ಮಾತಿಗೆ ಸೋತೆ ಪ್ರೀತಿಗೆ ಸೋತೆ ಭಾರಕೆ ನಾ ಸೋತು ಹೋದೆ 


Team Udayavani, Nov 28, 2017, 2:40 PM IST

28-23.jpg

ನನಗೀಗ ಹೊಸ ಗೆಳೆಯರು ಸಿಕ್ಕಿದ್ದಾರೆ. ಅವರೆಲ್ಲಾ ನನ್ನನ್ನು ಚೆನ್ನಾಗಿ ಆರೈಕೆ ಮಾಡುತ್ತಾರೆ. ಆದರೂ ನಾನು ನಿಮ್ಮನ್ನು ಮರೆತಿಲ್ಲ, ನೀವು ಮೇಷ್ಟ್ರಿಗೆ ಗೊತ್ತಾಗದಂತೆ ಪೀರಿಯೆಡ್‌ ಪೂರ್ತಾ ಜಗಿದು, ನಂತರ ಉಗಿಯದೇ ಅಂಟಿಸಿಹೋದ ಬಬಲ್‌ಗ‌ಂ ಕೂಡ ಈಗಲೂ ನನ್ನೊಂದಿಗಿದೆ….

ನನ್ನ ಕಥೆ ಕೇಳುವವರು ಯಾರೂ ಇಲ್ವಾ? ನೀವೆಲ್ಲಾ ಇಷ್ಟು ಸ್ವಾರ್ಥಿಗಳಾ? ಕಾಲೇಜು ಬಿಟ್ಟು ಹೋದ ಮೇಲೆ ಒಮ್ಮೆಯಾದರೂ ನನ್ನನ್ನು ಭೇಟಿ ಮಾಡಲು ಬಂದಿದ್ದೀರಾ? ಕಾಟಾಚಾರಕ್ಕಾದರೂ ಹೇಗಿದ್ದೀಯಾ ಅಂತ ಕೇಳಿದಿರಾ? ನನ್ನ ಮೇಲೆ ಇಷ್ಟೊಂದು ಕೋಪ, ಅಸಡ್ಡೆ ಯಾಕೆ? ನಿಮ್ಮ ಕಾಲೇಜು ಜೀವನದುದ್ದಕ್ಕೂ ಜೊತೆಗಿದ್ದವನು ನಾನು. ಒಂದು ದಿನವೂ ರಜೆ ತೆಗೆದುಕೊಳ್ಳದ ನನ್ನದು ಕಡ್ಡಾಯ ಹಾಜರಾತಿ.

 ಹದಿಹರೆಯದ ನಿಮ್ಮೆಲ್ಲಾ ಕನಸುಗಳು, ಆ ಕ್ಷಣದ ಉನ್ಮಾದವೆಲ್ಲಾ ನನಗೆ ಗೊತ್ತು. ಅವೆಲ್ಲದರ ಕುರುಹುಗಳು, ಜಂಜಾಟದ ದಿನಗಳ ಒದ್ದಾಟದ ನೆನಪುಗಳು ಇನ್ನೂ ನನ್ನ ಮೇಲೆ ಹಾಗೇ ಇವೆ. ಅವನ್ನೆಲ್ಲಾ ನಿಮಗೆ ತೋರಿಸುವಾಸೆ. ನೀವು ಪ್ರೀತಿಸಿದ ಹುಡುಗಿ(ಗರ)ಯರ ಹೆಸರು, ನೀವು ಪ್ರೀತಿಯಿಂದ ಅವಳ(ನ) ಹೆಸರು ಪಿಸುಗುಟ್ಟಿ ಕರೆಯುತ್ತಿದ್ದಾಗ ನಿಮ್ಮ ಬಿಸಿ ಉಸಿರು ನನಗೆ ತಾಕಿ, ಹಾದು ಹೋಗುವಾಗ ನನಗೆಷ್ಟು ರೋಮಾಂಚನ ಆಗಿದೆ ಗೊತ್ತಾ? ನೀವು ನಿದ್ದೆ ಬಂದು ತೂಕಡಿಸಿ ಬಿದ್ದದ್ದೂ ನನ್ನ ಮೇಲೆಯೇ, ಹುಡುಗಿ ತಿರುಗಿ ನೋಡಿ ನಕ್ಕಾಗ ನಾಚಿಕೆಯಿಂದ ಬಾಗಿ ನಿಮ್ಮ ನಗುವನ್ನು ನನಗೆ ಮಾತ್ರ ತೋರಿಸುತ್ತಿದ್ದಿರಿ. ಥೂ.. ಅದು ಬಿಡಿ. ನೀವು ಎಕ್ಸಾಮ್‌ನಲ್ಲಿ ಕಾಪಿ ಹೊಡೆಯಲು ನನಗೆ ಗಾಯ ಮಾಡಿ, ಹೊಕ್ಕಿಸಿದ ಚೀಟಿ ಇನ್ನೂ ನನ್ನೊಳಗೆ ಭದ್ರವಾಗಿದೆ.

ನಿಮ್ಮ ಹಾಗೆಯೇ ನನಗೂ ಹೊಸ ಗೆಳೆಯರು ಸಿಕ್ಕಿದ್ದಾರೆ. ನಿಮ್ಮಷ್ಟು ಭಾರ ಇಲ್ಲದ್ದಿದ್ದರೂ ಬಹಳ ಚೆನ್ನಾಗಿ ಆರೈಕೆ ಮಾಡುತ್ತಾರೆ. ಹಾ.. ಹಾ! ಮಳೆ ಬಂದರೆ ಸಾಕು, ಒಂದು ಹನಿಯೂ ನನ್ನ ಮೇಲೆ ಬೀಳದಂತೆ ತಕ್ಷಣ ಕಿಟಕಿ ಮುಚ್ಚಿಬಿಡುತ್ತಾರೆ. ಅವರಿಗೆಲ್ಲಾ ಅದೆಷ್ಟು ಕರುಣೆ ನನ್ನ ಮೇಲೆ ಅಂತೀರಾ? ಆದ್ರೂ ನಂಗೊತ್ತು, ಅವರು ಮಳೆ ಬಂದಾಗ ಕಿಟಕಿ ಹಾಕೋದು ತಮ್ಮ ಪುಸ್ತಕ ಮತ್ತು ಮೈ ಮೇಲೆ ನೀರು ಬೀಳಬಾರದು ಅಂತ! ಇರ್ಲಿ, ಅದ್ರಿಂದ ನಂಗೂ ಒಳ್ಳೇದೇ ಆಗುತ್ತೆ ಬಿಡಿ.

ನಿಮ್ಮ ನೆನಪಿನ ಪುಟಗಳಲ್ಲಿ ಅವಿತು ಕುಳಿತಿದ್ದೀನಿ ಎಂದು ನಂಬಿಕೆ ಇಟ್ಟುಕೊಂಡು ಈ ಪತ್ರ ಬರೀತಾ ಇದ್ದೀನಿ. ಪತ್ರ ಓದಿದ ನಂತರವಾದ್ರೂ, ಬಂದು ಮಾತಾಡಿಸ್ಕೊಂಡು ಹೋಗಿ. ಇನ್ನೆಷ್ಟು ವರ್ಷ ನನ್ನ ಅಸ್ತಿತ್ವವೋ ಗೊತ್ತಿಲ್ಲ? ನೀವು ದವಡೆಯಲ್ಲಿ ಜಗಿದು ಜಗಿದು ತಿಂದು ಅಂಟಿಸಿದ ಬಬಲ್‌ ಗಮ್‌ ಇನ್ನೂ ಹಾಗೆ ಇದೆ… ಅಸಹ್ಯ ಅಂತ ಯಾರೂ ಅದನ್ನು ಮುಟ್ಟುತ್ತಿಲ್ಲ. ಅದನ್ನು ತೆಗೆಯಲಿಕ್ಕಾದರೂ ಬನ್ನಿ… ಕಾಯ್ತಾ ಇರ್ತೀನಿ. ನಿಮ್ಮ ಭಾರಕ್ಕೆ ನಾನು ಅಭಾರಿ.

ಇಂತಿ ನಿಮ್ಮ ಪ್ರೀತಿಯ
ಬೆಂಚು
                                            

ಸುಜಿತ್‌ ಎಸ್‌

ಟಾಪ್ ನ್ಯೂಸ್

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Davanagere; ದೇಶದ ಎಲ್ಲೆಡೆ ಮೋದಿ ಅಲೆ ಕಂಡು ಬರುತ್ತಿದೆ: ಶೋಭಾ ಕರಂದ್ಲಾಜೆ

Aravinda Limbavali reacts to Prajwal Case

Prajwal Case; ಪಕ್ಷಕ್ಕೆ ಮುಜುಗರ ಆಗಿರುವುದು ಸತ್ಯ: ಅರವಿಂದ ಲಿಂಬಾವಳಿ

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

Dakshina Kannada: ದ.ಕ. ಜಿಲ್ಲೆಗೆ ಮೂರೇ ತಿಂಗಳಲ್ಲಿ 1.23 ಕೋಟಿ ಪ್ರವಾಸಿಗರು !

6-virtual-world

UV Fusion: ವರ್ಚುವಲ್‌  ಪ್ರಪಂಚದಲ್ಲಿ ಅನಾಥರು

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ

Pen Drive Case; ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೋಟಿಸ್ ಹೊರಡಿಸಿದ ಎಸ್ಐಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

8-uv-fusion

UV Fusion: ಬಾಯಾರಿ ಬರುವ ಬಾನಾಡಿಗಳ ರಕ್ಷಿಸೋಣ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

ರಂಗ ಸಂಗಾತಿ 16ನೇ ವಾರ್ಷಿಕೋತ್ಸವ; ರಂಗಭಾಸ್ಕರ ಪ್ರಶಸ್ತಿಗೆ ನಟ ನವೀನ್‌ ಪಡೀಲ್‌ ಆಯ್ಕೆ

veerappa-moily

Prajwal case; ಪಾತ್ರ ಯಾರದ್ದು ಮುಖ್ಯವಲ್ಲ; ಅಭಿನಯ ಮಾಡಿದ್ದು ಮುಖ್ಯ; ವೀರಪ್ಪ ಮೊಯ್ಲಿ

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

ಆಪತ್ಕಾಲಕ್ಕೆ ಆತಂಕ; “ರಕ್ತ’ ಅಭಾವ- ಬೇಡಿಕೆ ವಿಪರೀತ ಏರಿಕೆ!

7-uv-fusion

Father: ಅಪ್ಪ – ಮರೆಯಲಾಗದ ಬಂಧ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.