ಕೆಂಬಸಳೆ ಬೆಳಸಿ ಆರೋಗ್ಯ ವೃದ್ಧಿಸಿ

Team Udayavani, Apr 22, 2019, 6:15 AM IST

ಹಚ್ಚ ಹಸಿರು ವರ್ಣದ ಎಲೆ ಹಾಗೂ ದಂಡುಗಳಿರುವ ಬಸಳೆ ಎಲ್ಲರಿಗೂ ಪರಿಚಿತ. ಅದರಿಂದ ತಯಾರಿಸುವ ನಾನಾ ಬಗೆಯ ಸಾರು, ಸಾಂಬಾರುಗಳು ರುಚಿಯ ದೃಷ್ಟಿಯಿಂದ ಮನ ಗೆಲ್ಲುತ್ತವೆ. ಔಷಧೀಯವಾಗಿಯೂ ಅನೇಕ ಬಳಕೆಗಳಿಗೂ ಬೇಕಾಗುತ್ತದೆ. ಆದರೆ ಮನ ಸೆಳೆಯುವ ಕೆಂಪು ವರ್ಣದ ಬಸಳೆ ನೋಡಲು ಮಾತ್ರ ಆಕರ್ಷಕವಲ್ಲ. ಪದಾರ್ಥಗಳ ತಯಾರಿಕೆಯಷ್ಟೇ ಔಷಧೀಯ ಉಪಯೋಗಗಳಿಗೂ ಬೇಕಾಗುತ್ತದೆ.

ಬಂಟ್ವಾಳದ ಮಂಚಿಯಲ್ಲಿರುವ ಸತ್ಯಭಾಮಾ ಶಂಕರನಾರಾಯಣ ಅವರ ಮನೆಯಂಗಳದಲ್ಲಿ ವರ್ಷವಿಡೀ ಚಪ್ಪರ ತುಂಬಿಕೊಂಡಿರುವ ಕೆಂಪು ಬಸಳೆ ಗೋಬರ್‌ ಬಗ್ಗಡದ ಸತ್ವದಿಂದಲೇ ಹರಡಿ ಬೆಳೆಯುತ್ತಿದೆ. ರಾಸಾಯನಿಕ ಗೊಬ್ಬರ ಬಯಸುವುದಿಲ್ಲ. ಎಲೆಗಳು ಹಚ್ಚ ಹಸಿರಾಗಿ ದಪ್ಪರುವುದರಿಂದ ವ್ಯಂಜನಗಳ ತಯಾರಿಕೆಗೂ ಹೆಚ್ಚು ಅನುಕೂಲಕರವಾಗಿವೆ. ಇದರ ದಂಡನ್ನು ಪಾಲಿಥಿನ್‌ ಹಾಳೆಯಲ್ಲಿ ನೆಟ್ಟ ತಯಾರಿಸುವ ಗಿಡಗಳಿಗೆ ಸಾವಯವ ಮಾರುಕಟ್ಟೆಯಲ್ಲಿ ಅಧಿಕ ಬೆಲೆ ಮತ್ತು ಬೇಡಿಕೆ ಇದೆಯಂತೆ. ಮಳೆಗಾಲದಲ್ಲಿಯೂ ಎಲೆಗಳು ಕೊಳೆಯದೆ ದಿನದ ಅಡುಗೆಗೆ ಒದಗುತ್ತದೆಂಬ ವಿವರಣೆ ಅವರದು.

ಕೆಂಪು ಬಸಳೆಯ ಎಲೆಯಲ್ಲಿ ಎ ಜೀವಸತ್ವ ಅಧಿಕವಾಗಿರುವುದರಿಂದ ನಿತ್ಯ ಬಳಕೆಯಿಂದ ಇರುಳು ಕುರುಡುತನವನ್ನು ನೀಗಬಹುದು. ದೇಹಕ್ಕೆ ಬೇಕಾದ ಸಾಕಷ್ಟು ಪೋಷಕಾಂಶಗಳು ಇದರಲ್ಲಿವೆ. ಎಲೆಗಳನ್ನು ಅಕ್ಕಿಯೊಂದಿಗೆ ಸೇರಿಸಿ ತಯಾರಿಸುವ ಪತ್ರೊಡೆಯ ಸೇವನೆಯಿಂದ ಉರಿ ಮೂತ್ರ ಮತ್ತು ಮೂತ್ರಕೋಶದ ಸಮಸ್ಯೆಗಳು ಗುಣವಾಗುತ್ತದೆಂಬ ನಂಬಿಕೆಯೂ ಇದೆ.

— ರಾಮಕೃಷ್ಣ ಶಾಸ್ತ್ರಿ


ಈ ವಿಭಾಗದಿಂದ ಇನ್ನಷ್ಟು

  • ರೇಷ್ಮೆಯ ತವರು ಎಂದು ಹೆಸರಾದ ಊರು ಶಿಡ್ಲಘಟ್ಟ, ಇಲ್ಲಿರುವ ಹುರಿ ಮಿಷನ್‌ಗಳಲ್ಲಿ ವಿವಿಧ ಜಿಲ್ಲೆ, ರಾಜ್ಯಗಳ ಜನರು ಕೆಲಸ ಮಾಡುತ್ತಿದ್ದಾರೆ. ರೈತರನ್ನೇ ಪ್ರಧಾನ...

  • ರೇಷ್ಮೆ ಬೆಳೆಗೆ ಕಡಿಮೆ ನೀರು ಸಾಕು. ಜೊತೆಗೆ,ಒಂದು ವರ್ಷಕ್ಕೆ ನಾಲ್ಕು ಬೆಳೆ ತೆಗೆಯಬಹುದು. ಒಂದು ವೇಳೆ ರೇಷ್ಮೆ ಮೊಟ್ಟೆಗೆ ಬೆಲೆ ಸಿಗದಿದ್ದರೂ, ಹಿಪ್ಪು ನೇರಳೆ...

  • ಕೃಷಿ ಕಾರ್ಮಿಕರ ಕೊರತೆಯ ನೀಗಿಸಲು ಕಂಪನಿಗಳು ಕೃಷಿ ಯಂತ್ರೋಪಕರಣಗಳನ್ನು ತಯಾರಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿವೆ. ಇಂಥ ಒಂದು ವಿಶೇಷ ಅವಿಷ್ಕಾರವಾಗಿ ನಿವ್‌...

  • ಆನೆ ದೈತ್ಯ ಜೀವಿ. ಆನೆ ದಸರೆಯ ಜಂಬೂಸವಾರಿಯ ಕೇಂದ್ರ ಬಿಂದು. ಆನೆ ಗಣೇಶನ ಇನ್ನೊಂದು ರೂಪ.. ಇವೆಲ್ಲವೂ ಸರಿ. ಈಗ ವಿಶೇಷ ಸುದ್ದಿ ಏನೆಂದರೆ, ಆನೆಯನ್ನು ಮುಂದಿಟ್ಟುಕೊಂಡು...

  • ಇಂಗ್ಲೆಂಡಿನಲ್ಲಿ ವಿಶ್ವಕಪ್‌ ಕ್ರಿಕೆಟ್‌ ಆರಂಭಾವಾಗುವ ದಿನಗಳ ಹತ್ತಿರಾಗುತ್ತಿವೆ. ಇದೇ ವೇಳೆಗೆ ಆನ್‌ಲೈನ್‌ ಗೇಮಿಂಗ್‌ ಇಂಡಸ್ಟ್ರೀ ಕೂಡ ಭಾರಿ ಹುಮ್ಮಸ್ಸಿನಲ್ಲಿ...

ಹೊಸ ಸೇರ್ಪಡೆ