CONNECT WITH US  

ಕಾಂಗ್ರೆಸ್‌ ನಾಯಕರಿಂದ ವಾಜಪೇಯಿ ಗುಣಗಾನ

ಶ್ರೀರಂಗಪಟ್ಟಣ: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಶ್ರೇಷ್ಠ ರಾಜಕಾರಿಣಿಯಾಗಿ, ಜಾತ್ಯತೀತ ವ್ಯಕ್ತಿಯಾಗಿ ಕಂಡವರು ಅವರು ನಿಧನದಿಂದ ದೇಶಕ್ಕೆ ಅಪಾರ ನಷ್ಟ ಉಂಟು ಮಾಡಿದೆ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಸ್‌.ಎಲ್‌.ಲಿಂಗರಾಜು ಹೇಳಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಗ್ರಾಮಸ್ಥರು ಆಯೋಜಿಸಿದ ಮಾಜಿ ಪ್ರಧಾನಿ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ದೇಶಕ್ಕೆ ಅಪಾರ ನಷ್ಟ: ಮಾಜಿ ಪ್ರಧಾನಿ ವಾಜಪೇಯಿ ಅವರು ದೇಶದಲ್ಲಿನ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಅವರು ದೇಶಕ್ಕೆ ನೀಡಿರುವ ಕೊಡುಗೆ ಅಪಾರ. ದೇಶದ ಹಿರಿಯ ಮುತ್ಸದಿಯಾಗಿದ್ದ ಅವರು ಭಾರತ ದೇಶ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದರು.

ಅವರನ್ನು ನಾವು ಕಳೆದುಕೊಂಡಿರುವುದು ದೇಶಕ್ಕೆ ಅಪಾರ ನಷ್ಟ ಉಂಟು ಮಾಡಿದೆ ಎಂದರು. ಬಿಜೆಪಿ ಮುಖಂಡ ಮಹಾಲಿಂಗು, ತಿಬ್ಬಣ್ಣ, ಪುರುಷೋತ್ತಮ, ಸ್ವಾಮೀಗೌಡ, ಕುಮಾರ್‌ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದು, ಗೌರವ ಪುಷ್ಪ ನಮನ ಸಲ್ಲಿಸಿದ್ದರು.


Trending videos

Back to Top