ಮನಮೋಹಕ ಪಂಚಮದ ಇಂಚರ 


Team Udayavani, Nov 9, 2018, 6:00 AM IST

13.jpg

ಕೊಳಲು ಮಾಂತ್ರಿಕ ಪಂಡಿತ್‌ ಪ್ರವೀಣ್‌ ಗೋಡಖೀಂಡಿಯವರು ತನ್ನ ಬೃಂದಾವನೀಸಾರಂಗ ರಾಗದ ಸುವಿಸ್ತಾರವಾದ ಆಲಾಪ್‌ ಜೋಡ್‌ಝಾಲ ಹಾಗೂ ತಂತ್ರಕಾರೀ ಅಂಗದಲ್ಲಿ 9 ಮಾತ್ರೆಯ ಮತ್‌ತಾಳದಲ್ಲಿ ಹಾಗೂ ದೃತ್‌ ತೀನ್‌ತಾಳದಲ್ಲಿ ಅದಕ್ಕೆ ಶುದ್ಧ ಸಾರಂಗದ ಅಂಗವನ್ನು ಸೇರಿಸಿ, ತಮ್ಮ ಪರಿಕಲ್ಪನೆಯಲ್ಲಿ ಪ್ರಸ್ತುತ  ಪಡಿಸಿದರು.

ಮಂಗಳೂರಿನ ರಾಮಕೃಷ್ಣ ಮಠ ಹಾಗೂ ಸುರತ್ಕಲ್‌ನ ಚಿರಂತನ ಚಾರಿಟೇಬಲ್‌ ಟ್ರಸ್ಟ್‌ನ ಪಂಚಮದ ಇಂಚರ ಬಳಗ ಆಯೋಜಿಸಿದ “ಪಂಚಮದ ಇಂಚರ ವಿವೇಕಸ್ಮತಿ 2018′ ಸಂಗೀತ ಮಹೋತ್ಸವದ 7 ಕಛೇರಿಗಳು ಪ್ರಶಂಸೆಗೆ ಪಾತ್ರವಾಯಿತು. 

ದಿನದ ಮೊದಲ ಕಛೇರಿಯನ್ನು ನಡೆಸಿಕೊಟ್ಟ ಶಿರಸಿಯ ಶ್ರೀಪಾದ ಹೆಗಡೆ ಸೋಮನಮನೆಯವರು ನಟ ಭೈರವ್‌ ಹಾಗೂ ಅಪರೂಪದ ಗುಣಕಲಿ ರಾಗವನ್ನು ಸುಂದರವಾಗಿ ಪ್ರಸ್ತುತಪಡಿಸಿದರು. ಪ್ರಸಾದ್‌ ಕಾಮತ್‌ ಹಾರ್ಮೋನಿಯಂನಲ್ಲಿ ಹಾಗೂ ಗಜಾನನ ಹೆಗಡೆ ಗಿಳಿಗುಂಡಿ ತಬಲಾದಲ್ಲಿ ಸಾಥ್‌ ನೀಡಿದರು. ಗೌತಮ್‌ ಸಹಗಾಯನದಲ್ಲೂ ಸತೀಶ್‌ ಕಾಮತ್‌ ತಾನ್ಪುರದಲ್ಲೂ ಸಹಕರಿಸಿದರು. 

ಎರಡನೆಯ ಕಛೇರಿಯನ್ನು ನಡೆಸಿಕೊಟ್ಟ ಸಿತಾರ್‌ ಕಲಾವಿದ ಅಂಕುಶ್‌ ನಾಯಕ್‌ ರಾಗ ಬಸಂತ್‌ ಮುಖಾರಿಯಲ್ಲಿ ಆಲಾಪ್‌ ಜೋಡ್‌ ಝಾಲಾ, ವಿಲಂಬಿತ್‌ ಹಾಗೂ ದೃತ್‌ ತೀನ್‌ತಾಲ್‌ನಲ್ಲಿ ಗತ್‌ಗಳನ್ನು ನುಡಿಸಿ ರಾಗ್‌ ಮಲಯ ಮಾರುತದಲ್ಲಿ ಸುಂದರವಾದ ಒಂದು ಧುನ್‌ ನುಡಿಸಿದರು. ಗುರುಮೂರ್ತಿ ವೈದ್ಯ ಬೆಂಗಳೂರು ತಬಲಾ ಸಾಥ್‌ ನೀಡಿದರು.

ಮೂರನೆಯ ಕಛೇರಿಯನ್ನು ನಡೆಸಿಕೊಟ್ಟವರು ಶ್ರೀಪಾದ ಹೆಗಡೆ ಕಂಪ್ಲಿ. ಮಿಯಾಕಿ ತೋಡಿ ಹಾಗೂ ಸಾಲಗ ವರಾಳಿ ತೋಡಿ ರಾಗಗಳನ್ನು ವಿದ್ವ$Ìತ್‌ಪೂರ್ಣವಾಗಿ ಪ್ರಸ್ತುತ ಪಡಿಸಿ ಗುರುವಿನ ಗುಲಾಮನಾಗುವ ತನಕ ಎಂಬ ದಾಸರ ಪದದೊಂದಿಗೆ ಕಛೇರಿಯನ್ನು ಮುಕ್ತಾಯಗೊಳಿಸಿದರು. ಗುರುಪ್ರಸಾದ್‌ ಹೆಗಡೆ ಹಾಗೂ ಭಾರವಿ ದೇರಾಜೆ ಉತ್ತಮ ಸಾಥ್‌ ಸಂಗತ್‌ ನೀಡಿದರು. ಶ್ರೀಪಾದ ಹೆಗಡೆಯವರ ಮಗ ವಿಶಾಲ್‌ ಹೆಗಡೆಯವರು ತಾನ್ಪುರ ಹಾಗೂ ಗಾಯನದಲ್ಲೂ ಮನೀಶ್‌ ದಾಸ್‌ ತಾನ್ಪುರದಲ್ಲಿ ಸಹಕಾರ ನೀಡಿದರು. 

ಕೊಳಲು ಮಾಂತ್ರಿಕ ಪಂಡಿತ್‌ ಪ್ರವೀಣ್‌ ಗೋಡಖೀಂಡಿಯವರು ತನ್ನ ಬೃಂದಾವನೀಸಾರಂಗ ರಾಗದ ಸುವಿಸ್ತಾರವಾದ ಆಲಾಪ್‌ ಜೋಡ್‌ಝಾಲ ಹಾಗೂ ತಂತ್ರಕಾರೀ ಅಂಗದಲ್ಲಿ 9 ಮಾತ್ರೆಯ ಮತ್‌ತಾಳದಲ್ಲಿ ಹಾಗೂ ದೃತ್‌ ತೀನ್‌ತಾಳದಲ್ಲಿ ಅದಕ್ಕೆ ಶುದ್ಧ ಸಾರಂಗದ ಅಂಗವನ್ನು ಸೇರಿಸಿ, ತಮ್ಮ ಪರಿಕಲ್ಪನೆಯಲ್ಲಿ ಪ್ರಸ್ತುತ ಪಡಿಸಿದರು. ಇದಕ್ಕೆ ತಬಲಾಸಾಥ್‌ನೊಂದಿಗೆ ಮೆರುಗನ್ನು ನೀಡಿದವರು ಪಂ| ರವೀಂದ್ರ ಯಾವಗಲ್‌. ಇವರೀರ್ವರ ಸಮನ್ವಯ ಹಾಗೂ ಸಾಂಗತ್ಯ ಅದ್ಭುತವಾದ ಸಂಗೀತ ಲೋಕವನ್ನು ಸೃಷ್ಟಿಸಿತು. 

ಮಧ್ಯಾಹ್ನ ನಂತರದ ಪ್ರಥಮ ಕಛೇರಿಯಲ್ಲಿ ಗಂಧಾರ್‌ ದೇಶ್‌ಪಾಂಡೆ ಮನಮೋಹಕ ಗಾಯನದಿಂದ ಮನ ಗೆದ್ದರು. ಸ್ವರ ಲಯಗಳ ಮೇಲಿನ ಹಿಡಿತ ಅನಿರೀಕ್ಷಿತ ಮಟ್ಟದಲ್ಲಿದ್ದುದು ಕಲಾಭಿಮಾನಿಗಳ ಆನಂದಕ್ಕೆ ಕಾರಣವಾಯಿತು. ಇವರಿಗೆ ಗುರುಮೂರ್ತಿ ವೈದ್ಯ ಹಾಗೂ ಗುರುಪ್ರಸಾದ್‌ ಹೆಗಡೆ ಸಾಥ್‌ ನೀಡಿದರು. ಚೈತನ್ಯ ಭಟ್‌, ನಹುಶ್‌ ತಾನ್‌ಪುರದಲ್ಲಿ ಸಹಕರಿಸಿದರು. 

ತದನಂತರ ದೆಹಲಿಯ ಪ್ರಸಿದ್ಧ ಗಾಯಕಿ ಶಾಶ್ವತಿ ಮಂಡಲ್‌ ಅಪೂರ್ವ ಕಂಠಸಿರಿಯಿಂದ ಸಂಗೀತ ರಸದೌತಣವನ್ನು ನೀಡಿದರು. ರಾಗ್‌ ಮುಲ್ತಾನಿಯಲ್ಲಿ ವಿಲಂಬಿತ್‌ ತೀನ್‌ತಾಲ್‌, ದೃತ್‌ ಏಕ್‌ತಾಲ್‌ನಲ್ಲಿ ಬಂದಿಶ್‌ಗಳನ್ನೂ ದೃತ್‌ ತೀನ್‌ ತಾಲ್‌ನಲ್ಲಿ ಒಂದು ತರಾನವನ್ನೂ ಹಾಡಿದರು. ನಂತರ‌ ರಾಗವಾದ ಸೋಹನೀ ಭಟಿಯಾರ್‌ನಲ್ಲಿ ಒಂದು ಬಂಧಿಶ್‌ ಪ್ರಸ್ತುತಪಡಿಸಿ, ಕೊನೆಯಲ್ಲಿ ಕಾಫಿ ರಾಗದ ಒಂದು ಟಪ್ಪಾ ಹಾಗೂ ಒಂದು ದೃತ್‌ ಬಂಧಿಶ್‌ ಪ್ರಸ್ತುತಪಡಿಸಿದರು. ಇವರಿಗೆ ಬೆಂಗಳೂರಿನ ವ್ಯಾಸಮೂರ್ತಿ ಕಟ್ಟಿ ಸಂವಾದಿನಿಯಲ್ಲಿ ಹಾಗೂ ಗುರುಮೂರ್ತಿ ವೈದ್ಯ ತಬಲಾದಲ್ಲಿ ಸಾಥ್‌ ನೀಡಿದರು. ವೀಣಾ ನಾಯಕ್‌ ಹಾಗೂ ಸಂಗೀತಾ ಹೆಗಡೆ ತಾನ್ಪುರದಲ್ಲಿ ಸಹಕರಿಸಿದರು. 

ಕೊನೆಯ ಕಾರ್ಯಕ್ರಮದಲ್ಲಿ ಪಂಡಿತ್‌ ಡಾ| ರಾಮ್‌ ದೇಶ್‌ಪಾಂಡೆಯವರು ಪಂಡಿತ್‌ ರವೀಂದ್ರ ಯಾವಗಲ್‌ ಹಾಗೂ ಗುರುಪ್ರಸಾದ್‌ ಹೆಗಡೆಯವರ ಸಾಥ್‌ ಸಂಗತ್‌ನೊಂದಿಗೆ ಅದ್ಭುತ ಸಂಗೀತ ಲೋಕದ ಸೃಷ್ಟಿಮಾಡಿದರು. ಮಾರ್‌ವಾ ರಾಗದಲ್ಲಿ ತಿಲ್ವಾಡ ಹಾಗೂ ತೀನ್‌ತಾಲ್‌ ಬಂಧಿಶ್‌ ಹಾಗೂ ತರಾನಾ, ಬಿಹಾಗ್‌ ರಾಗದಲ್ಲಿ ಝಪ್‌ತಾಲ್‌ ಹಾಗೂ ತೀನ್‌ತಾಲ್‌ನ ಬಂಧಿಶ್‌ ಅಲ್ಲದೆ ಬಹು ಪ್ರಸಿದ್ಧವಾದ ಸಾವರೆ ಐಜಯ್ಯೋ ಪ್ರಸುತಪಡಿಸಿದರು. 

ಕೃಷ್ಣ ಮೂರ್ತಿ 

ಟಾಪ್ ನ್ಯೂಸ್

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

Malpe ದಕ್ಕೆಯಲ್ಲಿ ನೀರಿಗೆ ಬಿದ್ದು ಸಾವು: ದೂರು ದಾಖಲು

bjpRoad Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Road Mishap ಉಳ್ಳಾಲ: ಬಿಜೆಪಿ ಕಾರ್ಯಕರ್ತ ಸಾವು

Uppinangady ಹೃದಯಾಘಾತ; ಯುವಕ ಸಾವು

Uppinangady ಹೃದಯಾಘಾತ; ಯುವಕ ಸಾವು

IND VS PAK

ಪಾಕ್‌ಗೆ ರಾಜತಾಂತ್ರಿಕ ಸಭ್ಯತೆ ಇಲ್ಲ: ಭಾರತ ಕಿಡಿ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ

Kadaba ಪತಿಯ ಕಿರುಕುಳ ತಾಳಲಾರದೆ ಪತ್ನಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqqweqwe

ಲೈಂಗಿಕ ಕಿರುಕುಳದೂರು ರಾಜಕೀಯ ಪ್ರೇರಿತ: ಪ.ಬಂಗಾಲ ಗವರ್ನರ್‌

Supreme Court

ಒಂದೇ ಹೆಸರಿರುವ ಅಭ್ಯರ್ಥಿಗಳ ಸ್ಪರ್ಧೆಗೆ ನಿಷೇಧ ಇಲ್ಲ: ಸುಪ್ರೀಂ

1-ewqeqewq

Eknath Shinde ಬಣ ಶಿವಸೇನೆ ಸೇರಿದ ಮಾಜಿ ಸಂಸದ ಸಂಜಯ ನಿರುಪಮ್‌

2000

2,000 ರೂ.ನ 97.76% ನೋಟು ವಾಪಸ್‌: ಆರ್‌ಬಿಐ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Madikeri ವೃದ್ಧೆ ಸಾವು: ಸೊಸೆಗೆ ನ್ಯಾಯಾಂಗ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.