CONNECT WITH US  

ಕೇರಳ ಪ್ರವಾಹ : ಮಾರುತಿ ಸುಜುಕಿ ಆಗಸ್ಟ್‌ ಕಾರು ಮಾರಾಟ ಶೇ.2.8 ಕುಸಿತ

ತಿರುವನಂತಪುರ : ಶತಮಾನದಲ್ಲೇ ಅತ್ಯಂತ ಘೋರ ಎನಿಸಿರುವ ಭೀಕರ ಮಳೆ, ಪ್ರವಾಹಕ್ಕೆ ತುತ್ತಾಗಿ ವ್ಯಾಪಕ ನಾಶ ನಷ್ಟಕ್ಕೆ ಗುರಿಯಾಗಿರುವ ಕೇರಳದಲ್ಲಿ  ಅನೇಕ ಉದ್ಯಮ ಸಂಸ್ಥೆಗಳು ಕೂಡ ಅಪಾರ ನಷ್ಟಕ್ಕೆ ಗುರಿಯಾಗಿವೆ. 

ದೇಶದ ಅತೀ ದೊಡ್ಡ ಕಾರು ಉತ್ಪಾದಕ ಸಂಸ್ಥೆಯಾಗಿರುವ ಮಾರುತಿ ಸುಜುಕಿ ಕೇರಳದಲ್ಲಿ ನಿರಂತರ ಎರಡನೇ ತಿಂಗಳಲ್ಲಿ ತೀವ್ರ ಹೊಡತಕ್ಕೆ ಗುರಿಯಾಗಿದ್ದು ಅದರ ಕಾರು ಮಾರಾಟ ತೀವ್ರ ಕುಸಿತವನ್ನು ಕಂಡಿದೆ.

ಕಳೆದ ಆಗಸ್ಟ್‌ ತಿಂಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ 1,47,700 ವಾಹನಗಳನ್ನು ಮಾರಿತ್ತು. ವರ್ಷದ ಹಿಂದೆ ಇದೇ ಅವಧಿಯಲ್ಲಿ 1,52,00 ವಾಹನಗಳನ್ನು ಅದು ಮಾರಿತ್ತು. 

ಕಂಪೆನಿಯ ಮಿನಿ,ಮಧ್ಯಮ ಮತ್ತು ಲಘು ವಾಣಿಜ್ಯ ವಾಹನ ಮಾರಾಟ ಪ್ರಮಾಣ ತೀವ್ರವಾಗಿ ಕುಸಿದಿರುವುದು ವರದಿಯಾಗಿದೆ. ಮಾರುತಿ ಸುಜುಕಿ ಪ್ಯಾಸೆಂಜರ್‌ ಕಾರುಗಳ ಮಾರಾಟ ಶೇ.1.4, ಯುಟಿಲಿಟಿ ವಾಹನಗಳ ಮಾರಾಟ ಶೇ.16.2 ಕುಸಿದಿರುವುದು ವರದಿಯಾಗಿದೆ. 

ಇಂದು ಹೆಚ್ಚು ಓದಿದ್ದು

Trending videos

Back to Top