ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿ ಮುನ್ನ  ಹೀಗೆ ಮಾಡಿ

Team Udayavani, Nov 1, 2019, 4:08 AM IST

ಹೊಸ ಕಾರು ಬೇಡ. ಸೆಕೆಂಡ್‌ ಹ್ಯಾಂಡ್‌ ಕಾರು ಸಾಕು ಎಂಬ ಮನೋಭಾವ ಹಲವರದ್ದಾಗಿರುತ್ತದೆ. ಹೆಚ್ಚು ಬಳಕೆಯಿಲ್ಲ. ಚೆನ್ನಾಗಿ ಡ್ರೈವಿಂಗ್‌ ತಿಳಿದಿಲ್ಲ ಎಂಬ ಕಾರಣಕ್ಕೆ ಸೆಕೆಂಡ್‌ ಹ್ಯಾಂಡ್‌ ಖರೀದಿಸಲು ಮುಂದಾಗುತ್ತಾರೆ. ಆದರೆ ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೆ ಮುನ್ನ ಅಳುಕು ಇದ್ದದ್ದೇ. ಅದರ ಮಾಲಕರು ಚೆನ್ನಾಗಿ ಇಟ್ಟುಕೊಂಡಿದ್ದಾರಾ? ಅಪಘಾತಕ್ಕೀಡಾಗಿದೆಯೇ ಇತ್ಯಾದಿ ಸಂಶಯಗಳಿರಬಹುದು. ಆದ್ದರಿಂದ ಖರೀದಿಗೆ ಮುನ್ನ ಗಮನಿಸಬೇಕಾದ್ದೇನು? ಚೆಕ್‌ಲಿಸ್ಟ್‌ ಇಲ್ಲಿದೆ.

ಬಾಡಿ ಚೆಕ್‌
ಕಾರಿನ ಬಾಡಿ ಪರೀಕ್ಷೆ ಮುಖ್ಯ. ಇದಕ್ಕಾಗಿ ಇಡೀ ಕಾರನ್ನು ಸೂಕ್ಷ್ಮವಾಗಿ ಪರಿಶೀಲನೆ ಮಾಡಬೇಕು. ಬಂಪರ್‌ ಮತ್ತು ಬಾಡಿ ಕಲರ್‌ ಒಂದೇ ಇದೆಯೇ, ಬದಿಗಳು ಒಂದೇ ರೀತಿ ಇವೆಯೇ? ಡೋರ್‌ಗಳು ಚೆನ್ನಾಗಿ ಹಾಕಿ-ತೆಗೆಯಲು ಸಾಧ್ಯವಾಗುತ್ತದೆಯೇ ಪರಿಶೀಲಿಸಿ. ಕಾರಿನ ತಳಭಾಗದ ವೆಲ್ಡಿಂಗ್‌, ಎಕ್ಸಾಸ್ಟ್‌ ಪೈಪ್‌ಗ್ಳನ್ನೂ ಪರಿಶೀಲಿಸುವುದು ಉತ್ತಮ. ಎಂಜಿನ್‌ ಬೇ ತೆರೆದು ನೋಡಬೇಕು. ಈ ಮೂಲಕ ಕಾರು ಯಾವುದೇ ಅಪಘಾತ, ರೀಪೈಂಟ್‌ ಆಗಿದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು.

ರಬ್ಬರ್‌ ಬಿಡಿಭಾಗಗಳು
ಕಾರು ಹೆಚ್ಚು ಬಳಕೆಯಾಗಿದ್ದರೆ ರಬ್ಬರ್‌ ಬಿಡಿಭಾಗಗಳು ಸವೆದಿರುತ್ತವೆ. ಉದಾ: ಡೋರ್‌ನ ಬೀಡಿಂಗ್‌ಗಳು ಕಿರಿದಾಗಿ ಶಬ್ದ ಮತ್ತು ಸಸ್ಪೆನÒನ್‌ ಬುಶ್‌ಗಳು ಸವೆದು ಟಯರ್‌ ಹೊಂಡ-ಗುಂಡಿಗೆ ಬಿದ್ದಾಗ ಶಬ್ದ ಬರಬಹುದು. ಹಾಗೆಯೇ ವಿವಿಧ ರಬ್ಬರ್‌ ಭಾಗಗಳು ಸವೆದಿದ್ದರೆ ಅದರ ಅನುಭವ ಡ್ರೈವಿಂಗ್‌ ವೇಳೆ ಆಗತ್ತದೆ. ಕಾರಿನ ಟಯರ್‌ ಕೂಡ ಪರಿಶೀಲನೆ ಉತ್ತಮ. ಟಯರ್‌ಗಳು ಒಂದೇ ರೀತಿ ಸವೆದಿದೆಯೇ? ಸ್ಟೆಪ್ನಿ ಟಯರ್‌ ಹೇಗಿದೆ? ಒಂದು ವೇಳೆ ಕಾರು ಬಳಕೆಯೇ ಮಾಡುತ್ತಿಲ್ಲ ಎಂದಾದರೆ ಅದರ ಟಯರ್‌ ಕಾಂಪೌಂಡ್‌ ಬಿರುಕು ಬಿಟ್ಟಿರುವುದೂ ಕಾಣಿಸುತ್ತದೆ.

ಸರ್ವೀಸ್‌ ಹಿಸ್ಟರಿ
ಕಾರಿನ ಅಧಿಕೃತ ಡೀಲರ್‌ ಬಳಿ ಸರ್ವೀಸ್‌ ಮಾಡಿಸುತ್ತಿದ್ದೀರಾ ಎಂದು ಕೇಳಿಕೊಳ್ಳಬೇಕು. ಹೌದು ಎಂದಾಗಿದ್ದರೆ, ಕಾರು ಸರ್ವೀಸ್‌ ಮಾಡಿಸಿದ ಹಿಂದಿನ ವಿವರಗಳು ಲಭ್ಯ. ಇದರಿಂದ ಕಾರು ಸುಸ್ಥಿತಿಯಲ್ಲಿತ್ತು, ಅಥವಾ ನಿಗದಿತವಾಗಿ ಸರ್ವೀಸ್‌ ಆಗುತ್ತಿತ್ತು, ಇತ್ತೀಚೆಗೂ ಸರ್ವೀಸ್‌ ಆಗಿದೆ ಎಂಬ ವಿವರಗಳು ನಿಮಗೆ ಸಿಗುತ್ತದೆ.

ಎಲೆಕ್ಟ್ರಿಕಲ್‌ ಪರಿಶೀಲನೆ
ಕಾರಿನ ಪ್ರತಿ ಎಲೆಕ್ಟ್ರಿಕಲ್‌ ವಸ್ತುಗಳನ್ನೂ ಪರಿಶೀಲಿಸಿ. ಹಾರರ್ನ್, ಲೈಟ್‌ಗಳು, ಪಾರ್ಕಿಂಗ್‌ ಲೈಟ್‌, ರಿವರ್ಸ್‌ ಲೈಟ್‌, ಬ್ರೇಕ್‌ಲೈಟ್‌ಗಳು ಉರಿಯುತ್ತವೆಯೇ ನೋಡಿ. ಕಾರಿನ ಎಂಜಿನ್‌ ಬೇ ಒಳಗೆ ವಯರ್‌ಗಳು ಸುಸ್ಥಿತಿಯಲ್ಲಿವೆಯೇ ಪರಿಶೀಲಿಸಿ. ವೈಪರ್‌, ಪವರ್‌ ವಿಂಡೋ, ಆಡಿಯೋ ಸಿಸ್ಟಂ, ಸೆನ್ಸರ್‌ಗಳು ಸರಿಯಾಗಿವೆಯೇ ಎಂಬುದನ್ನೂ ನೋಡಿ.

ದಾಖಲೆಗಳ ಬಗ್ಗೆ
ಎಲ್ಲ ದಾಖಲೆಗಳು ಇವೆಯೇ ಎಂಬುದನ್ನೂ ನೋಡಬೇಕು. ಇನ್ಸುರೆನ್ಸ್‌, ರಿಜಿಸ್ಟ್ರೇಷನ್‌ ಯಾರ ಹೆಸರಲ್ಲಿದೆ? ನಂಬರ್‌ (ರಿಜಿಸ್ಟ್ರೇಷನ್‌ ಪರಿಶೀಲನೆಗೆ ನಂಬರ್‌ ಹಾಕಿ ಆನ್‌ಲೈನ್‌ನಲ್ಲೂ ನೋಡಬಹುದು) ಅಪಘಾತದ ಬಗ್ಗೆ ಸಂಶಯವಿದ್ದರೆ, ಇನುÏರೆನ್ಸ್‌ ಕಂಪೆನಿಯವರ ಬಳಿಯೂ ಕೇಳಬಹುದು. ನೋ ಕ್ಲೇಮ್‌ ಬೋನಸ್‌ ಸಿಗುತ್ತಿರುವ ಬಗ್ಗೆ ಇನ್ಸೂರೆನ್ಸ್‌ ನೋಡಿ ಖಚಿತಪಡಿಸಿಕೊಳ್ಳಬಹುದು.

- ಈಶ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ತೆಗೆದರೆ ರಸಿಕ, ಗಡ್ಡ ಬಿಟ್ಟರೆ ಸನ್ಯಾಸಿ. ಗಡ್ಡ ಬಿಟ್ಟು ಬಗಲಲ್ಲೊಂದು ಖಾದಿ ಚೀಲ ಇಳಿಬಿಟ್ಟಿದ್ದರೆ ಆತ ಒಂದೋ ವಿಚಾರವಾದಿ, ಇಲ್ಲವೇ ಸಾಹಿತಿ. ಆಕರ್ಷಕವಾಗಿ ಗಡ್ಡ...

  • ಅಧಿಕ ಮಳೆಯಾಗುವ ಕರಾವಳಿ ಭಾಗಗಳಲ್ಲಿ ಬೆಳೆಗಳಿಗೆ ಗೊಬ್ಬರಗಳನ್ನು ವಿಭಜಿತ ಕಂತುಗಳಲ್ಲಿ ಕೊಡುವುದು ಸೂಕ್ತ. ಮಳೆಗಾಲ ಪೂರ್ವದಲ್ಲಿ ಸಾರಜನಕ ಕಡಿಮೆ ಇರುವ ಗೊಬ್ಬರ...

  • ಮನೆಯ ಮೆರುಗನ್ನು ಹೆಚ್ಚಿಸಬೇಕೆಂದು ಹೆಚ್ಚಿನ ಹಣವನ್ನು ವಿನಿಯೋಗಿಸುತ್ತೇವೆ. ಆದರೆ ನಮ್ಮ ಮನೆಯಲ್ಲಿರುವ ಹಳೆ ಕಾಲದ ವಸ್ತುಗಳಿಗೆ ಹೊಸ ಅವತಾರ ನೀಡಿ, ನಮ್ಮ ಮನೆಯ...

  • ಗಿಡ ಬೆಳೆಸುವುದು ನಿಮ್ಮ ನೆಚ್ಚಿನ ಹವ್ಯಾಸವಾಗಿದ್ದು, ಸ್ಥಳವಿಲ್ಲ ಚಿಂತೆ ಕಾಡುತ್ತಿದ್ದರೆ ಅದಕ್ಕೆ ಪರಿಹಾರ ಇಲ್ಲಿದೆ. ಮನೆಯೊಳಗೆ ಬೆಳೆಯುವ ಕೆಲವೊಂದು ಗಿಡಗಳು,...

  • ಮನೆ ಅಂದವಾಗಿರಲು ಮನೆಯೊಳಗೆ ಪೀಠೊಪಕರಣಗಳು ಬೇಕಾಗುತ್ತವೆ. ಮನೆಗೆ ವಸ್ತುಗಳನ್ನು ಖರೀದಿಸುವಾಗ ಹಲವಾರು ರೀತಿಯಲ್ಲಿ ಗಮನಹರಿಸಬೇಕಾಗುತ್ತದೆ. ಅಂತೆಯೇ ಮನೆಯ...

ಹೊಸ ಸೇರ್ಪಡೆ