ಮುರಾರಿ-ಕೆದ್ಲಾಯ ರಂಗೋತ್ಸವದ ಮೂರು ಪ್ರಸ್ತುತಿ 


Team Udayavani, Apr 20, 2018, 7:18 PM IST

12.jpg

(ಕಳೆದ ವಾರದಿಂದ)

ಮದರ್‌ ಕರೇಜ್‌
ಮಂಗಳೂರಿನ ಪಾದುವಾ ರಂಗಶಾಲೆಯ ವಿದ್ಯಾರ್ಥಿಗಳಿಗೆ ನೀನಾಸಂ ಸತೀಶ್‌ ಪಿ. ಬಿ. ನಿರ್ದೇಶಿಸಿದ ನಾಟಕವಿದು. “ಮದರ್‌ ಕರೇಜ್‌’ ಕವಿ,ನಾಟಕಕಾರ ಹಾಗೂ ರಂಗ ಸಿದ್ಧಾಂತಿ ಬಟೋಲ್ಟ್ ಬ್ರೆಕ್ಟ್‌ನ ಖ್ಯಾತ ಕೃತಿ. ಇದನ್ನು ಕನ್ನಡಕ್ಕೆ ಅನುವಾದಿಸಿದವರು ಲಿಂಗದೇವರು ಹಳೆಮನೆ. ಅದರ ಪಠ್ಯ ಹಾಗೂ ನುರಿತ ಪೂರ್ಣಾವಧಿಯ ರಂಗತಂಡಗಳ ಪ್ರದರ್ಶನದ ಸಿದ್ಧಿಗಳೇನಿದ್ದರೂ ಸ್ಥಳ ಮಟ್ಟದ, ಅಷ್ಟೇನೂ ರಂಗಪರಿಣತಿ ಇಲ್ಲದ ವಿದ್ಯಾರ್ಥಿಗಳಿಗೆ ಸತೀಶ್‌ ಈ ರಂಗಪಠ್ಯವನ್ನು ಆಯ್ದುಕೊಂಡಿರುವ ಪ್ರಯೋಗಶೀಲತೆಯ ಧೈರ್ಯವನ್ನು ಮೆಚ್ಚಬೇಕು. “ಮದರ್‌ ಕರೇಜ್‌’ ಯುದ್ಧ ಹಾಗೂ ಅದರ ಪರಿಣಾಮಗಳನ್ನು ಕುರಿತು ಸಾಮಾನ್ಯ ವ್ಯಕ್ತಿಯ ದೈನಂದಿನ ಬದುಕಿನ ತುರ್ತಿಗೆ ಹೊರತಾದ ಅಮೂರ್ತ ವಿಚಾರಗಳನ್ನು ಯುದ್ಧ ಕಾಲದ ಅಭದ್ರ ಬದುಕಿನ ಸೆಣಸಾಟದೆದುರು ತಂದು ನಿಲ್ಲಿಸುತ್ತದೆ. ತನಗ್ಯಾವ ಪಕ್ಷಪಾತವೂ ಇಲ್ಲವೆಂಬ ನೈತಿಕ ಜೂಜಿನ ಭಾವದಲ್ಲಿ ಕೃತಿಯನ್ನು ಕಟ್ಟುತ್ತಾ ಹೋದರೆ ಕಟ್ಟುವ ಪಾತ್ರಗಳೇ ತನಗೆ ಸಮಾಜವಾದಿ ನೈತಿಕತೆಯ ದರ್ಶನ ಕಾಣಿಸಬಹುದೆಂಬ ಅಭದ್ರ ನೆಲೆಯಿಂದಲೇ ಈ ನಾಟಕ ರಚಿತವಾಗಿರುವಂತಿದೆ.  ಯುರೋಪಿನ ಧರ್ಮ ಯುದ್ಧದ ಕಾಲದಲ್ಲಿ ಯುದ್ಧದ ವಸ್ತುಸ್ಥಿತಿಯನ್ನೇ ಪುಡಿ ವ್ಯಾಪಾರದ ಲಾಭಕ್ಕೆ ಬಳಸಿಕೊಂಡು ತನ್ನ ಸಂಸಾರವನ್ನು ಉಳಿಸಿಕೊಳ್ಳುವ ಛಲದವಳು “ಮದರ್‌ ಕರೇಜ್‌’ ಎಂಬ ಹೆಂಗಸು. ಯುದ್ಧಗಳ ಕಾರಣ ತನ್ನ ಒಂದೊಂದೇ ಕುಡಿಯನ್ನು ಕಳೆದುಕೊಳ್ಳುತ್ತಾ, ಕಳೆದುಕೊಂಡರೂ ತನ್ನ ಅಸ್ತಿತ್ವದ ಕೇಂದ್ರವಿರುವುದೇ ತನ್ನ ಪುಡಿ ವ್ಯಾಪಾರದ ತಳ್ಳುಗಾಡಿಯಲ್ಲೆಂಬಂತೆ ಯುದ್ಧಾವಧಿಯ ದೀರ್ಘ‌ ಬದುಕಿನ ಯಾನವನ್ನು ಹಲ್ಲು ಕಚ್ಚಿ ಮುಂದುವರೆಸುವಳು. ಇಷ್ಟೇ ಕತೆ. ಆದರೆ ರಂಗಪ್ರದರ್ಶನದಲ್ಲಿ ಅರಳಬೇಕಾದದ್ದು ಆ ಹೆಂಗಸಿನಲ್ಲಿ ಬದುಕು, ಮನುಷ್ಯ ಸಂಬಂಧ ಹಾಗು ಯುದ್ಧದ ಪರಿಣಾಮಗಳ ಕುರಿತು ಆಗುವ ಬದಲಾವಣೆಯಲ್ಲೇ ನೈಜ ಸಮಷ್ಟಿ ಹಿತದ ಪಠ್ಯವಿದೆ ಎಂಬ ಬ್ರೆಕ್ಟನ ಆಶಯ.  ಪ್ರದರ್ಶನ ಪಠ್ಯದ ಆಯ್ಕೆಯೇ ಜೂಜಿನದು; ಸೋತರೂ ಗೆದ್ದರೂ, ಪಠ್ಯದ ಆಶಯಕ್ಕೆ ಚ್ಯುತಿ ಇಲ್ಲ, ಬ್ರೆಕ್ಟನ ಕೃತಿಗಳ ಈ ಅನನ್ಯತೆಯ ಅರಿವು ಗಾಢವಾಗಿ ತಟ್ಟಿದ ನಟರ ತಂಡ ಇದ್ದಾಗ ಮಾತ್ರವೇ ಈ ನಾಟಕ ತನ್ನ ಪ್ರದರ್ಶನದಲ್ಲಿ ಪ್ರೇಕ್ಷಕರನ್ನೂ ತತ್ವ ಹುಡುಕಾಟದ ಹಾದಿಗೆ ತರಲು ಸಾಧ್ಯ. ಬ್ರೆಕ್ಟನ ನಾಟಕಗಳು ಪ್ರೇಕ್ಷಕರು ನಾಟಕದ ವಸ್ತುವಿನ ಜೊತೆ ಸಂವಾದಿಸುವ ಕಾರ್ಯಶೀಲತೆಯನ್ನು ಬೇಡುತ್ತವೆ. ಹಾಗಾಗಿ ಒಂದು ಪ್ರದರ್ಶನದಲ್ಲಿ ಪ್ರೇಕ್ಷಕರ ಕಲಿಕೆಯ ಉತ್ಸಾಹವೂ ಅಷ್ಟೇ ಮುಖ್ಯವಾಗಿರುತ್ತದೆ.

 ವೀ ಟೀಚ್‌ ಲೈಫ್ ಸಾರ್‌
ಮಣಿಪಾಲದ “ಸಂಗಮ್‌ ಕಲಾವಿದೆರ್‌’ ತಂಡ ಪ್ರಶಾಂತ್‌ ಉದ್ಯಾವರ ಅವರ ರಂಗ ಪಠ್ಯ,ವಿನ್ಯಾಸ,ನಿರ್ದೇಶನದಲ್ಲಿ ಸಿದ್ಧಪಡಿಸಿದ ನಾಟಕ “ವೀ ಟೀಚ್‌ ಲೈಫ್ ಸಾರ್‌’. ಪ್ಯಾಲೆಸ್ತೀನ್‌ ಸಂಜಾತೆ ಕವಿ ರಫೀಫಾ ಜಿಯಾದಾರ ಪದ್ಯದ ಹೆಸರನ್ನೇ ನಾಟಕದ ಶೀರ್ಷಿಕೆ ಮಾಡಲಾಗಿದೆ. ಇಡೀ ರಂಗ ಪ್ರಸ್ತುತಿಯ ಅಡಿಪಾಯವೂ ಅದೇ ಪದ್ಯ. ನಿರ್ದೇಶಕ ಪ್ರಶಾಂತ್‌ ಯುದ್ಧ ವಿರೋಧಿ ತುಂಡು ಚಿತ್ರಗಳ ಸಂಕಲನದ ರಂಗ ಪ್ರಸ್ತುತಿಗೆ ಸರಿಯಾದ ಅಡಿಪಾಯವನ್ನೇ ಕಟ್ಟಿಕೊಂಡಿದ್ದಾರೆ. 

ನಾಟಕ “ವೀ ಟೀಚ್‌ ಲೈಫ್ ಸಾರ್‌…’ ಪದ್ಯದ ನೃತ್ಯ ಸಂಯೋಜನೆಯೊಂದಿಗೆ ಶುರುವಾಗುತ್ತದೆ ಮತ್ತು ಅವರದ್ದೇ ಬಹು ನೈತಿಕ ಆಕ್ರೋಶದ ಗರಿಮೆಯ “ಶೇಡ್ಸ್‌ ಆಫ್ ಯಾಂಗರ್‌’ನ ದೃಶ್ಯ ಸಂಯೋಜನೆಯಲ್ಲಿ ಕೊನೆಯಾಗುತ್ತದೆ. ಇವೆರಡರ ನಡುವೆ ಪ್ರಶಾಂತ್‌ ಬೀಭತ್ಸವನ್ನು ಕಾಣಿಸುವ ಮೂರು ಕಥನ ತುಣುಕುಗಳನ್ನು ಹೆಣೆದಿದ್ದಾರೆ. ಒಂದು 1980-88ರ ನಡುವೆ ನಡೆದ ಇರಾನ್‌-ಇರಾಕ್‌ ಯುದ್ಧ ಎರಡೂ ದೇಶದ ಪ್ರಜೆಗಳ ಕೌಟುಂಬಿಕ ಭಾವಕೋಶವನ್ನು ವಿನಾಕಾರಣ ಛಿದ್ರಗೊಳಿಸಿತು ಎಂಬುದನ್ನು ತೋರಿಸುವ “ಫೊÅàಜನ್‌ ರೋಸ್‌’ ಎಂಬ ಪರ್ಷಿಯನ್‌ ಕಿರುಚಿತ್ರವನ್ನು ಆಧರಿಸಿದ್ದು; ಎರಡನೇಯದು ಸಾಹಿತಿ ಸಾದಾತ್‌ ಹಸನ್‌ ಮಾಂಟೋನ “ತಿತ್ವಾಲದ ನಾಯಿ’ ಎಂಬ ಸಣ್ಣಕತೆಯನ್ನು ಆಧರಿಸಿದ್ದು; ಮೂರನೇಯದು ಪ್ಯಾಲೆಸ್ತೀನ್‌ ಯುವತಿ ಹಾಗೂ ಇಸ್ರೇಲಿನ ಯುವಕನ ನಡುವಿನ ದುರಂತ ಪ್ರೇಮದ ಸುದ್ದಿ ತುಣಕು. ರಫೀಫಾರ ಪದ್ಯ ಪ್ರೇರಣೆಯಲ್ಲಿ ಜೋಡಿಸಲಾದ ದೃಶ್ಯ ಚಿತ್ರಗಳನ್ನು ಹೆಣೆಯಲು ಪ್ರಶಾಂತ್‌ ಮತ್ತೂಬ್ಬ ಕವಿ ಫೈಜ್‌ ಅಹ್ಮದ್‌ ಫೈಜ್‌ ಅವರ “ಪ್ಯಾಲೆಸ್ತೀನಿ ಮಗುವಿಗೆ ಜೋಗುಳ’ ಎಂಬ ನವಿರು ಛಂದ-ಆಳ ವಿಷಾದದ ಅಪರೂಪದ ಪದ್ಯವನ್ನು ಎತ್ತಿಕೊಂಡಿದ್ದಾರೆ. ಅರೆ ಪಾಶ್ಚಿಮಾತ್ಯ-ಅರೆದೇಶಿ ನೃತ್ಯ ಸಂಗೀತ ಶೈಲಿಯಲ್ಲಿ ಒಂದು ಗಂಟೆಯ ಈ ರಂಗಪ್ರಸ್ತುತಿಯನ್ನು ಪ್ರಶಾಂತ್‌ ಕಟ್ಟಿದ್ದಾರೆ. ಇದೀಗ ಟೀವಿ ರಿಯಾಲಿಟಿ ಶೋಗಳಲ್ಲಿ ಬಳಕೆಯಾಗುವ ರಂಗ ತಂತ್ರಗಳನ್ನು ಬಳಸಿಕೊಂಡು ಈ ಛಿದ್ರ ಯುದ್ಧ ಚಿತ್ರದೃಶ್ಯಗಳು ನಮ್ಮ ಮನದಾಳದ ಬೀಭತ್ಸ ದುಸ್ವಪ್ನದ ದೃಶ‌ಗಳು ಎಂಬಂತೆ ಸಂಯೋಜಿಸಿದ್ದಾರೆ.

 ಉಳಿದವರು ಸ್ಥಾಪಿತ ಪಠ್ಯಕ್ಕೆ ಮೋರೆ ಹೋದಾಗ ಪ್ರಶಾಂತ್‌ ಅತ್ಯಂತ ಕಠಿಣವಾದ ಯುದ್ಧವಿರೋಧಿ ರಂಗ ಪ್ರಸ್ತುತಿಯನ್ನು ಸ್ವಯಂ ಸಂಯೋಜನೆಯಲ್ಲಿ ಕಟ್ಟುವ ಸಾಹಸ ಮಾಡಿದ್ದಾರೆ. ಅವರ ಈ ಪ್ರಯೋಗಕ್ಕೆ ಬೆನ್ನೆಲುಬಾದದ್ದು ಮಣಿಪಾಲದ “ಸಂಗಮ್‌ ಕಲಾವಿದೆರ್‌’.

ರಂಗ ನಿರ್ದೇಶಕ ರಘುನಂದನ್‌ ಹೇಳುವಂತೆ ಪ್ರದರ್ಶನವು ಪರಿಣಾಮಕ್ಕಾಗಿ ರಿಯಾಲಿಟಿ ಶೋಗಳ ತಾಂತ್ರಿಕತೆಯನ್ನು ಅವಲಂಬಿಸಿದೆ. ಈ ಮೂಲಕ ಅದು ಯುದ್ಧ ವಿರೋಧವನ್ನು ಒಂದು ಮಧ್ಯಮ ವರ್ಗದ ಕರುಣೆಯ ವಸ್ತುವಾಗಿಸುವ ಅಪಾಯವಿದೆ. ಪ್ರದರ್ಶನವು ಯುದ್ಧದ ಬೀಭತ್ಸವನ್ನು ತೋರುವಾಗ ಇನ್ನೂ ಕಠಿನ ವಾಸ್ತವವಾದಿಯಾಗಿರಬೇಕು. ಈ ಪ್ರಸ್ತುತಿಯು ಯುದ್ಧದ ಬಹು ವಾಸ್ತವಿಕ ಸಾಮಾಜಿಕ-ರಾಜಕೀಯತೆಗಳನ್ನು ಅರಿತು ಪ್ರೇಕ್ಷಕರು ತಮ್ಮದೇ ನಿಲುವುಗಳನ್ನು ವಿಮರ್ಶಿಸುವಂತೆ ಮಾಡಲು, ಮತ್ತಷ್ಟು ಹೆಚ್ಚು ನಿರ್ದಾಕ್ಷಿಣ್ಯ ಕಠೊರತೆಯಲ್ಲಿ ರಂಗ ಪ್ರಯೋಗವನ್ನು ಮಾರ್ಪಡಿಸಿಕೊಳ್ಳುವ ಉನ್ನತ್ತ ಹಂತದತ್ತ ನಿರ್ದೇಶಕರು ಹೆಜ್ಜೆ ಇಡಬೇಕು. ರಘು ಅವರ ವಿಮರ್ಶೆ ನನ್ನದೂ ಆಗಿದೆ. ಮೂರು ನಾಟಕಗಳ ಮುಖ್ಯ ಆಶಯ, ಪ್ರಸ್ತುತ ಸಾಮಾಜಿಕ ಕ್ಷೊàಭೆಗಳನ್ನು ಪ್ರೇಕ್ಷಕರೆದುರು ತಂದು, ಅವರನ್ನು ಸಂವಾದಕ್ಕೆ ಆಹ್ವಾನಿಸುವುದು. ಆ ಮೂಲಕ ಒಂದು ಸಹನಾಶೀಲ, ಸ್ವತಂತ್ರ ವಿವೇಕದ ನಾಗರಿಕ ಪ್ರಜ್ಞೆಯನ್ನು ಪ್ರಚೋದಿಸುವುದಾಗಿತ್ತು. ಮುರಾರಿ-ಕೆದ್ಲಾಯರ ಚೇತನಗಳಿಗೆ ಇವು ಘನವಾದ ಗೌರವವನ್ನು ಅರ್ಪಿಸಿದವು. 

ಕೆ.ಫ‌ಣಿರಾಜ್‌ 

ಟಾಪ್ ನ್ಯೂಸ್

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

1-kanwar-msid

Uttara Khand; ಕನ್ವರ್‌ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.