ಶ್ರವಣ ಉಪಕರಣದ ಮೇಲೆ ತೇವಾಂಶದ ಪರಿಣಾಮ


Team Udayavani, Jul 18, 2021, 3:58 PM IST

arogyavani

ನೀವು ನಿಮ್ಮ ಫೋನು ಮತ್ತು ಇತರ ಇಲೆಕ್ಟ್ರಾನಿಕ್‌ ವಸ್ತುಗಳ ಬಗ್ಗೆ ಹೇಗೆ ಕಾಳಜಿ ವಹಿಸುತ್ತೀರೋ ಹಾಗೆಯೇ ಶ್ರವಣ ಉಪಕರಣಗಳ ಬಗೆಗೂ ಅಷ್ಟೇ ವಿಶೇಷ ಕಾಳಜಿ ವಹಿಸುವ ಅಗತ್ಯವಿರುತ್ತದೆ. ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದ್ದು, ಇದರಿಂದ ಹೆಚ್ಚುವ ತೇವಾಂಶವು ನಿಮ್ಮ ಶ್ರವಣ ಉಪಕರಣಕ್ಕೆ ಭಾರೀ ತೊಂದರೆಯನ್ನು ಉಂಟು ಮಾಡಬಹುದು.

ಶ್ರವಣ ಸಾಧನಗಳು ಕಾರ್ಯನಿರ್ವಹಿಸಲು ಆಂತರಿಕ ಎಲೆಕ್ಟ್ರಾನಿಕ್ಸ್‌ ಅನ್ನು ಹೆಚ್ಚು ಅವಲಂಬಿಸಿವೆ. ಆಧುನಿಕ ಡಿಜಿಟಲ್‌ ಶ್ರವಣ ಉಪಕರಣಗಳು ಶಬ್ದವನ್ನು ನಿರ್ವಹಿಸಲು ಅತ್ಯಾಧುನಿಕ ಸಿಗ್ನಲ್‌ ಪ್ರೊಸೆಸಿಂಗ್‌ ಚಿಪ್‌ ಅನ್ನು ಬಳಸುತ್ತವೆ.

ಎಲೆಕ್ಟ್ರಾನಿಕ್‌ ಸಾಧನಗಳು ಅಧಿಕ ಆದ್ರìತೆ (ಹ್ಯೂಮಿಡಿಟಿ)ಗೆ ಸೂಕ್ಷ್ಮ ಸಂವೇದಿಯಾಗಿರುತ್ತದೆ. ನೀರಿನ ಆವಿ ಶೇಕಡಾವಾರು ಅಧಿಕವಾಗಿದ್ದಾಗ ಅದು ಎಲೆಕ್ಟ್ರಾನಿಕ್‌ ಸಾಧನಗಳು ಕಾರ್ಯನಿರ್ವಹಿಸುವಂತೆ ಮಾಡುವ ಸಂಕೀರ್ಣ ಕಾರ್ಯವಿಧಾನಗಳ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನ ಆದ್ರìತೆಯು ಶ್ರವಣ ಉಪಕರಣಗಳಲ್ಲಿ ತೇವಾಂಶ ಸಂಗ್ರಹವಾಗಲು ಕಾರಣವಾಗುತ್ತದೆ.

ಬೇಸಿಗೆ ಮತ್ತು ಮಳೆಗಾಲದಲ್ಲಿ ಶ್ರವಣ ಉಪಕರಣದ ಬಗ್ಗೆ ಅತಿಯಾದ ಕಾಳಜಿ ವಹಿಸಬೇಕಾಗುತ್ತದೆ. ಬೇಸಗೆಯಲ್ಲಿ ಅತಿಯಾದ ಬಿಸಿಯಿಂದಾಗಿ ಮಷೀನಿನ ಭಾಗಗಳ ಜತೆಗೆ ಬ್ಯಾಟರಿ ಕೂಡ ಹಾಳಾಗುವ ಸಾಧ್ಯತೆ ಇರುತ್ತದೆ.

ಹೆಚ್ಚಿನ ಶಾಖ ಎಂದರೆ ಹೆಚ್ಚಿನ ಬೆವರು, ಇದರಿಂದಾಗಿ ನಿಮ್ಮ ಶ್ರವಣ ಉಪಕರಣಗಳು ಹೆಚ್ಚು ತೇವಾಂಶಕ್ಕೆ ಒಡ್ಡಿಕೊಳ್ಳುತ್ತವೆ. ಹೆಚ್ಚಿನ ಶ್ರವಣ ಉಪಕರಣಗಳ ಹೊರಭಾಗದಲ್ಲಿರುವ ನ್ಯಾನೊ-ಕೋಟಿಂಗ್‌ ನಿಮ್ಮ ಸಾಧನ ಘನೀಕರಿಸುವುದು ಅಥವಾ ಬಿರುಕು ಬಿಡುವುದನ್ನು ತಡೆಯಲು ಸಹಾಯ ಮಾಡುತ್ತದೆ. ಆದರೆ ಬೇಸಗೆಯ ಸಮಯದಲ್ಲಿ ನಿಮ್ಮ ಉಪಕರಣಗಳನ್ನು ಒಣಗಿಸಲು ಹೆಚ್ಚಿನ ಗಮನವನ್ನು ನೀಡುವುದು ಉತ್ತಮ ಅಭ್ಯಾಸ.

ನಮ್ಮ ಕರ್ತವ್ಯಗಳೇನು?

 ಬೇಸಗೆ ಕಾಲದಲ್ಲಿ ನಾವು ಬೆವರುವುದು ಸಾಮಾನ್ಯ. ಆದ್ದರಿಂದ ಪ್ರತೀ 2 ಗಂಟೆಗಳಿಗೊಮ್ಮೆ ಕಿವಿ, ಕಿವಿಯ ಹಿಂದಿನ ಬೆವರು ಹಾಗೂ ಶ್ರವಣಸಾಧನಗಳನ್ನು ಒರೆಸುತ್ತಿರಬೇಕು. ನೀವು ಹೆಚ್ಚು ಬೆವರುವ ವ್ಯಕ್ತಿಗಳಲ್ಲಿ ಒಬ್ಬರಾದರೆ, ಪ್ರತೀ ಒಂದು ಗಂಟೆಗೊಮ್ಮೆ ಅದನ್ನು ಒರೆಸುತ್ತಿರಬೇಕು. ಬೆವರು ಉಪ್ಪಿನಂಶವನ್ನು ಹೊಂದಿರುವುದರಿಂದ ಅದು ಶ್ರವಣ ಉಪಕರಣದೊಳಗಿನ ಭಾಗಗಳನ್ನು ಹಾಳುಮಾಡುತ್ತದೆ. ಆದ್ದರಿಂದ ಬೆವರು ಶ್ರವಣ ಉಪಕರಣದೊಳಗೆ ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಿ.

 ನಿಮ್ಮ ಶ್ರವಣ ಉಪಕರಣಗಳನ್ನು ಬಳಸಿ ರಾತ್ರಿ ತೆಗೆದ ಅನಂತರ ಒಣ ಹತ್ತಿ ಉಂಡೆ ಅಥವಾ ಮೃದುವಾದ ಸ್ವತ್ಛ  ಬಟ್ಟೆಯಿಂದ ಒರೆಸಬೇಕು ಹಾಗೂ ಮೃದುವಾದ ಹಲ್ಲುಜ್ಜುವ ಬ್ರಷ್‌ ತೆಗೆದುಕೊಂಡು ಉಪಕರಣದಲ್ಲಿ ಇರಬಹುದಾದ ಯಾವುದೇ ಕುಗ್ಗೆ (ಇಯರ್‌ವ್ಯಾಕ್ಸ್‌) ಅಥವಾ ಇತರ ವಸ್ತುಗಳನ್ನು ನಿಧಾನವಾಗಿ ತೆಗೆದುಹಾಕಬೇಕು. ರಿಸೀವರ್‌ ಮತ್ತು ಮೈಕ್ರೊಫೋನ್‌ ಎರಡನ್ನೂ ಮರೆಯದೇ ಸ್ವತ್ಛಗೊಳಿಸಬೇಕು.

 ಶ್ರವಣ ಉಪಕರಣಗಳನ್ನು ಬಳಕೆಯ ಸ್ಥಿತಿಯಲ್ಲಿಡಲು ಉತ್ತಮ ಆಯ್ಕೆಯೆಂದರೆ ಯುವಿ-ಕ್ಲೀನ್‌ ಮತ್ತು ಡ್ರೆ„ ಬಾಕ್ಸ್‌. ಉಪಕರಣದ ಬಳಕೆಯ ಅನಂತರ ರಾತ್ರಿಯಿಡೀ ಇದರಲ್ಲಿ ಇಡುವುದರಿಂದ ಈ ಸಾಧನವು ತೇವಾಂಶವನ್ನು ತೆಗೆದುಹಾಕುವುದರ ಜತೆಗೆ, ಯುವಿ ಬೆಳಕಿನ ತರಂಗಗಳ ಬಳಕೆಯ ಮೂಲಕ ಅದನ್ನು ಶುಚಿಗೊಳಿಸಿ, ಸೂಕ್ಷ್ಮ ಜೀವಿಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.

 ಇದರೊಂದಿಗೆ, ಡಿಹ್ಯೂಮಿಡಿಫೈಯರ್‌ ಕೂಡ ಮತ್ತೂಂದು ಆಯ್ಕೆಯಾಗಿದೆ. ರಾತ್ರಿಯಿಡೀ ಶ್ರವಣ ಉಪಕರಣಗಳನ್ನು ಈ ಸಾಧನದಲ್ಲಿ ಇಟ್ಟಲ್ಲಿ ಯಾವುದೇ ಹೆಚ್ಚುವರಿ ತೇವಾಂಶ ಇದ್ದರೆ ಅದನ್ನು ಇದು ಹೀರಿಕೊಳ್ಳುತ್ತದೆ. ಶ್ರವಣ ಉಪಕರಣಗಳಿಗಾಗಿ ತಯಾರಿಸಿದ ಡಿಹ್ಯೂಮಿಡಿಫೈಯರ್‌ ಬಾಕ್ಸ್‌ ಉತ್ತಮ ಆಯ್ಕೆಯಾಗಿದ್ದು, ಇದು ಎಲ್ಲ ವೆಚ್ಚದ ಹಂತಗಳಲ್ಲಿ ಬರುತ್ತದೆ. ಆದರೆ ಇದು ಮುಕ್ತಾಯ ಅವಧಿಯನ್ನು ಹೊಂದಿದೆ. ಕಂಪೆನಿಯ ಆಧಾರದ ಮೇಲೆ ಮುಕ್ತಾಯದ ಅವಧಿ 2-3 ತಿಂಗಳುಗಳು ಅಥವಾ 6 ತಿಂಗಳವರೆಗೆ ಇರಬಹುದು.

 ಡ್ರೆ„ಯಿಂಗ್‌ ಕಿಟ್‌ಗಳು ಎಲೆಕ್ಟ್ರಾನಿಕ್ಸ್‌ ಅನ್ನು ರಕ್ಷಿಸಲು ಸಿಲಿಕಾ ಜೆಲ್‌ ಹರಳು ಅಥವಾ ಮೈಕ್ರೋ ಬೀಡ್‌ಗಳನ್ನು ಅವಲಂಬಿಸಿವೆ. ಈ ಹರಳುಗಳು ತೇವಾಂಶವನ್ನು ಹೀರಿಕೊಳ್ಳುತ್ತವೆ. ಒಂದು ನಿರ್ದಿಷ್ಟ ಅವಧಿಯ ಅನಂತರ ಈ ಹರಳುಗಳು ಬಣ್ಣವನ್ನು ಬದಲಾಯಿ ಸುತ್ತವೆ. ಬಣ್ಣವನ್ನು ಬದಲಾಯಿಸಿದ ಅನಂತರ ನೀವು ಅದನ್ನು ಪುನಃ ಸಕ್ರಿಯಗೊಳಿಸಬೇಕಾಗಬಹುದು. ಇದಕ್ಕೆ ಸಂಬಂಧಿತ ಸೂಚನೆಗಳನ್ನು ಆ ಬಾಕ್ಸ್‌ನಲ್ಲಿ  ನೀಡಲಾಗುತ್ತದೆ ಅಥವಾ ಇದರ ಬಗ್ಗೆ ನೀವು ನಿಮ್ಮ ಆಡಿಯಾಲಜಿಸ್ಟ್‌ (ಶ್ರವಣ ತಜ್ಞ)ರೊಂದಿಗೆ ವಿಚಾರಿಸಬಹುದು.

 ನಿಮ್ಮ ಮಷೀನನ್ನು ಹಾಕದೆ ಇದ್ದಾಗ ಅಥವಾ ಡ್ರೆ„ಯಿಂಗ್‌ ಕಿಟ್‌ನಲ್ಲಿ ಇಟ್ಟಾಗ ಬ್ಯಾಟರಿ ಬಾಗಿಲು ತೆರೆಯಲು ಮರೆಯಬೇಡಿ. ನೀವು ಶ್ರವಣ ಸಾಧನವನ್ನು ಕೆಳಗಿಳಿಸುವ ಮೊದಲು ಆ ಬಾಗಿಲನ್ನು ತೆರೆದು ಎಳೆಯುವ ಮೂಲಕ ನೀವು ಬ್ಯಾಟರಿಗಳು ಮತ್ತು ಇತರ ಅಂಶಗಳನ್ನು ಗಾಳಿಗೆ ಒಡ್ಡುತ್ತೀರಿ ಹಾಗೂ ನಿರ್ಮಿಸಿದ ಯಾವುದೇ ಘನೀಕರಣವು ನೈಸರ್ಗಿಕವಾಗಿ ಆವಿಯಾಗಲು ಅನುವು ಮಾಡಿಕೊಡುತ್ತೀರಿ. ಇದನ್ನು ಬೇಸಗೆಗಾಲದಲ್ಲಿ ಮಾತ್ರವಲ್ಲದೆ ವರ್ಷಪೂರ್ತಿ ಅನುಸರಿಸಬೇಕು

ಕ್ಷೇತ್ರ ಅಧ್ಯಯನದ ಪ್ರಕಾರ ರಿಲೇಟಿವ್‌ ಹ್ಯೂಮಿಡಿಟಿ ಪ್ರಮಾಣ (ಆರ್‌ಎಚ್‌)ಕ್ಕೂ ಕಿವಿಯ ತಮಟೆಗೆ ಶ್ರವಣ ಸಾಧನದ ರಿಸೀವರ್‌ನ ಸಾಮೀಪ್ಯ ಹಾಗೂ ರಿಸೀವರ್‌ ಸಂಬಂಧಿತ ಸಮಸ್ಯೆಗಳೊಂದಿಗೆ ಪರಸ್ಪರ ಸಂಬಂಧವಿದೆ. ರಿಲೇಟಿವ್‌ ಹ್ಯೂಮಿಡಿಟಿ ಪ್ರಮಾಣ (ಆರ್‌ಎಚ್‌) ಶೇ. 60ಕ್ಕಿಂತ ಹೆಚ್ಚು ಇದ್ದಲ್ಲಿ ರಿಸೀವರ್‌ ವೈಫಲ್ಯಗಳು ಕಂಡುಬರುತ್ತದೆ ಹಾಗೂ ಶೇ. 40 ಅಥವಾ ಅದಕ್ಕಿಂತ ಕಡಿಮೆ ಪ್ರಮಾಣವಿದ್ದಲ್ಲಿ ರಿಸೀವರ್‌ ಸಮಸ್ಯೆಗಳು ಕಂಡುಬರುವುದು ವಿರಳ.

ಕಿವಿಯ ಹೊರಗೆ ಧರಿಸುವಂತಹ ಶ್ರವಣ ಉಪಕರಣಗಳಿಗೆ ಹೋಲಿಸಿದರೆ ಕಿವಿಯ ಒಳಗೆ ಧರಿಸುವಂತಹ ಶ್ರವಣ ಉಪಕರಣಗಳ ರಿಸೀವರ್‌ ಕಿವಿಯ ತಮಟೆಗೆ ಹತ್ತಿರವಾಗಿದ್ದು, ಇದರಲ್ಲಿ ರಿಲೇಟಿವ್‌ ಹ್ಯೂಮಿಡಿಟಿ ಪ್ರಮಾಣ ಶೇ. 60ಕ್ಕಿಂತ ಹೆಚ್ಚಾಗಿರುತ್ತದೆ. ಹಾಗಾಗಿ ಇದರಲ್ಲಿ ತೇವಾಂಶ ಹಾಗೂ ಕುಗ್ಗೆ (ಇಯರ್‌ವ್ಯಾಕ್ಸ್‌) ಸಂಬಂಧಿತ ಸಮಸ್ಯೆಗಳು ಸಂಭವಿಸುವುದು ಸರ್ವೇ ಸಾಮಾನ್ಯ. ಹಾಗಾಗಿ ಕಿವಿಯ ಹೊರಗೆ ಧರಿಸುವಂತಹ ಶ್ರವಣ ಸಾಧನಗಳು ಕಿವಿಯ ಒಳಗೆ ಧರಿಸುವಂತಹ ಶ್ರವಣ ಸಾಧನಗಳಿಗಿಂತ ಉತ್ತಮ.

ಸೂಚನೆ: ತೇವಾಂಶದ ಕಾರಣದಿಂದಾಗಿ ಕಿವಿಯ ಉಪಕರಣಗಳು ಕಾರ್ಯವಹಿಸುವುದನ್ನು ತನ್ನಿಂತಾನೇ ತತ್‌ಕ್ಷಣ ಸಂಪೂರ್ಣವಾಗಿ ನಿಲ್ಲಿಸುತ್ತದೆ.

ಹೊರಗಿನ ತೇವಾಂಶದಿಂದ ಶ್ರವಣ ಉಪಕರಣಕ್ಕೆ ಏನು ಹಾನಿಯಾಗಿದೆ ಎಂದು ನಾವು ನೋಡಲು ಸಾಧ್ಯವಿಲ್ಲ. ಕೆಳಗಿನ ಚಿತ್ರವು ಶ್ರವಣ ಸಾಧನದೊಳಗಿನ ಭಾಗಗಳು ಹಾಗೂ ತೇವಾಂಶವು ಶ್ರವಣ ಸಾಧನವನ್ನು ಹೇಗೆ ನಾಶಪಡಿಸುತ್ತದೆ / ಹಾಳುಮಾಡುತ್ತದೆ ಎಂಬುದನ್ನು ತೋರಿಸುತ್ತದೆ.

ತೇವಾಂಶ ಹಾನಿಯಿಂದಾಗಿ ಈ  ಕೆಳಗಿನ ಹಾನಿಯುಂಟಾಗಬಹುದು:

 ಧ್ವನಿ ವಿರೂಪಗೊಳ್ಳುವುದು

ದೊಡ್ಡ ಶಬ್ದಗಳ ಸಮಯದಲ್ಲಿ ಧ್ವನಿ ಕಡಿತಗೊಳ್ಳುವುದು

 ಒಳಗೆ ಮತ್ತು ಹೊರಗೆ ಧ್ವನಿ ಮಸುಕಾಗುವುದು

ಶ್ರವಣ ಉಪಕರಣವು ಬಿಟ್ಟು ಬಿಟ್ಟು ಕಾರ್ಯ ನಿರ್ವಹಿಸುವುದು

ನೂತನ್ಎನ್‌. ಕಾಮತ್

ಚಿನ್ಮಯಿ ಕಾಮತ್

ಇಂಟರ್ನ್

ಡಾ| ಕಿಶನ್ಎಂ.ಎಂ.

ಅಸೋಸಿಯೇಟ್ಪ್ರೊಫೆಸರ್‌,

ಸ್ಪೀಚ್ಅಂಡ್ಹಿಯರಿಂಗ್ವಿಭಾಗ, ಎಂಸಿಎಚ್ಪಿ, ಮಣಿಪಾಲ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.