Udayavni Special

ಆರ್ಟ್‌ to ಹಾರ್ಟ್‌

ಇದು ದಿವ್ಯಾಂಗರ ಚಿತ್ರಸಂತೆ

Team Udayavani, Feb 22, 2020, 6:09 AM IST

art-to-hjeart

ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್‌ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಸಿಕೆಪಿಯಲ್ಲಿ ಇದಕ್ಕೆ ಉತ್ತರ ಸಿಗಲಿದೆ…

ಕೈ ಇದ್ದವರಿಗೆಲ್ಲ ಕಲೆ ಒಲಿಯುವುದಿಲ್ಲ ಎಂಬ ಮಾತಿದೆ. ಎಲ್ಲರೂ ಕಲಾವಿದರಾಗಲು ಸಾಧ್ಯವಿಲ್ಲ ಎಂಬುದು ಆ ಮಾತಿನ ಅರ್ಥ. ಹಾಗಾದರೆ, ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್‌ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ಚಿತ್ರಕಲಾ ಪರಿಷತ್‌ಗೆ ಬನ್ನಿ.

ಅಲ್ಲಿ, ಮೌತ್‌ ಆ್ಯಂಡ್‌ ಫ‌ುಟ್‌ ಪೇಟಿಂಗ್‌ ಆರ್ಟಿಸ್ಟ್‌ ಅಸೋಸಿಯೇಷನ್‌ (ಬಾಯಿ ಮತ್ತು ಪಾದ ಚಿತ್ರಕಲಾವಿದರ ಸಂಸ್ಥೆ) ವತಿಯಿಂದ ವಿಶೇಷಚೇತನ ಕಲಾವಿದರ ಚಿತ್ರ ಪ್ರದರ್ಶನ ಹಾಗೂ ಪ್ರತ್ಯಕ್ಷ ನಿರೂಪಣೆ ಹಮ್ಮಿಕೊಳ್ಳಲಾಗಿದೆ. 20 ಕಲಾವಿದರು ಭಾಗವಹಿಸುವ ಈ ಪ್ರದರ್ಶನವು, ಶನಿವಾರ ಸಂಜೆ 4-7ರವರೆಗೆ ನಡೆಯಲಿದೆ. ಕಲಾವಿದರು ಸ್ಥಳದಲ್ಲೇ ಚಿತ್ರಕಲೆಗಳನ್ನು ರಚಿಸಲಿದ್ದಾರೆ.

ಮೃದುಲ್‌ ಘೋಷ್‌: 1988ರಲ್ಲಿ ಜನಿಸಿದ ಮೃದುಲ್‌, 2010ರವರೆಗೆ ಭಾರತೀಯ ವಾಯುಸೇನೆಯಲ್ಲಿದ್ದರು. ಕರ್ತವ್ಯದ ಮಧ್ಯದಲ್ಲಿ ನಡೆದ ಅವಘಡದಲ್ಲಿ ಅವರ ಬೆನ್ನು ಹುರಿಗೆ ಪೆಟ್ಟುಬಿತ್ತು. ಚಿಕಿತ್ಸೆ ಪಡೆದರೂ ಪ್ರಯೋಜನವಾಗದೆ, ಮೃದುಲ್‌ ಸೇವೆಯಿಂದ ನಿವೃತ್ತರಾದರು. ಅಷ್ಟರಲ್ಲೇ 4 ಬಾರಿ ಪಾರ್ಶ್ವವಾಯುಗೆ ತುತ್ತಾಗಿದ್ದ ದೇಹ, ಶಾಶ್ವತವಾಗಿ ವ್ಹೀಲ್‌ಚೇರ್‌ಗೆ ಅಂಟಿಕೊಂಡಿತು. ಪುಣೆಯ ಪ್ಯಾರಾಪೆಲೆಜಿಕ್‌ ಪುನಃಶ್ಚೇತನ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುವಾಗ ಅವರು ಚಿತ್ರಕಲೆಯತ್ತ ಹೊರಳಿದರು. ನೆಲಕ್ಕೆ ಅಂಟಿಕೊಂಡ ಅವರ ಬದುಕಿಗೆ ಈಗ ಚಿತ್ರಕಲೆ ಹೊಸ ಬಣ್ಣ ತುಂಬಿದೆ.

ಜಿಲ್‌ಮೋಲ್‌ ಮ್ಯಾರಿಯೆಟ್‌ ಥಾಮಸ್‌: ಕೇರಳದ ಜಿಲ್‌ಮೋಲ್‌ಗೆ ಹುಟ್ಟಿನಿಂದಲೇ ಕೈಗಳಿಲ್ಲ. ಆದರೆ, ಕಾಲೆºರಳಿನ ಮೂಲಕ ಚಿತ್ರಕಲೆಯ ಜಾದೂವನ್ನೇ ಸೃಷ್ಟಿಸಬಲ್ಲರು. ಬರೆಯುವುದು, ಚಿತ್ರ ಬಿಡಿಸುವುದು ಸೇರಿದಂತೆ ಎಲ್ಲ ಕೆಲಸಗಳನ್ನೂ ಕಾಲಿನಿಂದಲೇ ಮಾಡಬಲ್ಲ ಅವರು, ಆ್ಯನಿಮೇಷನ್‌ ಆ್ಯಂಡ್‌ ಗ್ರಾಫಿಕ್‌ ಡಿಸೈನ್‌ನಲ್ಲಿ ಪದವಿ ಶಿಕ್ಷಣವನ್ನೂ ಮುಗಿಸಿದ್ದಾರೆ.

ಜನಾರ್ದನ್‌ ಕೇಶವನ್‌: ಆಗಿನ್ನೂ ಜನಾರ್ದನ್‌ಗೆ 4 ವರ್ಷ. ಮನೆಯ ಎದುರು ಆಟವಾಡುತ್ತಿದ್ದಾಗ ಹೈಟೆನ್ಶನ್‌ ವಿದ್ಯುತ್‌ ಲೈನ್‌ ತಗುಲಿ, ಬಲಕೈಯನ್ನು ಭುಜದಿಂದಲೇ ಶಸ್ತ್ರಚಿಕಿತ್ಸೆ ಮಾಡಿ ತೆಗೆಯಲಾಯಿತು. ಅಷ್ಟೇ ಅಲ್ಲ, ಎಡ ಕೈಯನ್ನು ಮೊಣಕೈವರೆಗೆ, ಬಲಗಾಲನ್ನು ಮಂಡಿಯವರೆಗೆ ತೆಗೆದರು. ಪುಟಾಣಿ ಜನಾರ್ದನನ ಬದುಕು ಮುಗಿದೇ ಹೋಯ್ತು ಅನ್ನುವಾಗ, ಆತ ಬಾಯಲ್ಲಿ ಬ್ರಶ್‌ ಹಿಡಿದು ಚಿತ್ರ ಬಿಡಿಸಲು ಆರಂಭಿಸಿದ. ಕ್ರಮೇಣ, ಚಿತ್ರ ಸ್ಪರ್ಧೆಗಳಲ್ಲಿ ಭಾಗವಹಿಸಿದ. ಪ್ರಶಸ್ತಿಯನ್ನೂ ಪಡೆದ. ಎರಡು ರಾಷ್ಟ್ರೀಯ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡಿರುವ ಜನಾರ್ದನ್‌ಗೆ, ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್‌ “ಬೆಸ್ಟ್‌ ಕ್ರಿಯೇಟಿವ್‌ ಚೈಲ್ಡ್‌ ಹಾಗೂ ಬಾಲಶ್ರೀ ಪ್ರಶಸ್ತಿ ನೀಡಿದ್ದರು.

ಬಂದೇನವಾಜ್‌ ನದಾಫ್: ಬಂದೇನವಾಜ್‌ ನದಾಫ್ರಿಗೆ ಹುಟ್ಟಿನಿಂದಲೇ ಎಡಗೈ ಇಲ್ಲ. ಕಾಲುಗಳೂ ಬಲಹೀನ. ದೇಹದ ಮೇಲ್ಭಾಗದ ಹಲವು ಅಂಗಗಳು ದೃಢವಾಗಿಲ್ಲ. ಆದರೆ, ಇವರು ಬಿಡಿಸುವ ಚಿತ್ರಗಳು ಮಾತ್ರ ಜೀವಂತಿಕೆಯಿಂದ ನಳನಳಿಸುತ್ತವೆ. ಚಿತ್ರಕಲೆಯಷ್ಟೇ ಅಲ್ಲ, ಈಜುಪಟು, ಬಾಣಸಿಗ, ತಂಬೂರಿ ವಾದಕ, ಸಂಗೀತಗಾರ, ಕರಾಟೆಯಲ್ಲಿ ಯೆಲ್ಲೊ ಬೆಲ್ಟ್… ಹೀಗೆ ಅವರ ಸಾಧನೆಯ ಪಟ್ಟಿ ದೊಡ್ಡದಿದೆ. ವಿಶೇಷ ಚೇತನರ ಮಿನಿ ಒಲಿಂಪಿಕ್ಸ್‌ನಲ್ಲಿ ನದಾಫ್ ಬಹುಮಾನಗಳನ್ನು ಗೆದ್ದಿದ್ದಾರೆ.

ಯಾವಾಗ?: ಫೆ. 22, ಶನಿವಾರ, ಸಂಜೆ 4-7
ಎಲ್ಲಿ?: ಕರ್ನಾಟಕ ಚಿತ್ರಕಲಾ ಪರಿಪತ್‌, ಕುಮಾರಕೃಪಾ ರಸ್ತೆ
ಪ್ರವೇಶ: ಉಚಿತ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ ಲಾಕ್ ಡೌನ್ ಎಫೆಕ್ಟ್: ಭೋಪಾಲ್ ನಲ್ಲಿ ಮೆಡಿಸಿನ್ ಮತ್ತು ಹಾಲು ಮಾತ್ರ ಜನರಿಗೆ ಲಭ್ಯ

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ಕೋವಿಡ್ 19 ಅಟ್ಟಹಾಸ: ಮಹಾರಾಷ್ಟ್ರದಲ್ಲಿ 690 ಪ್ರಕರಣ, ತಮಿಳುನಾಡು 571, ಉತ್ತರಪ್ರದೇಶ 276

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನನ್ನದೊಂದು ಹಣತೆ ನೈರ್ಮಲ್ಯ ಕಾರ್ಮಿಕರ ಸ್ವಚ್ಛತೆಯ ಶ್ರಮಕ್ಕೆ: ಸಚಿನ್ ತೆಂಡುಲ್ಕರ್

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ನಿಮಗೆ ಕೋವಿಡ್ 19 ವೈರಸ್ ಅಟ್ಯಾಕ್ ಆಗಿದೆಯೇ ಎಂದು ಇನ್ನು ಮನೆಯಲ್ಲೇ ಪರೀಕ್ಷಿಸಿಕೊಳ್ಳಿ!

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ಸಾಮಾಜಿಕ ಅಂತರಕ್ಕೆ ಚೆನ್ನೈ ಎಕ್ಸ್ ಪ್ರೆಸ್ ಐಡಿಯಾ ಬಳಸಿದ ನಾಗ್ಪುರ ಪೊಲೀಸರು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ರಾಜ್ಯದಲ್ಲಿ ಮತ್ತೆ ಐದು ಸೋಂಕು ಪ್ರಕರಣಗಳು: ಐವರಿಗೂ ನಿಜಾಮುದ್ದೀನ್ ನಂಟು

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಕೋವಿಡ್ 19 ಚರ್ಚೆ: ಪ್ರಣಬ್, ಸೋನಿಯಾ, ದೇವೇಗೌಡರಿಗೆ ಪ್ರಧಾನಿ ಮೋದಿ ದೂರವಾಣಿ ಕರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ