CONNECT WITH US  

ಕಾರ್ಕಳ: ಸಂಭ್ರಮದ ತೆನೆಹಬ್ಬ

ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ಮೊಂತಿ ಫೆಸ್ತ್ ಆಚರಿಸಲಾಯಿತು.

ಕಾರ್ಕಳ: ಮಾತೆ ಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ಟ್‌ ಅನ್ನು ಕಾರ್ಕಳ ತಾಲೂಕಿನಾದ್ಯಂತ ಶನಿವಾರ ಸಂಭ್ರಮದಿಮದ ಆಚರಿಸಲಾಯಿತು. ಕ್ರೈಸ್ತರ ಪ್ರಮುಖ ಧಾರ್ಮಿಕ ಕೇಂದ್ರ ಅತ್ತೂರು ಸಂತ ಲಾರೆನ್ಸ್‌ ಬಸಿಲಿಕಾದಲ್ಲಿ ಚರ್ಚ್‌ನ ಧರ್ಮಗುರು ರೆ| ಫಾ| ಜಾರ್ಜ್‌ ಡಿ'ಸೋಜಾ ಅವರ ನೇತೃತ್ವದಲ್ಲಿ ಆಚರಣೆ ನಡೆಯಯಿತು.

ತಾಲೂಕಿನ ವಿವಿಧ ಚರ್ಚ್‌ಗಳ ಮುಖಂಡರು, ಸಮುದಾಯದ ಪ್ರಮುಖರು ತಮ್ಮ ಮನೆಗಳಿಂದ ತಂದ ಭತ್ತದ ತೆನೆಗಳಳಿಗೆ ಚರ್ಚ್‌ ನಲ್ಲಿ ಪೂಜೆ ಸಲ್ಲಿಸಲಾಯಿತು. ಪುಟ್ಟ ಮಕ್ಕಳು ಮರಿಯಮ್ಮನವರ ಪ್ರತಿಮೆಗೆ ಹೂ ಸಮರ್ಪಣೆ ಮಾಡಿದರು.

ಚರ್ಚ್‌ನ ಧರ್ಮಗುರು ರೆ| ಫಾ| ಜಾರ್ಜ್‌ ಡಿ'ಸೋಜಾ ಕುಟುಂಬ ಜೀವನ ಹಾಗೂ ತಾಯಿಯ ಸ್ಥಾನಮಾನದ ಕುರಿತು ಸಭೆಗೆ ಮಾಹಿತಿ ನೀಡಿದರು. ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತೀ ಕುಟುಂಬಕ್ಕೆ ಹೊಸ ಭತ್ತದ ತೆನೆಗಳನ್ನು ನೀಡಿ ಆಶೀರ್ವಚಿಸಿದರು. ಈ ಸಂದರ್ಭ ಮಕ್ಕಳಿಗೆ ಸಿಹಿ ತಿಂಡಿ, ಕಬ್ಬು ವಿತರಿಸಲಾಯಿತು.

ಸಹಾಯಕ ಧರ್ಮಗುರು ಫಾ| ಜೆನ್ಸಿಲ್‌ ಆಳ್ವ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ತಾಲೂಕಿನ ವಿವಿಧ ಭಾಗಗಳಿಂದ 1,500ಕ್ಕೂ ಅಧಿಕ ಮಂದಿ ಕ್ರೈಸ್ತ ಬಾಂಧವರು ಆಗಮಿಸಿ ಆಚರಣೆಯಲ್ಲಿ ಭಾಗವಹಿಸಿದ್ದರು.

ಕುಂದಾಪುರ: ಸಂಭ್ರಮದ ಮೊಂತಿ ಹಬ್ಬ
ಕುಂದಾಪುರ:
ರೋಜರಿ ಅಮ್ಮನವರ ಚರ್ಚ್‌ ಕುಂದಾಪುರದಲ್ಲಿ ಮಾತೆ ಮೇರಿಯಮ್ಮನವರ ಹುಟ್ಟು ಹಬ್ಬ ಹಾಗೂ ತೆನೆ ಹಬ್ಬ (ಮೊಂತಿ ಫೆಸ್ತ್) ವನ್ನು ಕೈಸ್ತ ಬಾಂಧವರು ಭಕ್ತಿ, ಸಡಗರ, ಸಂಭ್ರಮದಿಂದ ಆಚರಿಸಿದರು. 

ಹೊಸ ತೆನೆ ಹಾಗೂ ಬಾಲೆ ಮೇರಿಯ ಮೂರ್ತಿಯನ್ನು ಪ್ರಧಾನ ಧರ್ಮಗುರು ವಂ| ಫಾ| ಸ್ಟ್ಯಾನಿ ತಾವ್ರೊ ಆಶೀರ್ವಚಿಸಿದರು. ಸಹಾಯಕ ಧರ್ಮಗುರು ಫಾ| ರೋಯ್‌ ಲೋಬೊ ಹಬ್ಬದ ಸಂದೇಶ ನೀಡಿದರು.

ಪ್ರಾಂಶುಪಾಲ ಫಾ| ಪ್ರವೀಣ್‌ ಅಮೃತ್‌ ಮಾರ್ಟಿಸ್‌, ಫಾ| ವೆನಿಲ್‌ ಡಿ'ಸೋಜಾ ಪೂಜೆಯಲ್ಲಿ ಪಾಲ್ಗೊಂಡರು. ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ ವಾಡೆಯ ಗುರಿಕಾರರು, ಪ್ರತಿನಿಧಿಗಳು, ನೂರಾರು ಭಕ್ತರು ಉಪಸ್ಥಿತರಿದ್ದರು.


Trending videos

Back to Top