ಅಧ್ಯಯನ ಜಗತ್ತನ್ನೇ ಗೆಲ್ಲಲು ಹೆದ್ದಾರಿ


Team Udayavani, Oct 10, 2018, 3:15 PM IST

10-october-11.gif

ಜಗತ್ತಿನಲ್ಲಿ ಸಾಧಕರು ಅನೇಕರಿದ್ದಾರೆ. ಆದರೆ ಹೆಚ್ಚಿನ ಎಲ್ಲರಿಗೂ ಸಾಧನೆಗೆ ಪ್ರೇರಣೆ ನೀಡಿದ್ದು ಪುಸ್ತಕಗಳು. ಪುಸ್ತಕ ಪ್ರೀತಿ ಒಂದಿದ್ದರೆ ಸಾಕು ಜಗತ್ತನ್ನೇ ಗೆಲ್ಲಬಹುದು ಎಂಬುದನ್ನು ಅನೇಕರು ತೋರಿಸಿಕೊಟ್ಟಿದ್ದಾರೆ. ಅಧ್ಯಯನದಿಂದ ಜ್ಞಾನ ವಿಕಸಿಸುತ್ತದೆ. ಅದರೊಂದಿಗೆ ವ್ಯಕ್ತಿತ್ವ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಬದುಕನ್ನು ವ್ಯವಸ್ಥಿತ ರೂಪದಲ್ಲಿ ರೂಪಿಸಿಕೊಳ್ಳಲು ಭದ್ರ ಅಡಿಪಾಯವನ್ನು ಒದಗಿಸುತ್ತದೆ. 

ಯಾವುದೇ ಕ್ಷೇತ್ರದಲ್ಲಿ ಮುನ್ನಡೆಯಬೇಕಾದರೂ ಅಧ್ಯಯನ ಆಸಕ್ತಿ ಇರುವುದು ಬಹುಮುಖ್ಯ. ಪ್ರತಿಯೊಂದು ವಿಷಯವನ್ನು ತಿಳಿದು, ಅರ್ಥ ಮಾಡಿಕೊಂಡು, ಹೊಸದನ್ನು ಅನ್ವೇಷಿಸಲು ಅಧ್ಯಯನದಲ್ಲಿ ಆಸಕ್ತಿ ಇರಲೇಬೇಕು. ಶೈಕ್ಷಣಿಕವಾಗಿ ಅಥವಾ ಇನ್ಯಾವುದೇ ಆಸಕ್ತಿಯ ರಂಗದಲ್ಲಿ ಇನ್ನಷ್ಟು ಪರಿಣತಿ ಹೊಂದುವುದು ಪ್ರತಿಯೊಬ್ಬರ ಕನಸು. ಅದಕ್ಕೆ ಪೂರಕವಾಗಿ ಹೆಚ್ಚಿನ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ. ಆದರೆ ಎಲ್ಲರಿಗೂ ಅಧ್ಯಯನ ಮಾಡುವ ಬಗ್ಗೆ ಆಸಕ್ತಿ ಮೂಡುವುದು ಕಡಿಮೆ. ಆ ಹಿನ್ನೆಲೆಯಲ್ಲಿ ಇಂದಿನ ವಿದ್ಯಾರ್ಥಿಗಳಲ್ಲಿ ಅಧ್ಯಯನ ಮಾಡುವ ಬಗ್ಗೆ ಆಸಕ್ತಿ ಬೆಳೆಸುವ ಅವಶ್ಯಕತೆ ಇದೆ.

ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ಹೆಚ್ಚುತ್ತಿದೆ. ಆ ಕಾರಣಕ್ಕಾಗಿಯೇ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಅಂಕ, ಪಠ್ಯೇತರ ಚಟುವಟಿಕೆಗಳಲ್ಲಿ ಕ್ರಿಯಾಶೀಲತೆ ಇನ್ನಿತರ ಕಾರ್ಯಕ್ರಮಗಳಲ್ಲಿ ಪ್ರಸಿದ್ಧಿ ಪಡೆಯುವುದು ಅನಿವಾರ್ಯ. ಅದಕ್ಕಾಗಿ ಬಾಲ್ಯದಿಂದಲೇ ಸಿದ್ಧತೆ ಮಾಡಿಕೊಳ್ಳುವುದು ಅವಶ್ಯಕ. ಇನ್ನೂ ಪಿಯುಸಿ ಹಾಗೂ ಪದವಿಯಲ್ಲಿ ಉತ್ತಮ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಗೊಂದಲ ಮೂಡುವುದು ಸಹಜ. ಅಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಲ್ಲಿ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ. ಪದವಿಯ ಬಳಿಕ ಐಚ್ಛಿಕ ಕ್ಷೇತ್ರದಲ್ಲಿ ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್‌ಡಿ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು. ಆದರೆ ಅವರು ವಿಷಯದ ಆಳ ಅಧ್ಯಯನ ಮಾಡುವ ಆಸಕ್ತಿಗಿಂತ ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲೇ ಹೆಚ್ಚಾಗಿರುತ್ತದೆ.

ಪ್ರತಿಯೊಬ್ಬರಲ್ಲೂ ಒಂದು ವಿಷಯದ ಕುರಿತು ತಿಳಿದುಕೊಳ್ಳುವ ಉತ್ಸುಕತೆ ಸದಾ ಇರಬೇಕು. ಆಗ ಅವರಿಗೆ ನೈಜತೆಯ ಸಂಪೂರ್ಣ ಚಿತ್ರಣ ಹಾಗೂ ಒಂದು ವಿಷಯದ ಕುರಿತಂತೆ ಪರಿಪೂರ್ಣ ಮಾಹಿತಿ ಲಭಿಸುತ್ತದೆ. ವಿಷಯವನ್ನು ತಿಳಿದುಕೊಳ್ಳುವ ಆಸಕ್ತಿ ಇದ್ದರೆ ಹೆಚ್ಚಿನ ಮಾಹಿತಿ ಸಂಗ್ರಹಿಸುವೆಡೆಗೆ ಮನಸ್ಸು ಓಡುತ್ತದೆ. ಆಗ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಹುಡುಕುವ ಮೂಲಗಳ ಹುಡುಕಾಟ ಆರಂಭಗೊಳ್ಳುತ್ತದೆ. ಆಗ ಗೋಚರಿಸುವುದು ಅಧ್ಯಯನ. ಒಟ್ಟಾರೆ ಅಧ್ಯಯನ ಆರಂಭಗೊಳ್ಳಬೇಕಾದರೆ ಆಸಕ್ತಿ ಬಹಳ ಮುಖ್ಯ. ವಿಷಯಗಳ ಕುರಿತಾಗಿ ಹೆಚ್ಚು ತಿಳಿದುಕೊಳ್ಳುವ ಹಂಬಲ ಬೆಳೆಸಿಕೊಂಡಾಗ ಅಧ್ಯಯನದ ಆಸಕ್ತಿ ಹುಟ್ಟಿಕೊಳ್ಳುತ್ತದೆ. ಆಸಕ್ತಿ ಹುಟ್ಟಿದಾಗ ಅಧ್ಯಯನದಲ್ಲಿ ತಮ್ಮನ್ನು ತಾವು ತೊಡಗಿಕೊಳ್ಳುವಂತೆ ಮಾಡುತ್ತದೆ.

ಹೆತ್ತವರು, ಶಿಕ್ಷಕರು ಮಾತ್ರವಲ್ಲ ಸ್ವತಃ ವಿದ್ಯಾರ್ಥಿಗಳು ಪರೀಕ್ಷೆಯ ಅಂಕಗಳ ಕಡೆಗೆ ಹೆಚ್ಚಿನ ಗಮನ ಹರಿಸುತ್ತಾರೆಯೇ ಹೊರತು ಅವರು ಏನು ಓದುತ್ತಿದ್ದಾರೆ, ಹೇಗೆ ಅರ್ಥ ಮಾಡಿಕೊಳ್ಳುತ್ತಾರೆ ಎಂಬುದನ್ನು ಯೋಚಿಸುವುದಿಲ್ಲ. ಪುಸ್ತಕಗಳನ್ನು ತರುವುದು, ಅದಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದು, ಪುಸ್ತಕಗಳ ಕುರಿತು ಚರ್ಚೆ ನಡೆಸುವುದರಿಂದ ಓದುವ ಅಭ್ಯಾಸವನ್ನು ಹವ್ಯಾಸವನ್ನಾಗಿ ಮಾಡಲು ಸಾಧ್ಯವಿದೆ. ಹೀಗೆ ಅಧ್ಯಯನದಲ್ಲಿ ಆಸಕ್ತಿ ಬೆಳೆಯಬೇಕಾದರೆ ಕೆಲವೊಂದು ಅಂಶಗಳನ್ನು ನೆನಪಿಟ್ಟುಕೊಳ್ಳುವುದು ಅದನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಬಹು ಮುಖ್ಯ.

ಏನು ಮಾಡಬಹುದು? 
ವಿದ್ಯಾರ್ಥಿಗಳಲ್ಲಿ ಅಧ್ಯಯನದಲ್ಲಿ ಆಸಕ್ತಿ ಉಂಟು ಮಾಡಲು ಕೆಲವೊಂದು ವಿಧಾನಗಳನ್ನು ಕಾಲೇಜುಗಳಲ್ಲಿ ಅಥವಾ ಸ್ವಯಂ ಆಗಿ ಮಾಡಬಹುದು. ಹೇಗೆಂದರೆ…
ಯಾವುದೇ ವಿಷಯವನ್ನು ಓದುವಾಗ ಅದನ್ನು ನಿತ್ಯ ಜೀವನದ ವಿಷಯಗಳಿಗೆ ಅಳವಡಿಸಿಕೊಂಡು ಓದಿ. ಇದರಿಂದ ಹೆಚ್ಚು ಮನವರಿಕೆಯಾಗುತ್ತದೆ.
ಪ್ರತಿಯೊಂದು ವಿಷಯವನ್ನೂ ಗಂಭೀರವಾಗಿಯೇ ಓದಬೇಕಿಲ್ಲ. ಕೆಲವೊಂದನ್ನು ತಮಾಷೆ ಮಾದರಿಯಲ್ಲಿಯೂ ಅರ್ಥ ಮಾಡಿಕೊಳ್ಳಬಹುದು. ಇದರಿಂದ ಸುಲಭವಾಗಿ ಅರ್ಥವಾಗುತ್ತದೆ.
ಅಧ್ಯಯನದೊಂದಿಗೆ ಪೂರಕವಾದ ಉದ್ಯೋಗಗಳ ಮಾಹಿತಿಯನ್ನೂ ಪಡೆದುಕೊಳ್ಳಿ. ಇದು ಭವಿಷ್ಯಕ್ಕೆ ನೆರವಾಗಬಲ್ಲದು.
ಕ್ರೀಡೆ, ಸಾಂಸ್ಕೃ ತಿಕ ಸಹಿತ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳಿ. ಇದರಿಂದ ಅಧ್ಯಯನದ ಜತೆಗೆ ಅನುಭವವೂ ದಕ್ಕುತ್ತದೆ.
ಪಠ್ಯಕ್ಕೆ ಪೂರಕವಾದ ಮಾಹಿತಿಗಳನ್ನು ಅಂತರ್ಜಾ ಲದಲ್ಲಿ ಹುಡುಕಾಡಿ. ಇದರ ಕುರಿತು
ಸಂಪನ್ಮೂಲ ವ್ಯಕ್ತಿಗಳೊಂದಿಗೆ ಚರ್ಚಿಸಿ. ಆಗ ವಿಷಯ ಹೆಚ್ಚು ಅರ್ಥವಾಗುತ್ತದೆ.
ಓದುವ ವಿಷಯಗಳೊಂದಿಗೆ ನಿಮ್ಮ ಸ್ವ ಅನುಭವಗಳನ್ನು ನೆನಪಿಸಿಕೊಳ್ಳಿ. ಆಗ ಕಲಿತ ವಿಚಾರ ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ.
ಪರೀಕ್ಷೆಗಾಗಿ ಓದು ಬೇಡ. ಜೀವನಕ್ಕಾಗಿಇರಲಿ.
ಅಧ್ಯಯನ ಎಂಬುದು ಕೇವಲ ತರಗತಿಗಳಿಗೆ ಮೀಸಲಾಗದಿರಲಿ. ಮನೆ, ಶಾಲೆ, ಕಾಲೇಜು ಪರಿಸರದಲ್ಲೂ ಸಾಕಷ್ಟು ತಿಳಿಯಬೇಕಾದ ಕುತೂಹಲಕಾರಿ ಅಂಶಗಳಿರುತ್ತವೆ. ಅಧ್ಯಯನ ಕಷ್ಟವಲ್ಲ. ಅರ್ಥ ಮಾಡಿಕೊಂಡು ಓದಿದರೆ ಬೇಗ ಅರ್ಥವಾಗುತ್ತದೆ. ಹೆಚ್ಚು ಕಾಲ ನೆನಪಿನಲ್ಲಿ ಉಳಿಯುತ್ತದೆ. 

ವಿಷಯಗಳ ನಿರಾಕರಣೆ ಸಲ್ಲದು
ಇದು ಮಾಹಿತಿ ಜ್ಞಾನಯುಗ. ಜ್ಞಾನ ಎಲ್ಲೆಡೆಯಿಂದಲೂ ಲಭಿಸುತ್ತದೆ. ಅದನ್ನು ಹುಡುಕುವ ಪ್ರಯತ್ನ ಮಾಡಬೇಕು. ಇಂಟರ್‌ ನೆಟ್‌, ಪುಸ್ತಕಗಳು ಅಧ್ಯಯನಕ್ಕೆ ಮಹತ್ತರ ಸಂಪನ್ಮೂಲವಾಗಿವೆ. ಆ ಮೂಲಕವೇ ಬಹಳಷ್ಟು ವಿಚಾರಗಳನ್ನು ಸಂಗ್ರಹಿಸಿಕೊಳ್ಳಬಹುದು. ಆಸಕ್ತಿ ಇರುವ ವಿಷಯದ ಅಧ್ಯಯನ ಕಡೆಗೆ ನಮ್ಮ ಗಮನ ಕೇಂದ್ರಿಕರಿಸಬೇಕು. ಹಾಗೆಂದು ಆಸಕ್ತಿ ಇಲ್ಲದ ವಿಷಯ ದೂರ ಇಡುವುದು ಸಲ್ಲದು. ಆಸಕ್ತಿ ಇರುವ ವಿಷಯಗಳ ಕಡೆಗೆ ನಮ್ಮ ಗಮನ ಕೇಂದ್ರೀಕರಿಸುವುದರ ಜತೆಗೆ ಇತರ ವಿಷಯಗಳ ಕಡೆಗೆ ಗಮನ ಹರಿಸಬೇಕು. ಯಾಕೆಂದರೆ ಇದು ಆಸಕ್ತಿಯ ವಿಚಾರಗಳಿಗೆ ಪೂರಕವಾಗಿರುತ್ತದೆ.

ಪ್ರಜ್ಞಾ ಶೆಟ್ಟಿ/ ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 29  ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!

7-modi

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ

1-wqe-qweq

Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ

Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 29  ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Chikkaballapur: 13.63 ಕೋಟಿ ರೂ. ಚುನಾವಣಾ ಅಕ್ರಮ ಮದ್ಯ ಜಪ್ತಿ!

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.