ಸ್ಟಾರ್‌ ಹೋಟೆಲ್‌ ನಡುವೆ “ಸ್ಟಾರ್‌’ಗಳ ಹೋಟೆಲ್‌ ;ಚಂದ್ರು, ನಿಮ್ಮ ಮನೆ 

ಅಣ್ಣಾವ್ರ ಮನ ಗೆದ್ದ ನಾಟಿ ರುಚಿ

Team Udayavani, Jun 29, 2019, 3:02 PM IST

ಆ ಕ್ರಸೆಂಟ್‌ ರಸ್ತೆಯಲ್ಲಿ ಸಾಲು ಸಾಲಾಗಿರೋದು, ಬರೀ ಸ್ಟಾರ್‌ ಹೋಟೆಲ್‌ಗ‌ಳು. “ದೊಡ್ಡವ್ರ ಬೀದಿ’ ಅಂತಲೇ ಅದನ್ನು ಕರೆ ಯು ವು ದುಂಟು. ಆ ಸ್ಟಾರ್‌ ಹೋಟೆಲ್‌ ಗಳ ನಡುವೆ ಕಣ್ಣಿಗೆ ಕಂಡೂ ಕಾಣದ ಹಾಗೆ, ಒಂದು ಪುಟ್ಟ ಹೋಟೆಲ್‌ ಇದೆ. ಬೆಳಗ್ಗೆ 11 ಗಂಟೆ ದಾಟಿತು ಎಂದರೆ, ಮಧ್ಯಾಹ್ನ 3ರ ತನಕ ಆ ಪುಟ್ಟ ಹೋಟೆಲ್‌ ಎದುರು ಜನಜಾತ್ರೆ. ಅದೇನು ಪರಿಮಳ ಅಂತೀರಿ… ರಸ್ತೆಯಲ್ಲಿ ಹಾಗೆ ಸುಮ್ಮನೆ ನಡೆದು ಹೋಗ್ತಿದ್ರೆ, ಒಮ್ಮೆ ಈ ಹೋಟೆಲ್‌ ಒಳಗೆ ಹೋಗಿ, ಏನಾದ್ರೂ ತಿಂದು ಬರೋಣ ಅನ್ನೋ ಆಸೆ ಹುಟ್ಟುತ್ತೆ.

ಚಿಕನ್‌, ಮಟನ್‌ ಖಾದ್ಯಗಳ ವಿಭಿನ್ನ ರುಚಿಯಿಂದಲೇ ಮನೆಮಾತಾದ ಹೋಟೆಲ್‌, “ಚಂದ್ರು, ನಿಮ್ಮ ಮನೆ’! ಇದರ ಮಾಲೀಕರು, ಶೇಷಾದ್ರಿಪುರಂನ ಚಂದ್ರಶೇಖರ್‌. 26 ವರ್ಷಗಳಿಂದ ಈ ಹೋಟೆಲ್‌ ನಡೆಸುತ್ತಾ, ಸ್ನೇಹಜೀವಿಯಾಗಿಯೂ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ, ಚಂದ್ರು ಅವರು ಹೋಟೆಲ್‌ ಆರಂಭಿಸುವ ಮೊದಲು, ವರನಟ ಡಾ. ರಾಜಕುಮಾರ್‌ ಅವರಿಗೆ ಮೇಕಪ್‌ ಅಸಿಸ್ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದರಂತೆ.

ಅದೊಂದು ಟರ್ನಿಂಗ್‌ ಪಾಯಿಂಟ್‌
ಚಂದ್ರು ಅವರ ತಾಯಿ, ಮನೆಯಲ್ಲಿ ರುಚಿಯಾಗಿ ಅಡುಗೆ ಮಾಡುತ್ತಿದ್ದರಂತೆ. ಮೇಕಪ್‌ ಮಾಡುತ್ತಿದ್ದರಲ್ಲ; ಅದೇ ಸಲುಗೆಯಲ್ಲಿ ಆಗೊಮ್ಮೆ ಈಗೊಮ್ಮೆ ತಮ್ಮ ಮನೆಯ ಊಟದ ರುಚಿಯನ್ನು ಅಣ್ಣಾವ್ರಿಗೆ ತೋರಿಸುವ ಅವಕಾಶ ಇವರಿಗೆ ಒದಗಿಬಂದಿತ್ತು. ಆ ರುಚಿ ಅಣ್ಣಾವ್ರ ಮನಸ್ಸನ್ನೂ ಗೆದ್ದಿತ್ತು. ಅದೇ ರುಚಿ ಜನರನ್ನೂ ತಲುಪಲಿ ಎಂಬ ರಾಜ್‌ಕುಮಾರ್‌ ಅವರ ಸಲಹೆ ಮೇರೆಗೆ ಈ ಹೋಟೆಲ್‌ ಹುಟ್ಟಿಕೊಂಡಿತಂತೆ. “ಅಮ್ಮನಿಂದ ಅಡುಗೆ ಕಲೆಯನ್ನು ಕಲಿತುಕೊಂಡೆ. ಅದೇ ರುಚಿಯನ್ನೇ ಗ್ರಾಹಕರಿಗೆ ಹಂಚುತ್ತೇನೆ’ ಎನ್ನುತ್ತಾರೆ ಚಂದ್ರು. ಈ ಹೋಟೆಲ್‌ನಲ್ಲಿ ಅವರ ಪತ್ನಿ ಹಾಗೂ ಮೂವರು ಕೆಲಸಗಾರರು ಸೇರಿ ಒಟ್ಟು ಐವರು ಕೆಲಸ ಮಾಡುತ್ತಿದ್ದಾರೆ.

ಇಲ್ಲಿನ ಟೇಸ್ಟೇ, ಸೂಪರ್‌ ಹಿಟ್‌
“ಚಂದ್ರು, ನಿಮ್ಮ ಮನೆ’ ಹೋಟೆಲ್‌ನ ಊಟಕ್ಕೂ ಮನೆಯ ಊಟಕ್ಕೂ ಜಾಸ್ತಿ ವ್ಯತ್ಯಾಸವೇನೂ ಇಲ್ಲ. ಅದರಲ್ಲೂ ಚಿಕನ್‌, ಮಟನ್‌ನ ವೆರೈಟಿಗಳ ರುಚಿ ಇಲ್ಲಿ ಸೂಪರ್‌ ಹಿಟ್‌ ಆಗಿದೆ. ನಾಟಿಕೋಳಿ ಊಟ, ಪೆಪ್ಪರ್‌ ಚಿಕನ್‌, ಮಟನ್‌ ಚಾಪ್ಸ್‌, ಕೈಮಾ ಸಾರು, ಚಿಕನ್‌ ಬಿರಿಯಾನಿ ಸೇರಿದಂತೆ 19 ವಿವಿಧ ಐಟಂಗಳನ್ನು ಇಲ್ಲಿ ಬಹಳ ರುಚಿಕಟ್ಟಾಗಿ ತಯಾರಿಸಲಾಗುತ್ತದೆ. ಮುದ್ದೆಯೂಟವೂ ಇಲ್ಲಿದೆ.

ಪುಟ್ಟ ಜಾಗ… ಆದರೆ, ಹೌಸ್‌ಫ‌ುಲ್‌!
ನೀವು ನಂಬಿ¤àರೋ, ಇಲ್ಲವೋ… ಈ ಹೋಟೆಲ್‌ ಇರೋದೇ 10*10 ವಿಸ್ತೀರ್ಣದಲ್ಲಿ. ಆದರೆ, ಈ ಹೋಟೆಲಿಗೆ ಒಂದು ದಿನಕ್ಕೆ 250ರಿಂದ 300 ಜನ ಊಟ ಮಾಡಲು ಬರುತ್ತಾರೆ! ಇಲ್ಲಿನ ಊಟದ ಬೆಲೆಯೂ ಅಷ್ಟೇ. 100 ರಿಂದ 140 ರೂ. ವರೆಗೆ ಹೊಟ್ಟೆ ತುಂಬಿ ಹೋಗುವ ಟೇಸ್ಟಿ ಊಟ. ನಾನ್‌ವೆಜ್‌ ಅಂದಮೇಲೆ 100 ರುಪಾಯಿ, ಕಡಿಮೆ ಮೊತ್ತವೆಂದೇ ಹೇಳಬಹುದು. ಹಾಗಾಗಿ, ಬಡವ, ಬಲ್ಲಿದರೆಲ್ಲಾ ಈ ಹೋಟೆಲಿಗೆ ನಾಮುಂದು-ತಾಮುಂದು ಎಂಬಂತೆ ಬರುತ್ತಾರೆ.
ಈ ಹೋಟೆಲಿಗೆ ಪ್ರತಿ ಸೋಮವಾರ ರಜೆ. ಉಳಿದ ದಿನಗಳಲ್ಲಿ 11 ರಿಂದ 3ರ ವರೆಗೂ ಇಲ್ಲಿ ರುಚಿಕರವಾದ ಮಾಂಸಾಹಾರಿ ಊಟ ಲಭ್ಯ. ನೀವೇನಾದರೂ, ಕ್ರಸೆಂಟ್‌ ರಸ್ತೆಯತ್ತ ಸವಾರಿ ಹೊರಟರೆ, ಇಲ್ಲಿ ಊಟ ಮಾಡೋದನ್ನು ಮರೆಯಬೇಡಿ.

ಅಣ್ಣಾವ್ರಿಂದ ರಜನಿ ವರೆಗೆ…
ಪುಟ್ಟ ಹೋಟೆಲ್‌ ಆದರೂ, ಸ್ಟಾರ್‌ಗಳ ನೆಚ್ಚಿನ ಹೋಟೆಲ್‌ ಇದು. ಡಾ. ರಾಜ್‌ಕುಮಾರ್‌ ಮಾತ್ರವೇ ಅಲ್ಲ. ರಜನೀಕಾಂತ್‌ ಕೂಡ ಚಂದ್ರು ಅವರ ಹೋಟೆಲ್‌ನ ದೊಡ್ಡ ಅಭಿಮಾನಿ. ರೆಬೆಲ್‌ ಸ್ಟಾರ್‌ ಅಂಬರೀಶ್‌ ಕೈಯಲ್ಲಿ “ಟೇಸ್‌ ಮಸ್ತಾಗೈತೆ ಕಣ್ಲಾ’ ಎಂದು ಶಹಬ್ಟಾಶ್‌ ಗಿಟ್ಟಿಸಿಕೊಂಡಿದ್ದಾರೆ, ಚಂದ್ರು. ಶ್ರೀಮುರಳಿಯಂಥ ಯುವನಟರನ್ನೂ ಇದು ಆಕರ್ಷಿಸಿದೆ.

ನನಗೆ ಜನರ ಹಸಿವನ್ನು ನೀಗಿಸುವ ಅವಕಾಶ ಸಿಕ್ಕಿದೆ. ಗ್ರಾಹಕರ ಹಾರೈಕೆಯಿಂದ ಈ ಹೋಟೆಲ್‌ ತುಂಬಾ ಚೆನ್ನಾಗಿ ನಡೆಯುತ್ತಿದೆ. ಅವರ ಆಶೀರ್ವಾದ ಇರುವವರೆಗೂ ನನ್ನ ಕಾರ್ಯ ಮುಂದುವರಿಯುತ್ತದೆ.
– ಚಂದ್ರಶೇಖರ್‌, ಮಾಲೀಕ

ನಾನು ಸುಮಾರು 9 ವರ್ಷಗಳಿಂದ ಇಲ್ಲಿಗೆ ಬರುತ್ತಿದ್ದೇನೆ. ಇಲ್ಲಿನ ಊಟ ನನಗಂತೂ ತುಂಬಾ ಹಿಡಿಸಿದೆ. ನಾಟಿಕೋಳಿ ಸಾರಂತೂ ಮಸ್ತ್.
– ರಮೇಶ್‌, ಗ್ರಾಹಕ

ಉಮೇಶ್‌ ರೈತನಗರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬಿಸಿಲಿಗೂ ಬೆದರದೆ, ಮಳೆಗೂ ಜಗ್ಗದೆ, ಚಳಿಗೂ ಕುಗ್ಗದೆ ಡ್ಯೂಟಿ ಮಾಡುವ ಟ್ರಾಫಿಕ್‌ ಪೊಲೀಸರಿಗೆ ನೆರಳು ಒದಗಿಸಲು, ಅಂಬ್ರೆಲ್ಲಾಗಳು ನಗರದಾದ್ಯಂತ ಅರಳುತ್ತಿವೆ....

  • ಬಹುತೇಕ ಭಾರತೀಯ ಸಂಸ್ಕೃತಿಗೆ ಹತ್ತಿರವಿರುವ ದೇಶ ಶ್ರೀಲಂಕಾ. ಈ ಸಾಂಸ್ಕೃತಿಕ ಬೆಸುಗೆಗೆ ಕಾರಣ, ರಾಮಾಯಣದ ಖಳನಾಯಕ ರಾವಣ. ರಾವಣನ ಆ ಸಾಮ್ರಾಜ್ಯ ಈಗ ಹೇಗಿದೆ ಎಂಬುದರ...

  • ಮಲೆನಾಡಿನ ಕಲೆಯ ಮತ್ತೂಂದು ಭಾಗವಾದ ಜೋಗಿಗಳು, ಕಾಡುಸಿದ್ದರು, ಹೆಳವರು ಈ ನಾಟಕವನ್ನು ನಿರೂಪಿಸುವ ಬಗೆ ಬಲುಚೆಂದ... ಕುವೆಂಪು ಸರ್ವ ಶತಮಾನಗಳಿಗೂ ಸಲ್ಲುವ ಕವಿ....

  • ಎಲ್ಲಿ ನೋಡಿದರಲ್ಲಿ ಬರೀ ಪುಸ್ತಕಗಳು. ಸಾರ್ವಜನಿಕ ಲೈಬ್ರರಿ ಇರಬೇಕು ಎಂದುಕೊಂಡರೆ, ನಿಮ್ಮ ಊಹೆ ಶುದ್ಧ ಸುಳ್ಳು. ಈ "ಬುಕ್‌ ವರ್ಲ್ಡ್' ಅನ್ನು ಶ್ರದ್ಧೆಯಿಂದ ಕಟ್ಟಿದವರು,...

  • ಮೀನು ಹೋಟೆಲ್‌ ಅಂದ್ರೆ, ಕ್ಲೀನ್‌ ಇದೆಯಾ ಅಂತ ಜನ ಮೊದಲು ನೋಡುತ್ತಾರೆ. ಕ್ಲೀನ್‌ ಇದ್ದರೂ, ಕರಾವಳಿ ಶೈಲಿಯಲ್ಲಿ ಅಡುಗೆ ತಯಾರಿಸಲು ಬಾಣಸಿಗರು ಪರಿಣತರಾ?- ಅಂತಲೂ...

ಹೊಸ ಸೇರ್ಪಡೆ