ಸ್ಸಾರಿ ಕಣೋ…


Team Udayavani, Aug 8, 2017, 6:00 AM IST

oasis–nagaratna-x.jpg

ನಲ್ಮೆಯ ಗೆಳೆಯ,
ನಮ್ಮಿಬ್ಬರ ಪ್ರೇಮಯಾನ ಆರಂಭವಾಗಿ ವರ್ಷಗಳುರುಳಿದವು. ಹೇಗೆ ಸಮಯ ಕಳೆಯಿತೆಂದೇ ತಿಳಿಯಲಿಲ್ಲ. ಈ ನಡುವೆ ಜಗಳಗಳು, ಪ್ರೀತಿ ಮುದ್ದಾಟಗಳು ಎಷ್ಟು ನಡೆದುಹೋದವಲ್ಲ. ಒಂದಂತೂ ನಿಜ. ನಮ್ಮ ನಡುವಿನ ಕೋಪ ಕ್ಷಣಿಕದ್ದು, ಪ್ರೀತಿ ಮಾತ್ರ ಶಾಶ್ವತವಾದದ್ದು.ಗೋಡೆ ಮೇಲೆ ನಮ್ಮ ಹೆಸರು ಗೀಚಿದ್ದು, ಮೇಷ್ಟ್ರು ಪಾಠ ಮಾಡುತ್ತಿದ್ದಾಗ ನನ್ನತ್ತ ರಾಕೆಟ್‌ ಹಾರಿಸಿದ್ದು, ಇದೇ ಕಾರಣಕ್ಕೆ ಲೆಕ್ಚರರ್‌ ಬಳಿ ಬೈಸಿಕೊಂಡಿದ್ದು. ಕ್ಲಾಸ್‌ಗೆ ಬಂಕ್‌ ಹಾಕಿ ಜೊತೆಗೆ ಫಿಲಂ ನೋಡಿದ್ದು, ಲಾಸ್ಟ್‌ ಬೆಂಚಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದದ್ದು… ಎಲ್ಲವನ್ನೂ ನೆನೆಯಲು ಈಗ ತುಂಬಾ ಹಿತಕರವೆನಿಸುತ್ತದೆ.

ನಿನ್ನ ಪರಿಚಯವಾದಾಗಿನಿಂದ ನಾನು ನಿನ್ನ ಮಡಿಲಲ್ಲಿರುವ ಮಗುವಿನಂತಾಗಿರುವೆ. ನಿನ್ನನ್ನು ಕಂಡರೆ ಅದೇನೋ ವಾತ್ಸಲ್ಯ, ಮಮತೆ. ನಿನ್ನ ಬಳಿ ಎಲ್ಲವನ್ನೂ ಹೇಳಿಕೊಳ್ಳುವಾಸೆ. ನನ್ನೆಲ್ಲಾ ಕಷ್ಟ ಸುಖಗಳಲ್ಲಿ ನಿನ್ನನ್ನು ಭಾಗಿಯಾಗಿಸಿಕೊಳ್ಳೋ ಆಸೆ. ಆದರೂ ಆ ದಿನ ಯಾಕೆ ಹಾಗೆ ಮಾಡಿದೆ ಅನ್ನೋದಕ್ಕೆ ಉತ್ತರ ನನಗೂ ತಿಳಿದಿಲ್ಲ. 

ಅಂದು ನೀನು ಪ್ರೇಮದ ವಿಷಯ ಪ್ರಸ್ತಾಪಿಸಿದಾಗ, ನನಗೆ ಏನು ಹೇಳಬೇಕೆಂದೇ ತೋಚಲಿಲ್ಲ. ಏಕೆಂದರೆ ಯಾವತ್ತೂ ಅದರ ಬಗ್ಗೆ ಯೋಚಿಸಿಯೇ ಇರಲಿಲ್ಲ. ಅದಕ್ಕೆ ನಾನು ಮೌನವಾಗಿಬಿಟ್ಟೆ. ಆ ನನ್ನ ಮೌನವನ್ನು ನೀನು ಏನೆಂದು ಅರ್ಥೈಸಿರಬಹುದೆಂದು ನಾನು ಊಹಿಸಬಲ್ಲೆ. ನನ್ನ ಮೌನದಿಂದ ನಿನಗೆ ನೋವಾಗಿರಲೇಬೇಕು. ಅದಕ್ಕಾಗಿ ಕ್ಷಮೆ ಇರಲಿ. ನಾವಿಬ್ಬರೂ ಯಾವತ್ತಿಗೂ ಜೊತೆಯಿರಬೇಕೆಂಬ ನಿನ್ನ ಆಸೆ ಈಗ ನನ್ನದೂ ಕೂಡ. ಆದಷ್ಟು ಬೇಗನೆ ನಿನ್ನನ್ನು ಸೇರುವಾಸೆ. ಮತ್ತೆ ಹೇಳುತ್ತಿದ್ದೇನೆ- ಸ್ಸಾರಿ!

ಎಂದೆಂದಿಗೂ ನಿನ್ನವಳು

– ನಾಗರತ್ನ ಮತ್ತಿಘಟ್ಟ, ಶಿರಸಿ

ಟಾಪ್ ನ್ಯೂಸ್

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

1-qewqewq

BJP Rally; ರಾಮ ಮಂದಿರ ನಿರ್ಮಾಣಕ್ಕೆ 56 ಇಂಚಿನ ಎದೆ ಬೇಕಾಗಿತ್ತು: ಪ್ರಧಾನಿ ಮೋದಿ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Netherlands Trip: ಹೀಗೊಂದು ನಿಶ್ಶಬ್ದ ಪಯಣ!

Netherlands Trip: ಹೀಗೊಂದು ನಿಶ್ಶಬ್ದ ಪಯಣ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ

1-dasdas

PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

1—dsdasd

Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.