ಗೇಮಿಂಗ್‌ ಲ್ಯಾಪ್‌ಟಾಪ್‌

ಮನೋರಂಜನೆ, ದೈನಂದಿನ ಕೆಲಸಕ್ಕೆ

Team Udayavani, Jan 17, 2020, 5:06 AM IST

an-27

ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ ಅದರ ಆವಶ್ಯಕತೆಯೂ ಈಗಿನ ಜಮಾನಕ್ಕೆ ಬಹಳವಿದೆ.

ಡಿಜಿಟಲ್‌ ಯುಗಕ್ಕೆ ನಾವೆಷ್ಟು ಹೊಂದಿಕೊಂಡಿದ್ದೇವೆಂದರೆ, ಆಟ ಆಡುವುದಕ್ಕೂ ಮಡಿಲಲ್ಲಿ ಲ್ಯಾಪ್‌ಟಾಪ್‌ ಇರಲೇಬೇಕು. ಮೈದಾನಕ್ಕೆ ಹೋಗಿ ಓರಗೆಯ ಮಕ್ಕಳನ್ನೋ, ಯುವಕರನ್ನೋ ಸೇರಿಸಿಕೊಂಡು ಆಡುವಷ್ಟು ಸಮಯ ಈಗಿಲ್ಲ. ಧಾವಂತದ ಜೀವನ, ಒತ್ತಡದ ದಿನ, ವೀಕೆಂಡ್‌ಗಳಲ್ಲೂ ಬ್ಯುಸಿಯಾಗಿರುವಷ್ಟರ ಮಟ್ಟಿಗೆ ಮನುಷ್ಯ ಎಂಬ ಜೀವಿಯನ್ನು ಈ ತಂತ್ರಜ್ಞಾನ ಯುಗ ತನ್ನೊಳಗೆ ಬಂಧಿಯಾಗಿಸಿದೆ. ಹಾಗಾಗಿ ಈ ಯುಗಕ್ಕೆ ಹೊಂದಿಕೊಳ್ಳುವಂತಹದ್ದೇ ಗೇಮ್‌ಗಳೂ ಕೂಡ ನಮಗಿಷ್ಟವಾಗುತ್ತವೆ ಎಂಬುದು ಅಷ್ಟೇ ಸತ್ಯ.

ಕ್ರಿಯಾಶೀಲತೆಗೆ ಗೇಮ್‌
ಬುದ್ಧಿಗೆ ಕೆಲಸ ನೀಡಬಲ್ಲ, ಮೆದುಳನ್ನು ಕ್ರಿಯಾಶೀಲವನ್ನಾಗಿಸಬಲ್ಲ, ಕೈಗೆ ಒಂದಷ್ಟು ವ್ಯಾಯಾಮ ಒದಗಿಸಬಲ್ಲಂತಹ ಹಲವಾರು ರೀತಿಯ ಆಟಗಳನ್ನು ಒದಗಿಸಬಲ್ಲಷ್ಟು ಡಿಜಿಟಲ್‌ ತಂತ್ರಜ್ಞಾನ ಯುಗ ಮುಂದುವರಿದಿದೆ. ಅದಕ್ಕೆಂದೇ ವಿವಿಧ ರೀತಿಯ ಲ್ಯಾಪ್‌ಟಾಪ್‌ಗ್ಳ ಬಳಕೆಯಾಗುತ್ತಿದೆ.

ಲ್ಯಾಪ್‌ಟಾಪ್‌ ಎಂದಾಕ್ಷಣ ಕೇವಲ ಫೋಟೋ, ಮಾಹಿತಿ ಸಂಗ್ರಹಿಸಿಟ್ಟುಕೊಳ್ಳುವುದಕ್ಕೆ, ಮಾಹಿತಿಗಳನ್ನು ಹುಡುಕುವುದಕ್ಕೆ, ಫೈಲ್‌ಗ‌ಳನ್ನು ದಾಖಲೀಕರಣ ಮಾಡಿಕೊಳ್ಳುವುದಕ್ಕೆ ಎಂದರೆ ತಪ್ಪಾದೀತು. ಅದಕ್ಕೂ ಹೊರತಾಗಿ ಅನೇಕ ಹೊಸ ಹೊಸ ಫೀಚರ್‌ಗಳೊಂದಿಗೆ ಆಧುನಿಕ ಜನರ ಬೇಡಿಕೆಗಳಿಗನುಸಾರವಾಗಿ ಗೇಮಿಂಗ್‌ ಲ್ಯಾಪ್‌ಟಾಪ್‌ಗ್ಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಬಹು ಬೇಡಿಕೆಯ ಲ್ಯಾಪ್‌ಟಾಪ್‌ಗ್ಳಾಗಿವೆ.

ಯುವಕರ ಇಷ್ಟ ಗೇಮಿಂಗ್‌ ಲ್ಯಾಪ್‌ಟಾಪ್‌
ಪವರ್‌ ಮತ್ತು ಡಿಸೈನ್‌ ವಿಚಾರಗಳಿಗೆ ಹೋಲಿಸಿದರೆ ಗೇಮಿಂಗ್‌ ಲ್ಯಾಪ್‌ಟಾಪ್‌ ಅತ್ಯುತ್ತಮವಾಗಿದೆ. ಅತ್ಯುತ್ತಮ ಗ್ರಾಫಿಕ್ಸ್‌ಗಳಿರುವ ಗೇಮ್‌ಗಳನ್ನು ಆಡುವಾಗ ಅದ್ಭುತ ಅನುಭವ ನೀಡುವ ಗೇಮಿಂಗ್‌ ಲ್ಯಾಪ್‌ಟಾಪ್‌ ಯುವಕರ ಬಹು ಇಚ್ಛೆಯ ಲ್ಯಾಪ್‌ಟಾಪ್‌ ಕೂಡ ಆಗಿದೆ. ಉತ್ತಮ ಎಫ್‌ಎಚ್‌ಡಿ ಡಿಸ್‌ಪ್ಲೇ, ಉತ್ತಮ ಸ್ಟೋರೇಜ್‌ ವ್ಯವಸ್ಥೆ, ಬ್ಯಾಟರಿ ತೂಕ, ಆಕರ್ಷಕ ಡಿಸೈನ್‌, ಉನ್ನತ ದರ್ಜೆಯ ಇನ್‌ ಯಾರ್ಡ್ಸ್‌, ಸ್ಲಿಮ್‌ ಫಾರ್ಮ್ ಫ್ಯಾಕ್ಟರ್‌, ಉತ್ತಮ ಗೇಮಿಂಗ್‌ ಲೇಔಟ್‌, ಕೀಬೋರ್ಡ್‌ ಮತ್ತು ಟ್ರ್ಯಾಕ್‌ ಪ್ಯಾಡ್‌ಗಳು, ಜಿ-ಸಿಂಕ್‌ ಸೌಲಭ್ಯ ಮುಂತಾದವುಗಳನ್ನು ನೋಡಿಕೊಂಡು ಯುವಕರು ಈ ಗೇಮಿಂಗ್‌ ಲ್ಯಾಪ್‌ಟಾಪ್‌ಗ್ಳ ಖರೀದಿಗೆ ಒಲವು ತೋರುತ್ತಾರೆ. ಇತ್ತೀಚಿನ ಎಂಟ್ರಿ ಲೆವೆಲ್‌ ಗೇಮಿಂಗ್‌ ಲ್ಯಾಪ್‌ಟಾಪ್‌ಗ್ಳು ಗೇಮ್‌ ಆಡಲು ಸಾಕಷ್ಟು ಫೈರ್‌ ಪವರ್‌ ನೀಡುತ್ತವೆ. ಉತ್ಸಾಹಭರಿತ ಗೇಮರ್‌ಗಳು ಇತ್ತೀಚಿನ ಎನ್‌ವಿಡಿಯಾ ಆರ್ಟಿಎಕ್ಸ್‌ ಗ್ರಾಫಿಕ್ಸ್‌ ಕಾರ್ಡ್‌ ಇರುವ ಲ್ಯಾಪ್‌ಟಾಪ್‌ಗ್ಳನ್ನು ಇಷ್ಟಪಡುತ್ತಾರೆ.

ಮಂಗಳೂರಿನಲ್ಲಿ ಬೇಡಿಕೆ
ಸದ್ಯ ತಂತ್ರಜ್ಞಾನ ಲೋಕದಲ್ಲಿ ಟ್ರೆಂಡ್‌ ಸೃಷ್ಟಿಸಿರುವ ಗೇಮಿಂಗ್‌ ಲ್ಯಾಪ್‌ಟಾಪ್‌ಗ್ಳಿಗೆ ಮಂಗಳೂರು ಮಾರುಕಟ್ಟೆಯಲ್ಲಿಯೂ ಬಹು ಬೇಡಿಕೆ ಇದೆ. ಎಂಜಿನಿಯರಿಂಗ್‌, ವೈದ್ಯಕೀಯ ಮತ್ತು ಇತರ ವಿಜ್ಞಾನ ವಿದ್ಯಾರ್ಥಿಗಳು, ಗೇಮಿಂಗ್‌ ಲ್ಯಾಪ್‌ಟಾಪ್‌ಗೆ ಹೆಚ್ಚು ಒಲವು ತೋರುತ್ತಾರೆ. ದೈನಂದಿನ ಕಚೇರಿ ಕೆಲಸಗಳಲ್ಲಿಯೂ ಈ ಲ್ಯಾಪ್‌ಟಾಪ್‌ ಹೆಚ್ಚು ಬಳಕೆಗೆ ಬರುವುದರಿಂದ ಮತ್ತು ಇತರ ಲ್ಯಾಪ್‌ಟಾಪ್‌ಗ್ಳಿಗಿಂತ ಹೆಚ್ಚು ಫೀಚರ್‌ಗಳನ್ನು ಒಳಗೊಂಡಿರುವುದರಿಂದ ಕಚೇರಿ ಕೆಲಸಕ್ಕೂ ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಾರೆ ನಗರದ ಎಲೆಕ್ಟ್ರಾನಿಕ್‌ ಮಳಿಗೆಯೊಂದರ ಸಿಬಂದಿ ಲೋಹಿತ್‌.

76 ಸಾವಿರ ರೂ.ಗಳಿಂದ ಆರಂಭ
ಗೇಮಿಂಗ್‌ ಲ್ಯಾಪ್‌ಟಾಪ್‌ಗ್ಳು 76ಸಾವಿರ ರೂ.ಗಳಿಂದ ಆರಂಭವಾಗಿ 1.2 ಲಕ್ಷ ರೂ.ಗಳವರೆಗೂ ಬೆಲೆ ಬಾಳುವಂತಹವು ಇರುತ್ತವೆ. ಪ್ರಭಾವಶಾಲಿ ಡಿಸ್‌ಪ್ಲೇ, ಆಕರ್ಷಕ ಕಾರ್ಯಕ್ಷಮತೆ, ಉತ್ತಮ ಬ್ಯಾಟರಿ ಹೊಂದಿರುವ ಲ್ಯಾಪ್‌ಟಾಪ್‌ಗ್ಳಿಗೆ ಬೇಡಿಕೆ ಅಧಿಕ ಎನ್ನುತ್ತಾರೆ ಹರ್ಷ ಎಲೆಕ್ಟ್ರಾನಿಕ್ಸ್‌ ಮಳಿಗೆಯ ಸಿಬಂದಿ.

ದೈನಂದಿನ ಕೆಲಸಕ್ಕೆ ಸಹಕಾರಿ
ಗೇಮಿಂಗ್‌ ಲ್ಯಾಪ್‌ಟಾಪ್‌ ಕೇವಲ ಗೇಮ್‌ ಆಡುವುದಕ್ಕಾಗಿಯೇ ಬಳಕೆಯಾಗುತ್ತದೆ ಎಂದರೆ ತಪ್ಪಾದೀತು. ಇದರ ಹೊರತಾಗಿಯೂ ದೈನಂದಿನ ಕೆಲಸ ಕಾರ್ಯಗಳಿಗೆ ಉಪಯುಕ್ತ ವಾಗಬಲ್ಲ ಮತ್ತು ದೈನಂದಿನ ಕಚೇರಿ ಕೆಲಸಕ್ಕೆ ದುಪ್ಪಟ್ಟು ಉಪಯುಕ್ತವಾಗಬಲ್ಲ ಲ್ಯಾಪ್‌ಟಾಪ್‌ ಇದು. ಏನೂ ಕೆಲಸ ಇಲ್ಲದ ಸಂದರ್ಭದಲ್ಲಿ ಮನೋರಂಜನೆಗಾಗಿ ಅತ್ಯುತ್ತಮ ಗೇಮ್‌ಗಳನ್ನು ಒದಗಿಸಬಲ್ಲ ಈ ಲ್ಯಾಪ್‌ಟಾಪ್‌ ದುಬಾರಿಯಾದರೂ ಉತ್ತಮ ಬೇಡಿಕೆಯನ್ನು ಉಳಿಸಿಕೊಂಡಿದೆ.

ಉತ್ತಮ ಬೇಡಿಕೆ
ಮಂಗಳೂರಿನಲ್ಲಿ ಗೇಮಿಂಗ್‌ ಲ್ಯಾಪ್‌ಟಾಪ್‌ಗ್ಳಿಗೆ ಉತ್ತಮ ಬೇಡಿಕೆ ಇದೆ. ಇದರ ಕೀ ಬೋರ್ಡ್‌ ಸ್ವಲ್ಪ ಗಡುಸಾಗಿದ್ದು, ಇದು ಹೆಚ್ಚು ಉಪಯುಕ್ತವಾಗುತ್ತದೆ. ಕೇವಲ ಗೇಮ್‌ಗಾಗಿ ಮಾತ್ರವಲ್ಲದೆ, ಎಲ್ಲ ದೈನಂದಿನ ಕೆಲಸ ಕಾರ್ಯಗಳಿಗೆ ಈ ಲ್ಯಾಪ್‌ಟಾಪ್‌ ಸಹಕಾರಿಯಾಗುತ್ತದೆ. ಯುವಕರು ಮತ್ತು ವಿದ್ಯಾರ್ಥಿಗಳು ಇದರ ಖರೀದಿಗೆ ಹೆಚ್ಚು ಒಲವು ತೋರುತ್ತಾರೆ‌.
– ಗೋಪಾಲ್‌, ಎಲೆಕ್ಟ್ರಾನಿಕ್‌ ಮಳಿಗೆಯೊಂದರ ಸಿಬಂದಿ

– ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qeeqwewqwqe

Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.