ಕಣ್ಮಣಿಯರ ಉಡುಪುಗಳ ಅಂದ ಹೆಚ್ಚಿಸುವ ಕುಂದನ್ ಅಲಂಕಾರ
Team Udayavani, Nov 8, 2019, 4:00 AM IST
ರಂಗಿನ ಫ್ಯಾಷನ್ ಲೋಕದಲ್ಲಿ ದಿನಕ್ಕೊಂದರಂತೆ ಹೊಸ ಟ್ರೆಂಡ್ ಸೃಷ್ಟಿಯಾಗುತ್ತಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ ಹೆಂಗಳೆಯರ ಉಡುಗೆ-ತೊಡುಗೆಗಳ ಅಂದ ಹೆಚ್ಚಿಸುವುದಕ್ಕೆಂದೇ ನಾನಾ ಬಗೆಯ ವಿನ್ಯಾಸಗಳು ಜನ್ಮತಾಳಿವೆ. ಕಣ್ಮನ ಸೆಳೆಯುವ ತರೇಹವಾರಿ ಡಿಸೈನ್‌ಗಳು ಚೆಲುವೆಯರ ದಿರಿಸುಗಳಲ್ಲಿ ಮಿನುಗುತ್ತವೆ. ಹಲವಾರು ವಿನ್ಯಾಸಗಳಲ್ಲಿ ಕುಂದನ್ ಅಲಂಕಾರ ಮುಂಚೂಣಿಯಲ್ಲಿದ್ದು, ಚೂಡಿದಾರ್, ಕುರ್ತ ಹಾಗೂ ಸೀರೆಯ ಕುಪ್ಪಸಗಳ ಚೆಂದದೊಂದಿಗೆ ಕಣ್ಮಣಿಗಳ ಅಂದವನ್ನು ಹೆಚ್ಚಿಸುತ್ತದೆ.
ಸಲ್ವಾರ್‌ಗಳಲ್ಲಿ ಜೀವ ಪಡೆದ ಕುಂದನ್ ಅಲಂಕಾರ
ಯುವತಿಯರ ಎವರ್‌ಗ್ರೀನ್ ಫೇವರಿಟ್ ಡ್ರೆಸ್ ಅಂದರೆ ಅದು ಸಲ್ವಾರ್. ಆದರೆ ಈ ಫ್ಯಾಷನ್ ಲೋಕದಲ್ಲಿ ಒಂದೇ ದಿನಕ್ಕೆ ಎಲ್ಲವೂ ಔಟ್‌ಡೇಟೆಡ್ ಆಗುತ್ತದೆ. ಹೀಗಿರುವಾಗ ಕುಂದನ್ ಅಲಂಕಾರ ಸಲ್ವಾರ್‌ನ ಚೆಂದ ಹೆಚ್ಚಿಸುತ್ತಿದ್ದು, ಹೊಸ ಹೊಸ ವಿನ್ಯಾಸಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಲಿವೆ. ಇನ್ನೂ ಮನೆಯಲ್ಲಿ ಕುಳಿತೇ ನಿಮ್ಮ ಸಲ್ವಾರ್‌ಗಳಿಗೆ ಕುಂದನ್ ಅಲಂಕಾರ ಮಾಡಬಹುದಾಗಿದ್ದು, ಲೈಟ್ ಕಲರ್ ಸಲ್ವಾರ್ ಇದ್ದರೆ ಡಾರ್ಕ್ ಕಲರ್ ಅಥವಾ ಡಾರ್ಕ್ ಕಲರ್‌ಗೆ ಲೈಟ್ ಕಲರ್‌ಗಳ ಕುಂದನ್ನು ಬಳಸಿ ಅಲಂಕಾರ ಮಾಡಿಕೊಳ್ಳಬಹುದು.
ಕುರ್ತಾಗಳಲ್ಲಿಯೂ ರಾರಾಜಿಸುತ್ತಿದೆ
ಚೂಡಿದಾರ್‌ನ ಎಕ್ಸ್‌ಟೇಶನ್ ವರ್ಷನ್ ಎಂದರೆ ಕುರ್ತಗಳು, ಧರಿಸಲು ಆರಾಮದಾಯಕವಾಗಿರುವ ಈ ಉಡುಪುಗಳಲ್ಲಿಯೂ ಕುಂದನ್ ಡಿಸೈನ್ ರಾರಾಜಿಸುತ್ತಿದ್ದು, ಮಹಿಳೆಯರು ನಾನಾ ಸಮಾರಂಭಗಳಿಗೆ ತೆರಳುವಾಗ ಕುಂದನ್ ಆರ್ಟ್ ಇರುವ ಟ್ರೆಡಿಶನಲ್ ಕುರ್ತಾಗಳ ಮೊರೆಹೋಗುತ್ತಿದ್ದಾರೆ.
ಸೀರೆಯ ಅಂದ ಹೆಚ್ಚಿಸುವ ಬ್ಲೌಸ್
ಫ್ಯಾಷನ್ ಲೋಕದಲ್ಲಿ ಸೀರೆಯ ಅಂದವನ್ನು ಮತ್ತಷ್ಟು ಹೆಚ್ಚಿಸುವುದು ಬ್ಲೌಸ್‌ನ ಲುಕ್ ಹಾಗೂ ಡಿಸೈನ್‌ಗಳು. ಅದರಲ್ಲಂತೂ ಇತ್ತೀಚೆಗೆ ಕುಪ್ಪಸಗಳ ವಿನ್ಯಾಸದಲ್ಲಿ ವಿಭಿನ್ನ ರೀತಿಯ ಟ್ರೆಂಡಿಗ್ ಶುರುವಾಗಿದ್ದು, ಕುಂದನ್‌ಗಳ ಸಹಾಯದಿಂದ ನವಿಲು, ದೇವಾಲಯದ ಗೋಪುರ ಚಿತ್ರಣಗಳನ್ನು ಮೂಡಿಸಲಾಗುತ್ತಿದೆ. ಇಂತಹ ವಿಭಿ°ನ ಕುಸುರಿಯ ಕಲೆಯಿಂದ ಕೇವಲ ವಸ್ತ್ರಗಳು ಮಾತ್ರ ಆಕರ್ಷವಾಗಿ ಕಾಣುವುದಲ್ಲದೇ ನಮ್ಮ ಕಣ್ಮಣಿಗಳ ಅಂದವನ್ನು ಹಿಮ್ಮಡಿಗೊಳಿಸುತ್ತಿದೆ.
ಕುಸುರಿಯನ್ನು ಎಲ್ಲಿ ಮಾಡಿದ್ದರೆ ಚಂದ
· ಸಲ್ವಾರ್ ಟಾಪ್‌ನ ಬಾರ್ಡರ್‌ಗೆ ಹಾಗೂ ಕೈತೋಳಿನ ಬಾರ್ಡರ್‌ಗೆ ಡಿಸೈನ್ ಮಾಡಬಹುದು.
· ಸಲ್ವಾರ್‌ನ ನೆಕ್ ಭಾಗದ ಬಾಡರìನಲ್ಲಿ ಕುಂದನ್ ವರ್ಕ್ ಡಿಸೈನ್ ಮಾಡಿದ್ದರೆ ಗ್ರ್ಯಾಂಡ್ ಲುಕ್ ನೀಡುವುದು.
· ಶೋಲ್ಡರ್ ಭಾಗದಲ್ಲಿ ದೊಡ್ಡ ಕುಂದನ್ ಸ್ಟೋನ್ ಬಳಸಿ ಡಿಸೈನ್ ಮಾಡಿದರೆ ಹೊಸ ಫ್ಯಾಷನ್ ಲುಕ್ ನೀಡುವುದು.
· ಬ್ಲೌಸ್‌ನ ಹಿಂಭಾಗ, ಶೋಲ್ಡರ್ ಭಾಗದಲ್ಲಿ ಕುಂದನ್ ಕುಸುರಿ ಮಾಡಿದ್ದರೆ ಸೀರೆ ಲುಕ್ ಆಗಿ ಕಾಣುತ್ತದೆ.
- ಸುಶ್ಮಿತಾ ಜೈನ್
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444