ಟಾಪ್‌ ಗೇರ್ : ‌ಜಾದೂ ಕಿಯಾರೆ

Team Udayavani, Aug 10, 2020, 4:45 PM IST

ಟಾಪ್‌ ಗೇರ್ : ‌ ಜಾದೂ ಕಿಯಾರೆ

ಪ್ರಸ್ತುತ ಕಿಯಾ ಸಾನೆಟ್‌ ಎಸ್‌ಯುವಿ ಕಾರು ಹುಂಡೈ ಅವರ ವೆನ್ಯು, ಮಾರುತಿ ವಿಟಾರಾ ಬ್ರಿಝಾ ಮತ್ತು ಸದ್ಯದಲ್ಲೇ ಟೋಯೋಟೊ ಕಂಪನಿ ಬಿಡುಗಡೆ ಮಾಡುತ್ತಿರುವ ಅರ್ಬನ್‌ ಕ್ರ್ಯೂ ಸರ್‌ಗೆ ಸ್ಪರ್ಧೆ ನೀಡಲಿದೆ..

ಭಾರತದ ಆಟೋಮೊಬೈಲ್‌ ಕ್ಷೇತ್ರದಲ್ಲಿ ಈಗಾಗಲೇ ಎರಡು ಕಾರುಗಳನ್ನು ಬಿಟ್ಟು ತನ್ನದೇ ಛಾಪು ಮೂಡಿಸಿರುವ ಕಿಯಾ ಕಂಪನಿ, ತನ್ನ ಮೂರನೇ ಕಾರನ್ನು ಬಿಡುಗಡೆಗೊಳಿಸಲು ಅಣಿಯಾಗಿದೆ. ಕಿಯಾ ಸೆಲ್ಟೋಸ್‌, ಕಿಯಾ ಕಾರ್ನೆವಲ್‌ ಮತ್ತು ಈಗ ಕಿಯಾ ಸಾನೆಟ್‌ ಎಸ್‌ ಯುವಿಯನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆ.7ರಂದು ಈ ಕಾರಿನ ಪರಿಚಯ ಮಾಡಿಕೊಡಲಾಗಿದ್ದು, 4 ಮೀ. ಉದ್ದದ ಕಾಂಪ್ಯಾಕ್ಟ್ ಎಸ್‌ ಯುವಿಯಾಗಿದೆ.

ಸದ್ಯ ಈ ಕಾರು ಹುಂಡೈ ಅವರ ವೆನ್ಯು, ಮಾರುತಿ ವಿಟಾರಾ ಬ್ರಿಝಾ ಮತ್ತು ಸದ್ಯದಲ್ಲೇ ಟೋಯೋಟೊ ಕಂಪನಿ ಬಿಡುಗಡೆ ಮಾಡುತ್ತಿರುವ ಅರ್ಬನ್‌ ಕ್ರ್ಯೂಸರ್‌ ಗೆ ಸ್ಪರ್ಧೆ ನೀಡಲಿದೆ. ಅಂದಹಾಗೆ, ಈ ಕಾರು ಸೆಪ್ಟೆಂಬರ್‌ಗೆ ಮಾರುಕಟ್ಟೆಗೆ ಬರುವ ಸಾಧ್ಯತೆ ಇದೆ. ಇದರ ಕಾನೆrಪ್ಟ್ ವರ್ಷನ್‌ ಅನ್ನು 2020ರ ದೆಹಲಿ ಆಟೋ ಎಕ್ಸ್‌ ಪೋದಲ್ಲಿ ಬಿಡುಗಡೆ ಮಾಡಲಾಗಿತ್ತು. ಆಗ ಪ್ರದರ್ಶಿಸಿದ ಕಾರಿನಲ್ಲಿ ಹೆಚ್ಚೇನೂ ಬದಲಾವಣೆ ಮಾಡಲಾಗಿಲ್ಲ.

ಹೊರಾಂಗಣ ಮತ್ತು ಒಳಾಂಗಣ ಅತ್ಯಂತ ಆಕರ್ಷಕವಾಗಿ ಬಂದಿದೆ. ಇದರಲ್ಲಿ 10.25 ಇಂಚಿನ ಟಚ್‌ಸ್ಕ್ರೀನ್‌ ಸಿಸ್ಟಮ್‌ ಇದೆ. ಸ್ಟೀರಿಂಗ್‌ ವ್ಹೀಲ್‌ ಮೌಂಟೆಡ್‌ ಕಂಟ್ರೋಲ್, ಡ್ರೈವ್‌ ಮತ್ತು ಟ್ರ್ಯಾಕ್ಷನ್‌ ಮೋಡ್ಸ್‌ ಮತ್ತು ಆ್ಯಂಬಿಯಂಟ್‌ ಲೈಟಿಂಗ್‌ ವ್ಯವಸ್ಥೆಯೂ ಇದೆ. ಇದು ಮೂರು ವರ್ಷನ್‌ಗಳ ಎಂಜಿನ್‌ ಸಾಮರ್ಥ್ಯದೊಂದಿಗೆ ಬರಲಿದೆ. 1.5 ಲೀ. ಡೀಸೆಲ್‌ ಎಂಜಿನ್‌, 1.0 ಲೀ. ಟರ್ಬೋಚಾರ್ಜ್ಡ್‌ ಪೆಟ್ರೋಲ್‌ ಎಂಜಿನ್‌ ಮತ್ತು 1.2 ಲಿ. ನ್ಯಾಚುರಲಿ ಆಸ್ಪಿರೇಟೇಡ್‌ ಪೆಟ್ರೋಲ್‌ ಎಂಜಿನ್‌ ಸಾಮರ್ಥ್ಯ ಹೊಂದಿದೆ. ಅಂದಹಾಗೆ ಇದು 1197ಸಿಸಿ ಸಾಮರ್ಥ್ಯದ ಎಂಜಿನ್‌ ಹೊಂದಿದೆ. 8 ರಿಂದ 13 ಲಕ್ಷ ರೂ.ವರೆಗೆ ದರ ಇರಬಹುದು ಎಂದು ಅಂದಾಜಿಸಲಾಗಿದೆ. ­

ಚಂದಾದಾರಿಕೆಯಲ್ಲಿ ಕಾರು ಖರೀದಿ : ದೇಶದ ಪ್ರಮುಖ ಆಟೋಮೊಬೈಲ್‌ ಕಂಪನಿ ಟಾಟಾ, ತನ್ನ ಎಲೆಕ್ಟ್ರಿಕ್‌ ವೆಹಿಕಲ್‌ ಟಾಟಾ ನೆಕ್ಸೋನ್‌ ಅನ್ನು ಮಾಸಿಕ ಚಂದಾದಾರಿಕೆಯಲ್ಲಿ ನೀಡಲು ನಿರ್ಧರಿಸಿದೆ. ಮಾಸಿಕ 41 ಸಾವಿರ ರೂ. ಪಾವತಿಸಿ ಟಾಟಾ ನೆಕ್ಸೋನ್‌ ಇವಿಯನ್ನು ಪಡೆಯಬಹುದಾಗಿದೆ. 18 ತಿಂಗಳಿಂದ 24 ಮತ್ತು 36 ತಿಂಗಳುಗಳ ವರೆಗೆ ಮಾಸಿಕ ಬಾಡಿಗೆ ರೀತಿಯಲ್ಲಿ ಈ ಕಾರನ್ನು ಬಳಕೆ ಮಾಡಬಹುದಾಗಿದೆ. 36 ತಿಂಗಳ ಸಬ್‌ಸ್ಕ್ರಿಪ್ಶನ್‌ ಮಾಡಿಕೊಂಡರೆ, ಮಾಸಿಕ 41,900, 24 ತಿಂಗಳಿಗೆ ಮಾಡಿಸಿಕೊಂಡರೆ 44,900 ಹಾಗೂ 18 ತಿಂಗಳಿಗೆ ಮಾಡಿಸಿಕೊಂಡರೆ 47,900 ರೂ. ನೀಡಬೇಕಾಗುತ್ತದೆ. ಸದ್ಯ ಬೆಂಗಳೂರು, ದೆಹಲಿ- ಎನ್‌ಸಿಆರ್‌, ಮುಂಬೈ, ಪುಣೆ, ಹೈದರಾಬಾದ್‌ನಲ್ಲಿ ಈ ಸೌಲಭ್ಯ ಸಿಗಲಿದೆ.

ಟಾಪ್ ನ್ಯೂಸ್

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.