ಹಾಲು ಹೋಳಿಗೆ

Team Udayavani, Aug 31, 2019, 5:05 AM IST

ಬೇಕಾಗುವ ಸಾಮಗ್ರಿ
ಗೋಧಿ ಹಿಟ್ಟು ಅರ್ಧ ಕಪ್‌
ಚಿರೋಟಿ ರವೆ (ಸೂಜಿರವೆ)ಅರ್ಧಕಪ್‌
ಹಾಲು ಅರ್ಧ ಲೀಟರ್‌
ಕಂಡೆನ್ಸಡ್‌ ಮಿಲ್ಕ್ ಕಾಲು ಕಪ್‌
ಎಣ್ಣೆ (1 ಚಮಚ ಹಿಟ್ಟಿಗೆ ಮತ್ತು ಪೂರಿ ಕರಿಯಲು)
ಸಕ್ಕರೆ-5 ಚಮಚ
ಏಲಕ್ಕಿ ಪುಡಿ-1 ಚಮಚ
ಕೇಸರಿ ಎಸಳು-ಸ್ವಲ್ಪ
ಬಾದಾಮಿ-3 ಚಮಚ
ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ
ಗೋಧಿ ಹಿಟ್ಟು ಮತ್ತು ಚಿರೋಟಿ ರವೆ ಸೇರಿಸಿ ಸ್ವಲ್ಪ ಉಪ್ಪು, 1 ಚಮಚ ಎಣ್ಣೆ, ನೀರು ಹಾಕಿ ಪೂರಿ ಹಿಟ್ಟಿನ ಹದಕ್ಕೆ ಕಲಸಿಡಿ. ಅನಂತರ ಹಾಲನ್ನು ಕಡಾಯಿಯಲ್ಲಿ ಹಾಕಿ ಕುದಿಸಿ, ಹಾಲು ಚೆನ್ನಾಗಿ ಕುದಿದು ಸ್ವಲ್ಪ ಬತ್ತಿದಾಗ ಕಂಡೆನ್ಸಡ್‌ ಹಾಲು ಹಾಕಿ, ಕೇಸರಿಯನ್ನು ಬಿಸಿ ಹಾಲಿನಲ್ಲಿ ನೆನೆಸಿ ಸೇರಿಸಿ. ಅನಂತರ ಸಕ್ಕರೆ, ಏಲಕ್ಕಿ ಪುಡಿ ಸೇರಿಸಿ ಹಾಲನ್ನು ಚೆನ್ನಾಗಿ ಕುದಿಸಿ ಅಗಲ ಬಾಯಿಯಿರುವ ಪಾತ್ರೆಯಲ್ಲಿ ಹಾಕಿ. ಕಲಸಿಟ್ಟ ಹಿಟ್ಟಿನಲ್ಲಿ ಸಣ್ಣ ಸಣ್ಣ ಉಂಡೆ ಮಾಡಿ ಪೂರಿ ಲಟ್ಟಿಸಿ ಕಾದ ಎಣ್ಣೆಯಲ್ಲಿ ಗರಿ ಗರಿ ಕರಿಯಿರಿ. ಕರಿದ ಪೂರಿ ಬಿಸಿ ಇರುವಾಗಲೇ ಮಧ್ಯ ಮಡಚಿ ಹಾಲಿನಲ್ಲಿ ಹಾಕಿ. ಮೇಲೆ ಬಾದಾಮಿ ಚೂರು ಉದುರಿಸಿ. ಒಂದು ಗಂಟೆ ಪೂರಿ ಹಾಲಿನಲ್ಲಿ ನೆನೆದ ಬಳಿಕ ಹಾಲಿನೊಂದಿಗೆ ಸೇರಿಸಿ ಸವಿಯಿರಿ.

-ರುಚಿತಾ


ಈ ವಿಭಾಗದಿಂದ ಇನ್ನಷ್ಟು

  • ಚಳಿಗಾಲ ಶುರುವಾಗುತ್ತಿದ್ದಂತೆ ಸಂಜೆ ವೇಳೆಗೆ ಬಿಸಿ ಬಿಸಿ ಚಹಾದ ಜತೆ ಸವಿಯಲು ಏನಾದರೂ ಇದ್ದರೆ ಚೆನ್ನಾಗಿತ್ತು ಎನ್ನುವವರು ಮನೆಯಲ್ಲಿ ವಿಧವಿಧವಾದ ತಿಂಡಿಗಳನ್ನು...

  • ಬೇಕಾಗುವ ಸಾಮಗ್ರಿಗಳು ಎಣ್ಣೆ -ಸ್ವಲ್ಪ 3 ಕಪ್‌ ದಪ್ಪ ಅವಲಕ್ಕಿ ಶೇಂಗಾ ಬೀಜ-ಅರ್ಧ ಕಪ್‌ ಬಾದಾಮಿ ಬೀಜ-ಕಾಲು ಕಪ್‌ ಗೋಡಂಬಿ-ಕಾಲು ಕಪ್‌ ಕಡಲೆ ಬೇಳೆ-2 ದೊಡ್ಡ ಚಮಚ ಕರಿಬೇವಿನ...

  • 1 ಪಾತ್ರೆ ನೀರು ಎಣ್ಣೆ-ಅಗತ್ಯವಿದ್ದಷ್ಟು ಹಕ್ಕ ನೂಡಲ್ಸ್‌-1 ಪ್ಯಾಕ್‌ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ ಈರುಳ್ಳಿಯ ಬಿಳಿಭಾಗ-2 ಚಮಚ ಕ್ಯಾಬೇಜ್‌-1 ಕಪ್‌ ಸಣ್ಣಗೆ...

  • ಬೇಕಾಗುವ ಸಾಮಗ್ರಿಗಳು ಖೋಯಾ- 100 ಗ್ರಾಂ ಬಾದಾಮ್‌- 60 ಗ್ರಾಂ ಪಿಸ್ತಾ -6ಂ ಗ್ರಾಂ ಸಕ್ಕರೆ - 60 ಗ್ರಾಂ ಏಲಕ್ಕಿ - 3 ತುಪ್ಪ ಬಾದಾಮ್‌ ಪೌಡರ್‌ - 2 ಚಮಚ ಮಾಡುವ ವಿಧಾನ: ಒಂದು...

  • ಬೇಕಾಗುವ ಸಾಮಗ್ರಿ ಅಕ್ಕಿಹಿಟ್ಟು: 1 ಕಪ್‌ ಉಪ್ಪು: ಸ್ವಲ್ಪ ತೆಂಗಿನ ತುರಿ: 1 ಕಪ್‌ ಕಡಲೆ ಪದಾರ್ಥಕ್ಕೆ: ನೆನೆಸಿಟ್ಟ ಕಡಲೆ: 1 ಕಪ್‌ ಎಣ್ಣೆ: ಸ್ವಲ್ಪ ಏಲಕ್ಕಿ, ಜೀರಿಗೆ:...

ಹೊಸ ಸೇರ್ಪಡೆ

  • ಕಿತ್ತಳೆಯು ಹಣ್ಣುಗಳಲ್ಲಿ ಸರ್ವಶ್ರೇಷ್ಠ. ಈ ಹಣ್ಣನ್ನು ಸೇವಿಸುವುದರಿಂದ ಆಯಾಸ ಪರಿಹಾರವಾಗುವುದು. ಬಾಯಾರಿಕೆ ನೀಗುವುದು. ಹಸಿವು ಕಾಣಿಸಿಕೊಳ್ಳುವುದು. ರಕ್ತ...

  • ಅಡುಗೆ ಆದ ನಂತರ ಅದಕ್ಕೆ ಮುಕ್ತಾಯ ಹಾಡಬೇಕಾದರೆ ಒಗ್ಗರಣೆಗೆ ಕರಿಬೇವು ಬೇಕೇ ಬೇಕು. ಅದರಲ್ಲಿರುವ ಪೌಷ್ಟಿಕಾಂಶದ ಅರಿವಿಲ್ಲದೆ ಊಟದ ಮಧ್ಯೆ ಸಿಗುವ ಕರಿಬೇವನ್ನು...

  • ಸುರತ್ಕಲ್‌: ಎಂಆರ್‌ಪಿಎಲ್‌ನಿಂದ ಮೊದಲ ಬಾರಿಗೆ 36 ಸಾವಿರ ಟನ್‌ ಪೆಟ್‌ ಕೋಕ್‌ ಅನ್ನು ರೈಲಿನ ಮೂಲಕ ಗುಲ್ಬರ್ಗಕ್ಕೆ ಸಾಗಿಸಲಾಗಿದೆ. ಈ ಮೂಲಕ ರೈಲ್ವೇ ಸಂಪರ್ಕ ಪಡೆದ...

  • ಸುಮಾರು ನಾಲ್ಕೈದು ದಶಕಗಳ ಹಿಂದೆ ವೇಷಗಳ ಹಿಂಭಾಗದಲ್ಲಿ ಪಾಕು ಸೀರೆಯನ್ನು ಕಟ್ಟುವ ಕ್ರಮ ಇದ್ದಂತಿಲ್ಲ. ಕಿರೀಟ ವೇಷಗಳಿಗೆ ಕಿರೀಟದ ಕೆಳಭಾಗಕ್ಕೆ ಕಟ್ಟಿದ ಚೌರಿ...

  • ದಿ ಲೀಡರ್‌ ಒಂದು ಅಸಂಗತ ನಾಟಕ . ರೊಮೇನಿಯಾದ ಲೇಖಕ ಯುಜಿನೊ ಐನೆಸ್ಕೊ ಈ ನಾಟಕದ ಕತೃ. 1953ರಲ್ಲಿ ಬರೆದ ನಾಟಕವಿದು. ದೇಶ , ಕಾಲದ ಹಂಗಿಲ್ಲದೆ ನಿರಂತರವಾಗಿ ಹರಿಯುವ ಸೆಳೆತವೇ...