ತುಳು ನಾಟಕ ಪರ್ಬ- ಪರದೆ ಯುಗದ ಎಂಟು ನಾಟಕಗಳ ಮೆಲುಕು 


Team Udayavani, Apr 27, 2018, 6:00 AM IST

305.jpg

(ಕಳೆದ ವಾರದಿಂದ )
ತಮ್ಮಲೆ ಅರ್ವತ್ತನ ಕೋಲ 
ಐದನೇ ದಿನ ತುಳು ನಾಟಕ ಮತ್ತು ಸಿನಿಮಾ ಕ್ಷೇತ್ರದ ದಿಗ್ಗಜರಾಗಿ ಮೆರೆದ ಕೆ.ಎನ್‌. ಟೇಲರ್‌ ಅವರ ತಮ್ಮಲೆ ಅರ್ವತ್ತನ ಕೋಲ ನಾಟಕದ ಪ್ರದರ್ಶನ. ಪೆರ್ಡೂರಿನ “ಕೂಡಿª ಕಲಾವಿದೆರ್‌’ ಈ ನಾಟಕವನ್ನು ಪ್ರಸ್ತುತ ಪಡಿಸಿದರು. ರಮೇಶ್‌ ಆಚಾರ್ಯ ಪೆರ್ಡೂರು ನಾಟಕವನ್ನು ನಿರ್ದೇಶಿಸಿದ್ದರು. ಅತ್ತ ಪರದೆಯನ್ನು ನೆಚ್ಚಿಕೊಳ್ಳದೆ , ಇತ್ತ ಅಬ್ಬರದ ಸೆಟ್ಟಿಂಗ್‌ಗೆ ಶರಣಾಗದೆ ಆಧುನಿಕ ರಂಗಭೂಮಿಯ ಶೈಲಿಯಲ್ಲಿ ರಂಗವನ್ನು ಸಿದ್ಧಪಡಿಸಿಕೊಂಡಿತ್ತು ಈ ತಂಡ . ಹಳೆ ಕಾಲದಲ್ಲಿ ತಮ್ಮಲೆ ಅರ್ವತ್ತನ ಕೋಲ ನಾಟಕ ಎಬ್ಬಿಸುತ್ತಿದ್ದ ಹಾಸ್ಯದ ಅಲೆಯನ್ನು ಈ ನಾಟಕ ಎಬ್ಬಿಸಲಿಲ್ಲ ಅನ್ನುವ ಅಭಿಪ್ರಾಯ ಕೇಳಿಬಂತಾದರೂ ಕಲಾವಿದರ ನಟನೆ ಚೆನ್ನಾಗಿಯೇ ಇತ್ತು.

ಹಳ್ಳಿಯ ನಿಷ್ಕಲ್ಮಷ ಬದುಕಿನಲ್ಲಿ ಚುನಾವಣೆ ಎಬ್ಬಿಸುವ ಬಿರುಗಾಳಿ, ಚುನಾವಣೆಯ ಸಲುವಾಗಿ ನಡೆಯುವ ತಂತ್ರ-ಕುತಂತ್ರದ ಸುತ್ತ ನಾಟಕ ಸಾಗುತ್ತದೆ. ಮಾವ ಮತ್ತು ಅಳಿಯನ ಜಿದ್ದಾಜಿದ್ದಿಯ ನಡುವೆ ಮೂಗುತೂರಿಸುವ ಸಮಯ ಸಾಧಕರು ತಮ್ಮ ಲಾಭಕ್ಕಾಗಿ ಪರಿಸ್ಥಿತಿಯನ್ನು ಬಳಸಿಕೊಳ್ಳುವುದು ಒಂದೆಡೆಯಾದರೆ , ಮಾವನ ಕುತಂತ್ರಕ್ಕೆ ಅಳಿಯ ಮೋಸಹೋಗುವುದು ಈ ನಾಟಕದ ಕಥಾ ಹಂದರ . ಹಳೆಯ ಕಾಲದ ಕಥೆಯಾದರೂ ಇವತ್ತಿನ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ. 

ನಾರದೆರೆನ ವಕಾಲತ್‌ 
ಆರನೇ ದಿನದಂದು ಕೆ.ಬಿ. ಭಂಡಾರಿ ಅವರ ನಾರದೆರೆನ ವಕಾಲತ್‌ ನಾಟಕವನ್ನು ಪಡೀಲ್‌ನ “ಅಮೃತ’ ಕಾಲೇಜು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಚಂದ್ರಹಾಸ ಜಿ. ಮತ್ತು ಹರೀಶ್‌ ಶಕ್ತಿನಗರ ಅವರ ನಿದೇರ್ಶನವಿತ್ತು. ಹಳೆ ಕಾಲದ ನಾಟಕಗಳ ಪರ್ಬದಲ್ಲಿ ಹೊಸ ಕಾಲದ ಮಕ್ಕಳು ತನ್ಮಯತೆಯಿಂದಲೇ ನಾಟಕವನ್ನು ಪ್ರಸ್ತುತ ಪಡಿಸಿದ್ದಾರೆ. ತಂಡದ ಬಹುತೇಕ ವಿದ್ಯಾರ್ಥಿಗಳು ಮೊದಲ ಬಾರಿಗೆ ರಂಗಕ್ಕೆ ಬಂದವರು . ತುಳುವಿನ ಬಗ್ಗೆ ಅಭಿಮಾನ , ಉತ್ಸಾಹ ಹೊಸ ತಲೆಮಾರಿನಲ್ಲೂ ಅಭಿವ್ಯಕ್ತಿಗೊಳ್ಳಬೇಕೆಂಬ ಆಶಯಕ್ಕೆ ಪೂರಕವಾಗಿತ್ತು ಈ ತಂಡದ ಪಾಲ್ಗೊಳ್ಳುವಿಕೆ. 

ಮೊದಲಾರ್ದದಲ್ಲಿ ಮ್ಯೂಸಿಕ್‌ ಕೊಂಚ ಅಬ್ಬರವಾಗಿಯೇ ಕೇಳಿ ಬಂದರೂ ಉತ್ತಾರಾರ್ಧದಲ್ಲಿ ನಾಟಕ ಚೆನ್ನಾಗಿ ಸಾಗಿತು. ಮೋಸ , ಲಂಚದಿಂದ ಬದುಕಿದ ರಾಜಕಾರಣಿಯೊಬ್ಬ ಹಠಾತ್‌ ಮರಣವನ್ನಪ್ಪಿ ನರಕದ ಬಾಗಿಲಿನ ಹತ್ತಿರ ಬರುವ ಸಂದರ್ಭದಲ್ಲಿ , ನಾರದ ಮುನಿಗಳು ಎದುರಾಗುತ್ತಾರೆ. ರಾಜಕಾರಣಿ ತಾನು ಸ್ವರ್ಗಕ್ಕೆ ಹೋಗಬೇಕಾದವನು , ನನ್ನನ್ನು ತಪ್ಪಾಗಿ ನರಕಕ್ಕೆ ಸಾಗಿಸುತ್ತಿದ್ದಾರೆ ಎಂದು ನಾರದ ಮುನಿಗಳಲ್ಲಿ ಭಿನ್ನವಿಸುವುದು, ಕೊನೆಗೆ ನಾರದರು ಯಮನ ಆಸ್ಥಾನದಲ್ಲಿ ರಾಜಕಾರಣಿಯ ಪರವಾಗಿ ವಕಾಲತ್‌ ಮಂಡಿಸವುದು, ಪಾಪ ಮತ್ತು ಪುಣ್ಯದ ಲೆಕ್ಕಾಚಾರದಲ್ಲಿ ರಾಜಕಾರಣಿಗೆ ಸೋಲಾಗುವುದು ನಾಟಕದ ಕಥೆಯ ಸರಾಂಶ. ಸಮಾಜದಲ್ಲಿ ಸತ್ಯ , ಪ್ರಾಮಾಣಿಕತೆಯಿಂದ ಬದುಕಬೇಕೆಂಬ ಆಶಯವನ್ನು ಈ ನಾಟಕ ಸಾರುತ್ತದೆ. ವಿದ್ಯಾರ್ಥಿಗಳ ಪ್ರಯತ್ನ , ಶ್ರಮ ಸ್ತುತ್ಯರ್ಹ. 

ಕಾನೂನುದ ಕಣ್‌¡ 
ಏಳನೇ ದಿನ ರಾಮ ಕಿರೋಡಿಯನ್‌ ಅವರ ಕಾನೂನುದ ಕಣ್‌¡ ನಾಟಕವನ್ನು ಕಿನ್ನಿಗೋಳಿಯ “ವಿಜಯಾ ಕಲಾವಿದರು’ ಅಭಿನಯಿಸಿದರು. ಶರತ್‌ ಶೆಟ್ಟಿ ಕಿನ್ನಿಗೋಳಿ ನಿರ್ದೇಶಿಸಿದ್ದರು. ಜಾತಿಯ ಮೇಲು ಕೀಳು , ಶೋಷಿತ ಸಮಾಜ ಬದುಕು , ದಬ್ಟಾಳಿಕೆ ,ದೌರ್ಜನ್ಯವನ್ನು ಬಿಂಬಿಸುತ್ತಾ ಸಾಮಾಜಿಕ ಪರಿವರ್ತನೆಯ ದಿಸೆಯನ್ನು ಪ್ರಸ್ತುತ ಪಡಿಸುವ ಹಾಗೂ ಕಾನೂನಿನ ಬೆಲೆ ಮತ್ತು ಮೌಲ್ಯದ ಸಂದೇಶವನ್ನು ಈ ನಾಟಕದ ಮೂಲಕ ಅಂದಿನ ಕಾಲದಲ್ಲಿ ರಾಮ ಕಿರೋಡಿಯನ್ನು ಸಾರಿದ್ದರು. 

 ಅನುಭವಿ ಹವ್ಯಾಸಿ ನಾಟಕ ಕಲಾವಿದರು ಸಮರ್ಥವಾಗಿಯೇ ನಾಟಕವನ್ನು ರಂಗಕ್ಕೆ ತಂದಿದ್ದರು. ತನ್ನಿಗ ಪಾತ್ರಧಾರಿಯ ನಟನೆಯಲ್ಲಿ ಹೆಣ್ಣುಮಕ್ಕಳನ್ನು ನಾಚಿಸುವಂತಹ ವಯ್ನಾರವಿತ್ತು. ವೃತ್ತಿಪರ ಹಾಗೂ ಹವ್ಯಾಸಿ ಕಲಾವಿದರ ಸಮ್ಮಿಲನ ಇಲ್ಲಿ ಚೆನ್ನಾಗಿ ಪ್ರಯೋಜನಕ್ಕೆ ಬಂದಿದೆ. 

 ಲಚ್ಚು 
 ಎಂಟನೇ ದಿನದಂದು ನೆಕ್ಕಿದಪುಣಿ ಗೋಪಾಲಕೃಷ್ಣ ರಚಿಸಿದ ಲಚ್ಚು ನಾಟಕ ಪ್ರದರ್ಶನವಿತ್ತು. ಈ ನಾಟಕದಲ್ಲಿ ಉಳ್ಳಾಲ ಮಚ್ಚೇಂದ್ರನಾಥ್‌ ಅವರು ನಾನೂರಕ್ಕಿಂತಲೂ ಹೆಚ್ಚಿನ ಪ್ರದರ್ಶನಗಳಲ್ಲಿ ಪಾತ್ರ ಮಾಡಿದ ಕಾರಣಕ್ಕೆ ಲಚ್ಚು ನಾಟಕ ಮಚ್ಚೇಂದ್ರನಾಥ್‌ ಅವರ ನಾಟಕ ಅನ್ನುವಷ್ಟರ ಮಟ್ಟಿಗೆ ಜನಜನಿತವಾಗಿತ್ತು. ಸಂಕೇತ್‌ ಕಲಾವಿದರು ನಾಟಕವನ್ನು ಅಭಿನಯಿಸಿದರು.

 ಜಗನ್‌ ಪವಾರ್‌ ಬೇಕಲ್‌ ನಿರ್ದೇಶಿಸಿದ್ದರು. ತಂಡದ ಒಟ್ಟು ಅಭಿನಯ ಚೆನ್ನಾಗಿ ಮೂಡಿ ಬಂದಿತ್ತು. ನಾಟಕವನ್ನು ಒಂದೂ ಕಾಲು ಗಂಟೆಯ ಸಮಯ ಮಿತಿಗೆ ನಿರ್ದೇಶಕರು ಇಳಿಸಿದ್ದರು. ಹಳೆ ಕಾಲದಲ್ಲಿ ಮೂಲ ನಾಟಕ ನೋಡಿದವರಿಗೆ ಈ ಬಾರಿ ಕಾಮಿಡಿ ಸನ್ನಿವೇಶಗಳು ಹಾಗೂ ನಾಟಕದ ಸೀನ್‌ಗಳು ಕಡಿತವಾಗಿರುವುದು ಸಹಜವಾಗಿಯೇ ನೆನಪಿಗೆ ಬಂದಿತ್ತು. 

ಬಹುತೇಕ ಎಲ್ಲ ನಾಟಕಗಳು ದುರಂತ ಅಂತ್ಯವನ್ನು ಕಾಣುವ ಕತೆಯನ್ನು ಹೊಂದಿದ್ದವು. ಜೊತೆಗೆ ಸಾಮಾಜಿಕ ಕಾಳಜಿ, ಜಾಗೃತಿಯ ಸಂದೇಶ ಧ್ವನಿಸುತ್ತಿತ್ತು. ಹಳೆ ಕಾಲದಲ್ಲಿ ನಾಟಕ ಮನೋರಂಜನೆಯ ಜೊತೆಗೆ ಮನೋವಿಕಾಸಕ್ಕೂ ವೇದಿಕೆ ಮಾಡಿಕೊಡುತ್ತಿತ್ತು ಅನ್ನುವುದನ್ನು ಈ ನಾಟಕಗಳು ತೋರಿಸಿಕೊಟ್ಟವು. 

ತಾರಾನಾಥ್‌ ಗಟ್ಟಿ ಕಾಪಿಕಾಡ್‌

ಟಾಪ್ ನ್ಯೂಸ್

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

1-assam

UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್‌?

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’

New Gang; ಮೋಸದಾಟದಲ್ಲಿ ಸಕ್ರಿಯವಾಗಿದೆ “ಆರ್ಡರ್‌ ಗ್ಯಾಂಗ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!

Exam

NEET ಟಾಪರ್‌ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.