ಫಿಟ್‌ನೆಸ್‌ ಮೇಳ

Team Udayavani, Feb 9, 2019, 1:18 AM IST

ಆರೋಗ್ಯಕರ ಜೀವನಶೈಲಿಯನ್ನು ಅನುಸರಿಸುವ ಬಗ್ಗೆ ಬೆಂಗಳೂರು ವಾಸಿಗಳು ಹೆಚ್ಚಿನ ಒಲವು ತೋರುತ್ತಿದ್ದಾರೆ. ಬಹುಸಂಖ್ಯೆಯಲ್ಲಿ ಜನರು ಜಿಮ್‌ ಮತ್ತು ಫಿಟ್‌ನೆಸ್‌ ಸ್ಟುಡಿಯೋಗಳಿಗೆ ಸೇರಿಕೊಳ್ಳುವುದು, ಆರೋಗ್ಯಕರ ಆಹಾರ ಪದ್ಧತಿಗೆ ಮಾರು ಹೋಗುತ್ತಿರುವುದು ಅದರ ಪರಿಣಾಮವೇ. ದೇಶದಲ್ಲಿ ಫಿಟ್‌ನೆಸ್‌ ಕಾಳಜಿ ಹೊಂದಿರುವ ನಗರಗಳಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿದೆ. ನಂತರ ಮುಂಬೈ, ಬೆಂಗಳೂರು ಮತ್ತಿತರ ನಗರಗಳಿವೆ. ಈ ಅಂತರವನ್ನು ಕಡಿಮೆ ಮಾಡಿ ಬೆಂಗಳೂರನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಫಿಟ್‌ನೆಸ್‌ ಮೇಳವೊಂದು ಆಯೋಜನೆಗೊಂಡಿದೆ. 6ರಿಂದ 60 ವಯೋಮಾನದವರು ಯಾರು ಬೇಕಾದರೂ ಈ ಫಿಟ್‌ನೆಸ್‌ ಮೇಳದಲ್ಲಿ ಪಾಲ್ಗೊಳ್ಳಬಹುದು. 22 ಫಿಟ್‌ನೆಸ್‌ ತರಬೇತುದಾರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಮೇಳದಲ್ಲಿ ಕಾರ್ಯಾಗಾರಗಳು, ಉಪನ್ಯಾಸ, ಮಕ್ಕಳ ಫಿಟ್‌ನೆಸ್‌ ಕುರಿತ ಮಾಹಿತಿ, ಸ್ಪರ್ಧೆಗಳು, ಫಿಟ್ ಫ‌ುಡ್‌ ಮಾರ್ಕೆಟ್ ಇರಲಿದೆ.ಕಾರ್ಯಾಗಾರಗಳುವರ್ಕ್‌ ಔಟ್, ಕಳರಿಪಯಟ್ಟು, ನಿಂಜಾ ಫಿಟ್, ಯೋಗ ಮತ್ತು ಆಕ್ವಾ ಏರೋಬಿಕ್ಸ್, ಕ್ಯಾಲಿಸ್ತೆನಿಕ್ಸ್, ದಿ ಫ್ಯಾಂಟಮ್‌ ವರ್ಕ್‌ಔಟ್ ಸೇರಿದಂತೆ 30ಕ್ಕೂ ಹೆಚ್ಚಿನ ಸೆಷನ್‌ಗಳಲ್ಲಿ ಮಕ್ಕಳಿಗೆ ಯೋಗ, ಬ್ರೇಕ್‌ ಫಾÓr್ ಬೌಲ್‌ ಮಾಸ್ಟರ್‌ ಕ್ಲಾಸ್‌, ಮೈಂಡ್‌ ಫ‌ುಲ್‌ ಈಟಿಂಗ್‌, ಆಹಾರ ಮತ್ತು ಪೌಷ್ಟಿಕಾಂಶದ ಕುರಿತ ಕಾರ್ಯಗಾರಗಳು ನಡೆಯಲಿವೆ. ಶ್ವೇತಾ ಸುಬ್ಬಯ್ಯ, ಸಿಂಡಿ, ಡೆಲ್ಸನ್‌, ಜಯಾ ಮತ್ತು ಆಶಿಮಾ ಮುಂತಾದ ಫಿಟ್‌ನೆಸ್‌ ತರಬೇತುದಾರರು ಪಾಲ್ಗೊಳ್ಳುತ್ತಿದ್ದಾರೆ.ಎಲ್ಲಿ?: ಯು.ಬಿ.ಸಿಟಿ, ವಿಠಲ್‌ ಮಲ್ಯ ರಸ್ತೆ ಯಾವಾಗ?: ಫೆ. 9- 10, ಬೆಳಗ್ಗೆ 7- ಸಂಜೆ 5.30

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  •   ರಾಜಧಾನಿಯ ಆಭರಣಪ್ರಿಯರಿಗೆ, ಇದೊಂದು ಸುಗ್ಗಿ. ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನವಾದ ಜ್ಯುವೆಲ್ಸ್‌ ಆಫ್ ಇಂಡಿಯಾ ಅಕ್ಟೋಬರ್‌ 18ರಿಂದ ನಗರದಲ್ಲಿ ನಡೆಯುತ್ತಲಿದೆ....

  • ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ....

  • ಸಸ್ಯಾಹಾರ ಪ್ರಿಯರಿಗೊಂದು ಸ್ವರ್ಗ ಸೃಷ್ಟಿಯಾಗಿದೆ. ಸಸ್ಯಾಹಾರದಲ್ಲಿ ಎಂತೆಂಥ ರುಚಿಕಟ್ಟಾದ ತಿನಿಸುಗಳಿವೆ ಅಂತ ತಿಳಿಯಲು, ಫ್ರಿಡಂ ಪಾರ್ಕ್‌ಗೆ ಬನ್ನಿ. ಅಲ್ಲಿ,...

  • ಬೌದ್ಧ ಭಿಕ್ಕುಗಳು ಧರಿಸುವ ಬಟ್ಟೆಯೇ "ಚೀವರ'. ಯಾರೋ ಒಬ್ಬ ದರ್ಜಿ ಹೊಲಿದು ಕೊಡುತ್ತಾನೆ, ಭಿಕ್ಕುಗಳು ಅದನ್ನು ಮೈಮೇಲೆ ಧರಿಸುತ್ತಾರೆ ಎನ್ನುವ ಸಂಗತಿಯಾಗಿದ್ದರೆ,...

  • ಸೀರೆಯೆಂದರೆ, ನೀರೆಗೆ ಪ್ರಾಣ. ಹಾಗೆ ಖರೀದಿಸುತ್ತಲೇ, ಮನೆಯ ಕಪಾಟು ತುಂಬಿ, ಅವು ಕೆಲವೇ ದಿನಗಳಲಿ "ಹಳೇ ಸೀರೆ' ಎಂಬ ಹಣೆಪಟ್ಟಿ ಹೊತ್ತುಕೊಳ್ಳುತ್ತವೆ. ನಿಮ್ಮ ಮನೆಯ...

ಹೊಸ ಸೇರ್ಪಡೆ

  • ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ ವಾರ್ಷಿಕ ತೆರಿಗೆ ಸಂಗ್ರಹದ ಅಂಕಿಅಂಶವನ್ನು ಇಂದು ಬಿಡುಗಡೆಗೊಳಿಸಿದೆ. ಮಹಾರಾಷ್ಟ್ರ, ದಿಲ್ಲಿ ಮತ್ತು ಕರ್ನಾಟಕ ಈ ಮೂರು...

  • ಉಡುಪಿ: ಮಣಿಪಾಲ ಕೆಎಂಸಿಯ ಫಾರ್ಮಕಾಲಜಿ ವಿಭಾಗ ಮತ್ತು ಎಂಐಟಿಯ ಮಾಹಿತಿ ಮತ್ತು ಸಂವಹನ ವಿಭಾಗಗಳು ರೋಗಿಗಳ ಸುರಕ್ಷೆಗಾಗಿ ಔಷಧಗಳ ಪ್ರತಿಕೂಲ ಪರಿಣಾಮಗಳನ್ನು ವರದಿ...

  • ಜಲಮುನಿಗಳು ಅನ್ನುವ ಒಬ್ಬ ಗುರುಗಳಿದ್ದರು. ಅವರು ನೀರಿನ ಮೇಲೆ ನಡೆದಾಡುವ, ಓಡುವ, ಕುಳಿತುಕೊಳ್ಳುವ, ನಿದ್ದೆ ಮಾಡುವ ಸಿದ್ದಿಯನ್ನು ಗಳಿಸಿಕೊಂಡಿದ್ದರು. ಅದನ್ನು...

  • ಮಂಗಳೂರು: ಬಹುಭಾಷಾ ನಟ ಅರ್ಜುನ್‌ ಸರ್ಜಾ ಅವರು ಚೆನ್ನೈಯ ಗೇರುಗಂಬಕ್ಕಂನಲ್ಲಿ ನಿರ್ಮಿಸುತ್ತಿರುವ ಬೃಹತ್‌ ಹನುಮಾನ್‌ ದೇವಸ್ಥಾನಕ್ಕೆ ಅಗತ್ಯವಾಗಿರುವ ಮರದ...

  • ಬಂಟ್ವಾಳ/ ಮಂಗಳೂರು: ರಾಜ್ಯ ಗೃಹಸಚಿವ ಬಸವರಾಜ ಬೊಮ್ಮಾಯಿ ಅವರು ಅ. 24ರಂದು ದ.ಕ. ಜಿಲ್ಲಾ ಪ್ರವಾಸ ನಡೆಸಲಿದ್ದು, ಬೆಳಗ್ಗೆ 8.40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ...