“ನೃತ್ಯ’ಮೇವ ಜಯತೇ!


Team Udayavani, Oct 30, 2018, 6:00 AM IST

9.jpg

ರಿಯಾಲಿಟಿ ಶೋಗಳು, ನೃತ್ಯ ಕಾರ್ಯಕ್ರಮಗಳು, ಅವಾರ್ಡ್‌ ಶೋಗಳು ನಿರಂತರವಾಗಿ ಪ್ರಸಾರವಾಗುತ್ತಿರುವುದರಿಂದ ದೃಶ್ಯ ಮಾಧ್ಯಮದಲ್ಲಿ ಕೊರಿಯೋಗ್ರಾಫ‌ರ್‌ಗಳಿಗೆ ನಿರಂತರ ಬೇಡಿಕೆ ಇದ್ದೇ ಇದೆ…

ಭಾರತೀಯರ ಪಾಲಿಗೆ ನೃತ್ಯವೆಂಬುದು ದೇವಕಲೆ. ಶಿವನ ತಾಂಡವ ನೃತ್ಯ, ವಿಷ್ಣುವಿನ ಮೋಹಿನಿ ನೃತ್ಯ, ಕೃಷ್ಣನ ಬಾಲ ನೃತ್ಯ- ಇವೆಲ್ಲಾ ನೃತ್ಯವೆಂಬುದು ದೇವರ ಕಲೆ ಎನ್ನುವ ಮಾತಿಗೆ ಸಾಕ್ಷಿಯಾಗುವ ದೃಷ್ಟಾಂತಗಳು. ಇವತ್ತಿನ ಸಂದರ್ಭದಲ್ಲಿ ನೃತ್ಯವೆಂಬುದು ಹತ್ತಾರು ಬಗೆಯಲ್ಲಿ ಟಿಸಿಲೊಡೆದಿದೆ. ನೃತ್ಯವನ್ನು ನೋಡುವವರೂ ಹೆಚ್ಚುತ್ತಿದ್ದಾರೆ. ಮತ್ತೂಂದು ಕಡೆಯಲ್ಲಿ ನೃತ್ಯ ಕಲಿಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ದೇಶೀಯ ನೃತ್ಯ ಪ್ರಕಾರಗಳು, ಪಾಶ್ಚಾತ್ಯ ನೃತ್ಯ ಪ್ರಕಾರಗಳಿಗೂ ನಮ್ಮಲ್ಲಿ ಮಹತ್ವವಿದೆ. ಈ ಕಾರಣದಿಂದಲೇ ನೃತ್ಯ ಸಂಯೋಜಿಸುವ ಕೊರಿಯೋಗ್ರಾಫ‌ರ್‌ಗಳಿಗೆ ಬೇಡಿಕೆ ಹೆಚ್ಚತೊಡಗಿದೆ.

ರಿಯಾಲಿಟಿ ಶೋಗಳು, ನೃತ್ಯ ಕಾರ್ಯಕ್ರಮಗಳು, ಅವಾರ್ಡ್‌ ಶೋಗಳು ನಿರಂತರವಾಗಿ ಪ್ರಸಾರವಾಗುತ್ತಿರುವುದರಿಂದ ದೃಶ್ಯ ಮಾಧ್ಯಮದಲ್ಲಿ ಕೊರಿಯೋಗ್ರಾಫ‌ರ್‌ಗಳಿಗೆ ನಿರಂತರ ಬೇಡಿಕೆ ಇದ್ದೇ ಇದೆ. ದೃಶ್ಯ ಮಾಧ್ಯವನ್ನು ಹೊರತುಪಡಿಸಿ ಶಾಲೆ, ಕಾಲೇಜು, ಸಂಘ- ಸಂಸ್ಥೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ ಇದ್ದೇ ಇರುತ್ತದೆ. ಬಹಳಷ್ಟು ಬಾರಿ ಅಲ್ಲೆಲ್ಲಾ ಕೊರಿಯೋಗ್ರಾಫ‌ರ್‌ಗಳನ್ನು ಕರೆಸಲಾಗುತ್ತದೆ.

ಒಂದು ಕಡೆ ಮೇಲಿಂದ ಮೇಲೆಸಿಗುವ ಕಾರ್ಯಕ್ರಮಗಳು, ಇನ್ನೊಂದೆಡೆ ಟಿ.ವಿ. ಹಾಗೂ ಇತರೆ ರಿಯಾಲಿಟಿ ಶೋಗಳಿಂದ ಸಿಗುವ ಜನಪ್ರಿಯತೆ, ಅವಕಾಶ ಮತ್ತು ಹಣ, ಈ ಎಲ್ಲಾ ಕಾರಣಗಳಿಂದಾಗಿ ಈ ಕ್ಷೇತ್ರ ಯುವಜನತೆಯನ್ನು ಆಕರ್ಷಿಸುತ್ತಿದೆ. ಹೀಗಾಗಿ ಶೈಕ್ಷಣಿಕವಾಗಿ ಪ್ರಗತಿ ಹೊಂದುವುದರ ಜೊತೆಯಲ್ಲಿಯೇ ಅನೇಕರು ನೃತ್ಯಾಭ್ಯಾಸವನ್ನೂ ಮಾಡುತ್ತಿದ್ದಾರೆ. ಓದಿನ ಜೊತೆಯಲ್ಲಿಯೇ ನೃತ್ಯವನ್ನೂ ಅಭ್ಯಸಿಸುವುದರಿಂದ ಆಯ್ಕೆಯ ಸ್ವಾತಂತ್ರ್ಯ ಅವರಿಗಿರುತ್ತದೆ. ಇದಿಷ್ಟೇ ಅಲ್ಲ, ಉತ್ತಮ ಕೊರಿಯೋಗ್ರಾಫ‌ರ್‌ ಆಗಲು ದೀರ್ಘ‌ ಪರಿಶ್ರಮದ ಅವಶ್ಯಕತೆಯಿದೆ. ದೇಶ ವಿದೇಶದ ನಾನಾ ನೃತ್ಯ ಪ್ರಕಾರಗಳ ಪರಿಚಯ, ವೇದಿಕೆಗಳಲ್ಲಿ ಪ್ರದರ್ಶನ ನೀಡಿರುವ ಅನುಭವವೂ ಬೇಕಾಗುತ್ತದೆ. ಉತ್ತಮ ದೇಹ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಬೇಕಾಗುತ್ತದೆ. 

ವಿದ್ಯಾಭ್ಯಾಸ ಹೀಗಿರಲಿ…
ಪಿಯುನಲ್ಲಿ ಯಾವುದೇ ವಿಷಯ ಅಭ್ಯಾಸ ಮಾಡಿದ ಬಳಿಕ ಪದವಿಯಲ್ಲಿ ನೃತ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಕೋರಿಯೋಗ್ರಾಫ‌ರ್‌ ಆಗಬಹುದು. ಇದಲ್ಲದೆ, ಮತ್ತೂಂದು ಮಾರ್ಗದಲ್ಲಿ ಡ್ಯಾನ್ಸ್‌ ಅಕಾಡೆಮಿಗಳಲ್ಲಿ ತರಬೇತಿ ಪಡೆದೂ ಕೊರಿಯೋಗ್ರಾಫ‌ರ್‌ ಆಗಬಹುದು. ಜತೆಗೆ ಶಾಸ್ತ್ರೀಯ ನೃತ್ಯಶಾಲೆಗಳಲ್ಲಿ ಪರಿಣತಿ ಪಡೆಯಬಹುದು. 

ಈ ಕೌಶಲ್ಯಗಳೂ ಅವಶ್ಯ
– ದೈಹಿಕ ಸ್ವಾಸ್ಥ್ಯ, ಸಾಮರ್ಥ್ಯ, ಸಮತೋಲನ ಅಗತ್ಯ.
– ಸಮೂಹದಲ್ಲಿ ಸೌಹಾರ್ದತೆ ಕಾಯ್ದುಕೊಂಡು ಕಾರ್ಯನಿರ್ವಸುವ ತಂತ್ರಗಾರಿಕೆ.
– ಭಾರತೀಯ ನೃತ್ಯ ಪ್ರಕಾರಗಳ ಚರಿತ್ರೆ, ನಾಟ್ಯಶಾಸ್ತ್ರದ ಬಗ್ಗೆ ಅರಿವು.
– ಸಂಗೀತ, ತಾಳ ಜ್ಞಾನ.
– ಉತ್ತಮ ಸಂವಹನ ಮತ್ತು ನಾಯಕತ್ವ ಗುಣ ಅಗತ್ಯ
.

ಅವಕಾಶಗಳು ಎಲ್ಲೆಲ್ಲಿ?
– ಖಾಸಗಿ ಡ್ಯಾನ್ಸ್‌ ಗ್ರೂಪ್‌ಗ್ಳು
– ಸಿನಿಮಾ ಸ್ಟುಡಿಯೋಗಳು
– ಟಿ.ವಿ. ರಿಯಾಲಿಟಿ ಶೋಗಳು
– ರಂಗಭೂಮಿ 
– ಸ್ವಂತ ಡ್ಯಾನ್ಸ್‌ ಶಾಲೆ

ಓದುವುದು ಎಲ್ಲಿ?
– ಕರ್ನಾಟಕ ಸ್ಟೇಟ್‌ ಡಾ. ಗಂಗೂಬಾಯಿ ಹಾನಗಲ್‌ ಮ್ಯೂಜಿಕ್‌ ಅಂಡ್‌ ಪರ್ಫಾಮಿಂಗ್‌ ಆರ್ಟ್ಸ್ ಯೂನಿವರ್ಸಿಟಿ, ಮೈಸೂರು
– ಆಳ್ವಾಸ್‌ ಕಾಲೇಜು. ಮೂಡಬಿದಿರೆ, ಮಂಗಳೂರು (ಎಂ.ಎ. ಭರತನಾಟ್ಯ) 
– ನಾಟ್ಯ ಇನ್ಸ್‌ಟಿಟ್ಯೂಟ್‌ ಆಫ್ ಕಥಕ್‌ ಅಂಡ್‌ ಕೊರಿಯೋಗ್ರಫಿ, ಬೆಂಗಳೂರು
– ಎ.ಐ.ಎಂ.ಎಸ್‌ ಇನ್ಸ್‌ಟಿಟ್ಯೂಟ್‌, ಪೀಣ್ಯ, ಬೆಂಗಳೂರು (ಬಿ.ಎ. ಇನ್ಸ್‌ ಪರ್ಫಾಮಿಂಗ್‌ ಆರ್ಟ್ಸ್)
– ರೇವಾ ವಿಶ್ವವಿದ್ಯಾಲಯ, ಯಲಹಂಕ, ಬೆಂಗಳೂರು

– ಅನಂತನಾಗ್‌ ಎನ್‌.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.