ಬೊಂಬೆ ಮಾಡ್ಸೋನು!


Team Udayavani, Mar 19, 2019, 12:30 AM IST

w-6.jpg

ಆಟಿಕೆಗಳು ಮಕ್ಕಳಿಗಷ್ಟೇ ಅಲ್ಲ ದೊಡ್ಡವರಿಗೂ ಪ್ರಿಯವಾದುದು. ಎಲ್ಲಾ ವಯೋಮಾನದವರಿಗೂ ಸಲ್ಲುವ ಆಟಿಕೆಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಬದಲಾಗುತ್ತಿರುವ ಜಗತ್ತಿನಲ್ಲಿ ಆಧುನಿಕ ಮನಸ್ಥಿತಿಗೆ ತಕ್ಕಂತೆ ಆಟಿಕೆಗಳನ್ನು ರೂಪಿಸುವವನೇ ಟಾಯ್‌ ಡಿಸೈನರ್‌. ಕಿಂದರ ಜೋಗಿ ಹಾಡಿನ ಮೂಲಕ ಮಕ್ಕಳನ್ನು ಆಕರ್ಷಿಸಿದರೆ ಟಾಯ್‌ ಡಿಸೈನರ್‌ ತಾನು ಸೃಷ್ಟಿಸುವ ಆಟಿಕೆಗಳ ಮೂಲಕ ಮಕ್ಕಳನ್ನು ಸೆಳೆಯುತ್ತಾನೆ. CAGR ಪ್ರಕಾರ ಮುಂಬರುವ ವರ್ಷಗಳಲ್ಲಿ ಆಟಿಕೆ ಉದ್ಯಮ ವಾರ್ಷಿಕ 20% ಗತಿಯ ವೇಗದಲ್ಲಿ ಬೆಳವಣಿಗೆ ಕಾಣಲಿದೆ.

ವಿವಿಧ ಆಟಿಕೆಗಳು
ಟಾಯ್‌ ಡಿಸೈನಿಂಗ್‌ ಉದ್ಯಮದಲ್ಲಿ ಕಚ್ಚಾ ವಸ್ತುಗಳಾದ ಪ್ಲಾಸ್ಟಿಕ್‌, ಸೆರಾಮಿಕ್‌, ಲೋಹ, ಮರ ಮತ್ತು ಮೃದು ವಸ್ತುಗಳಾದ ಬಟ್ಟೆ, ಹತ್ತಿ, ಫೈಬರ್‌, ರಬ್ಬರ್‌ ಇವುಗಳನ್ನು ಬಳಸಿ ಆಟಿಕೆಗಳನ್ನು ರೂಪಿಸಲಾಗುತ್ತದೆ. ಆಟಿಕೆಗಳ ವಿನ್ಯಾಸ ಮಾಡುವುದಷ್ಟೇ ಅಲ್ಲದೆ, ವೈಜ್ಞಾನಿಕ ದೃಷ್ಟಿಕೋನವನ್ನು ಹೊಂದಿರುವುದು ಬಹಳ ಮುಖ್ಯ. ಅಂದರೆ ಕಣ್ಣಿಗೆ ಆಕರ್ಷಕವಾಗಿ ಕಾಣುವಂತೆ ರೂಪಿಸುವುದಷ್ಟೇ ಅಲ್ಲದೆ ಸುರಕ್ಷತೆಯಂಥ ಮಾನದಂಡಗಳನ್ನೂ ಗಮನದಲ್ಲಿರಿಸಿಕೊಳ್ಳುವುದು ಕೂಡಾ ಬಹಳ ಮುಖ್ಯವಾಗುತ್ತದೆ. ಸುರಕ್ಷತಾ ಮಾನದಂಡಗಳಿಗೆ ತಕ್ಕಂತೆ ಆಟಿಕೆಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಆಟಿಕೆಗಳ ಉದ್ಯಮದಲ್ಲಿಯೂ ಅನೇಕ ವಿಧಗಳಿವೆ. ಸಾಫ್ಟ್ ಟಾಯ್ಸ, ಆಕ್ಷನ್‌ ಹೀರೋ ಫಿಗರ್, ಆರ್ಟ್ಸ್ ಮತ್ತು ಕ್ರಾಫ್ಟ್, ಬಿಲ್ಡಿಂಗ್‌ ಸೆಟ್‌ಗಳು, ಗೇಮ್‌/ ಪಜಲ್‌ಗ‌ಳು, ಹೊರಾಂಗಣ ಆಟಿಕೆಗಳು ಮತ್ತು ನ್ಪೋರ್ಟ್ಸ್ ಟಾಯ್ಸ ಎಂದು ಸ್ಥೂಲವಾಗಿ ವಿಂಗಡಿಸಬಹುದು.

ಸ್ಪೆಷಲೈಜೇಷನ್‌ ಇದ್ದರೆ ಚೆನ್ನ
ತೊಟ್ಟಿಲ ಮಗುವಿಗಾಗಿ ಅತಿ ಸಾಧಾರಣ ಸಾಫ್ಟ್ ಟಾಯ್‌ನಿಂದ ಮೊದಲುಗೊಂಡು, ಟೀನೇಜರ್‌ಗಳು ಮೆಚ್ಚುವ ಆರ್ಟಿಫಿಷಿಯಲ್‌ ಇಂಟಲಿಜೆನ್ಸ್‌ ಆಧಾರಿತ ಟಾಯ್‌ವರೆಗೆ ಎಲ್ಲವನ್ನೂ ರೂಪಿಸುವ ಛಾತಿ ಇರಬೇಕು. ಪ್ರಾಡಕ್ಟ್ ಡಿಸೈನ್‌, ಮಟೀರಿಯಲ್‌ ಡಿಸೈನ್‌, ಗೇಮ್‌ ಡಿಸೈನ್‌ ವಿಷಯಗಳಲ್ಲಿಯೂ ಪರಣತಿ ಹೊಂದಿರಬೇಕಾಗುತ್ತದೆ. ಈ ವಿಷಯಗಳಲ್ಲಿ ಸ್ಪೆಷಲೈಜೇಷನ್‌ ಮಾಡಬಹುದು. ಟಾಯ್‌ ಡಿಸೈನ್‌ ಕೋರ್ಸುಗಳನ್ನು ಮಾಡುವಾಗಲೇ ತನ್ನ ಆಸಕ್ತಿಯನ್ನು ಗುರುತಿಸಿಕೊಂಡು ಆ ವಿಭಾಗದಲ್ಲಿ ಪರಿಣತಿ ಸಾಧಿಸಬಹುದು. ಇಂಟರ್ನ್ಶಿಪ್‌ ಮಾಡುವಾಗ ವಿವಿಧ ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಳ್ಳುವ ಸಮಯದಲ್ಲಿ ಆಕಾಂಕ್ಷಿಗಳು ತಮ್ಮ ಆಸಕ್ತಿಯನ್ನು ಕಂಡುಕೊಳ್ಳಬಹುದು. 

ಇರಬೇಕಾದ ಕೌಶಲಗಳು
ಸೃಜನಶೀಲತೆ ಮತ್ತು ಹೊಸದನ್ನು ಸಾಧಿಸುವ ಹುಮ್ಮಸ್ಸು
ಉತ್ತಮ ಸಂವಹನಶಕ್ತಿ, ಹಾಸ್ಯಪ್ರಜ್ಞೆ
ಫ್ಯಾಬ್ರಿಕ್‌ ಜ್ಞಾನ
ನಾಯಕತ್ವ, ಪ್ರಸಂಟೇಷನ್‌ ಸ್ಕಿಲ್ಸ್‌
ಸಂಶೋಧನಾ ಪ್ರವೃತ್ತಿ
ಸೂಕ್ಷ್ಮ ವಿವರಗಳತ್ತ ಗಮನ ನೀಡುವ ತಾಳ್ಮೆ
ಇಅಈ ಪರಿಣತಿ
ಚಿತ್ರ ಬಿಡಿಸುವ ಸಾಮರ್ಥ್ಯ
ಮಾಡೆಲ್‌ ಮೇಕಿಂಗ್‌ ಮತ್ತು ಮ್ಯಾನುಫ್ಯಾಕ್ಚರಿಂಗ್‌
ಹೊಲಿಗೆ, ಅಲಂಕಾರಿಕ ಕಲೆ

ವಿದ್ಯಾಭ್ಯಾಸ ಹೇಗಿರಬೇಕು?
ಸೈನ್ಸ್‌, ಕಾಮರ್ಸ್‌, ಆರ್ಟ್ಸ್ ವಿಭಾಗಗಳಲ್ಲಿ ಪಿ.ಯು.ಸಿ. ಮುಗಿಸಿರುವ ಯಾವುದೇ ವಿದ್ಯಾರ್ಥಿ ಟಾಯ್‌ ಡಿಸೈನ್‌ ಪದವಿ ಅಧ್ಯಯನಕ್ಕೆ ಸೇರಬಹುದು. ಗುಜರಾತ್‌ನ NID (National Institute of Design), ವಿದ್ಯಾಸಂಸ್ಥೆ ಭಾರತದಲ್ಲೇ ಟಾಯ್‌ ಡಿಸೈನಿಂಗ್‌ಗೆ ಹೆಸರುವಾಸಿ. ದೇಶದ ಹಲವೆಡೆ ಆನ್‌ಲೈನ್‌ ಸರ್ಟಿಫಿಕೇಷನ್‌ ಕೋರ್ಸ್‌ಗಳು ಕೂಡಾ ಇವೆ. NIDಯಲ್ಲಿ ಸ್ನಾತಕೋತ್ತರ ಪದ (M.Des) ಕೂಡ ಲಭ್ಯವಿದೆ. ಪದವಿ, ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ಅವರಿಗೆ ಡಿಸೈನಿಂಗ್‌ನ ಮೂಲ ತಣ್ತೀಗಳನ್ನು, ಕಚ್ಚಾ ವಸ್ತುಗಳ ಬಳಕೆಯನ್ನು, ಮುದ್ರಣ, ತಂತ್ರಜ್ಞಾನ, ಮಾರುಕಟ್ಟೆ ಅಧ್ಯಯನ, ಮಾರಾಟ ಜಾಲ- ಇವೆಲ್ಲವನ್ನು ಕಲಿಸಲಾಗುವುದು.

ಅವಕಾಶಗಳು
ಟಾಯ್‌ ಮೇಕರ್‌ ಅಥವಾ ಪ್ರಾಡಕ್ಟ್ ಡಿಸೈನರ್‌ ಆಗಿ ಆಟಿಕೆ ಉದ್ಯಮವನ್ನು ಪ್ರವೇಶಿಸಬಹುದು. ಉನ್ನತ ಪದವಿ ಹೊಂದಿದ್ದರೆ ಟಾಯ್‌ ಇಂಜಿನಿಯರ್‌ ಆಗಿಯೂ ಸೇವೆ ಆರಂಭಿಸಬಹುದು. ಜಾಗತಿಕ ಮಟ್ಟದಲ್ಲಿ ಹ್ಯಾಮ್ಲಿàಸ್‌, ಲೆಗೋಸ್‌, ಟಾಯ್‌ ಆರ್‌ ಅಸ್‌, ಹಾಟ್‌ವೀಲ್ಸ್‌, ಹ್ಯಾನ್ಸ್‌ಬ್ರೋ ಮುಂತಾದ ಕಂಪೆನಿಗಳಲ್ಲಿ ಹಾಗೂ ಭಾರತದಲ್ಲಿ ಫ‌ನ್‌ಸ್ಕೂಲ್‌, ಫ‌ಸ್ಟ್‌ ಕ್ರೈ ಮುಂತಾದ ಕಂಪೆನಿಗಳಲ್ಲಿ ಟಾಯ್‌ ಡಿಸೈನರ್‌ಗಳಿಗೆ ಅವಕಾಶವಿದೆ. 

ರಘು ವಿ., ಪ್ರಾಂಶುಪಾಲರು

ಟಾಪ್ ನ್ಯೂಸ್

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.