ಈರುಳ್ಳಿ ರಫ್ತು ನಿಷೇಧದ ನಂತರ ಬಾಂಗ್ಲಾ ಪ್ರಧಾನಿ ಹಸೀನಾ ಅಡುಗೆಯವನಿಗೆ ಹೇಳಿದ್ದೇನು?

Team Udayavani, Oct 4, 2019, 7:25 PM IST

ನವದೆಹಲಿ: ಭಾರತದಲ್ಲಿ ಈರುಳ್ಳಿ ಬೆಲೆ ಗಗನಕ್ಕೆ ಏರಿರುವಂತೆ ಕೇಂದ್ರ ಸರಕಾರವು ಎಲ್ಲಾ ತರದ ಈರುಳ್ಳಿ ರಫ್ತಿನ ಮೇಲೆ ನಿಷೇಧವನ್ನು ಹೇರಿದೆ. ಈ ರೀತಿ ಭಾರತ ಸರಕಾರ ಈರುಳ್ಳಿ ರಫ್ತನ್ನು ನಿಷೇಧಿಸಿದ್ದರಿಂದ ತೊಂದರೆ ಅನುಭವಿಸುತ್ತಿರುವ ದೇಶಗಳಲ್ಲಿ ನಮ್ಮ ನೆರೆ ರಾಷ್ಟ್ರಗಳಲ್ಲಿ ಒಂದಾದ ಬಾಂಗ್ಲಾ ದೇಶವೂ ಒಂದು.

ಈ ವಿಷಯವನ್ನು ಸದ್ಯ ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರೇ ಸ್ವತಃ ಹೇಳಿಕೊಂಡಿದ್ದಾರೆ. ಇಂಡಿಯಾ – ಬಾಂಗ್ಲಾದೇಶ ವ್ಯಾಪಾರ ವೇದಿಕೆಯಲ್ಲಿ ಮಾತನಾಡುತ್ತಾ ಶೇಖ್ ಹಸೀನಾ ಅವರು ಈರುಳ್ಳಿ ರಫ್ತು ನಿಷೇಧದಿಂದ ಬಾಂಗ್ಲಾದಲ್ಲಿ ಉಂಟಾಗಿರುವ ತೊಂದರೆ ಮತ್ತು ಸ್ವತಃ ತನಗೇ ಈರುಳ್ಳಿ ಬಿಸಿ ತಟ್ಟಿರುವುದನ್ನು ಲಘು ಹಾಸ್ಯದ ದಾಟಿಯಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಭಾಷಣದಲ್ಲಿ ಹಸೀನಾ ಹೇಳಿದ್ದು ಇಷ್ಟು…
‘ಈರುಳ್ಳಿ ರಫ್ತು ನಿಷೇಧದಿಂದ  ನಮಗೆಲ್ಲಾ ಸ್ವಲ್ಪ ತೊಂದರೆಯಾಗಿದೆ. ನೀರುಳ್ಳಿ ರಫ್ತನ್ನು ನಿಲ್ಲಿಸಿದಿರುವುದ್ಯಾಕೆ ಎಂದೇ ನನಗೆ ಅರ್ಥವಾಗುತ್ತಿಲ್ಲ? ಮತ್ತು ಈ ಕುರಿತಾಗಿ ಸ್ವಲ್ಪ ಮುನ್ಸೂಚನೆ ನೀಡಿರುತ್ತಿದ್ದರೆ ನಾವು ಬೇರೆ ಕಡೆಯಿಂದ ತರಿಸಿಕೊಳ್ಳುತ್ತಿದ್ದೆವು. ನನ್ನ ಮನೆಯಲ್ಲಿ ತಯಾರಿಸುವ ಎಲ್ಲಾ ಅಡುಗೆಗಳಿಗೂ ಈರುಳ್ಳಿ ಹಾಕದಂತೆ ನಾನು ನನ್ನ ಅಡುಗೆಯವರಿಗೆ ಹೇಳಿದ್ದೇನೆ. ಇನ್ನು ಮುಂದೆ ಈ ರೀತಿ ಯಾವುದೇ ವಸ್ತುಗಳ ಮೇಲಿನ ರಫ್ತನ್ನು ನಿಷೇಧ ಮಾಡುವುದಾದರೇ ನಮಗೆ ಸ್ವಲ್ಪ ಮುಂಚಿತವಾಗಿ ತಿಳಿಸಿ’ ಎಂದು ಹಸೀನಾ ಅವರು ಈರುಳ್ಳಿ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.

ಈರುಳ್ಳಿ ರಫ್ತು ನಿಷೇಧದಿಂದ ಬಾಂಗ್ಲಾ ದೇಶದಲ್ಲಿ ಸ್ವಲ್ಪ ಸಮಸ್ಯೆಯಾಗಿದೆ ಎಂಬುದನ್ನು ಲಘುಹಾಸ್ಯದ ದಾಟಿಯಲ್ಲಿ ಹೇಳಿದ ಬಾಂಗ್ಲಾ ಪ್ರಧಾನಿ ಮಾತು ಕೇಳಿ ಸಭೆಯಲ್ಲಿ ನಗು ಮೂಡಿತು. ಸೆಪ್ಟಂಬರ್ 29ರಂದು ಕೇಂದ್ರ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯವು ಈರುಳ್ಳಿ ರಫ್ತಿನ ಮೇಲೆ ನಿಷೇಧ ವಿಧಿಸಿ ಆದೇಶ ಹೊರಡಿಸಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ