ಅತಿಯಾಗಿ ಕಾಡಬೇಡಾ ಕಣೋ…
Team Udayavani, Jan 7, 2020, 5:05 AM IST
ಜಾತ್ರೆಯ ತೇರು ಶೃಂಗರಿಸಿಕೊಂಡಂತೆ ನಾನು ನಮ್ಮ ಮನೆಯ ದಾರಿ ತಿರುವಿನಲ್ಲಿ ನಿಂತು, ಕಾದಿದ್ದು ನಿನಗಾಗಿಯೇ ಗೆಳೆಯ.ಅದೇನೋಪ್ಪಾ… ನಿನ್ನ ಬಿಸಿಉಸಿರ ಶಾಖಕ್ಕೆ ಕರಿಗಿಬಿಡುತ್ತೇನೆ.
ನನ್ನ ಗಂಡುಬೀರಿತನವು ನಿನ್ನ ಪರಿಚಿತ ಸ್ಪರ್ಶದಲ್ಲಿ ಕಳೆದು ಹೋಗಿಬಿಡುತ್ತದೆ. ಕ್ಷಣದಲ್ಲಿ ನಾನು ನೀನಾಗುತ್ತೇನೆ ಗೊತ್ತಾ! ನಂತರ ಆ ಸ್ಪರ್ಶವನ್ನೇ ಮತ್ತೆ ಮತ್ತೆ ಬಯಸುತ್ತದೆ ಈ ಮನಸು. ಈ ಸಾಂಗತ್ಯ ಕನಸಲ್ಲೂ, ನನಸಲ್ಲೂ ಬೇಕು ಅನಿಸುತ್ತದೆ.ಇಂಥ ನನ್ನ ಕನವರಿಕೆ ಮುಗಿಲಿನಷ್ಟು .ಪ್ರೀತಿಯ ಮೋಹವಿದೆ ನಿನ್ನಲ್ಲಿ , ಅತಿಯಾದ ಹುಚ್ಚುತನವಿದೆ ನನ್ನಲ್ಲಿ. ನಾನು ಯಾಕೆ ಬಯಸಿದೆ ನಿನ್ನನ್ನು? ಹೀಗಂತ ಸುಮಾರು ಸಲ ಅನಿಸಿದ್ದಿದೆ. ಆದರೆ, ಇದಕ್ಕೆ ಉತ್ತರವಿಲ್ಲ. ದಿನ ಬೆಳಗು ಹರಿಯುವುದು ನಿನ್ನ ಹೆಸರ ಗುನುಗುವಿಕೆಯಿಂದಲೇ. ಅದು ಹೇಗೂ ಬಂದೆ ನೀನು ನನ್ನ ಬಾಳಿಗೆ?
ಏ ಕಾಶ್ ಕಭಿ ಏಸಾ ಹೋತಾ
ಕೆ ದೋ ದಿಲ್ ಹೋತೆ ಸೀನೇ ಮೇಂ….
ಇಕ್ ಟೂಟ್ ಭಿ ಜಾತಾ ಇಷಕ್
ಮೆ ತೋ, ತಕಲೀಫ್ ನ ಹೋತಿ ಜೀನೆ ಮೇಂ…..
ಇದರ ಭಾವದಲ್ಲಿ ಆಗಾಗ ತೇಲಿ ಬಿಡುತ್ತೇನೆ; ಹುಚ್ಚಿಯಂತೆ. ರಾತ್ರಿ ಚಂದ್ರನೊದಿಗೆ ಮಾತಿಗಿಳಿಯುತ್ತೇನೆ. ಅಮವಾಸ್ಯೆ ಬಂದರೆ ಅವನಿಲ್ಲದ ಬೇಸರದಲಿ ಜಗಳ ಮಾಡುತ್ತೇನೆ; ಕನ್ನಡಿಯೊಂದಿಗೆ.
ನಿನ್ನ ಬಗೆಗಿನ ನನ್ನ ಅತೃಪ್ತಿ ಈ ಜನುಮಕ್ಕೆ ಮುಗಿಯಲಾರದ್ದು. ನೀನು ಹಿಂಗೆಲ್ಲ ಕಾಡಬೇಡಾ ಕಣೋ. ಅತಿಯಾಗಿ ಕಾಡಿಸಬೇಡಾ ಹೀಗಂತ…ಆ ದೇವರಲ್ಲಿ ಬೇಡಿಕೊಳ್ಳದ ನಾನು ನಿನ್ನಲ್ಲಿ ಬೇಡಿ ಕೊಳ್ಳುತ್ತಿರುವೆ.
-ಪ್ರವೀಣಕುಮಾರ ಸುಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರೆನ್ಯೂ ಪವರ್ನಿಂದ 7 ವರ್ಷದಲ್ಲಿ 50 ಸಾವಿರ ಕೋಟಿ ರೂ. ಹೂಡಿಕೆಗೆ ಒಪ್ಪಂದ : ಸಿಎಂ ಬೊಮ್ಮಾಯಿ
ಶಿರಸಿ: ಚಾಲಿ ಅಡಿಕೆ ಕಳ್ಳತನ ಪ್ರಕರಣ; ಮತ್ತೋರ್ವ ಆರೋಪಿ ಬಂಧನ, ಆಟೋ ರಿಕ್ಷಾ ವಶಕ್ಕೆ
ಶಿಕ್ಷಣವನ್ನು ಕೇಸರೀಕರಣಗೊಳಿಸಲು ಹೊರಟಿದೆ ಬಿಜೆಪಿ : ಪ್ರಿಯಾಂಕ್ ಖರ್ಗೆ ಆರೋಪ
ಲಕ್ಷಾಂತರ ಭಕ್ತರ ಮಧ್ಯೆ ಸಾಂಘವಾಗಿ ನೆರವೇರಿದ ಹುಲಿಗೆಮ್ಮದೇವಿ ಮಹಾ ರಥೋತ್ಸವ
ಬಿಜೆಪಿ ಕ್ಯಾನ್ಸರ್ ಇದ್ದಂತೆ ಮನುಕುಲ ನಾಶ ಮಾಡಲಿದೆ : ಸಿದ್ದರಾಮಯ್ಯ ವಾಗ್ದಾಳಿ