CONNECT WITH US  

ತ್ರಿರಾಷ್ಟ್ರ ಸುತ್ತಾಟದಲ್ಲಿ ಸಚಿನ್‌!

ಇತ್ತೀಚೆಗೆ ಪ್ರದರ್ಶನವಾದ 'ಅಮ್ಮೆರ್‌ ಪೊಲೀಸಾ' ಚಿತ್ರದ ಕೆಮರಾಮ್ಯಾನ್‌ ಸಚಿನ್‌ ಶೆಟ್ಟಿ ಈಗ ಹೊಸ ಸಾಹಸ ನಿರತರಾಗಿದ್ದಾರೆ. ತಮ್ಮ ಬೈಕ್‌ ನಲ್ಲಿಯೇ ಭಾರತದ ಉದ್ದಗಲ ಸುತ್ತಾಡಿ, ನೇಪಾಳ ಭೂತಾನ್‌ ಸುತ್ತುವ ಪಣ ತೊಟ್ಟಿದ್ದಾರೆ. ಇದಕ್ಕೆ 'ಗೋ ಹಿಮಾಲಯನ್‌' ಎಂಬ ಹೆಸರಿಟ್ಟಿದ್ದಾರೆ.

ಕಾಪು ಮಲ್ಲಾರಿನ ಸಚಿನ್‌ ಶೆಟ್ಟಿ ಹಾಗೂ ಅವರ ಸ್ನೇಹಿತ ಕಾಪು ಹಳೆಮಾರಿಗುಡಿ ನಿವಾಸಿ ಅಭಿಷೇಕ್‌ ಶೆಟ್ಟಿ ಕೂಡ ಜತೆಯಲ್ಲಿದ್ದಾರೆ. ಕೆಲವು ದಿನದ ಹಿಂದೆ ಕಾಪುವಿನಿಂದ ಹೊರಟ ಸಚಿನ್‌ ಹಾಗೂ ಅಭಿಷೇಕ್‌ ಮಹಾರಾಷ್ಟ್ರದ ಸತಾರಾ ಮೂಲಕ ಮುಂಬಯಿ ತಲುಪಿ ಮಧ್ಯಪ್ರದೇಶ ದಾಟಿದ್ದಾರೆ. ಅಲ್ಲಿಂದ ಉತ್ತರಪ್ರದೇಶದ ಝಾನ್ಸಿ, ನೇಪಾಳ, ಕಾಠ್ಮಂಡು, ಭೂತಾನ್‌, ಅಸ್ಸಾಂ, ನಾಗಾಲ್ಯಾಂಡ್‌, ಮಣಿಪುರ, ಮೇಘಾಲಯ, ಪಶ್ಚಿಮ ಬಂಗಾಲ, ಕೊಲ್ಕತ್ತಾ, ಒರಿಸ್ಸಾ, ಆಂಧ್ರಪ್ರದೇಶ, ವಿಶಾಖಪಟ್ಟಣ, ವಿಜಯವಾಡ, ಬೆಂಗಳೂರು, ಮಂಗಳೂರು ಮೂಲಕ ಕಾಪುವಿಗೆ ವಾಪಾಸಾಗಲಿದ್ದಾರೆ.

ಅಂದಹಾಗೆ ಒಟ್ಟು 40 ದಿನದ ಈ ಯಾತ್ರೆಯಲ್ಲಿ 13,560 ಕಿ.ಮೀ. ಕ್ರಮಿಸಲಿದ್ದಾರೆ. ಸಚಿನ್‌ ರಾಯಲ್‌ ಎನ್‌ಫೀಲ್ಡ್‌ ಹಿಮಾಲಯನ್‌, ಅಭಿಷೇಕ್‌ ರಾಯಲ್‌ ಎನ್‌ ಫೀಲ್ಡ್‌ ಕ್ಲಾಸಿಕ್‌ 350 ಬೈಕ್‌ಗಳಲ್ಲಿ ಪ್ರಯಾಣ ನಡೆಸುತ್ತಿದ್ದಾರೆ. ಸಿನೆಮಾದಲ್ಲಿ ಬ್ಯುಸಿಯಾಗಿದ್ದ ಸಚಿನ್‌ ಬಿಡುವು ಮಾಡಿಕೊಂಡು ದೇಶ ಸುತ್ತಾಟದ ಕ್ರೇಝ್ ಮೂಡಿಸಿರುವುದು ವಿಶೇಷ. 

ಇಂದು ಹೆಚ್ಚು ಓದಿದ್ದು

Trending videos

Back to Top