Udayavni Special

ಪ್ರಿನ್ಸಿಪಾಲರ ಕೈ ಕಾಲಿಗೆ ಬಿದ್ದು…

Team Udayavani, Jun 27, 2017, 3:45 AM IST

JOJSH-1.jpg

ಪದವಿ ಅಭ್ಯಾಸ ಮಾಡುತ್ತಿದ್ದಾಗ ನಮ್ಮದು ಉಢಾಳರ ಗುಂಪು. ಆ ಗುಂಪಿನಲ್ಲಿ ನಾನೂ ಒಬ್ಬನಾಗಿದ್ದೆ. ಪದವಿಯಲ್ಲಿ ಬರುವ ಇಂಟರ್ನಲ್‌ ಎಕ್ಸಾಮ್ಸ್‌ ದಿನವಷ್ಟೇ ನನಗೆ, ಗೆಳತಿ ಶ್ವೇತಾ ನೆನಪಾಗುತ್ತಿದ್ದಳು.

ನಮ್ಮ ಗುಂಪಿನ ಹುಡುಗರೆಲ್ಲಾ ಸೀರಿಯಸ್‌ ಆಗಿ ಓದಲು ಪ್ರಾರಂಭಿಸಿದರೆ, ನಾನು ಪರೀಕ್ಷೆಯ ಹಿಂದಿನ ದಿನ ಇಂಪಾರ್ಟೆಂಟ್‌ ಪಾಯಿಂಟ್‌ಗಳನ್ನು ಸಣ್ಣ ಸಣ್ಣ ಅಕ್ಷರದಲ್ಲಿ ಚಿಕ್ಕ- ಚಿಕ್ಕ ಚೀಟಿಗಳಲ್ಲಿ ಬರೆಯುವುದರಲ್ಲಿ ಮಗ್ನನಾಗಿರುತ್ತಿದ್ದೆ. ಮರುದಿನ ಆ ಚೀಟಿಗಳು ಕೈ ಹಿಡಿಯುತ್ತವೆ ಎಂದು.

ಇಂಟರ್ನಲ್ಸ್‌ನಲ್ಲಿ ಬೆಂಚಿಗೆ ಇಬ್ಬರನ್ನು ಕೂರಿಸುತ್ತಿದ್ದರು. ನನ್ನ ಪಕ್ಕದಲ್ಲಿ ಕೂರುತ್ತಿದ್ದವಳೇ ಶ್ವೇತಾ. ಅವಳು ಕೂಡಾ ನನ್ನ ಹಾಗೆಯೇ ಪೆದ್ದಿ! ನನಗೂ ಅವಳಿಗೂ ಇದ್ದ ವ್ಯತ್ಯಾಸವೆಂದರೆ ಅವಳು ಪರೀಕ್ಷೆಗೆ ಕಾಪಿ ಚೀಟಿಗಳನ್ನು ತರುತ್ತಿರಲಿಲ್ಲ. ಮನಸ್ಸಿಗೆ ಬಂದದ್ದನ್ನು ಬರೆಯುತ್ತಿದ್ದಳು. ಹಾಗೆ ಬೇಕಾಬಿಟ್ಟಿ ಬರೆದೂ ಇದುವರೆಗಿನ ಪರೀಕ್ಷೆಗಳನ್ನು ಹೇಗೆ ಪಾಸು ಮಾಡಿದ್ದಳ್ಳೋ ನನಗಂತೂ ಗೊತ್ತಿಲ್ಲ! ನಾನು ದಡ್ಡ ಶಿಖಾಮಣಿ. ಪರೀಕ್ಷೆ ಬರೆಯಲು ಕಾಪಿಚೀಟಿ ಬಿಟ್ಟರೆ ಬೇರೆ ಯಾವುದೇ ಮಾರ್ಗ ನನಗೆ ಗೊತ್ತಿಲ್ಲ. ಅದೊಮ್ಮೆ ನನ್ನಲ್ಲಿದ್ದ ಕಾಪಿಚೀಟಿಗಳನ್ನು ನೋಡಿ ಬರೆಯಲು ಶುರು ಮಾಡಿದೆ. ಪಾಪ, ಅವಳಿಗೂ ಆಸೆಯಾಯಿತು ಅಂತ ಕಾಣುತ್ತೆ. ಅವಳು ನನ್ನ ಪೇಪರ್‌ ನೋಡಿಕೊಂಡು ಬರೆಯಲು ಪ್ರಾರಂಭಿಸಿದಳು. ಅಂದಿನಿಂದಲೇ ನಾವು ಸಮಾನ ಚಿಂತನೆ, ಯೋಚನೆಯ ಫ್ರೆಂಡ್ಸ್‌ ಆದೆವು! ಅಂದಿನಿಂದ, ನಾನು ಕಾಪಿ ಚೀಟಿಗಳನ್ನು ಬರೆದು ಅವಳಿಗೆ ಕೊಡುತ್ತಿದ್ದೆ.

ಅವಳು ಕಾಪಿ ಚೀಟಿಗಳನ್ನು ವೇಲ್‌ ಅಡಿ ಮುಚ್ಚಿಟ್ಟು ಯಾರಿಗೂ ಕಾಣದಂತೆ ಸರಿಸಿ ಸರಿಸಿ ಬರೆಯಲು ಶುರು ಮಾಡುತ್ತಿದ್ದಳು. ನಾನು, ಅವಳೇನು ಬರೀತಾಳ್ಳೋ ಅದನ್ನೇ ಕಾಪಿ ಮಾಡಲು ಶುರುಮಾಡಿದೆ. ಅವಳು ಗೀಟು ಹೊಡೆದರೆ ನಾನೂ ಗೀಟು ಹಾಕುತ್ತಿದ್ದೆ. ಅವಳು ನನ್ನ ಕಾಪಿ ಚೀಟಿ ನೋಡಿ ಬರೆಯುತ್ತಿದ್ದುದನ್ನು ಕಂಡು ನನಗೂ ಒಂದು ಥರ ಹೆಮ್ಮೆ. ಅದೊಮ್ಮೆ, ನಮ್ಮ ನಕಲು ಪ್ರಕ್ರಿಯೆ ನಡೆಯುತ್ತಿದ್ದಂತೆಯೇ ಅನುಮಾನಗೊಂಡ ಅಧ್ಯಾಪಕರು ನಮ್ಮನ್ನು ಎದ್ದು ನಿಲ್ಲಲು ಹೇಳಿದರು. ಅವಳು ಗಡಗಡ ನಡುಗುತ್ತಾ ಎದ್ದು ನಿಂತಳು. ಆ ರಭಸಕ್ಕೆ ವೇಲ್‌ ಕೆಳಗಿದ್ದ ಕಾಪಿ ಚೀಟಿಗಳು ಹಾರಿ ನೆಲದ ಮೇಲೆ ಬಿದ್ದವು. ಅಧ್ಯಾಪಕರು ತಕ್ಷಣವೇ ನಮ್ಮಿಬ್ಬರ ಪೇಪರ್‌ ಕಿತ್ತುಕೊಂಡು, ಪ್ರಿನ್ಸಿಪಾಲ್‌ ಹತ್ತಿರ ಕರೆದುಕೊಂಡು ಹೋಗಿ, ನಡೆದಿದ್ದನ್ನೆಲ್ಲಾ ಹೇಳಿದರು. ಕೋಪಗೊಂಡ ಪ್ರಿನ್ಸಿಪಾಲರು “ಇವರಿಗೆ ಮುಂದಿನ ಎಕ್ಸಾಮ್‌ಗೆ ಹಾಲ್‌ಟಿಕೆಟ್‌ ಕೊಡಬೇಡಿ’ ಗದರಿಸಿ ಕಳುಹಿಸಿದರು. ನಾವು ಪೆಚ್ಚುಮೋರೆ ಹಾಕಿಕೊಂಡು ಹೊರಗಡೆ ಬಂದಿದೆ. ಕೆಲವು ದಿನಗಳ ನಂತರ ಪ್ರಿನ್ಸಿಪಾಲರ ಕೈ ಕಾಲಿಗೆ ಬಿದ್ದು ಕ್ಷಮೆ ಕೇಳಿ ಹಾಲ್‌ಟಿಕೆಟ್‌ ಪಡೆದುಕೊಂಡು ಪರೀಕ್ಷೆ ಬರೆದೆವು.

ಬಸವರಾಜ ಕೊಪ್ಪದ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ

ಭಾರತದ ಈ ಎರಡು ರಾಜ್ಯ, ಕೇಂದ್ರಾಡಳಿತ ಪ್ರದೇಶಗಳತ್ತ ಮಾತ್ರ ಕೋವಿಡ್ ವೈರಸ್ ಸುಳಿದಿಲ್ಲ!

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ನಕಲಿ ಪಾಸ್‌ ಮಾಡಿದವರ ವಿರುದ್ಧ ಕ್ರಮ: ಬಸವರಾಜ ಬೊಮ್ಮಾಯಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

ಫೋರ್ಬ್ಸ್ ಪಟ್ಟಿಯಲ್ಲಿ ಅಂಬಾನಿ, ದಮನಿ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ

24ಗಂಟೆಯಲ್ಲಿ 549 ಕೋವಿಡ್ ಪ್ರಕರಣ ಪತ್ತೆ, 49 ಸಾವಿರ ವೆಂಟಿಲೇಟರ್ಸ್ ಗೆ ಬೇಡಿಕೆ: ಸಚಿವಾಲಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಪ್‌ ಗೇಮ್‌ ಲರ್ನಿಂಗ್‌ ಚೆಸ್‌

ಆ್ಯಪ್‌ ಗೇಮ್‌ ಲರ್ನಿಂಗ್‌ ಚೆಸ್‌

ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

ವರ್ಕ್‌ ಫ್ರಂ ಹೋಮ್‌ ಕತೆಗಳು : ಆಫೀಸೇ ಚೆನ್ನಾಗಿತ್ತು…

josh-tdy-7

ಕೋವಿಡ್ 19 ಯೋಧರು

josh-tdy-6

ನಾನ್‌ ಮಾಡಿದ ತಪ್ಪಾದ್ರೂ ಏನು?

josh-tdy-5

ನಿನಗೆ ಸ್ವಲ್ಪಾನೂ ಗೊತ್ತಾಗಲ್ಲ ಬಿಡಲೇ…

MUST WATCH

udayavani youtube

ಉದಯವಾಣಿಯ ‘ರೈತ ಸೇತು’ – ಇದು ಬೆಳೆಗಾರರು ಗ್ರಾಹಕರ ನಡುವಿನ ವ್ಯವಹಾರ ಸೇತು

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

ಹೊಸ ಸೇರ್ಪಡೆ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಮುಖ್ಯಮಂತ್ರಿಗಳ ಕೋವಿಡ್ ಪರಿಹಾರ ನಿಧಿಗೆ ತಿಂಗಳ ವೇತನ ದೇಣಿಗೆ ನೀಡಿದ ಅರಣ್ಯಾಧಿಕಾರಿ

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ಕೋವಿಡ್ 19 ಮಣಿಸಲು ಸಾಮಾಜಿಕ ಅಂತರ & ಲಾಕ್ ಡೌನ್ ಅತೀ ದೊಡ್ಡ ಲಸಿಕೆ: ಸಚಿವ ಹರ್ಷವರ್ಧನ್

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರು ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ರಾಜ್ಯದ ಗಡಿ ದಾಟಿ ತಮಿಳುನಾಡು ಪೊಲೀಸರ ಚೆಕಿಂಗ್ ಕಾರ್ಯಾಚರಣೆಗೆ ಬೊಮ್ಮಾಯಿ ಗರಂ

ಮಹಾರಾಷ್ಟ್ರ: ಎಲ್ಲಾ ಶಾಸಕರು, ಸಚಿವರ ಸಂಬಳದಲ್ಲಿ ಶೇ.30ರಷ್ಟು ಕಡಿತ: ಸಂಪುಟ ಒಪ್ಪಿಗೆ