Udayavni Special

ಹಳೆ ಪೈಪ್‌ನಿಂದ ತರಕಾರಿ ಚಪ್ಪರ


Team Udayavani, Sep 16, 2018, 3:11 PM IST

16-sepctember-18.jpg

ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವೂ ಇಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು.

ತೊಂಡೆ, ಹೀರೆ, ಮುಳ್ಳುಸೌತೆ, ಪಡುವಲ ಮೊದಲಾದ ತರಕಾರಿಗಳ ಬಳ್ಳಿ, ನೆಲದಲ್ಲಿ ಹರಡಿದರೆ ಒಳ್ಳೆಯ ಗುಣಮಟ್ಟದ ಕಾಯಿಗಳು ಸಿಗುವುದಿಲ್ಲ. ಎಲೆ, ಕಾಯಿಗಳೆಲ್ಲವೂ ಮುದುಡುತ್ತವೆ. ಬಳ್ಳಿ ಸಲೀಸಾಗಿ ಹರಡಿದರೆ ಮಾತ್ರ ಗುಣಮಟ್ಟದ ಕಾಯಿ ಸಿಗುತ್ತದೆ. ಹೀಗೆ ಹರಡಲು ಅನುಕೂಲವಾದ ಚಪ್ಪರವೊಂದು ಬೇಕೇ ಬೇಕು ಅಲ್ಲವೇ? ಇಲ್ಲಿದೆ ಅದಕ್ಕೆ ಐಡಿಯಾ. 

ಹಿಂದಿನ ಕಾಲದಲ್ಲಿ ಇಂತಹ ಚಪ್ಪರ ನಿರ್ಮಿಸಲು ಕಷ್ಟವಿರಲಿಲ್ಲ. ಕಾಡಿಗೆ ಹೋಗಿ ಕಂಬ, ಗೂಟಗಳನ್ನು ಕಡಿದು ತಂದು ಗಟ್ಟಿಯಾದ ಚಪ್ಪರಗಳನ್ನು ಹಾಕಬಹುದಿತ್ತು. ರಬ್ಬರ್‌ ಕೃಷಿ ವಿಸ್ತರಿಸಿದ ಬಳಿಕ ಕಾಡುಗಳು ಮಾಯವಾಗಿವೆ. ಚಪ್ಪರ ಹಾಕಲು ಬೇಕಾದ ಸಲಕರಣೆಗಳು ಸಿಗುವುದಿಲ್ಲವೆಂಬುದು ತರಕಾರಿ ಬೆಳೆಗಾರರ ಪಾಲಿಗೆ ತಲೆನೋವಾಗಿದೆ.

ಇಂಥ ಸಮಸ್ಯೆಗಳಿಗೆ ಬಹು ಸುಲಭವಾಗಿ ಉತ್ತರ ಹುಡುಕಿದ್ದಾರೆ ವೆಂಕಟರಮಣ ಎಡಪಡಿತ್ತಾಯರು. ಶಾಲಾ ಶಿಕ್ಷಕರಾಗಿ ಕೆಲವು ದಶಕಗಳ ಕಾಲ ಸೇವೆ ಸಲ್ಲಿಸಿ  ವೃತ್ತರಾದ ಬಳಿಕ, ಮಂಗಳೂರು ತಾಲೂಕಿನ ಮೂಡು ಕೊಣಾಜೆಯಲ್ಲಿ ಕೃಷಿ ಜಾಗ ಖರೀದಿಸಿ ಅಡಿಕೆ,ತೆಂಗುಗಳ ಜತೆಗೆ ವೈವಿಧ್ಯಮಯವಾದ ತರಕಾರಿಗಳನ್ನೂ ಅವರು ಬೆಳೆಯುತ್ತಿದ್ದಾ ರೆ. ಬೇಸಗೆಯಲ್ಲಿ ಬೇರೆ, ಮಳೆಗಾಲದಲ್ಲಿ ಬೇರೆ ಬಗೆಯ ತರಕಾರಿಗಳ ಕೃಷಿ ಮಾಡಿ ಮನೆಗೆ ಬೇಕಾದಷ್ಟು ತಾಜಾ ಕಾಯಿಪಲ್ಲೆ  ಪಡೆಯುತ್ತಿದ್ದಾರೆ.

ಹೀಗೆ ಬೆಳೆಯುವ ತರಕಾರಿ ಬಳ್ಳಿಗಳಿಗೆ ಚಪ್ಪರ ಹಾಕಲು ಎಡಪಡಿತ್ತಾಯರಿಗೆ ಸನಿಹದಲ್ಲಿ ಕಾಡು ಇಲ್ಲ. ಕಂಬಗಳನ್ನು ಕಡಿದು ತಂದು ಕೆಲಸ ಮಾಡಲು ಶಕ್ತಿಯೂ ಇಲ್ಲ. ಅದಕ್ಕಾಗಿ ಅವರು ಸುಲಭವಾದ ಒಂದು ಉಪಾಯವನ್ನು ಕಂಡು ಹಿಡಿದಿದ್ದಾರೆ. ಅದು ನಿರರ್ಥಕವೆಂದು ಮೂಲೆಗೆಸೆದ ಪಿಸಿ ಪೈಪ್‌ಗ್ಳಿಂದ ಸರಳವಾಗಿ ನಿರ್ಮಿಸುವ ಚಪ್ಪರ. ತುಂಡಾದ ಪೈಪ್‌ಗಳು, ಜೋಡಣೆಗಳು, ಟಿ ಗಳು ಇದನ್ನೆಲ್ಲ ಬಳಸಿ ಸಿದ್ಧವಾಗುವ ಚಪ್ಪರವದು.

ಕಂಬದ ಬದಲಿಗೆ ಸ್ವಲ್ಪ ದಪ್ಪವಿರುವ ಪೈಪ್‌ ಗಳನ್ನು ನಾಲ್ಕು ಮೂಲೆಗಳಲ್ಲಿ ಹೂಳುತ್ತಾರೆ. ಜೋಡಣೆಗಳನ್ನು ಉಪಯೋಗಿಸಿ ಮೇಲ್ಭಾಗದ ತೋಳುಗಳನ್ನು ಬೆಸೆದಿದ್ದಾರೆ. ಒಂದಿಂಚಿನ ತುಂಡು ಪೈಪ್‌ಗಳನ್ನು ಮೇಲೆ ಹರಡಿ ಇದರ ಮೇಲೆ ತೊಂಡೆ, ಹೀರೆ ಮೊದಲಾದ ತರಕಾರಿಗಳ ಬಳ್ಳಿಗಳನ್ನು ಹಬ್ಬಲು ಬಿಡುತ್ತಾರೆ.

ಎಡಪಡಿತ್ತಾಯರ ತರಕಾರಿ ಚಪ್ಪರ ಪರಿಸರ ಸ್ನೇಹಿ. ಅದಕ್ಕಾಗಿ ಮರಗಳನ್ನು ಕಡಿಯಬೇಕಾಗಿಲ್ಲ. ಕೂಲಿಗಳ ಅಗತ್ಯವಿಲ್ಲ. ಕೆಲವೇ ನಿಮಿಷಗಳಲ್ಲಿ ಚಪ್ಪರ ಸಿದ್ಧವಾಗುತ್ತದೆ. ವರ್ಷಗಳ ಕಾಲ ಉಳಿದುಕೊಳ್ಳುತ್ತದೆ. ಬೇರೆಡೆಗೂ ಸ್ಥಳಾಂತರಿಸಬಹುದು. ತರಕಾರಿ ಬೆಳೆಗಾರರ ಪಾಲಿಗೆ ಖರ್ಚಿಲ್ಲದ ಚಪ್ಪರ ಪೇಟೆಯಲ್ಲಿ ಹಿತ್ತಿಲಿನಲ್ಲಿ ತರಕಾರಿ ಬೆಳೆಯುವವರಿಗೂ ಅನುಕೂಲವಾಗಬಹುದು.

ಪ. ರಾಮಕೃಷ್ಣ ಶಾಸ್ತ್ರಿ 

ಟಾಪ್ ನ್ಯೂಸ್

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

Untitled-2

ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

devegowda talk about party member

ಅಸ್ನೋಟಿಕರ್‌, ಜಿ.ಟಿ. ಜೆಡಿಎಸ್‌ ಬಿಡುವುದಿಲ್ಲ: ದೇವೇಗೌಡ

jio

ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ

nalin kumar katil talk about HK patil

ಎಚ್.ಕೆ.ಪಾಟೀಲರಿಂದ ಹತಾಶೆಯ ಅಪ್ರಬುದ್ಧ ಹೇಳಿಕೆ:ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್

programme held at bangalore

ಮಾರ್ಚ್‌ 2ರಂದು ಎಂಜಿನಿಯರಿಂಗ್‌ ಸಂಶೋಧನೆ ಮತ್ತು ಅಭಿವೃದ್ಧಿ ನೀತಿ ಲೋಕಾರ್ಪಣೆ

kalnurgi

ಡಿಸಿ ಕಚೇರಿ ಆವರಣದಲ್ಲೇ ಕ್ರಿಮಿನಾಶಕ ಸೇವಿಸಿದ ಖಾಸಗಿ ಶಾಲೆ ಮುಖ್ಯಸ್ಥಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

CoWin App ಸಮಸ್ಯೆ ! ಎರಡು ದಿನ ಲಸಿಕೆ ಹಂಚಿಕೆ ಇಲ್ಲ ! | Udayavani

udayavani youtube

ದಾನದ ಪರಿಕಲ್ಪನೆಯ ಕುರಿತು Dr. Gururaj Karajagi ಹೇಳಿದ ಕತೆ ಕೇಳಿ.. Part-3

udayavani youtube

ಕಾಯಕದಲ್ಲಿ ಕಟ್ಟಡ ಕಟ್ಟುವ ಮೇಸ್ತ್ರಿ; ಬಿಡುವಿನಲ್ಲಿ ಹಾಳೆ ಮುಟ್ಟಾಳೆ ತಯಾರಕರು

udayavani youtube

ಪದೇ ಪದೇ Tea – Coffee ಕುಡಿಯುವುದರಿಂದ ಉಂಟಾಗುವ ಸಮಸ್ಯೆಗಳೇನು?

udayavani youtube

ಕುಮಾರಸ್ವಾಮಿ ಪಕ್ಷ ಜೋಕರ್ ನಂತೆ: ಸಿ.ಪಿ. ಯೋಗೀಶ್ವರ್ ಟೀಕೆ

ಹೊಸ ಸೇರ್ಪಡೆ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

ಹೆಜಮಾಡಿ ಯುವಕರ ತಂಡದಿಂದ ಮೈಕ್ರೋ ಸೀಪ್ಲೇನ್‌ ಆವಿಷ್ಕಾರ

HD Revanna

ಮಾ.1ರಿಂದ ಹಾಲು ಖರೀದಿ ದರ 3 ರೂ. ಹೆಚ್ಚಳ

passion

ಫ್ಯಾಷನ್‌ ಡಿಸೈನ್‌ ಸ್ಪರ್ಧೆಗೆ ಆಡಿಷನ್‌

Untitled-2

ಕಾಂಗ್ರಸ್ ನಲ್ಲಿ ಮೂರು ಗುಂಪುಗಳ ನಡುವೆ ಗುದ್ದಾಟ ಹೊಸದೆನ್ನಲ್ಲ : ಡಿಸಿಎಂ ಗೋವಿಂದ ಕಾರಜೋಳ

Tumkur congress Proitest

ತೈಲ ಬೆಲೆ ಏರಿಕೆ ಖಂಡಿಸಿ “ಕೈ’ ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.