ಹಡಗಿನ ಬೆಡಗಿನ ಹೋಟೆಲ್‌

Team Udayavani, Sep 15, 2018, 11:54 AM IST

98.jpg

ಥೀಮ್‌ ಪಾರ್ಕುಗಳಲ್ಲಿ ವೈಭವೋಪೇತ ಸೆಟ್‌ಗಳನ್ನು ಹಾಕಿರುತ್ತಾರೆ. ಆದರೆ ರೆಸ್ಟೋರೆಂಟಿನಲ್ಲಿ ಸೆಟ್‌ ಹಾಕಿರುವುದನ್ನು ನೋಡಿದ್ದೀರಾ? ಅದರಲ್ಲೂ ಹಡಗಿನ ಸೆಟ್‌! ಹಾಗಿದ್ದರೆ ನೀವೊಮ್ಮೆ ಕೋರಮಂಗಲದಲ್ಲಿರುವ “ದಿ ಬ್ಲ್ಯಾಕ್‌ ಪರ್ಲ್’ ರೆಸ್ಟೋರೆಂಟನ್ನು ನೋಡಬೇಕು… 

ಕಡಲ್ಗಳ್ಳರ ಕುರಿತಾದ ರೋಮಾಂಚಕ ಹಾಲಿವುಡ್‌ ಸಿನಿಮಾ “ಪೈರೇಟ್ಸ್‌ ಆಫ್ ದಿ ಕೆರೆಬಿಯನ್‌’. ಈ ಸಿನಿಮಾದ ಐದೂ ಅವತರಣಿಕೆಗಳು ಬಾಕ್ಸಾಫೀಸಿನಲ್ಲಿ ಹಿಟ್‌ ಎನಿಸಿಕೊಂಡಿದ್ದವು. ಇದು ನಾಯಕ ನಟ ಜಾನಿ ಡೆಪ್‌ಗೆ ಮರುಜೀವ ನೀಡಿದ ಚಿತ್ರವೂ ಹೌದು. ಈ ಸಿನಿಮಾದಲ್ಲಿ ಆತ ಕಡಲ್ಗಳ್ಳ, ಆತನ ಮಾಯಾವಿ ಹಡಗಿನ ಹೆಸರೇ “ಬ್ಲ್ಯಾಕ್‌ ಪರ್ಲ್’. ಅದರಿಂದಲೇ ಪ್ರೇರಣೆ ಪಡೆದಿದೆ ಈ ರೆಸ್ಟೋರೆಂಟು.

ಹಡಗಿನರಮನೆ
ಒಳಗೆ ಕಾಲಿಟ್ಟರೆ ಹಡಗಿನೊಳಗೆ ಕಾಲಿಟ್ಟ ಅನುಭವವಾಗುವುದು. ಅಲ್ಲದೆ ಹಡಗಿನಲ್ಲಿರುವಂತೆ ಅಪ್ಪರ್‌ ಡೆಕ್‌, ಲೋಯರ್‌ ಡೆಕ್‌ ಕೂಡಾ ಇದೆ. ಮೇಲಿನಿಂದ ಕಾಣುವ ವಿಹಂಗಮ ನೋಟ ತುಂಬಾ ಚೆನ್ನಾಗಿರುತ್ತದೆ ಎನ್ನುವುದು ಗ್ರಾಹಕರ ಅಭಿಪ್ರಾಯ. ಇಲ್ಲಿನ ಕುರ್ಚಿ ಟೇಬಲ್‌ಗ‌ಳೂ ಬ್ರಿಟಿಷರ ಕಾಲದಲ್ಲಿ ತಯಾರಿಸಲ್ಪಟ್ಟಂತೆ ತೋರುತ್ತದೆ. ನಿಧಿಶೋಧನೆ ಕಡಲ್ಗಳ್ಳರ ಭಾಗವಾಗಿರುವುದರಿಂದ ನಕಲಿ ಅಸ್ಥಿಪಂಜರಗಳ ಗೊಂಬೆಯನ್ನೂ ತೂಗುಹಾಕಿದ್ದಾರೆ. ಅಂದ ಹಾಗೆ, ಅವು ಭಯ ಹುಟ್ಟಿಸುವುದಿಲ್ಲ. ಇಲ್ಲಿ ಗ್ರಾಹಕರಿಗೆ ಆಹಾರವನ್ನು ಸರ್ವ್‌ ಮಾಡುವವರು ಮಾಮೂಲಿ ಕೆಲಸಗಾರರಲ್ಲ, ಕಡಲ್ಗಳ್ಳರು. ಅಸಲಿ ಕಡಲ್ಗಳ್ಳರೇನಲ್ಲ, ಸರ್ವರ್‌ಗಳೇ ಕಡಲ್ಗಳ್ಳರ ವೇಷ ತೊಟ್ಟು ನಗುಮೊಗದಿಂದ ಗ್ರಾಹಕರನ್ನು ಸ್ವಾಗತಿಸುತ್ತಾರೆ. 
ವಾರಾಂತ್ಯದಲ್ಲಿ ಹೋಗುವುದಾದರೆ ಮುಂಚಿತವಾಗಿ ಟೇಬಲ್‌ ಬುಕ್‌ ಮಾಡುವುದು ಒಳಿತು.

ವೆಜ್‌ ಮತ್ತು ನಾನ್‌ವೆಜ್‌ ಭಕ್ಷ್ಯಗಳು
ಇಲ್ಲಿನ ಗ್ರಿಲ್‌ ಕೌಂಟರ್‌ನಲ್ಲಿ ನಾನ್‌ವೆಜ್‌ ತಿನಿಸುಗಳು ಮತ್ತು ಹಸಿ ತರಕಾರಿಗಳನ್ನು ಉಪ್ಪು, ಖಾರ ಹಾಕಿ ಬೇಯಿಸಿಕೊಡುತ್ತಾರೆ. ಇದಲ್ಲದೆ ಇನ್ನೂ ಹತ್ತು ಹಲವು ಬಗೆಯ ಸ್ಟಾರ್ಟರ್‌ಗಳು ಇಲ್ಲಿ ಲಭ್ಯ. ಮಚ್ಚಿ ಟಿಕ್ಕಾ, ರುಮಾಲಿ ರೋಟಿ, ಕ್ರಿಸ್ಪಿ ಪನೀರ್‌, ಮಶ್ರೂಮ್‌ ತಂದೂರಿ, ಎಗ್‌ ಕುರ್ಮಾ ರೆಸ್ಟೋರೆಂಟಿನ ವೈಶಿಷ್ಟé. ಭೋಜನಪ್ರಿಯರು ಇಲ್ಲಿನ ಬಫೆ ಪ್ರಯತ್ನಿಸಬಹುದು.

ಎಲ್ಲಿದೆ?: # 105, 5ನೇ ಬ್ಲಾಕ್‌, ಜ್ಯೋತಿ ನಿವಾಸ್‌ ಕಾಲೇಜ್‌ ರಸ್ತೆ, ಕೋರಮಂಗಲ
ಏನೇನು ಸ್ಪೆಷೆಲ್‌?: ಕಾರ್ನ್ ಫ್ರೈ, ಮಚ್ಚಿ ಟಿಕ್ಕಾ, ಮಶ್ರೂಮ್‌ ತಂದೂರಿ

ಟಾಪ್ ನ್ಯೂಸ್

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.