ಬ್ಲ್ಯಾಕ್ ಬೋರ್ಡ್ ನೀ ಇಲ್ಲೇ ಇರು…

Team Udayavani, May 2, 2017, 12:12 PM IST

black-board.jpg

ಬ್ಲ್ಯಾಕ್‌ಬೋರ್ಡು ಸಂಬಂಧಗಳನ್ನು ಬೆಳೆಸುವ ಸೇತುವೆ. ನಮಗೆ ಪಾಠ ಕಲಿಸಿದ, ನಮ್ಮನ್ನು ತಿದ್ದಿತೀಡಿದ ಗುರು. ಕ್ಲಾಸಿನಲ್ಲಿ ಗಲಾಟೆ ಮಾಡಿದಾಗ ಇದೇ ಬೋರ್ಡಿನ ಬಾ ಮೇಲೆ ಹೆಸರು ಅಚ್ಚಾಗಿ, ಪೆಟ್ಟು ತಿಂದಿದ್ದನ್ನೂ ಮರೆಯುವ ಹಾಗಿಲ್ಲ!

ವಸ್ತು ನಿರ್ಜೀವವಾದರೂ ಒಡಲಲ್ಲಿ ಕತ್ತಲನ್ನು ಇರಿಸಿಕೊಂಡು ಜ್ಞಾನದ ದೀವಿಗೆಯನ್ನು ಬೆಳಗುವ ಶಕ್ತಿ ಅದು. ಇಲ್ಲಿ ವರ್ಣದ ವ್ಯಾಮೋಹ ಇಲ್ಲ, ಬಣ್ಣ ಕಪ್ಪಾದರೂ ತನ್ನವರ ಜೀವ ಬೆಳಗುವ ಅದಮ್ಯ ಶಕ್ತಿ ಅದರಲ್ಲಿದೆ. ಅಕ್ಷರ ಜ್ಞಾನದ ಬರವಣಿಗೆಯ ಮೊದಲ ಪಾಠ ಮಾಡುವ, “ಅದು’ ಒಂದರ್ಥದಲ್ಲಿ ಜೀವನವನ್ನು ರೂಪಿಸುವ ಗುರುವೂ ಹೌದು. ನಮ್ಮೊಟ್ಟಿಗೆ ಬೆರೆತು ತರಲೆ, ತುಂಟಾಟ, ಸುಮಧುರ ನೆನಪುಗಳಿಗೆ ಸಾಕ್ಷಿಯಾಗುವ ಸ್ನೇಹಿತನೂ ಹೌದು. ಕಾಡಿದ, ದ್ವೇಷಿಸಿದ ವೈರಿಯೂ ಹೌದು. ಅದೇ, ವಿದ್ಯೆಯ ಮೊದಲಕ್ಷರಗಳನ್ನು ತನ್ನೆದೆಯ ಮೇಲೆ ಮೂಡಿಸಿ ನಮ್ಮೆದೆಗೆ ಇಟ್ಟ ಬ್ಲ್ಯಾಕ್ಬೋರ್ಡ್‌.
ಅಕ್ಷರಜ್ಞಾನದ ಮೂಲ ಕಲಿಸುವುದೇ ಬ್ಲ್ಯಾಕ್ ಬೋರ್ಡ್‌. ವಿದ್ಯಾರ್ಥಿಗಳಿಗೂ ಬ್ಲ್ಯಾಕ್ ಬೋರ್ಡ್‌ಗೂ ಅವಿನಾಭಾವ
ನಂಟಿದೆ. ಅದು ವಿದ್ಯಾರ್ಥಿ ಜೀವನದ ಹಲವು ನೆನಪುಗಳನ್ನು ಕಟ್ಟಿಕೊಡುವ ನೆನಪಿನಬುತ್ತಿ. ಕೊಠಡಿ ಇಲ್ಲದೆ ಪಾಠ
ಕೇಳಿದ ಅದೆಷ್ಟೋ ಸಂದರ್ಭದಲ್ಲೂ ಬ್ಲಾಕ್‌ ಬೋರ್ಡ್‌ ಮಾತ್ರ ಹಿಂಬಾಲಿಸುತ್ತಿತ್ತು. ಬ್ಲ್ಯಾಕ್ ಬೋರ್ಡ್‌ ಕಲಿಕೆಯ/ ಕಲಿಸುವ ವಸ್ತು ಮಾತ್ರ ಅಲ್ಲ. ಸಂಬಂಧಗಳನ್ನು ಬೆಸೆಯುವ ಸೇತುವೂ ಹೌದು.

ಬ್ಲ್ಯಾಕ್‌ ಬೋರ್ಡ್‌ ಎಂಬುದು ವಿದ್ಯಾರ್ಥಿ, ಶಿಕ್ಷಕರ ನಡುವಿನ ಅಮೂರ್ತ ಸಂಬಂಧದ ಮೇಳೈಕೆಯ ಸಾಧನ. ಬಾಲ್ಯದ
ಕುತೂಹಲಗಳಿಗೆ, ಪ್ರಯೋಗಗಳಿಗೆ ಸಾಕ್ಷಿಯಾಗಿ ಜೊತೆಗಿದ್ದ ಸ್ನೇಹಿತನೂ ಹೌದು, ಶತ್ರುವೂ ಹೌದು. ಅ ಆ ಇ ಈ
ಎಂಬ ವರ್ಣಾಕ್ಷರಗಳನ್ನು ನಮ್ಮೆದೆಗೆ ಬೀಳಿಸಿದ್ದು, ಗಣಿತದ ಲೆಕ್ಕಗಳನ್ನು ನಮ್ಮೊಳಗೆ ಸೇರಿಸಿದ್ದು, ಇಂಗ್ಲಿಷ್‌- ಹಿಂದಿ ಅಕ್ಷರಗಳ ನಾಜೂಕುತನ ಪರಿಚಯಿಸಿದ್ದು, ನಾಯಕತ್ವದ ಗುಣ ಬೆಳೆಸಿದ್ದು, ತರಗತಿಯಲ್ಲಿ ಗಲಾಟೆ ಮಾಡುತ್ತಿದ್ದ ಸ್ನೇಹಿತರ ಹೆಸರನ್ನು ಬೋರ್ಡ್‌ ಮೇಲೆ ಬರೆದು ಗುರುಗಳಿಂದ ಹೊಡೆಸಿದ್ದು, ಕೆಲವೊಮ್ಮೆ ನಾವೂ ಹೊಡೆಸಿಕೊಂಡಿದ್ದು, ಗಣಿತದ ಟೀಚರ್‌, ಬೋರ್ಡ್‌ ಮೇಲೆ ಲೆಕ್ಕ ಬರೆಯಲು ಹೇಳಿದ ಕ್ಷಣದಲ್ಲಿ, ಸ್ನೇಹಿತನಾಗಿದ್ದ ಬೋರ್ಡ್‌ ಶತ್ರುವಾಗಿ
ಕಂಡಿದ್ದು… ಇಂಥ ಬಾಲ್ಯದ ನೆನಪು ಒಂದು ಕಡೆಯಾದರೆ, ಕಾಲೇಜು ಹಂತದಲ್ಲೂ ಬ್ಲ್ಯಾಕ್ ಬೋರ್ಡ್‌ ಎಲ್ಲರ ಆತ್ಮೀಯ ಸ್ನೇಹಿತ. ಹಳೆಯ ಸಿನಿಮಾಗಳಲ್ಲಿ ತೋರಿಸುವಂತೆ ಹಲವು ಪ್ರೇಮ ನಿವೇದನೆಗಳಿಗೂ ಬ್ಲ್ಯಾಕ್ ಬೋರ್ಡ್‌ ಮಧ್ಯವರ್ತಿ!
ಆದರೆ ಅಭಿವೃದ್ಧಿ ಎಂದರೆ ತಂತ್ರಜಾnನ ಎನ್ನುತ್ತಾ ತಂತ್ರಜಾnನದ ಆಮಿಷಕ್ಕೆ ಬಲಿಯಾಗಿರುವ ನಾವು ಬ್ಲ್ಯಾಕ್ ಬೋರ್ಡ್‌ ಬಿಟ್ಟು ಸ್ಮಾರ್ಟ್‌ ಬೋರ್ಡನ್ನು ಅಪ್ಪಿಕೊಳ್ಳುವ ಧಾವಂತದಲ್ಲಿದ್ದೇವೆ.

ಭಾರತೀಯ ಪರಂಪರೆಯನ್ನು ಹೊಂದಿದ ನಮ್ಮದೇ ಶೈಲಿಯ ಗುರುಕುಲ ಪದ್ಧತಿ ಮಾಯವಾಗಿ ಬ್ರಿಟಿಷರ ಪಳೆಯುಳಿಕೆಯ ಶಿಕ್ಷಣ ಪದ್ಧತಿ ತನ್ನ ಅಸ್ತಿತ್ವವನ್ನು ಬಲವಾಗಿ ರೂಪಿಸಿಯಾಗಿದೆ. ಈಗ ಬ್ಲ್ಯಾಕ್ ಬೋರ್ಡ್‌ಗಳ ಸರದಿ. ಮುಂದೊಂದು ದಿನ ಬ್ಲಾಕ್‌ ಬೋರ್ಡನ್ನು ಸಹ ಮ್ಯೂಸಿಯಂಗಳಲ್ಲಿ ಕಾಣಬಹುದಾದ ಸಂದರ್ಭಕ್ಕೆ ಅಣಿಯಾಗುತ್ತಿದ್ದೇವೇನೋ ಎಂದೆನಿಸುತ್ತಿದೆ. ಸ್ಮಾರ್ಟ್‌ ಬೋರ್ಡ್‌ ಅವಶ್ಯ ನಿಜ. ಆದರೆ, ಎಲ್ಲಾ ಪಠ್ಯವನ್ನು ಅದರಿಂದಲೇ ವಿವರಿಸಿದಲ್ಲಿ ಅದು ಅರ್ಥಪೂರ್ಣವಾಗಿರುವುದಿಲ್ಲ. ಉದಾಹರಣೆಗೆ, ಗಣಿತದ ಲೆಕ್ಕವನ್ನು ಬ್ಲ್ಯಾಕ್ ಬೋರ್ಡ್‌ನಲ್ಲಿ
ಹೇಳಿಕೊಡುವಷ್ಟು ಸರಳವಾಗಿ ಸ್ಮಾರ್ಟ್‌ ಬೋರ್ಡ್‌ನಲ್ಲಿ ವಿವರಿಸಲು ಸಾಧ್ಯವಿಲ್ಲ. ಬ್ಲ್ಯಾಕ್ ಬೋರ್ಡ್‌ನೊಂದಿಗಿನ
ಪಾಠದಲ್ಲಿ ಶಿಕ್ಷಕರ ಜ್ಞಾನ, ಅನುಭವ, ಓದು, ಪಠ್ಯಗಳ ರಸಪಾಕವಿರುತ್ತದೆ.

ಆದರೆ ಸ್ಮಾರ್ಟ್‌ ಬೋರ್ಡ್‌ನಲ್ಲಿನ ಪಿ.ಪಿ.ಟಿ ಪ್ರಸೆಂಟೇಷನ್‌ನಲ್ಲಿ ಆ ಥರದ ಸತ್ವವೇ ಇರುವುದಿಲ್ಲ. ಈ ಕಾರಣಕ್ಕಾಗಿಯಾದರೂ ಸ್ಮಾರ್ಟ್‌ ಬೋರ್ಡಿನಿಂದಲೇ ಶೈಕ್ಷಣಿಕ ಮುನ್ನಡೆ ಸಾಧ್ಯ ಎಂಬ ಭ್ರಮೆ ಕಳಚಬೇಕಿದೆ. ಮರೆಯಾಗುತ್ತಿರುವ ಬ್ಲ್ಯಾಕ್ ಬೋರ್ಡ್‌ ಮತ್ತೆ ತನ್ನ ಸುಂದರ ಕನಸುಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಬೇಕಿದೆ.

– ಕೀರ್ತಿ ಎಂ. ತೀರ್ಥಹಳ್ಳಿ

ಟಾಪ್ ನ್ಯೂಸ್

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

ಧ್ರುವ್‌ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು?

3

ಇನ್ಸ್ಟಾ ಪ್ರೊಫೈಲ್‌ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

NewsClick ಸ್ಥಾಪಕ ಪ್ರಬೀರ್‌ ವಿರುದ್ಧ 8,000 ಪುಟಗಳ ಆರೋಪಪಟ್ಟಿ; ಭಯೋತ್ಪಾದನೆಗೆ ನೆರವು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ

Extortion:  ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

Extortion: ಆನ್‌ಲೈನ್‌ ಗೇಮ್‌; ಬಾಲಕನ ಬೆದರಿಸಿ ಸುಲಿಗೆ

9-kushtagi

Kushtagi: ಕಾಣೆಯಾಗಿದ್ದ ಪುರಸಭೆ ನೌಕರ ಪತ್ತೆ; ಆತಂಕ ದೂರ

8-

Politics: ಕೇಂದ್ರ ಬರ ಪರಿಹಾರ ನೀಡದಿರಲು ವಿಧಾನಸಭೆ ಚುನವಾಣೆ ಸೋಲಿನ ಸೇಡು: ರಾಮಲಿಂಗಾರೆಡ್ಡಿ

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

LPG Cylinders: ವಾಣಿಜ್ಯ ಬಳಕೆಯ ಎಲ್‌ ಪಿಜಿ ಸಿಲಿಂಡರ್ ಬೆಲೆ ಮತ್ತೆ ಇಳಿಕೆ; ಹೊಸ ದರ ಎಷ್ಟು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.