ಚಳಿಗಾಲದಲ್ಲಿ ತ್ವಚೆಯ ರಕ್ಷಣೆ

Team Udayavani, Nov 19, 2019, 5:39 AM IST

ಇನ್ನೇನು ಚಳಿಗಾಲ ಆರಂಭವಾಗುತ್ತಿದ್ದು, ಚರ್ಮದ ಮೇಲಿನ ಕಾಳಜಿ ಅತೀ ಅವಶ್ಯವಾಗಿದೆ. ಚಳಿಗಾಲದ ಸಮಯದಲ್ಲಿ ಒಣ ಗಾಳಿ ಚರ್ಮ ಒಣಗುವುದಕ್ಕೆ ಪ್ರಮುಖ ಕಾರಣ. ಚಳಿ ಇದ್ದರೂ ಗಾಳಿ ಒಣಗುವುದು ಹೇಗೆ ಎಂಬ ಪ್ರಶ್ನೆ ನಮ್ಮಲ್ಲಿ ಬರಬಹುದು. ಹಾಗಾದರೆ ಚರ್ಮದ ಆರೈಕೆ ಹೇಗೆ? ಇಲ್ಲಿ ಚಳಿಗಾಲದಲ್ಲಿ ತ್ವಚೆಯ ರಕ್ಷಣೆ ನಿರ್ವಹಿಸುವ ಸಾಧ್ಯತೆಗಳನ್ನು ಇಲ್ಲಿ ಕೊಡಲಾಗಿದೆ.

ತ್ವಚೆಗೆ ಆದ್ರತೆಯನ್ನು ನೀಡಿ
ತ್ವಚೆಗೆ ಅಗತ್ಯವಿರುವ ಆದ್ರತೆ ಒದಗಿಸುವಯುದಕ್ಕೆ ನಿಮ್ಮ ತ್ವಚೆಗೆ ಹೊಂದುವ ಉತ್ತಮ ಗುಣಮಟ್ಟದ ತೇವಕಾರಕ ಕ್ರೀಂ ಒಂದನ್ನು ದಿನಕ್ಕೆ ಕನಿಷ್ಟ ಎರಡು ಬಾರಿಯಾದರೂ ತೆಳುವಾಗಿ ಹಚ್ಚಿಕೊಳ್ಳುವುದು ಅಗತ್ಯ. ಮನೆಯಿಂದ ಹೊರಹೋಗುವ ಮುನ್ನ ಮುಖ, ಕೈ, ಮೊಣಕಾಲು, ಪಾದಗಳಿಗೆ ತೆಳುವಾಗಿ ಹಚ್ಚಿಕೊಳ್ಳುವುದು ಅವಶ್ಯ.

ಚರ್ಮವನ್ನು ಉಜ್ಜ ಬೇಡಿ
ನಿಮ್ಮ ತ್ವಚೆಯನ್ನು ಸೌಮ್ಯತೆಯಿಂದ ನೇವರಿಸಿಕೊಳ್ಳುವುದು ಮುಖ್ಯ. ಏಕೆಂದರೆ ಈ ಸಮಯದಲ್ಲಿ ತ್ವಚೆ ಅತಿ ಸೂಕ್ಷ್ಮಸಂವೇದಿಯಾಗಿ ಬದಲಾಗಿರುತ್ತದೆ. ತ್ವಚೆಗೆ ಕೊಂಚ ಒರಟಾಗಿ ಸ್ಪರ್ಶಿಸಿದರೆ ಇಲ್ಲಿ ಉರಿ ಉಂಟಾಗಿ, ಹೊರಪದರ ಸುಲಭವಾಗಿ ಹರಿಯಬಹುದು. ಕ್ರೀಂಗಳನ್ನು ಉಜ್ಜುವ ಬದಲು ಮೃದುವಾದ ದಪ್ಪನೆಯ ಟವೆಲ್‌ನಿಂದ ಒತ್ತಿಕೊಂಡು ಒರೆಸಿಕೊಂಡರೇ ಒಳ್ಳೆಯದು.

ಸನ್‌ ಸ್ಕ್ರೀನ್‌
ಬಿಸಿಲಿಗೆ ತ್ವಚೆ ಒಡ್ಡುವ ಯಾವುದೇ ಸಮಯದಲ್ಲಿ, ಚಳಿಗಾಲವೇ ಆಗಿರಲಿ, ಬೇಸಗೆಯೇ ಇರಲಿ, ಸೂರ್ಯನ ಅತಿನೇರಳೆ ಕಿರಣಗಳ ವಿರುದ್ದ ರಕ್ಷಣೆ ಒದಗಿಸುವ ಸನ್‌ ಸ್ಕ್ರೀನ್‌ ಅನ್ನು ಬಳಸಬೇಕು.

ಆಹಾರ ಹೇಗಿರಬೇಕು
ತ್ವಚೆಯ ಆರೈಕೆಯನ್ನು ಬಾಹ್ಯವಾಗಿ ಮಾಡುವುದಕ್ಕಿಂತಲೂ ನಾವು ಸೇವಿಸುವ ಆಹಾರದ ಮೂಲಕವೂ ಕಂಡುಕೊಳ್ಳಬಹುದಾಗಿದೆ. ಆರೋಗ್ಯಕರ ತ್ವಚೆ ಎಂದರೆ ಕೇವಲ ಹೊರನೋಟಕ್ಕೆ ಕಾಣುವ ಹೊರ ಪದರವೊಂದೇ ಅಲ್ಲ, ಬದಲಿಗೆ ಚರ್ಮದ ಆಳದಲ್ಲಿರುವ ತೈಲಗ್ರಂಥಿಗಳು, ಕೂದಲ ಬುಡ ಮೊದಲಾದವುಗಳ ಆರೈಕೆಯೂ ಅಷ್ಟೇ ಮುಖ್ಯ.

ನಾವೇನು ಮಾಡಬಹುದು
· ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಕುಡಿಯುವುದು ಆವಶ್ಯಕ.
· ಫಾಸ್ಟ್‌ ಫ‌ುಡ್‌ ಸೇವನೆಯನ್ನು ಆದಷ್ಟು ಕಡಿಮೆ ಮಾಡಿ.
· ಸ್ನಾನಕ್ಕೆ ಅತೀ ಬಿಸಿ ನೀರು ಬಳಸಬೇಡಿ.
· ಎಣ್ಣೆಯಿಂದ ದೇಹವನ್ನು ಮಸಾಜ್‌ ಮಾಡುವುದು ಒಳ್ಳೆಯದು.
· ತುಟಿ ಒಣಗುವುದಕ್ಕೆ ಹಾಲಿನ ಕೆನೆ ಸವರಬೇಕು.
· ತ್ವಚೆಗೆ ಮಾಯಿಶ್ಚರೈಸರ್‌ ಅನ್ನು ಬಳಸಬೇಕು.

– ಕಾರ್ತಿಕ್‌ ಆಮೈ


ಈ ವಿಭಾಗದಿಂದ ಇನ್ನಷ್ಟು

  • ವ್ಯಾಯಾಮ ಮಾಡುವುದರಿಂದ ಬೊಜ್ಜು ಕರಗುತ್ತದೆ. ಆದರೆ ಸ್ಟ್ರೆಚ್‌ ಮಾರ್ಕ್‌ ಮೂಡುತ್ತದೆ ಎನ್ನುವುದು ಬಹುತೇಕ‌ರ ಅಳಲು. ಮಾತ್ರವಲ್ಲ ಪ್ರಸವದ ನಂತರ ಹೊಟ್ಟೆಯಲ್ಲಿ...

  • ವ್ಯಾಯಾಮಗಳಲ್ಲಿ ಹೊಸ ಹೊಸ ಟ್ರೆಂಡ್‌ಗಳು ಬರುತ್ತಾ ಇರುತ್ತಿವೆ. ಹಾಗೇ ಸೌಂದರ್ಯಪ್ರಿಯರು ಕೂಡ ದೇಹವನ್ನು ಕಟ್ಟುಮಸ್ತಾಗಿ ಇಡಲು ಒಂದಲ್ಲ ಒಂದು ಪ್ರಯತ್ನ ಮಾಡುತ್ತಲ್ಲೇ...

  • ಸೌಂದರ್ಯದ ಬಗ್ಗೆ ಆಸಕ್ತಿ ಯಾರಿಗಿಲ್ಲ ಹೇಳಿ? ಹುಡುಗಿರೇ ಇರಲಿ, ಹುಡುಗರೇ ಇರಲಿ ಎಲ್ಲರಲ್ಲಿಯೂ ಸೌಂದರ್ಯ ಪ್ರಜ್ಞೆ ಇದ್ದೇ ಇರುತ್ತದೆ. ದಿನದಿಂದ ದಿನಕ್ಕೆ ಸೌಂದರ್ಯ...

  • ಕೂದಲು ಸೌಂದರ್ಯವನ್ನು ಹೆಚ್ಚಿಸುತ್ತದೆ. ಪ್ರಸ್ತುತ ಸ್ತ್ರೀ ಮತ್ತು ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಸಾಮಾನ್ಯ ಎಂಬಂತಾಗಿದೆ. ಕೂದಲು ಉದುರಲು ಅನೇಕ ಕಾರಣಗಳಿವೆ....

  • ಇತರೆ ದಿನಗಳಿಗಿಂತ ಚಳಿಗಾಲದಲ್ಲಿ ತ್ವಚೆಯ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾಗುತ್ತದೆ. ಮಹಿಳೆಯರು ವಿವಿಧ ಟಿಪ್ಸ್‌ ಬಳಸಿಕೊಂಡು ತಮ್ಮ ತ್ವಚೆಯನ್ನು...

ಹೊಸ ಸೇರ್ಪಡೆ