ಗೆಲ್ಲಲೇಬೇಕೆಂಬ ಛಲ ಸೋಲಲು ಬಿಡಲಿಲ್ಲ: ಮಿಚೆಲ್‌

Team Udayavani, Jan 29, 2020, 5:09 AM IST

shu-24

ಸ್ಪರ್ಧಾತ್ಮಕ ಪರೀಕ್ಷೆಗಳು ಕೆಲವರ ಮನಸ್ಸಿನಲ್ಲಿ ಕಬ್ಬಿಣದ ಕಡಲೆಯಾಗಿ ಬಿಟ್ಟಿದೆ. ಅದರ ಬದಲಾಗಿ ಅದನ್ನು ಸವಾಲಾಗಿ ಸ್ವೀಕರಿಸಿದಾಗ ಮಾತ್ರ ಸುಲಭವಾಗಿ ಎದುರಿಸಲು ಸಾಧ್ಯ. ಛಲ ವೊಂದಿದ್ದರೆ ಎಷ್ಟೇ ಕಷ್ಟದ ಕೆಲಸವನ್ನು ಕೂಡ ಮಾಡಿ ಮುಗಿಸಬಹುದು. ಆದರೆ ಮನಸ್ಸಿನಲ್ಲಿ ನನ್ನಿಂದ ಸಾಧ್ಯ ಎಂಬ ವಿಶ್ವಾಸವಿರಬೇಕು ಎನ್ನುತ್ತಾರೆ ಕುಡ್ಲದ ಹುಡುಗಿ ಮಿಚೆಲ್‌ ಕ್ವೀನಿ ಡಿ’ ಕೋಸ್ತಾ.

2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೇ ರ್‍ಯಾಂಕ್‌ ಪಡೆದು, ಬಳಿಕ 69ನೇ ಬ್ಯಾಚ್‌ನ ಐಆರ್‌ಸಿ ತರಬೇತಿಯಲ್ಲಿ ಅತ್ಯುತ್ತಮ ಸವ್ಯಸಾಚಿ ಸಾಧನೆಗಾಗಿ ಹಣಕಾಸು ಸಚಿವರ ಚಿನ್ನದ ಪದಕ ಪಡೆದ ಕೀರ್ತಿ ಮಿಚೆಲ್‌ ಕ್ವೀನಿ ಡಿ’ ಕೋಸ್ತಾ ಅವರದು. ಪ್ರೀತಿ ಭಟ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಪರೀಕ್ಷಾ ಸಿದ್ಧತೆ ಕುರಿತು ಹೇಳಿದ್ದಾರೆ. ಇವರು ಈಗ ಮುಂಬಯಿ ಜಿಎಸ್‌ಟಿ ವಿಭಾಗದ ಸಹಾಯಕ ಆಯುಕ್ತರು.
ನಿಮ್ಮ ಪ್ರಕಾರ ಶಿಕ್ಷಣ ಅಂದರೆ ಏನು?

ಶಿಕ್ಷಣ ಎನ್ನುವಂತದ್ದು ಕೇವಲ ರ್‍ಯಾಂಕ್‌ ಆಧಾರಿತವಾ ಗಿರದೇ ನೆಚ್ಚಿನ ವಿಷಯವನ್ನು ಆಯ್ದುಕೊಂಡು ಅದ ನ್ನು ಸಾಧಿಸುವುದಾಗಿದೆ. ಪ್ರತಿಯೊಬ್ಬರಿಗೂ ಬೇರೆ ರೀತಿಯ ಆಯ್ಕೆಗಳಿದ್ದು ಅವನ್ನು ಯಾವ ರೀತಿಯಲ್ಲಿ ಆಯ್ದುಕೊಂಡು ಸಾಧಿಸುತ್ತೀರಿ ಎಂಬುದರ ಮೇಲೆ ನಿರ್ಧರಿತವಾಗಿರುತ್ತದೆ. ಕೇವಲ ರ್‍ಯಾಂಕ್‌ ತೆಗೆದು ಕೊಳ್ಳಬೇಕು ಎಂಬ ಓದು ಶಿಕ್ಷಣವಲ್ಲ. ವಿಷಯದಲ್ಲಿ ಪ್ರೀತಿಯಿದ್ದಾಗ ಮಾತ್ರ ಹವ್ಯಾಸವಾಗಲು ಸಾಧ್ಯ.

ಓದು ಕಷ್ಟ ಎನ್ನುವವರಿಗೆ ನಿಮ್ಮ ಸಲಹೆ?
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಾಗ ಆದಷ್ಟು ಚಿಕ್ಕ ನೋಟ್ಸ್‌ಗಳನ್ನು ಮಾಡಿಕೊಳ್ಳಿ. ಇದು ನಿಮಗೆ ಮನನ ಮಾಡಲು ಸಹಾಯ ಮಾಡುತ್ತದೆ. ತುಂಬಾ ಹೊತ್ತು ಓದಿ ಬೋರ್‌ ಆದಲ್ಲಿ ವಿಷಯಗಳನ್ನು ಬದ ಲಿಸಿ ಅಥವಾ ಅದಕ್ಕೆ ಸಂಬಂಧಪಟ್ಟ ಸೈಟ್ಸ್‌, ವೆಬ್‌ಸೈಟ್‌ಗಳನ್ನು ನೋಡಿ ಇದರಿಂದ ಗಮನ ಬೇರೆ ಕಡೆ ಹೋಗದೇ, ಓದಿಗೆ ಸಂಬಂಧಪಟ್ಟ ಇನ್ನೊಂದು ಮೂಲ ದೊರಕಿದಂತಾಗುತ್ತದೆ. ಬಿಡುವು ಮಾಡಿಕೊಂಡು ಹಳೆಯ ಪ್ರಶ್ನೆ ಪತ್ರಿಕೆ ಬಿಡಿಸಿ. ಇದರಿಂದ ನಿಮ್ಮ ಪರೀಕ್ಷೆಗೆ ನೀವು ಅರ್ಧ ಸಿದ್ಧವಾಗಿರುತ್ತೀರಿ. ಆಗ ನಿರಂತರ ಓದಿದಾಗಲೂ ಬೋರ್‌ ಆಗುವುದಿಲ್ಲ.

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಹೇಗೆ?
ವರ್ಷದ ತಯಾರಿ ಅಗತ್ಯ. ವೇಳಾಪಟ್ಟಿಗೆ ಕಾಯದೆ ಮೊದಲಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ತುಂಬಾ ಹೊತ್ತು ಓದಲು ಸಾಧ್ಯವಾಗದಿದ್ದಲಿ ಬೀಡುವು ಮಾಡಿಕೊಂಡು ನಿಮ್ಮ ಆಸಕ್ತಿ ವಿಷಯದ ಕಡೆ ಗಮನ ವಹಿಸಿ. ಕೆಲವರಿಗೆ ಗೇಮ್ಸ್‌ಗಳಲ್ಲಿ ತುಂಬಾ ಆಸಕ್ತಿ , ಅಂಥವರು ಓದಿನ ಬಿಡುವಿನಲ್ಲಿ ಸ್ವಲ್ಪ ಸಮಯ ಆಟವಾಡಿ ಅಥವಾ ಒಂದು ಚಿಕ್ಕ ವಾಕ್‌ ಹೋಗಿ ಬರು ವುದರಿಂದ ಮನಸ್ಸು ಹಗುರವಾಗುತ್ತದೆ. ಆಗ ನಿಮಗೆ ಹೆಚ್ಚು ಹೆಚ್ಚು ಓದಲು ಮನಸ್ಸು ಸಿದ್ಧಗೊಳ್ಳುತ್ತದೆ.

ಪೋಷಕರ ಸಹಾಯ ಯಾವ ರೀತಿ ಅಗತ್ಯ?
ಮೊದಲಿಗೆ ನೀವು ಏನು ಮಾಡಬೇಕೆಂದು ಬಯ ಸಿದ್ದೀರಿ ಎಂಬುದನ್ನು ಅರ್ಥವಾಗುವ ಹಾಗೆ ಹೇಳಿ. ನೀವು ಎಷ್ಟು ಸಮಯ ತೆಗೆದುಕೊಳ್ಳುತ್ತೀರಿ ಅಥವಾ ಈ ಪ್ರೋಸೆಸ್‌ ಮುಗಿಯಲು ನೀವು ಎಷ್ಟು ದಿನ ವ್ಯಯಿಸಬೇಕಾಗಬಹುದು ಎಂಬುದನ್ನು ಅವರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸಿ. ಆಗ ಪೋಷಕರು ನಿಮ್ಮನ್ನು ಸರಿಯಾಗಿ ಅರ್ಥಮಾಡಿಕೊಳ್ಳುತ್ತಾರೆ.

ಪರೀಕ್ಷಾರ್ಥಿಗಳಿಗೆ ನಿಮ್ಮ ಸಲಹೆ?
ಆಸಕ್ತಿ ವಿಷಯಗಳನ್ನು ಮಾತ್ರ ಆಯ್ದುಕೊಳ್ಳಿ. 2 ಆಯ್ಕೆಗಳು ಒಳ್ಳೆಯದಲ್ಲ. ಅಧ್ಯಯನ ಆರಂಭಿಸಿದ ಬಳಿಕ ಮಾಡುತ್ತೇನೆ ಎಂಬ ಛಲವಿರಲಿ. ಅದಲ್ಲದೆ ಯಾವಾಗಲೂ ಬದುಕಿನಲ್ಲಿ ಗೆಲ್ಲುತ್ತೇವೆ ಎನ್ನುವ ಹಂಬಲ ವಿರಲಿ ಆದರೆ ಸೋತರೆ ಪ್ರಯತ್ನ ಬಿಡಬಾರದು. ಎಷ್ಟರ ಮಟ್ಟಿಗೆ ಆಗುತ್ತದೆಯೋ ಅಷ್ಟರ ಮಟ್ಟಿಗೆ ನಿಮ್ಮ ಪ್ರಯತ್ನವಿರಲಿ. ಸೋಲು ಅಥವಾ ಗೆಲುವು ಎರಡನ್ನೂ ಸಮಾನವಾಗಿ ಸ್ವೀಕರಿಸಿ.

ಪರಿಚಯ
ಮಿಚೆಲ್‌ ಕ್ವೀನಿ ಡಿ’ ಕೋಸ್ತಾ ಅವರು ಮಂಗಳೂರು ತಾಲೂಕಿನ ನೀರುಡೆ ಎಂಬ ಹಳ್ಳಿಯ ನಿಡ್ಡೋಡಿ ಮೂಲದವರಾದ ಇವರು ನೀರುಡೆಯಲ್ಲಿ ಆರಂಭಿಕ ಶಿಕ್ಷಣ ಮುಗಿಸಿ ಬೆಂಗಳೂರಿನ ಆರ್‌.ವಿ ಕಾಲೇಜಿನಲ್ಲಿ ತಮ್ಮ ಎಂಜಿನಿಯರಿಂಗ್‌ ಪದವಿ ಮುಗಿಸಿದವರು. ಪಬ್ಲಿಕ್‌ ಅಡ್‌ಮಿನಿಸ್ಟ್ರೇಷನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು 2015ರ ಯುಪಿಎಸ್ಸಿ ಪರೀಕ್ಷೆಯಲ್ಲಿ 387ನೇ ರ್‍ಯಾಂಕ್‌ ಪಡೆದರು. ಅನಂತರ 69ನೇ ಬ್ಯಾಚ್‌ನ ಐಆರ್‌ಸಿ ತರಬೇತಿಯಲ್ಲಿ ಅತ್ಯುತ್ತಮ ಸವ್ಯಸಾಚಿ ಸಾಧನೆಗಾಗಿ ಹಣಕಾಸು ಸಚಿವರ ಚಿನ್ನದ ಪದಕ ಪಡೆದುಕೊಂಡಿದ್ದಾರೆ.

ಟಾಪ್ ನ್ಯೂಸ್

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.