ಅಡಿಕೆ ಬೆಲೆಯಲ್ಲಿ ವ್ಯತ್ಯಾಸವಿಲ್ಲ

Team Udayavani, Sep 8, 2019, 5:01 AM IST

ಈ ವಾರ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ. ಕಳೆದ ವಾರ ಹೊಸ ಅಡಿಕೆ ಬೆಲೆಯಲ್ಲಿ ಏರಿಕೆಯ ಬೆಳವಣಿಗೆಯಾಗಿತ್ತು. ಹಳೆಯ ಅಡಿಕೆ 290-300 ರೂ. ತನಕ ಖರೀದಿಯಾದರೆ, ಹೊಸ ಅಡಿಕೆಗೆ ಮತ್ತೆ 3 ರೂ. ಏರಿಕೆಯಾಗಿ 250 -263 ರೂ. ತನಕ ಮಾರುಕಟ್ಟೆ ಬೆಲೆಯಲ್ಲಿ ಖರೀದಿಯಾಗಿತ್ತು. ಈ ವಾರವೂ ಅದೇ ಧಾರಣೆ ಮುಂದುವರಿದಿದೆ. ಡಬಲ್‌ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿ ಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ. ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.

ರಬ್ಬರ್‌ ಸ್ಥಿರ
ರಬ್ಬರ್‌ ಬೆಲೆ ವರ್ಷಗಳ ಬಳಿಕ 150 ರೂ.ಗೆ ತಲುಪಿತ್ತು. ಕೆಲವು ವಾರಗಳಿಂದ 137 ರೂ.ಗೆ ಇಳಿಕೆ ಕಂಡಿತ್ತು. ಈ ವಾರವೂ ಅದೇ ಧಾರಣೆ ಮುಂದುವರಿದಿದೆ. ಆರ್‌ಎಸ್‌ಎಸ್‌4 ದರ್ಜೆ 137.5 ರೂ., ಆರ್‌ಎಸ್‌ಎಸ್‌5 ದರ್ಜೆ 133 ರೂ., ಲಾಟ್‌ 122.5 ರೂ.ನಲ್ಲಿ ಖರೀದಿ ನಡೆಸಿದೆ. ಸಾðಪ್‌ 1 ದರ್ಜೆ 84 ರೂ., ಸ್ಕಾÅಪ್‌ 2 ದರ್ಜೆ 76 ರೂ.ನಲ್ಲಿ ಖರೀದಿ ನಡೆಸಿವೆ.

ತೆಂಗು ಧಾರಣೆ ಯಥಾಸ್ಥಿತಿ
ತೆಂಗಿನ ಬೆಲೆ ಕೆಲವು ದಿನಗಳ ಹಿಂದೆ ಏರಿಕೆ ಕಂಡಿತ್ತು. ಹೊಸ ತೆಂಗಿನ ಕಾಯಿ 31 ರೂ.ಗೆ, ಹಳೆ ತೆಂಗಿನಕಾಯಿ 32 ರೂ. ತನಕ ಖರೀದಿಯಾಗಿತ್ತು. ಆದರೆ ಕಳೆದ ವಾರ 28 ರೂ. ಮತ್ತು 29 ರೂ.ಗೆ ಇಳಿಕೆ ಕಂಡಿತ್ತು. ಈ ವಾರವೂ ಅದೇ ಧಾರಣೆ ಮುಂದುವರೆದಿದೆ.ಕೊಕ್ಕೋ ಈ ವಾರವೂ 45-48 ರೂ. ಗೆ ಖರೀದಿಯಾಗಿದೆ.

ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು.

-   ರಾಜೇಶ್‌ ಪಟ್ಟೆ


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ