ಬಂತು ನೋಡಿ ಪಿ2ಪಿ ಸಾಲ!


Team Udayavani, Nov 12, 2018, 4:00 AM IST

bantu-nodi.jpg

ಪಿ2 ಪಿ ಎಂದರೆ ಪೀರ್‌ಟು ಪೀರ್‌ ಅಥವಾ  ಪರ್ಸನ್‌ಟು ಪರ್ಸನ್‌ ಎಂದು ಅರ್ಥ. ಹೆಸರೇ ಸೂಚಿಸುವಂತೆ, ಇಲ್ಲಿ ಒಬ್ಬ ವ್ಯಕ್ತಿ ಮತ್ತೂಬ್ಬ ವ್ಯಕ್ತಿಗೆ ಸಾಲ ನೀಡುತ್ತಾನೆ. ಇದನ್ನು ಸಾಧ್ಯವಾಗಿಸಲು ಆರ್‌.ಬಿ.ಐ ನಿಂದ ಪರವಾನಿಗೆ ಪಡೆದ ಕಂಪನಿಗಳು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ವ್ಯವಹಾರ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿರುತ್ತದೆ.  

ಇತ್ತೀಚಿನ ದಿನಗಳಲ್ಲಿ ನಾವು ಓಲಾ ಅಥವಾ ಊಬರ್ ಎಂಬ ಸಾರಿಗೆ ವ್ಯವಸ್ಥೆಯನ್ನು ನೋಡಿದ್ದೇವೆ. ಈ ಸೇವೆಯಡಿಯಲ್ಲಿ ನಾವು ಪ್ರಯಾಣಿಸಿದಲ್ಲಿ ಈ ಸೇವಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಅರಿವು ಬರುತ್ತದೆ.  ಓಲಾ ಅಥವಾ ಊಬರ್‌ ಅಂತಹ ಸೇವಗಳ ಮೂಲ ಪರಿಕಲ್ಪನೆಯೇ ಬೇಡಿಕೆ (demand) ಮತ್ತು ಅಗತ್ಯತೆಗಳನ್ನು (need) ಪೂರೈಸುವುದು ಮತ್ತು ಅದರಿಂದ ಕಮಿಷನ್‌ ರೂಪದಲ್ಲಿ ಸೇವಾ ಶುಲ್ಕ ಪಡೆಯುವುದು.  

ಪಿ2 ಪಿ ಸಾಲ ಎಂದರೇನು?: ಪಿ2 ಪಿ ಎಂದರೆ ಪೀರ್‌ಟು ಪೀರ್‌ ಅಥವಾ  ಪರ್ಸನ್‌ಟು ಪರ್ಸನ್‌ ಎಂದು ಅರ್ಥ. ಹೆಸರೇ ಸೂಚಿಸುವಂತೆ, ಇಲ್ಲಿ ಒಬ್ಬ ವ್ಯಕ್ತಿ ಮತ್ತೂಬ್ಬ ವ್ಯಕ್ತಿಗೆ ಸಾಲ ನೀಡುತ್ತಾನೆ. ಇದನ್ನು ಸಾಧ್ಯವಾಗಿಸಲು ಆರ್‌.ಬಿ.ಐ ನಿಂದ ಪರವಾನಿಗೆ ಪಡೆದ ಕಂಪನಿಗಳು ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಈ ವ್ಯವಹಾರ ಸಂಪೂರ್ಣವಾಗಿ ಡಿಜಿಟಲೀಕರಣಗೊಂಡಿರುತ್ತದೆ. ಎಲ್ಲಾ ಪಿ2 ಪಿ  ವಹಿವಾಟುಗಳು ಪಿ  2 ಪಿ ಕಂಪನಿಗಳ ಅಂತರ್ಜಾಲ ತಾಣದ ಮುಖಾಂತರವೇ  ನಡೆಯುತ್ತದೆ.  

ಈ ಅಂತರ್ಜಾಲ ತಾಣವು ಮಧ್ಯವರ್ತಿಗಳ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತವೆ.  ಪಿ2ಪಿ ಸಾಲ ಪರಿಕಲ್ಪನೆಯು ಪಾಶ್ಚಾತ್ಯ ದೇಶಗಳಲ್ಲಿ ಜನಪ್ರಿಯವಾಗಿದ್ದು, ಇತ್ತೀಚೆಗೆ ಭಾರತದಲ್ಲಿ ವ್ಯಾಪಕವಾಗಿ ಬೆಳೆಯುತ್ತಿದೆ. ಕ್ಯಾಶ್‌ಕುಮಾರ್‌ ಅನ್ನೋದು ಬೆಂಗಳೂರು ಮೂಲದ ಪಿ2ಪಿ ಕಂಪನಿ. ಇದು ಆರ್‌.ಬಿ.ಐ ನಿಂದ ಪರವಾನಿಗೆ ಪಡೆದಿದೆ. “ಈ ವ್ಯವಹಾರ ಮಾದರಿಯಲ್ಲಿ, ಸೇವೆ ನೀಡುವವನು, ತನ್ನ ಸರಕು-ಸೇವೆಯನ್ನು ಸುಲಭವಾಗಿ ನೀಡಬಹುದು.

ಹಾಗೆಯೇ, ಗ್ರಾಹಕನು ಸಹ  ತನಗೆ ಬೇಕಾದ ಸೇವೆಯನ್ನು ಕೂತಲ್ಲೇ ತನ್ನ ಬೆರಳ ತುದಿಯಲ್ಲಿಯೇ ಪಡೆಯಬಹುದಾಗಿದೆ.  ಈ ವ್ಯವಹಾರ ಅಥವಾ ಸೇವೆಯನ್ನು ಸಾಧ್ಯವಾಗಿಸಿದ ಸಂಸ್ಥೆ, ವ್ಯಕ್ತಿಗೂ ಹಣ ಗಳಿಸುವ ಅವಕಾಶ ಇರುತ್ತದೆ. ಇದೇ ಪರಿಕಲ್ವನೆಯ ಆಧಾರದ ಮೇಲೆ ಹುಟ್ಟಿಕೊಂಡ ಮತ್ತೂಂದು ಕ್ರಾಂತಿಕಾರಿ ಸೇವೆಯೇ ಪಿ  2 ಪಿ ಸಾಲ ಎನ್ನುತ್ತಾರೆ ಈ  ಕ್ಯಾಶ್‌ ಕುಮಾರ್‌ ಡಾಟ್ ಕಾಮ್ (Cashkumar.com) ಸಹ-ಸಂಸ್ಥಾಪಕ ಧಿರೇನ್‌ ಮಖೀಜಾ. 

ಇದು ಹೇಗೆ ಕಾರ್ಯ ನಿರ್ವಹಿಸುತ್ತವೆ?: ಯಾರಿಗಾದರೂ ತುರ್ತಾಗಿ 1 ಲಕ್ಷ ರೂ. ಸಾಲದ ಅಗತ್ಯವಿದ್ದಾಗ ಅವರು ನೇರವಾಗಿ ಕ್ಯಾಷ್‌ ಕುಮಾರ್‌ನ ವೆಬ್ ಸೈಟ್ ಗೆ ಲಾಗ್‌ಇನ್‌ ಆಗಬಹುದು.ಸಾಲ ಪಡೆಯಲು ಇಚ್ಛಿಸುವವರು ಸಾಲದ ಮೊತ್ತ, ಅಗತ್ಯತೆಗಳು, ವಿಳಾಸ, ಉದ್ಯೋಗ, ಆದಾಯ  ಹಾಗೂ   ಮುಂತಾದ ತಮ್ಮ ವಿವರಗಳನ್ನು ಪಿ2ಪಿ ಕಂಪನಿಯ ವೆಬ್‍ಸೈಟ್‍ನಲ್ಲಿ ನಮೂದಿಸಬೇಕು. ನಮೂದಿಸಿದ ಈ ವಿವರಗಳನ್ನು ಪಿ2ಪಿ ಕಂಪನಿಯು ಅತ್ಯಂತ ವೇಗವಾಗಿ  ಬ್ಯಾಂಕ್ ಗಳಲ್ಲಿ ಪಾಲಿಸುವ ನಿಯಮದ ಪ್ರಕಾರವೇ ಪರಿಶೀಲಿಸುತ್ತದೆ. ಹಾಗೆಯೇ, ಸಾಲ ಕೊಡಲು ಬಯಸುವವರು ಹೂಡಿಕೆಯ ಮೊತ್ತ, ಬಯಸುವ ಬಡ್ಡಿ  ಹಾಗೂ ತಮ್ಮ ಇತರೆ ವಿವರಗಳನು ನಮೂದಿಸಿ, ಹಣವನ್ನು ತಮ್ಮ ಪಿ2ಪಿ ಖಾತೆಯಲ್ಲಿ ಮುಂಗಡವಾಗಿ ಇಡಬೇಕು.

ಸಾಲ ನೀಡುವವರ ಮತ್ತು ಪಡೆದುಕೊಳ್ಳುವವರ ಅಗತ್ಯತೆಗಳು ಹೊಂದಾಣಿಕೆಯಾಗಿ, ಉಭಯ ಬಣಗಳು ಸಮ್ಮತಿಸಿದರೆ, ಸಾಲವನ್ನು ಸಾಲಗಾರರ ಬ್ಯಾಂಕ್ ಖಾತೆಗೆ ವರ್ಗಾವಣೆಮಾಡಲಾಗುತ್ತದೆ. ಹಾಗೂ ಕಂಪನಿ ಎರಡೂ ಕಡೆಗಳಿಂದ ನಿರ್ದಿಷ್ಟ ಕಮೀಶನ್ ಸ್ವೀಕರಿಸುತ್ತದೆ. ಹಣವನ್ನು ಹೂಡುವ ಮುನ್ನ ಹೂಡಿಕೆದಾರರು ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು.  ಆರ್‌.ಬಿ.ಐ ನಿಂದ ಪರವಾನಿಗೆ ಹೊಂದಿರುವ ಪೀ2ಪೀ ಕೊಂಪನಿಗಳಲ್ಲಿಯೇ  ವ್ಯವಹರಿಸಬೇಕು. ಇದುವರೆಗೆ ಆರ್‌.ಬಿ.ಐ ಕ್ಯಾಷ್‌ ಕುಮಾರ್‌ ಸೇರಿ ಕೇವಲ 8-9 ಸಂಸ್ಥೆಗಳಿಗಷ್ಟೆ ಪರವಾನಿಗೆ ನೀಡಿದೆ.

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.