ಹೆಸರು ಬೇಳೆ ಲಾಡು

Team Udayavani, Aug 31, 2019, 5:10 AM IST

ಬೇಕಾಗುವ ಸಾಮಗ್ರಿಗಳು
ಹೆಸರು ಬೇಳೆ- 1 ಕಪ್‌
ತುಪ್ಪು- ಕಾಲು ಕಪ್‌
ಸಕ್ಕರೆ- ಕಾಲು ಕಪ್‌
ಏಲಕ್ಕಿ – 3-4
ಗೋಡಂಬಿ, ಬಾದಾಮಿ- ಸಣ್ಣಗೆ ಕತ್ತರಿಸಿದ್ದು ಅರ್ಧ ಕಪ್‌
ಪಿಸ್ತಾ- ಸ್ವಲ್ಪ (ಅಲಂಕಾರಕ್ಕೆ)

ಮೊದಲು ಹೆಸರು ಬೇಳೆಯನ್ನು ಚೆನ್ನಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಬೇಕು. ಅನಂತರ ಸಕ್ಕರೆ, ಏಲಕ್ಕಿಯನ್ನು ಪುಡಿ ಮಾಡಿಕೊಳ್ಳಬೇಕು. ಒಲೆಯ ಮೇಲೆ ಬಾಣಲೆ ಇಟ್ಟು ಪುಡಿ ಮಾಡಿಕೊಂಡ ಹೆಸರುಬೇಳೆ ಪುಡಿ ಹಾಕಿ ಅದಕ್ಕೆ ತುಪ್ಪ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಶ್ರಣ ಮಾಡಿ 10 ನಿಮಿಷ ಕೈಯಾಡಿಸಬೇಕು. ಅನಂತರ ಇದನ್ನು ಪಾತ್ರೆಯೊಂದಕ್ಕೆ ಹಾಕಿ ಬಾದಾಮಿ ಚೂರುಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಈಗಾಗಲೇ ಪುಡಿ ಮಾಡಿಕೊಂಡ ಸಕ್ಕರೆ ಹಾಗೂ ಏಲಕ್ಕಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಅಂಗೈಗೆ ಸ್ವಲ್ಪ ತುಪ್ಪ ಹಾಕಿಕೊಂಡು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಮಧ್ಯೆ ಪಿಸ್ತಾ ಇಟ್ಟರೆ ರುಚಿಕರ ಹಾಗೂ ಆರೋಗ್ಯಕರವಾದ ಹೆಸರು ಬೇಳೆ ಲಾಡು ಸವಿಯಲು ಸಿದ್ಧ.

(ಸಂಗ್ರಹ)
ಧನ್ಯಶ್ರೀ ಬೋಳಿಯಾರ್‌


ಈ ವಿಭಾಗದಿಂದ ಇನ್ನಷ್ಟು

  • ಚಳಿಗಾಲ ಶುರುವಾಗುತ್ತಿದ್ದಂತೆ ಸಂಜೆ ವೇಳೆಗೆ ಬಿಸಿ ಬಿಸಿ ಚಹಾದ ಜತೆ ಸವಿಯಲು ಏನಾದರೂ ಇದ್ದರೆ ಚೆನ್ನಾಗಿತ್ತು ಎನ್ನುವವರು ಮನೆಯಲ್ಲಿ ವಿಧವಿಧವಾದ ತಿಂಡಿಗಳನ್ನು...

  • ಬೇಕಾಗುವ ಸಾಮಗ್ರಿಗಳು ಎಣ್ಣೆ -ಸ್ವಲ್ಪ 3 ಕಪ್‌ ದಪ್ಪ ಅವಲಕ್ಕಿ ಶೇಂಗಾ ಬೀಜ-ಅರ್ಧ ಕಪ್‌ ಬಾದಾಮಿ ಬೀಜ-ಕಾಲು ಕಪ್‌ ಗೋಡಂಬಿ-ಕಾಲು ಕಪ್‌ ಕಡಲೆ ಬೇಳೆ-2 ದೊಡ್ಡ ಚಮಚ ಕರಿಬೇವಿನ...

  • 1 ಪಾತ್ರೆ ನೀರು ಎಣ್ಣೆ-ಅಗತ್ಯವಿದ್ದಷ್ಟು ಹಕ್ಕ ನೂಡಲ್ಸ್‌-1 ಪ್ಯಾಕ್‌ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ ಈರುಳ್ಳಿಯ ಬಿಳಿಭಾಗ-2 ಚಮಚ ಕ್ಯಾಬೇಜ್‌-1 ಕಪ್‌ ಸಣ್ಣಗೆ...

  • ಬೇಕಾಗುವ ಸಾಮಗ್ರಿಗಳು ಖೋಯಾ- 100 ಗ್ರಾಂ ಬಾದಾಮ್‌- 60 ಗ್ರಾಂ ಪಿಸ್ತಾ -6ಂ ಗ್ರಾಂ ಸಕ್ಕರೆ - 60 ಗ್ರಾಂ ಏಲಕ್ಕಿ - 3 ತುಪ್ಪ ಬಾದಾಮ್‌ ಪೌಡರ್‌ - 2 ಚಮಚ ಮಾಡುವ ವಿಧಾನ: ಒಂದು...

  • ಬೇಕಾಗುವ ಸಾಮಗ್ರಿ ಅಕ್ಕಿಹಿಟ್ಟು: 1 ಕಪ್‌ ಉಪ್ಪು: ಸ್ವಲ್ಪ ತೆಂಗಿನ ತುರಿ: 1 ಕಪ್‌ ಕಡಲೆ ಪದಾರ್ಥಕ್ಕೆ: ನೆನೆಸಿಟ್ಟ ಕಡಲೆ: 1 ಕಪ್‌ ಎಣ್ಣೆ: ಸ್ವಲ್ಪ ಏಲಕ್ಕಿ, ಜೀರಿಗೆ:...

ಹೊಸ ಸೇರ್ಪಡೆ