Udayavni Special

ನಗುವ ಅಮ್ಮನ ನೆನೆದು…

Team Udayavani, Feb 22, 2020, 6:08 AM IST

naguva-amma

ಕನ್ನಡ, ಹಿಂದಿ ಚಿತ್ರಭೂಮಿಕೆಗಳಲ್ಲಿ ನಟಿಸಿದ್ದ, ಹಿರಿಯ ಅಭಿನೇತ್ರಿ ಕಿಶೋರಿ ಬಲ್ಲಾಳ್‌ ಇತ್ತೀಚೆಗಷ್ಟೇ ಇಹವನ್ನು ಅಗಲಿದರು. ಆಪ್ತ ಬಳಗದಲ್ಲಿ ಅವರು ಬಿತ್ತಿದ ನೆನಪುಗಳು ನೂರಾರು…

ಸದಾ ನಗು ಮೊಗದ ಅಮ್ಮ, ಕಿಶೋರಿ ಬಲ್ಲಾಳ್‌. ನಾವು ಯಾವಾಗಲೂ ಅವರಿಗೆ, “ನಿಮಗೆ ದುಃಖದ ದೃಶ್ಯ ನಟಿಸಲು ಕೊಟ್ಟರೂ ನಗ್ತಾ ನಗ್ತಾನೆ ಅಳಿಸ್ತಿರಿ’ ಎಂದು ಕಿಚಾಯಿಸುತ್ತಿದ್ದೆವು. ಅದಕ್ಕೆ ಅವರು, “ಮತ್ತೆ ನಾನು, ಶಾರೂಖ್‌ ಖಾನ್‌ನನ್ನೇ ಅಳಿಸಿದೋಳಲ್ವೇ?’ ಅನ್ನೋರು. ನಮ್ಮ ಸ್ಪಂದನ ನಾಟಕ ತಂಡ ಮುಂಬೈಗೆ ಹೋದಾಗ, ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾಗಿದ್ದೆ.

ಅಗಿನ್ನೂ ಅವರದು ನಡು ವಯಸ್ಸು. ಆ ನಾಟಕೋತ್ಸವದಲ್ಲಿ ಅವರು ಪತಿ ಬಲ್ಲಾಳರ ಜತೆ ಓಡಾಡುವಾಗ ಸಡಗರ ಮನೆಮಾಡಿತ್ತು. ನಂತರದಲ್ಲಿ ಬಲ್ಲಾಳ್‌ ದಂಪತಿ, ಬೆಂಗಳೂರಿಗೆ ಬಂದು ನೆಲೆಸಿದರು. “ಪ್ರೇಮ ರಾಗ ಹಾಡು ಗೆಳತಿ’ ಚಿತ್ರದಲ್ಲಿ ನನ್ನ ತಂದೆ , ತಾಯಿಯ ಪಾತ್ರದಲ್ಲಿ ಅವರಿಬ್ಬರು ನಟಿಸಿದ್ದರು. ನನ್ನದು ಅದರಲ್ಲಿ ಮೂಕನ ಪಾತ್ರ. ನನಗಿಂತ ಕಿಶೋರಿ ಬಲ್ಲಾಳರೇ ಪಾತ್ರದಲ್ಲಿ ಲೀನವಾಗಿ ಬಹಳ ದುಃಖೀತರಾಗಿದ್ದನ್ನು ಕಂಡಿದ್ದೆ.

250ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದ ರಾಜೇಂದ್ರ ಕಾರಂತನ ನಮ್ಮ ನಾಟಕ “ನಮ್ಮ ನಿಮ್ಮೊಳಗೊಬ್ಬ’. ಈ ಟಿವಿಗಾಗಿ ಟಿಲಿಫಿಲ್ಮ್ನಂತೆ ಚಿತ್ರಿಸಲು ಸಿದ್ಧತೆ ನಡೆಸಿದ್ದಾಗ, ಕುಂದಾಪುರದ ಭಾಷೆಯ ಲಾಲಿತ್ಯವನ್ನು ಬಲ್ಲಂತ ಕಲಾವಿದೆ ಬೇಕಿತ್ತು. ಮುಂಚೆ ರಂಗನಟಿ ಶಾಂತತುಪ್ಪರವರು ಆ ಪಾತ್ರವನ್ನು ಮಾಡುತ್ತಿದ್ದರು. ಆದರೆ, ಆ ವೇಳೆಗೆ ಶಾಂತಾತುಪ್ಪಾ ತೀರಿಕೊಂಡಿದ್ದರು. ಬೇರೆ ಯಾರು ಎಂದು ಯೋಚಿಸುತ್ತಿದ್ದಾಗ ಹೊಳೆದದ್ದು ಕಿಶೋರಿ ಬಲ್ಲಾಳ್‌.

ಕೋರಮಂಗಲದ ಅವರ ಮನೆಗೆ ಹೋಗಿ, ಕೇಳಿಕೊಂಡಿದ್ದಕ್ಕೆ ನಮ್ಮ ನಾಟಕದ ಬಗ್ಗೆ ಕೇಳಿ ತಿಳಿದಿದ್ದ ಅವರು, ಬಹಳ ಖುಷಿಯಿಂದ ಒಪ್ಪಿಕೊಂಡಿದ್ದರು. ಹೈದರಾಬಾದ್‌ನಲ್ಲಿ 10 ದಿನಗಳ ಶೂಟಿಂಗು. ಅಷ್ಟೂ ದಿವಸ ಮಳೆಯ ಸನ್ನಿವೇಶದಲ್ಲಿ ನಟಿಸಬೇಕಿತ್ತು. ಅಷ್ಟು ಹಿರಿಯರಾದರೂ, ಮಕ್ಕಳಂತೆ ನಮ್ಮೊಡನೆ ಬೆರೆತು, ವಿಸ್ಮಯ ಮೂಡಿಸಿದ್ದರು.

ವಾರಕ್ಕೊಮ್ಮೆ ಅವರ ಫೋನು ಬರುತ್ತಲೇ ಇತ್ತು… “ಹೇಗಿದ್ದೀಯಾ? ಆರಾಮ?’ ಎಂದು. ಅವರ ಮನೆಗೆ ಹೋದರಂತೂ, ಭರ್ಜರಿ ಅತಿಥಿ ಸತ್ಕಾರ. ನಮ್ಮೆಲ್ಲರ ಪ್ರೀತಿಯ ಅಮ್ಮ, ಈಗ ಕಾಣಿಸುತ್ತಿಲ್ಲ. ನೆನಪಿನ ಕಲಾಕೃತಿಯಾಗಿ ನಮ್ಮ ಮನದೊಳಗೆ ನಿಂತಿದ್ದಾರೆ.

* ನಾಗೇಂದ್ರ ಶಾನ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಪ್ರಧಾನಿ ನಮೋ ‘ದೀಪ ಬೆಳಗಿಸೋಣ’ ಕರೆಗೆ ದೇಶವಾಸಿಗಳ ಅಭೂತಪೂರ್ವ ಸ್ಪಂದನೆ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ಮೋದಿ ಕರೆಯಂತೆ ಕೋವಿಡ್ 19 ವೈರಸ್ ಅಂಧಕಾರ ಹೊಡೆದೋಡಿಸಲು ದೇಶಾದ್ಯಂತ ಬೆಳಗಿದ ದೀಪ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ದಿಲ್ಲಿ ನಿಜಾಮುದ್ದೀನ್ ಮಸೀದಿಗೆ ಭೇಟಿ ನೀಡಿದ್ದ ದಕ್ಷಿಣ ಆಫ್ರಿಕಾ ಮೌಲ್ವಿ ಕೋವಿಡ್ ನಿಂದ ನಿಧನ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ