ಯಕ್ಷ ಶಾಸ್ತ್ರಜ್ಞನಿಗೆ ಕೀರಿಕ್ಕಾಡು ಪ್ರಶಸ್ತಿ


Team Udayavani, May 3, 2019, 6:00 AM IST

Yas

ಕಾಸರಗೋಡಿನ ದೇಲಂಪಾಡಿಯಲ್ಲಿ ಆರೇಳು ದಶಕಗಳ ಹಿಂದೆಯೇ ಯಕ್ಷಗಾನವನ್ನು ಜೀವಂತವಾಗಿರಿಸಲು ಹೆಣಗಿದವರು ದಿ| ಕೀರಿಕ್ಕಾಡು ಮಾಸ್ಟರ್‌ ವಿಷ್ಣು ಭಟ್ಟರು . ಅವರು 1944ರಲ್ಲಿ ಹುಟ್ಟುಹಾಕಿದ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ ಅವರ ಹೆಸರಿನಲ್ಲಿ ವರ್ಷವೂ ಕೊಡುವ ಕೀರಿಕ್ಕಾಡು ಪ್ರಶಸ್ತಿ ಈ ಬಾರಿ ಯಕ್ಷಗಾನದ ಖ್ಯಾತ ಹಿಮ್ಮೇಳ ವಾದಕ ಗುರು ಗೋಪಾಲಕೃಷ್ಣ ಕುರುಪರಿಗೆ ಸಲ್ಲಲಿದೆ.

ಗೋಪಾಲಕೃಷ್ಣ ಕುರುಪರು ನಿಡುಗಾಲ ಯಕ್ಷಗಾನ ಮೇಳಗಳಲ್ಲಿ ಹಿಮ್ಮೇಳ ವಾದಕರಾಗಿ ದುಡಿದ ಅನುಭವ ಸಂಪನ್ನ. ಹಿರಿಯ ಕಿರಿಯ ಬಲಿಪ ನಾರಾಯಣ ಭಾಗವತರ ಕರಾರುವಾಕ್ಕಾದ ಹಾಡಿಗೆ ಇಡಿಪೆಟ್ಟುಗಳ ನಿಖರ ನುಡಿತ. ದಿ| ಅಗರಿ ಶ್ರೀನಿವಾಸ ಭಾಗವತರ ಹಾಡಿನ ಲಾಲಿತ್ಯವನ್ನು ಪೋಷಿಸುವ ಕುರುಪರ ಲಯವಿನ್ಯಾಸದ ಸೊಗಸು ಈಗ ಚರಿತ್ರೆ. ಧರ್ಮಸ್ಥಳ, ಕೂಡ್ಲು, ಕುಂಡಾವು, ಸುರತ್ಕಲ್ಲು, ಬಳ್ಳಂಬೆಟ್ಟು, ಪೊಳಲಿ, ಕುಂಬ್ಳೆ ಮುಂತಾದ ಮೇಳಗಳಲ್ಲಿ ನಾಲ್ಕು ದಶಕಗಳಿಗೂ ಮಿಕ್ಕಿ ಹಿಮ್ಮೇಳವಾದಕರಾಗಿ ದುಡಿದ ಅನುಭವ ಅವರದು. ತೆಂಕು ತಿಟ್ಟಿನ ಪ್ರಾಥಮಿಕ ಯಕ್ಷಗಾನ ಪಾಠಗಳು, ತೆಂಕುತಿಟ್ಟು ಯಕ್ಷಗಾನ ಮದ್ದಳೆ ವಾದನದ ಕ್ರಮ, ತೆಂಕುತಿಟ್ಟು ಯಕ್ಷಗಾನ ಚೆಂಡೆವಾದನದ ಕ್ರಮ ಮತ್ತು ತಿತ್ತಿತ್ತೆç ಯಕ್ಷಗಾನ ತಾಳ ಸಂಬಂಧಿ ಅಧ್ಯಯನ ಹೀಗೆ ನಾಲ್ಕು ಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಯಕ್ಷಗಾನ ಕಮ್ಮಟಗಳಲ್ಲಿ ಅವರೊಬ್ಬ ಅಸಾಧಾರಣ ಸಂಪನ್ಮೂಲ ವ್ಯಕ್ತಿ.ಅವರ ವಾದನದಲ್ಲಿ ಬೆರಗು ಹುಟ್ಟಿಸುವ ಚಮತ್ಕಾರಗಳಿಲ್ಲ. ಮಾತಿನಲ್ಲಿ ಎಷ್ಟೇ ನಯವಿದ್ದರೂ, ಕಲೆಯಲ್ಲಿ ನಿಷ್ಠರತೆ. ಲಯ ಶುದ್ಧಿ, ವಾದನದ ಸ್ಪಷ್ಟತೆ, ಪೆಟ್ಟುಗಳ ಏರಿಳಿತ, ಪ್ರಸಂಗಜ್ಞಾನ, ರಂಗನಡೆ ಎಲ್ಲವೂ ತಿಳಿದ ಅವರೊಬ್ಬ ಪ್ರಬುದ್ಧ ಮದ್ದಳೆಗಾರ. ನಾಟ್ಯದ ಹೆಜ್ಜೆಗಳನ್ನೂ ಬಲ್ಲ ಅವರು ವೇಷಧಾರಿ ತಪ್ಪಿದರೆ ತಿದ್ದಿ ಹೇಳುವ ಸಾಮರ್ಥ್ಯವುಳ್ಳವರು.

ತಾಳಗಳ ಸಾಲಿನಲ್ಲಿ ಎಲ್ಲೂ ಹೆಸರಿರದ ತಿತ್ತಿತ್ತೈ, ತೆಂಕುತಿಟ್ಟಿನಲ್ಲಿ ಬಹಳ ಅಪರೂಪದಲ್ಲಿ ಹಳೆಯ ಭಾಗವತರು ಹಾಡುತ್ತಿದ್ದ ಚೌತಾಳ ಪ್ರಯೋಗದಲ್ಲೇ ಇಲ್ಲದ ಸಪ್ತತಾಳಗಳಲ್ಲಿ ಒಂದಾದ ಧ್ರುವ ತಾಳ ಇವುಗಳಿಗೆಲ್ಲ ಗೌರವಯುತ ಸ್ಥಾನ ದೊರೆಯಬೇಕೆಂದು ಹೆಣಗಿದವರು ಅವರು. ಅವುಗಳಿಗೆ ಭಿಡ್ತಿಗೆ, ಮುಕ್ತಾಯಗಳನ್ನು ರಚಿಸಿ, ಪದ್ಯದ ಅಕ್ಷರಗಳು ತಾಳಕ್ಕೆ ಹೊಂದುವ ರೀತಿಯನ್ನು ಅಧ್ಯಯನ ನಡೆಸಿ ಅದು ಹೀಗೆಯೇ ಎಂದು ಖಚಿತವಾಗಿ ನಿರೂಪಿಸಬಲ್ಲರು. ಕೆಲವು ಕಮ್ಮಟಗಳಲ್ಲಿ ಇದನ್ನು ಮಾಡಿ ತೋರಿಸಿದ್ದಾರೆ. ಭಾಗವತರಿಗೆ, ಮದ್ದಳೆವಾದಕರಿಗೆ ದಾರಿ ತೋರಿದ್ದಾರೆ.

-ವೆಂಕಟರಾಮ ಭಟ್ಟ ಸುಳ್ಯ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.