Sasya Shyamala; ಘೋಷಿಸಿದ್ದು 50 ಲಕ್ಷ, ಕೊಟ್ಟಿದ್ದು 4.39 ಲಕ್ಷ, ನೆಟ್ಟಿದ್ದು 3.79 ಲಕ್ಷ

ಯೋಜನೆ ಮಾಹಿತಿ ಕೊಡದೆ ಸತಾಯಿಸುತ್ತಿರುವ ಡಿಡಿಪಿಐಗಳು... ಇಲಾಖೆ ನಿರಾಸಕ್ತಿ

Team Udayavani, May 24, 2024, 6:45 AM IST

1-wqeq-ewq

ಬೆಂಗಳೂರು: ಸರಕಾರಿ ಶಾಲಾ ಆವರಣಗಳಲ್ಲಿ ಕನಿಷ್ಠ 50 ಲಕ್ಷ ಸಸಿ ನೆಡಬೇಕೆನ್ನುವ ದೃಷ್ಟಿಯಿಂದ ಬಜೆಟ್‌ನಲ್ಲಿ ಘೋಷಿಸಿದ್ದ “ಸಸ್ಯ ಶ್ಯಾಮಲಾ’ ಯೋಜನೆಗೆ ಶಿಕ್ಷಣ ಇಲಾಖೆ ನಿರಾಸಕ್ತಿ ತೋರಿದ್ದು, 2023-24ನೇ ಸಾಲಿನಲ್ಲಿ ನೆಟ್ಟ ಗಿಡದ ಮಾಹಿತಿ ಕೊಡದೇ ಜಿಲ್ಲಾ ಉಪನಿರ್ದೇಶಕ (ಡಿಡಿಪಿಐ)ರು ಸತಾಯಿಸುತ್ತಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿದೆ.

ಶಾಲಾ ಆವರಣಗಳ ಹಸುರೀಕರಣದ ಜತೆಗೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಮೂಡಿಸಲು ಶಿಕ್ಷಣ ಹಾಗೂ ಅರಣ್ಯ ಇಲಾಖೆ ಈ ಯೋಜನೆಯನ್ನು ಅನುಷ್ಠಾನ ಗೊಳಿಸುವ ಹೊಣೆ ಹೊತ್ತಿದ್ದವು. ವರ್ಷಕ್ಕೆ 50 ಲಕ್ಷ ಸಸಿಗಳಂತೆ 5 ವರ್ಷಗಳಲ್ಲಿ 2.5 ಕೋಟಿ ಸಸಿ ನೆಡುವ ಈ ಯೋಜನೆ ಮೊದಲ ವರ್ಷವೇ ಯೋಜನೆ ವಿಫ‌ಲವಾಗಿದೆ.

ನೆಟ್ಟವುಗಳಲ್ಲಿ ಬದುಕಿದವು ಎಷ್ಟು?
ರಾಜ್ಯಾದ್ಯಂತ ಸರಿಮಾರು 49 ಸಾವಿರ ಶಾಲೆಗಳಿದ್ದು, ಪ್ರತಿ ಶಾಲೆ ಆವರಣದಲ್ಲಿ ಗರಿಷ್ಠ 50 ಸಸಿ ನೆಡಬೇಕು. ಉತ್ತರ ಕರ್ನಾ ಟಕದ 17 ಜಿಲ್ಲೆಗಳಲ್ಲಿ ಗರಿಷ್ಠ 100 ಸಸಿ ನೆಡುವ ಗುರಿ ಕೊಡಲಾಗಿತ್ತು. ಅಲ್ಲದೆ ಪ್ರತಿ ಗಿಡಕ್ಕೂ ಜಿಯೋ ಟ್ಯಾಗ್‌ ಮಾಡಬೇಕು, 5 ವರ್ಷಗಳ ಬಳಿಕ ಆಡಿಟ್‌ ಮಾಡಬೇಕು ಅಂದರೆ ಯಾವ್ಯಾವ ಶಾಲೆಗಳ ಆವರಣದಲ್ಲಿ ಎಷ್ಟೆಷ್ಟು ಗಿಡ ನೆಡಲಾಗಿದೆ? ನೆಟ್ಟವುಗಳ ಪೈಕಿ ಉಳಿದವು ಎಷ್ಟು? ಪೋಷ ಣೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಇತ್ಯಾದಿ ಮಾಹಿತಿಯನ್ನು ಡಿಡಿಪಿಐಗಳಿಂದ ಕೇಳಲಾಗಿತ್ತು.

ಎಲ್ಲಿ ಹೋದವು 60 ಸಾವಿರ ಸಸಿ?
ನೆಟ್ಟ ಗಿಡಗಳ ಬಗೆಗಿನ ಪ್ರತಿಯೊಂದು ಮಾಹಿತಿಯನ್ನೂ ಸಸ್ಯ ಶ್ಯಾಮಲಾ ಪೋರ್ಟ ಲ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಡಿಡಿಪಿಐಗಳಿಗೆ ಸೂಚಿಸಲಾಗಿತ್ತಾದರೂ ಪೂರ್ಣವಾಗಿ ಮಾಡಿಲ್ಲ. ಪ್ರೌಢಶಾಲೆಗಳ ಆವರಣದಲ್ಲಿ ನೆಡುವ ಸಲುವಾಗಿ ಅರಣ್ಯ ಇಲಾಖೆಯಿಂದ 4,39,310 ಸಸಿ ಪಡೆದಿ ರುವುದಾಗಿ ಪೋರ್ಟಲ್‌ನಲ್ಲಿ ಇಂಡೀಕರಿಸಿದ್ದು, ಈ ಪೈಕಿ 3,79,109 ಸಸಿ ಗಳನ್ನು ನೆಟ್ಟಿರುವುದಾಗಿ ಅಪ್‌ಲೋಡ್‌ ಮಾಡಲಾಗಿದೆ. ಹಾಗಿದ್ದರೆ ಅರಣ್ಯ ಇಲಾಖೆ ಯಿಂದ ಪಡೆದ 60,201 ಸಸಿಗಳು ಏನಾ ದವು ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ.

2023-24ನೇ ಸಾಲಿನ ಪ್ರಗತಿ ವರದಿ ಸಲ್ಲಿಸುವಂತೆ ಪ್ರೌಢಶಿಕ್ಷಣ ನಿರ್ದೇಶಕ ಕೃಷ್ಣಾಜೀ ಕರಿಚನ್ನಣ್ಣವರ್‌ ಡಿಡಿಪಿಐಗಳಿಗೆ ಜ್ಞಾಪನ ಪತ್ರ ರವಾನಿಸಿದ್ದು, ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಹಲವು ಬಾರಿ ಸೂಚಿಸಿದರೂ ಮಾಡದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಯೋಜನೆಗೆ ಹಿನ್ನಡೆ ಆಗಿದ್ದೇಕೆ?
ಬಜೆಟ್‌ನಲ್ಲಿ ಘೋಷಣೆಯಾದ ಕೆಲವೇ ಸಮಯದಲ್ಲಿ ಶಿಕ್ಷಣ ಮತ್ತು ಅರಣ್ಯ ಇಲಾಖೆಗಳಲ್ಲಿ ಕ್ರಮ ತೆಗೆದುಕೊಳ್ಳಲಿಲ್ಲ. ಎರಡೂ ಇಲಾಖೆಗಳು ಸಸ್ಯಶ್ಯಾಮಲಾ ಯೋಜನೆಗೆ ಮಾರ್ಗಸೂಚಿ ರೂಪಿಸಿದ್ದೇ ಸೆಪ್ಟಂಬರ್‌ ತಿಂಗಳಲ್ಲಿ. ಆ ವೇಳೆಗಾಗಲೇ ರಾಜ್ಯಾದ್ಯಂತ ಬರಗಾಲ ಆವರಿಸಿತ್ತು. ಅಲ್ಲದೆ, ಶಾಲೆಗಳ ಆವರಣದಲ್ಲಿ ಗಿಡ ನೆಡಲು ಸ್ಥಳಗಳನ್ನೂ ಗುರುತಿಸದೆ ಯೋಜನೆ ಘೋಷಿಸಿದ್ದು ಹಿನ್ನಡೆಗೆ ಕಾರಣವಾಗಿದೆ ಎಂದು ಇಲಾಖೆ ಉನ್ನತಾಧಿಕಾರಿಗಳು ತಿಳಿಸುತ್ತಾರೆ.

ಪ್ರತಿ ಶಾಲೆ ಆವರಣದಲ್ಲಿ ಎಷ್ಟು ಸಸಿ ನೆಡಲಾಗಿದೆ ಎನ್ನುವ ಪ್ರಗತಿ ಕುರಿತು ಸಸ್ಯಶ್ಯಾಮಲಾ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ರಾಜ್ಯದ ಎಲ್ಲ ಡಿಡಿಪಿಐಗಳಿಗೆ ಹಲವು ಬಾರಿ ಸೂಚಿಸಲಾಗಿದೆ. ಸಾಧಿಸಿರುವ ಪ್ರಗತಿಯನ್ನು ವಿಳಂಬ ಮಾಡದೇ ಅಪ್‌ಲೋಡ್‌ ಮಾಡುವಂತೆ ಆಯುಕ್ತರ ಆದೇಶದ ಮೇರೆಗೆ ತಿಳಿಸಿದೆ.
ಕೃಷ್ಣಾಜೀ ಕರಿಚನ್ನಣ್ಣವರ್‌, ಪ್ರೌಢಶಿಕ್ಷಣ ನಿರ್ದೇಶಕ

 ಶೇಷಾದ್ರಿ ಸಾಮಗ

ಟಾಪ್ ನ್ಯೂಸ್

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Halappa-Visit

Danger Dengue: ರಾಜ್ಯ ಸರ್ಕಾರ ಡೆಂಗ್ಯೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ

Imran khan: ದೇಶ ವಿರೋಧಿ ಚಟುವಟಿಕೆ ಆರೋಪ-ಇಮ್ರಾನ್‌ ಪಿಟಿಐ ಪಕ್ಷಕ್ಕೆ ನಿಷೇಧ: PAK

Imran khan: ದೇಶ ವಿರೋಧಿ ಚಟುವಟಿಕೆ ಆರೋಪ-ಇಮ್ರಾನ್‌ ಪಿಟಿಐ ಪಕ್ಷಕ್ಕೆ ನಿಷೇಧ: PAK


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

1-sci

Agricultural scientist ತಳಿ ಸಂಶೋಧಕ ಡಾ. ಎಸ್.ಎ.ಪಾಟೀಲ್ ನಿಧನ

Heavy Rain: ಸಾಗರದಲ್ಲಿ ಭಾರಿ ಮಳೆ: ಮಂಗಳವಾರ (ಜುಲೈ15) ಶಾಲೆಗಳಿಗೆ ರಜೆ… ಹಲವೆಡೆ ಹಾನಿ

Heavy Rain: ಸಾಗರದಲ್ಲಿ ಭಾರಿ ಮಳೆ: ಹಲವೆಡೆ ಹಾನಿ… ಮಂಗಳವಾರ (ಜುಲೈ16) ಶಾಲೆಗಳಿಗೆ ರಜೆ

Heavy Rain: ಹಾಸನ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ಮಂಗಳವಾರ (ಜು.16) ರಜೆ

Heavy Rain: ಹಾಸನ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ಮಂಗಳವಾರ (ಜು.16) ರಜೆ

MUST WATCH

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

udayavani youtube

ವಿಷಪ್ರಾಶನ ತಡೆ: ಜಾಗೃತಿ ಮತ್ತು ಮುನ್ನೆಚ್ಚರಿಕೆ ವಹಿಸುವುದು ಹೇಗೆ?

udayavani youtube

ಬೆಂಗಳೂರಿನಲ್ಲೊಂದು ಟ್ರಡಿಶನಲ್ ಮುಳಬಾಗಿಲು ದೋಸೆ

udayavani youtube

ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾ*ಳಿ; ಗುಂಡಿನ ದಾಳಿ ಆಗಿದ್ದಾದ್ರು ಹೇಗೆ ?

udayavani youtube

ಕಾಡಾನೆ ದಾಳಿಯಿಂದ ಜಸ್ಟ್ ಮಿಸ್ |ಭಯಾನಕ ಕಾಡಾನೆಯಿಂದ ಜಸ್ಟ್ ಮಿಸ್ ವಿಡಿಯೋ ಸೆರೆ

ಹೊಸ ಸೇರ್ಪಡೆ

rain 21

Red alert ;ದ.ಕ,ಉಡುಪಿ ಮತ್ತು ಕೊಡಗು ಜಿಲ್ಲೆಯಲ್ಲಿ ಜು.16 ರಂದು ಪಿಯುಸಿವರೆಗೆ ರಜೆ

1-bale-1-aa

Agriculture; ಬಾಳೆ ಬೆಳೆದು ಗೆದ್ದ ಬಸವನಾಡಿನ ರೈತ: ಆದಾಯ ಕಂಡು ಐಟಿ ಅಧಿಕಾರಿಗಳೇ ದಂಗು!!

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

Manipal ಪೈ ಕುಟುಂಬದ ತೋನ್ಸೆ ಗೀತಾ ಪೈ ನಿಧನ

vidhana-soudha

Assembly;ವಿಧಾನಸೌಧದಲ್ಲಿ ಇನ್ನು ಶಾಸಕರ ಮೇಲೆ ಕಣ್ಣಿಡಲಿರುವ AI ಕೆಮರಾಗಳು

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Bollywood: ಶಾರುಖ್‌ ʼಕಿಂಗ್‌ʼನಲ್ಲಿ ಸಖತ್‌ ಆ್ಯಕ್ಷನ್; ವಿಲನ್‌ ಆಗಿ ಅಭಿಷೇಕ್‌ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.