CONNECT WITH US  

ಹೆಚ್ಚುಬಾರಿ ವೀರ್ಯಸ್ಖಲನದಿಂದ ಪ್ರಾಸ್ಟೇಟ್‌ ಗ್ರಂಥಿಯ ಕ್ಯಾನ್ಸರ್‌ ದೂರ

ಹೌದು ನಿಜ! ಪುರುಷರಲ್ಲಿ ಹೆಚ್ಚು ಬಾರಿ ವೀರ್ಯ ಸ್ಖಲನ ಪ್ರಕ್ರಿಯೆ ನಡೆದಷ್ಟು ಪ್ರಾಸ್ಟೇಟ್‌ ಕ್ಯಾನ್ಸರ್‌ (ಪುರುಷ ಜನನೇಂದ್ರಿಯಕ್ಕೆ ಸಂಬಂಧಿಸಿದ ಶುಕ್ಲ ಗ್ರಂಥಿಯ ಕ್ಯಾನ್ಸರ್‌) ಉಂಟಾಗುವ ಅಪಾಯ ಕಡಿಮೆ ಎಂದು ವೈದ್ಯಕೀಯ ಸಂಶೋಧನೆಯೊಂದರಿಂದ ಸಾಬೀತಾಗಿದೆ. ತಿಂಗಳೊಂದರಲ್ಲಿ 4 ರಿಂದ 7 ಬಾರಿ ಮಾತ್ರ ವೀರ್ಯಸ್ಖಲನ ಪ್ರಕ್ರಿಯೆಗೆ ಒಳಗಾಗುವ 20 ರಿಂದ 29 ವರ್ಷ ಪ್ರಾಯವರ್ಗಕ್ಕೆ ಸೇರಿದ ವ್ಯಕ್ತಿಗಳಿಗೆ ಹೋಲಿಸಿದಲ್ಲಿ ತಿಂಗಳಿನಲ್ಲಿ ಕನಿಷ್ಟ 21 ಬಾರಿ ವೀರ್ಯಸ್ಖಲನ ಕ್ರಿಯೆಯಲ್ಲಿ ತೊಡಗಿಸಿಕೊಂಡ ಇದೇ ಪ್ರಾಯವರ್ಗಕ್ಕೆ ಸೇರಿದ ವ್ಯಕ್ತಿಗಳಲ್ಲಿ ಪ್ರಾಸ್ಟೇಟ್‌ ಕ್ಯಾನ್ಸರ್‌ ಕಂಡುಬರುವ ಸಾಧ್ಯತೆಗಳು 19%ಕ್ಕಿಂತಲೂ ಕಡಿಮೆಯಿರುತ್ತದೆ ಎಂಬ ಕುತೂಹಲಕಾರಿ ಅಂಶ ಈ ಅಧ್ಯಯನದಿಂದ ಬಯಲಾಗಿದೆ. "ಲೈಂಗಿಕ ಅಂಶಗಳು ಹಾಗೂ ಪ್ರಾಸ್ಟೇಟ್‌ ಕ್ಯಾನ್ಸರ್‌', "ವೀರ್ಯಸ್ಖಲನ ಅವಧಿಯ ಅಂತರ ಮತ್ತು ಪ್ರಾಸ್ಟೇಟ್‌ ಕ್ಯಾನ್ಸರ್‌ ಅಪಾಯಕ್ಕೊಳಗಾಗುವ ಸಾಧ್ಯತೆ' ಹಾಗೂ "ವೀರ್ಯಸ್ಖಲನ ಅವಧಿಯ ಅಂತರ ಮತ್ತು ಪ್ರೊಸ್ಟೇಟ್‌ ಕ್ಯಾನ್ಸರ್‌ ಸಂಭವಿಸುವ ಅಪಾಯ'  ಎಂಬ ಈ ಮೂರು ಅಧ್ಯಯನಗಳಿಂದ ಈ ಅಂಶ ಸಾಬೀತಾಗಿದೆ.

ಇಷ್ಟು ಮಾತ್ರವಲ್ಲದೆ ಈ ರೀತಿಯಾಗಿ ಒಂದು ನಿಗದಿತ ಸ್ವರೂಪದಲ್ಲಿ ಆಗಾಗ ವೀರ್ಯಸ್ಖಲನ ಪ್ರಕ್ರಿಯೆಗೆ ಒಳಗಾಗುವುದರಿಂದ 40 ರಿಂದ 49 ವರ್ಷ ಪ್ರಾಯದವರೆಗೆ ಇದರ ಪ್ರಯೋಜನ ಲಭ್ಯವಾಗುತ್ತದೆ ಎಂದೂ ಅಧ್ಯಯನದಿಂದ ತಿಳಿದುಬಂದಿದೆ. ವೀರ್ಯಸ್ಖಲನದ ಮೂಲಕ ಪ್ರಾಸ್ಟೇಟ್‌ ಗ್ರಂಥಿಯಲ್ಲಿ ಸಂಗ್ರಹವಾಗುವ ವೀರ್ಯವು ಹೊರಸ್ರವಿಸಲ್ಪಡುವುದರಿಂದ, ಯಾವುದೇ ರೀತಿಯ ಚಟುವಟಿಕೆಗಳ ಮೂಲಕವೂ ವೀರ್ಯಸ್ಖಲನವಾದಲ್ಲಿ ಈ ಮೇಲೆ ತಿಳಿಸಿದ ಪ್ರಯೋಜನಗಳು ಆ ವ್ಯಕ್ತಿಗೆ ಸಿಗುತ್ತದೆ ಎಂಬ ಅಂಶವನ್ನೂ ಸಹ ಅಧ್ಯಯನ ನಡೆಸಿದ ತಂಡವು ಒತ್ತಿಹೇಳಿದೆ. ಅಂದರೆ ಇದು ಲೈಂಗಿಕ ಚಟುವಟಿಕೆಗಳ ಮೂಲಕ ಆಗಿರಬಹುದು ಅಥವಾ ಹಸ್ತಮೈಥುನ ಪ್ರಕ್ರಿಯೆಯ ಮೂಲಕವಾಗಿರಬಹುದು, ಒಟ್ಟಿನಲ್ಲಿ ನಿಯಮಿತವಾಗಿ ವೀರ್ಯಸ್ಖಲನಕ್ಕೊಳಗಾಗುತ್ತಿರುವ ವ್ಯಕ್ತಿಯು ಪ್ರಾಸ್ಟೇಟ್‌ ಕ್ಯಾನ್ಸರ್‌ ಗೊಳಗುವ ಅಪಾಯವಂತೂ ಇರುವುದಿಲ್ಲ. ವೀರ್ಯಸ್ಖಲನದ ಮೂಲಕ ಪ್ರಾಸ್ಟೇಟ್‌ ಗ್ರಂಥಿ ಖಾಲಿಯಾಗುತ್ತಿರುವುದರಿಂದ ಅಲ್ಲಿ ದೇಹಕ್ಕೆ ಹಾನಿಯುಂಟುಮಾಡುವ ಅಥವಾ ಕ್ಯಾನ್ಸರ್‌ ಕಾರಕ ಅಂಶಗಳು ಅಭಿವೃದ್ಧಿಯಾಗಲು ಸಾಧ್ಯವಿಲ್ಲ ಎಂಬುದು ಈ ಸಂಶೋಧನೆಯನ್ನು ಕೈಗೊಂಡ ತಜ್ಞರ ವಾದವಾಗಿದೆ.


Trending videos

Back to Top