58 ಬಾಲ ಕಾರ್ಮಿಕರ ರಕ್ಷಣೆ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

1-imek-22

Controversy ನಡುವೆ “ಪ್ರೇರಣಾ ಸ್ಥಳ’ ಉದ್ಘಾಟನೆ

1-imek

ನಮ್ಮ ‘ಐಮೆಕ್‌’ ಪ್ರಾಜೆಕ್ಟ್ ಗೆ ಜಿ7 ನಾಯಕರ ಬೆಂಬಲ!

vande bharat

ಜೂ.20ಕ್ಕೆ ಬೆಂಗಳೂರು-ಮಧುರೈ ವಂದೇ ಭಾರತ್‌: ಕರ್ನಾಟಕಕ್ಕೆ 9ನೇ ರೈಲು

1-sugopi

ಇಂದಿರಾ ಗಾಂಧಿ ಕಾಂಗ್ರೆಸ್‌ ಮಾತೆ: ಉಲ್ಟಾ ಹೊಡೆದ ಸುರೇಶ್‌ ಗೋಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಶಕ್ತಿ ಯೋಜನೆಯಿಂದ ಪ್ರವಾಸೋದ್ಯಮ ಚುರುಕು: ಸಚಿವ ಎಚ್‌.ಕೆ. ಪಾಟೀಲ್‌

ಕೆಪಿಸಿಸಿ ಸಭೆಯಲ್ಲಿ ವಿವಿಧ ಅಕಾಡೆಮಿ ಅಧ್ಯಕ್ಷರು ಭಾಗಿ: ಸುನಿಲ್‌

KPCC ಸಭೆಯಲ್ಲಿ ವಿವಿಧ ಅಕಾಡೆಮಿ ಅಧ್ಯಕ್ಷರು ಭಾಗಿ: ಸುನಿಲ್‌

1-asasasa

Darshan; ರೇಣುಕಾಸ್ವಾಮಿ ಕೇಸ್: ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

ಕೆಎಸ್‌ಆರ್‌ಟಿಸಿ, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

KSRTC, ಬಿಎಂಟಿಸಿಗೆ 100 ಕೋಟಿ ರೂ. ಹೆಚ್ಚುವರಿ ಹೊರೆ!

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

MASIDI

Bakrid; ತ್ಯಾಗದ ಮಹತ್ವವನ್ನು ಸಾರುವ ಹಬ್ಬ: ವಿಶ್ವ ಬಾಂಧವ್ಯದ ಪ್ರತೀಕ

1-MPP

Madhya Pradesh:ಡಿಸ್ಟಿಲರಿಯಲ್ಲಿದ್ದ 58 ಬಾಲ ಕಾರ್ಮಿಕರ ರಕ್ಷಣೆ

Ajit Doval

ಇಂದಿನಿಂದ ಅಮೆರಿಕ, ಭಾರತ ಭದ್ರತಾ ಸಲಹೆಗಾರರ ಸಭೆ

1-asdsadsad

T 20 WC; ಸೂಪರ್‌-8 ಗಡಿಯಲ್ಲಿ ಬಾಂಗ್ಲಾ: ನೇಪಾಲ ಕೊನೆಯ ಎದುರಾಳಿ

Mehabooba

POCSO ಪ್ರಕರಣದಲ್ಲಿ ಬಿಎಸ್‌ವೈಗೆ ಕೋರ್ಟ್‌ ರಕ್ಷಣೆ ಸರಿಯಲ್ಲ: ಮುಫ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.