ವಾಹನದ ಪೈಂಟ್‌ ಸುರಕ್ಷೆ ಹೇಗೆ?


Team Udayavani, Sep 28, 2018, 3:13 PM IST

28-sepctember-13.gif

ಕೆಲವರ ವಾಹನ ಪಳ ಪಳ ಹೊಳೆಯುತ್ತಿರುತ್ತದೆ. ನಿತ್ಯವೂ ತೊಳೆಯುತ್ತೀರಾ ಎಂದು ಕೇಳಿದರೆ ಇಲ್ಲ ಎಂಬ ಉತ್ತರ ಬರಬಹುದು. ಆದರೆ ಇದು ಹೇಗೆ ಎನ್ನುವ ಪ್ರಶ್ನೆಯಾಗಿ ಕಾಡಬಹುದು. ವಾಹನದ ಪೈಂಟ್‌ ನಿರ್ವಹಣೆ ಮತ್ತು ಅದನ್ನು ಶುಚಿಯಾಗಿಟ್ಟುಕೊಳ್ಳುವುದೂ ಒಂದು ಕೌಶಲ. ಇದಕ್ಕಾಗಿ ದೊಡ್ಡದಾಗಿ ಏನೂ ಮಾಡಬೇಕಾದ್ದಿಲ್ಲ. ವಾರಕ್ಕೆ ಮೂರು ಬಾರಿಯಾದರೂ ತುಸು ಗಮನ ಕೊಟ್ಟರೆ ಸಾಕು.

ವಾಹನ ಓಡಾಟ ಬಳಿಕ ತೊಳೆಯಿರಿ
ವಾಹನವನ್ನು ಬಳಕೆ ಮಾಡುವುದು ಮಾತ್ರ ಮುಖ್ಯವಲ್ಲ. ಅದರಲ್ಲಿ ಓಡಾಡಿದ ಬಳಿಕ ತೊಳೆಯುವುದೂ ಮುಖ್ಯ. ಪೈಂಟ್‌ ಮೇಲಿನ ಧೂಳು,ಡಾಮಾರು ಕಲೆಗಳನ್ನು ತೊಳೆಯಲು ಒಂದೆರಡು ಬಕೆಟ್‌ ನೀರಿನಿಂದ ತೊಳೆದರೆ ಸಾಕು. ಅಥವಾ ಒದ್ದೆ ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಬಹುದು. ಬೈಕ್‌ ಆದರೆ ಅರ್ಧ ಬಕೆಟ್‌ ನೀರಿನಲ್ಲಿ ಶುಚಿ ಮಾಡಬಹದು. ಇದರಿಂದ ಪೈಂಟ್‌ ಮೇಲಿನ ಕಲೆಗಳು ಹೋಗಿ ಶುಭ್ರವಾಗುತ್ತವೆ. ಕಾರು ಆದರೆ ತಿಂಗಳಿಗೆ ಕನಿಷ್ಠ ಒಂದು ಬಾರಿ, ಬೈಕ್‌ ಆದರೆ ತಿಂಗಳಿಗೆ ಎರಡು ಬಾರಿ ತೊಳೆಯುವುದು ಉತ್ತಮ.

ಧೂಳು ತೆಗೆಯಿರಿ
ಒಂದು ವೇಳೆ ವಾಹನ ತೊಳೆಯಲು ಸಮಯವಿಲ್ಲ, ನೀರಿಗೂ ಸಮಸ್ಯೆ ಇದೆ ಎಂದಿದ್ದರೆ ಕನಿಷ್ಠ ನಿತ್ಯವೂ ಧೂಳು ತೆಗೆಯುವುದನ್ನು ರೂಢಿಸಿಕೊಳ್ಳಿ. ಇದರಿಂದ ವಾಹನ ಮೇಲ್ಮೈ ಹೊಳೆಯುತ್ತದೆ.

ಶ್ಯಾಂಪೂ ಮತ್ತು ವ್ಯಾಕ್ಸ್‌ ಬಳಕೆ
ವಾಹನ ತೊಳೆಯುವ ವೇಳೆ ವಾಹನಕ್ಕಾಗಿ ಇರುವ ಶ್ಯಾಂಪೂ ಬಳಸುವುದು ಉತ್ತಮ. ಕಾರಣ ವಿವಿಧ ಹವಾಮಾನದಲ್ಲೂ ವಾಹನ ಪೈಂಟ್‌ ಬಾಳಿಕೆ ಬರಬೇಕಾದರೆ ಇದು ಅಗತ್ಯ. ವಾಹನ ಪೈಂಟ್‌ ಸುರಕ್ಷಿತ ಮತ್ತು ಮೇಲ್ಮೈ ನಲ್ಲಿರು ಸಣ್ಣ ಗೀರುಗಳನ್ನು ಮಾಸುವಂತೆ ಮಾಡಲೂ ಇದು ಸಹಾಯಕ. ವ್ಯಾಕ್ಸ್‌ ಬಳಕೆಯಿಂದ ಪೈಂಟ್‌ನ ಮೇಲ್ಮೈ ಮೇಲೆ ತೆಳುವಾದ ಪದರವನ್ನು ಸೃಷ್ಟಿ ಮಾಡುತ್ತದೆ. ವಿನಾಯಿಲ್‌ ಕೋಟಿಂಗ್‌ ಕೂಡ ಇದನ್ನೇ ಮಾಡುತ್ತದೆ. ವ್ಯಾಕ್ಸ್‌ ಸುಲಭವಾಗಿ ಲಭ್ಯವಿದ್ದು, ಹತ್ತಿಯ ಬಟ್ಟೆಯಿಂದ ಪೈಂಟ್‌ ಮೇಲೆ ಚೆನ್ನಾಗಿ ಉಜ್ಜಬಹುದು. ಶೋರೂಂಗಳಲ್ಲಿ ಇದಕ್ಕೆ ಪ್ರತ್ಯೇಕ ಚಾರ್ಜ್‌ ಮಾಡುತ್ತಾರೆ.

ಪಾಲಿಶಿಂಗ್‌
ಪೈಂಟ್‌ ಬಾಳಿಕೆ ಬರಲು ವರ್ಷಕ್ಕೊಮ್ಮೆ ಪಾಲಿಶಿಂಗ್‌ ಮಾಡುವುದು ಉತ್ತಮ. ಇದರಿಂದ ಕಲೆಗಳು, ಗೀರುಗಳು ಮಾಯವಾಗುತ್ತದೆ. ಇದಕ್ಕಾಗಿ ಪರಿಣತರ ಬಳಿಯೇ ಹೋಗಬೇಕಾಗುತ್ತದೆ. ಇದಕ್ಕೆ ಪಾಲಿಶಿಂಗ್‌ ಮೆಶೀನ್‌ ಅಗತ್ಯವಿದ್ದು, ಕಾರುಗಳ ಬಾಡಿಗೆ ಪೂರ್ಣವಾಗಿ ಹಾಕಬೇಕಾಗಿರುವುದರಿಂದ ತುಸು ಸಮಯ ತಗುಲುತ್ತದೆ. ಪಾಲಿಶಿಂಗ್‌ ತುಸು ವೆಚ್ಚದಾಯಕ. ಪಾಲಿಶಿಂಗ್‌ ಬೇಡ ಎಂದಿದ್ದರೆ ವ್ಯಾಕ್ಸ್‌ ಹೊಂದಿದ ಶ್ಯಾಂಪೂ ಅನ್ನೇ ಕಾರು ತೊಳೆಯುವಾಗ ಬಳಕೆ ಮಾಡಬಹುದು.

ಸ್ಕ್ರ್ಯಾಚ್‌ ತೆಗೆಯುವುದು ಹೇಗೆ?
ಪೈಂಟ್‌ನ ಮೇಲ್ಮೈನಲ್ಲಿ ಉಂಟಾದ ಸ್ಕ್ರ್ಯಾಚ್‌ ಗಳನ್ನು ರಬ್ಬಿಂಗ್‌ ಕಾಂಪೌಂಡ್‌ ಪೇಸ್ಟ್‌ಗಳನ್ನು ಹಾಕಿ ಪಾಲಿಶ್‌ ಮಾಡಲಾಗುತ್ತದೆ. ಇದಕ್ಕೂ ಪರಿಣತರ ನೆರವು ಬೇಕಾಗುತ್ತದೆ. ಸಣ್ಣ ಗೆರೆಗಳಾದರೆ ರಬ್ಬಿಂಗ್‌ ಕಾಂಪೌಂಡ್‌ಗಳನ್ನು ಹತ್ತಿಬಟ್ಟೆಗೆ ಹಾಕಿ ಚೆನ್ನಾಗಿ ಉಜ್ಜಿದರೆ ಗೆರೆಗಳು ಮಾಸುತ್ತವೆ. ಒಂದು ವೇಳೆ ಆಳವಾದ ಗೆರೆಗಳು, ಮೇಲ್ಮೈ  ಪೈಂಟ್‌ ಹೋಗಿದ್ದರೆ ಅಂತಹ ಸಂದರ್ಭದಲ್ಲಿ ಮರು ಪೈಂಟಿಂಗ್‌ ಮಾಡಬೇಕಾಗುತ್ತದೆ. ಇದು ವೆಚ್ಚದಾಯ. ಕಲ್ಲು ಬಡಿದು , ಮರಳಿನಿಂದಾಗಿ ಗೆರೆಗಳಾಗಿದ್ದರೆ ಪಾಲಿಶಿಂಗ್‌ ಮೂಲಕ ತೆಗೆಯುವ ಯತ್ನವನ್ನು ಮಾಡಬಹುದು.

ವಾಹನಕ್ಕೆ ಕವರ್‌ ಮಾಡಿ
ವಾಹನಗಳನ್ನು ಸುಮ್ಮನೇ ನಿಲ್ಲಿಸಿದ್ದರೂ ಅವುಗಳನ್ನು ಬಿಸಿಲು, ಮಳೆಯಿಂದ ರಕ್ಷಿಸಲು ಕವರ್‌ ಹಾಕುವುದು ಉತ್ತಮ. ಇದರಿಂದ ಪೈಂಟ್‌ ಮಾಸುವುದನ್ನು ತಡೆಗಟ್ಟಬಹುದು. ಜತೆಗೆ ಧೂಳು ಬರುವುದಕ್ಕೂ ಪ್ರಯೋಜನ. ಇದರಿಂದಾಗಿ ವಾಹನ ಹೊಸತರಂತೆಯೇ ಕಾಣಲು ಸಾಧ್ಯವಾಗುತ್ತದೆ.

 ಈಶ 

ಟಾಪ್ ನ್ಯೂಸ್

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್

2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್‍ಯಾಂಕ್‌ ಪಡೆದ ತೀರ್ಥಹಳ್ಳಿಯ ಸುಚಿಂತ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.