ಅಂಡರ್‌ 19 ನೀವೂ ವಿಶ್ವ ಗೆಲ್ಲಿ…


Team Udayavani, Feb 13, 2018, 3:43 PM IST

lead.jpg

ಹದಿಹರೆಯ ಅಂದರೆ ಅದು “ಹುಚ್ಚು ಖೋಡಿ ವಯಸು’ ಅಂತಾರೆ. ಚಂಚಲ ಮನಃಸ್ಥಿತಿಯ ಆ ವಯಸ್ಸಿನಲ್ಲಿ ಮಕ್ಕಳೆಲ್ಲಿ ಹಾದಿ ತಪ್ಪುವರೋ ಎಂಬ ಆತಂಕ ಹೆತ್ತವರದ್ದಾಗಿರುತ್ತದೆ. ಆದರೆ, “ನಾವೇನೂ ಅಷ್ಟು ಸುಲಭಕ್ಕೆ ಹಾದಿ ತಪ್ಪುವ ಆಸಾಮಿಗಳಲ್ಲ. ನಮಗೂ ಗುರಿಯಿದೆ, ಕನಸಿದೆ’ ಅನ್ನೋದನ್ನು ಹದಿ ಹರೆಯದವರು ಆಗಾಗ ಸಾಧಿಸಿ ತೋರಿಸಿದ್ದಾರೆ. ಅದಕ್ಕೆ ಮತ್ತೂಂದು ಸಾಕ್ಷಿ, ಇತ್ತೀಚೆಗೆ ಅಂಡರ್‌ 19 ಕ್ರಿಕೆಟ್‌ನಲ್ಲಿ ಜಗತ್ತನ್ನೇ ಗೆದ್ದು ಪೃಥ್ವಿ ಶಾ ಪಡೆ ವಿಶ್ವಕಪ್‌ ಅನ್ನು ಎತ್ತಿ ಹಿಡಿದಿರುವುದು. ಕ್ರೀಡೆಯಷ್ಟೇ ಅಲ್ಲದೆ, ಅಂಡರ್‌ 19ನ ಅಂದರೆ ಶಾಲಾ-ಕಾಲೇಜಿನ ಮಕ್ಕಳು ಯಾವ್ಯಾವ ಕ್ಷೇತ್ರದಲ್ಲಿ ಮಿಂಚಬಹುದು ಎಂಬ ಕೆಲವು ಸಾಧ್ಯತೆಗಳನ್ನಿಲ್ಲಿ ಪಟ್ಟಿ ಮಾಡಿದ್ದೇವೆ. ಇವು ಯಶಸ್ಸಿಗೆ ಇರುವ ಹತ್ತಿರದ ದಾರಿಗಳು, ಗೆಲವನ್ನು ಸುಲಭದಲ್ಲಿ ಕಾಣಬಹುದಾದ ಕಿಂಡಿಗಳು…  

1. ಸ್ಕೂಬಾ ಡೈವಿಂಗ್‌ ಕೋರ್ಸ್‌
ಸಂಗೀತ, ನೃತ್ಯ, ಚಿತ್ರಕಲೆ, ಕರಾಟೆ, ಈಜು ಯಾವುದೇ ಆಗಲಿ, ಬಾಲ್ಯದಿಂದಲೇ ಮಕ್ಕಳಿಗೆ ಅಭ್ಯಾಸ ಮಾಡಿಸಬೇಕು ಎಂದು ಹೇಳುತ್ತಾರೆ. ಯಾಕೆಂದರೆ, ಮಕ್ಕಳಲ್ಲಿ ಕಲಿಯುವ ಆಸಕ್ತಿ ಹೆಚ್ಚಿರುವುದಲ್ಲದೇ, ಅಂಜಿಕೆ, ಭಯ ಕೂಡ ಕಡಿಮೆ ಇರುತ್ತದೆ. ಹಾಗಾಗಿ, ಬಾಲ್ಯದಲ್ಲಿಯೇ ಮಕ್ಕಳು ಸ್ಕೂಬಾ ಡೈವಿಂಗ್‌ನಂಥ ಸಾಹಸಮಯ ಕೋರ್ಸ್‌ಗಳನ್ನೂ ಮಾಡಬಹುದು. 10 ವರ್ಷ ಮೇಲ್ಪಟ್ಟವರು ಪಿಎಡಿಐ (ಪ್ರೊಫೆಷನಲ್‌ ಅಸೋಸಿಯೇಷನ್‌ ಆಫ್ ಡೈವಿಂಗ್‌ ಇನ್ಸ್‌ಟ್ರಕ್ಟರ್‌)ಗಳಿಂದ ಸ್ಕೂಬಾ ಡೈವಿಂಗ್‌ ಕಲಿಯಲು ಅರ್ಹರು. 10-15 ವರ್ಷದೊಳಗೆ ಬೇಸಿಕ್‌ ಕೋರ್ಸ್‌ ಮುಗಿಸಿ “ಓಪನ್‌ ವಾಟರ್‌ ಡೈವರ್‌ ಸರ್ಟಿಫಿಕೇಶನ್‌’ ಪಡೆದು ಜೂನಿಯರ್‌ ಓಪನ್‌ ವಾಟರ್‌ ಡೈವರ್ ಆಗಬಹುದು. ಅವರಿಗೆ 12 ಮೀಟರ್‌ ಅಥವಾ 40 ಅಡಿ ಡೈವ್‌ ಮಾಡುವ ಅವಕಾಶವಿರುತ್ತದೆ. 15 ವರ್ಷ ವಯಸ್ಸಿನ ನಂತರ 18 ಮೀಟರ್‌ ಅಥವಾ 60 ಅಡಿ ಡೈವ್‌ ಮಾಡಬಹುದು. ಒಂದಷ್ಟು ಧೈರ್ಯ, ಪರಿಣತರಿಂದ ಸರಿಯಾದ ಮಾರ್ಗದರ್ಶನ ಸಿಕ್ಕಿದರೆ ಸಣ್ಣ ವಯಸ್ಸಿನಲ್ಲಿಯೇ ಸ್ಕೂಬಾ ಡೈವರ್ ಆಗಿ, ಸಾಹಸ ಮೆರೆಯಬಹುದು.

2. ಸ್ಪೆಲ್‌ ಬೀ ಕಾಂಪಿಟೀಷನ್‌
ಸಣ್ಣ ಮಕ್ಕಳಿಂದ ಮಗ್ಗಿ, ರೈಮ್ಸ್‌, ಪದಗಳ ಸ್ಪೆಲ್ಲಿಂಗ್‌ ಹೇಳಿಸುತ್ತೇವೆ. ಉಕ್ತಲೇಖನ ಬರೆಸುವುದೂ ಉಂಟು. ಸ್ಪೆಲ್‌ ಬೀ ಅಥವಾ ಸ್ಪೆಲ್ಲಿಂಗ್‌ ಬೀ ಎಂಬುದೂ ಅಂಥದ್ದೇ ಒಂದು ಸ್ಪರ್ಧೆ. ಇಂಗ್ಲಿಷ್‌ನ ಪದಗಳ ಸ್ಪೆಲಿಂಗ್‌ ಅನ್ನು ತಪ್ಪಿಲ್ಲದಂತೆ ಹೇಳಬೇಕು ಎಂಬುದು ಸ್ಪರ್ಧೆಯ ನಿಯಮ. ಅಯ್ಯೋ, ಅಷ್ಟೇನಾ ಅಂದುಕೊಳ್ಳಬೇಡಿ. ಅಲ್ಲಿ ಕೇಳುವುದು ಆ್ಯಪಲ್‌, ಆರೆಂಜ್‌, ರಿಂಗ್‌, ಟ್ರೀನಂಥ ಸುಲಭದ ಪದಗಳನ್ನಲ್ಲ. ಮಾರುದ್ದದ, ಅತ್ಯಂತ ಕ್ಲಿಷ್ಟಕರವಾದ ಪದದ ಸ್ಪೆಲ್ಲಿಂಗ್‌ ಅನ್ನು ಮಕ್ಕಳು ತಪ್ಪಿಲ್ಲದಂತೆ, ನಿರರ್ಗಳವಾಗಿ ಹೇಳಬೇಕು. ಹಲವಾರು ಸುತ್ತುಗಳಲ್ಲಿ ನಡೆಯುವ ಇದು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ. ಅಮೆರಿಕದಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಸ್ಪರ್ಧೆ, ಈಗ ಜಗತ್ತಿನ ಬೇರೆ ಬೇರೆ ದೇಶಗಳಲ್ಲಿಯೂ ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿದೆ. 15 ವರ್ಷದೊಳಗಿನ ಮಕ್ಕಳು ಸ್ಪೆಲ್‌ ಬೀನಲ್ಲಿ ಭಾಗವಹಿಸಬಹುದು.

3. ರಿಯಾಲಿಟಿ ಶೋ
ಈಗ ಕಿರುತೆರೆಯಲ್ಲಿ ರಿಯಾಲಿಟಿ ಶೋಗಳದ್ದೇ ಅಬ್ಬರ. ಬಹುತೇಕ ರಿಯಾಲಿಟಿ ಶೋಗಳ ಕೇಂದ್ರಬಿಂದು ಮಕ್ಕಳು ಮತ್ತು ಯುವಕರೇ. ಹಾಡುವ, ಡ್ಯಾನ್ಸ್‌ ಮಾಡುವ, ನಟಿಸುವ ಹೀಗೆ ಮಕ್ಕಳಲ್ಲಿರುವ ಎಲ್ಲ ಪ್ರತಿಭೆಗಳ ಅನಾವರಣಕ್ಕೂ ಒಂದೊಂದು ರಿಯಾಲಿಟಿ ಶೋಗಳು ನಡೆಯುತ್ತಿವೆ. ಸರಿಗಮಪ ಲಿಟ್ಲ ಚಾಂಪ್ಸ್‌, ಸಬೆÕ ಬಡಾ ಕಲಾಕಾರ್‌, ಜೂನಿಯರ್‌ ಮಾಸ್ಟರ್‌ ಶೆಫ್, ಇಂಡಿಯನ್‌ ಐಡಲ್‌, ದಿ ವಾಯ್ಸ ಇಂಡಿಯಾ ಕಿಡ್ಸ್‌, ಡ್ಯಾನ್ಸ್‌ ಇಂಡಿಯ ಡ್ಯಾನ್ಸ್‌, ಕನ್ನಡದ ಡ್ರಾಮಾ ಜೂನಿಯರ್, ಸರಿಗಮಪ ಲಿಟ್ಲ ಚಾಂಪ್ಸ್‌, ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಹೀಗೆ ಸಾಲು ಸಾಲು ಶೋಗಳನ್ನು ಹೆಸರಿಸಬಹುದು. ಅರ್ಜಿತ್‌ ಸಿಂಗ್‌, ಸುನಿಧಿ ಚೌಹಾಣ್‌, ಶ್ರೇಯಾ ಘೋಷಾಲ್‌, ವಿಜಯ ಪ್ರಕಾಶ್‌ ಮುಂತಾದ ಪ್ರಸಿದ್ಧ ಗಾಯಕರೂ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿ ಬೆಳಕಿಗೆ ಬಂದವರೇ.

4. ಶೌರ್ಯ ಮೆರೆದರೆ ದೇಶದ ಗೌರವ
ಪ್ರತಿ ಮನುಷ್ಯನ ಒಳಗೂ ಒಬ್ಬ ಜಾಗೃತ, ಸಾಹಸೀ  ವ್ಯಕ್ತಿ ಅಡಗಿರುತ್ತಾನೆ. ಆ ಶಕ್ತಿ, ಸಾಮರ್ಥ್ಯದ ಅರಿವು ನಮಗೇ ಇರುವುದಿಲ್ಲ. ಆದರೆ, ಪ್ರತಿಕೂಲ ಸನ್ನಿವೇಶಗಳಲ್ಲಿ ಆ ಸಾಮರ್ಥ್ಯ ನಮ್ಮಿಂದ ಊಹೆಗೂ ನಿಲುಕದ ಕೆಲಸ ಮಾಡಿಸುತ್ತದೆ. ಮನೆಗೆ ಬೆಂಕಿ ಬಿದ್ದಾಗ ಚಿಕ್ಕ ಹುಡುಗನೊಬ್ಬ ಸಮಯಪ್ರಜ್ಞೆ ಮೆರೆದ, ನೀರಿನಲ್ಲಿ ಮುಳುಗಿದ ಅಕ್ಕನನ್ನು ತಂಗಿ ಎಳೆದುರಕ್ಷಿಸಿದ, ಕಳ್ಳರನ್ನು ಶಾಲಾ ಹುಡುಗರು ಹಿಡಿದುಕೊಟ್ಟ… ಅಂಥ ಘಟನೆಗಳ ಕುರಿತು ನಾವು ಆಗಾಗ ಕೇಳುತ್ತಿರುತ್ತೇವೆ. ಹೀಗೆ ಧೈರ್ಯ-ಸಾಹಸ ಮೆರೆದ ಮಕ್ಕಳನ್ನು ಸರ್ಕಾರದ ವತಿಯಿಂದ ಗುರುತಿಸಿ, ಪುರಸ್ಕರಿಸಲಾಗುತ್ತದೆ.  ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ 6-18ವರ್ಷದೊಳಗಿನ ಅಂಥ 25 ಮಕ್ಕಳಿಗೆ ಪ್ರಧಾನಮಂತ್ರಿಗಳಿಂದ ನ್ಯಾಷನಲ್‌ ಬ್ರೇವರಿ ಅವಾರ್ಡ್‌ ಸಿಗುತ್ತದೆ. ಪ್ರಧಾನಿ ನೆಹರೂ ಅವರು 1957ರಲ್ಲಿ ಸಾಹಸ ಮೆರೆಯುವ ಮಕ್ಕಳನ್ನು ಪುರಸ್ಕರಿಸಲು ಈ ಪ್ರಶಸ್ತಿ ನೀಡಲು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷವೂ ಭಾರತ ಸರ್ಕಾರ ಮತ್ತು ಇಂಡಿಯನ್‌ ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌ (ಐಸಿಸಿಡಬ್ಲ್ಯು)  ವತಿಯಿಂದ ಇದನ್ನು ನೀಡಲಾಗುತ್ತದೆ. ಭರತ್‌ ಅವಾರ್ಡ್‌, ಸಂಜಯ್‌ ಛೋಪ್ರಾ ಅವಾರ್ಡ್‌, ಗೀತಾ ಛೋಪ್ರಾ ಅವಾರ್ಡ್‌, ಬಾಪು ಗೈಧಾನಿ ಅವಾರ್ಡ್‌ ಹಾಗೂ ಜನರಲ್‌ ನ್ಯಾಷನಲ್‌ ಬ್ರೇವರಿ ಅವಾರ್ಡ್‌ ಎಂಬ ಐದು ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತಿದ್ದು, ಈ ಅವಾರ್ಡ್‌ ಪದಕ, ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನಗಳನ್ನೊಳಗೊಂಡಿರುತ್ತದೆ. ಸ್ಥಳೀಯ ಮತ್ತು ಜಿಲ್ಲಾ ಆಡಳಿತ, ಶಾಲೆ, ಕೌನ್ಸಿಲ್‌ ಫಾರ್‌ ಚೈಲ್ಡ್‌ ವೆಲ್‌ಫೇರ್‌ಗಳಿಂದ ಪ್ರತಿ ವರ್ಷ ಈ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗುತ್ತದೆ. ಸೆಪ್ಟೆಂಬರ್‌ 30ರ ಒಳಗೆ ಅರ್ಜಿ ಸಲ್ಲಿಸಬೇಕು. 

5. “ಸೀಟ್‌’ನಿಂದ “ಇನ್ಸ್‌ಪೆçರ್‌’ ಆಗಿ
“ಸೀಟ್‌’ ಅಂದ್ರೆ, ಸ್ಕೀಂ  ಫಾರ್‌ ಅರ್ಲಿ ಅಟ್ರ್ಯಾಕ್ಷನ್‌ ಆಫ್ ಟ್ಯಾಲೆಂಟ್ಸ್‌ (SEAT) ಇದು ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು “ಇನ್ಸ್‌ಪೆçರ್‌ (Innovation in Science & Pursuit for Inspired Research) ಪ್ರೋಗ್ರಾಮ್‌ನ ಅಡಿಯಲ್ಲಿ ಪ್ರತಿವರ್ಷವೂ ಹಮ್ಮಿಕೊಳ್ಳುವ ಸ್ಕೀಂ. 10-15 ವರ್ಷದೊಳಗಿನ ಮಕ್ಕಳಲ್ಲಿ ವಿಜ್ಞಾನ- ತಂತ್ರಜ್ಞಾನ ಹಾಗೂ ಸಂಶೋಧನೆಯ ಕುರಿತು ಆಸಕ್ತಿ ಮೂಡಿಸುವುದು ಇದರ ಉದ್ದೇಶ. ಈ ಸ್ಕೀಂ ವತಿಯಿಂದ ನಡೆಸುವ “ಇನ್ಸ್‌ಪೆçರ್‌ ಅವಾರ್ಡ್‌’ ಪಡೆಯಲು 6ನೇ ತರಗತಿಯಿಂದ 10ನೇ ತರಗತಿಯ ಮಕ್ಕಳು ಅರ್ಹರು. ಮಕ್ಕಳು ಸ್ವತಂತ್ರವಾಗಿ ವಿಜ್ಞಾನದ ಪ್ರಾಜೆಕ್ಟ್ಗಳನ್ನು ಮಾಡಬೇಕು. ಪ್ರಾಜೆಕ್ಟ್ ತಯಾರಿಸಲು ಪ್ರತಿ ವಿದ್ಯಾರ್ಥಿಗೂ 5000 ರೂ ಹಾಗೂ ಪ್ರದರ್ಶನಕ್ಕೆ ಬರುವ ಓಡಾಟದ ಖರ್ಚನ್ನು ಸರ್ಕಾರವೇ ಭರಿಸುತ್ತದೆ. ಸ್ಪರ್ಧಿಯ ವಿವರವನ್ನು ಶಾಲೆಯ ಮುಖೋಪಾಧ್ಯಾಯರು ಇಲಾಖೆಗೆ ಸಲ್ಲಿಸಬೇಕು. ಜಿಲ್ಲಾ, ರಾಜ್ಯ, ವಲಯ ಹಾಗೂ ರಾಷ್ಟ್ರ ಮಟ್ಟದಲ್ಲಿ ವಿಜ್ಞಾನ ಪ್ರದರ್ಶನಗಳು ನಡೆಯುತ್ತವೆ. 10-15 ವರ್ಷದೊಳಗಿನ 1 ಲಕ್ಷ ಮಕ್ಕಳು ಪ್ರತಿವರ್ಷವೂ ಇದರ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ www.inspire-dst.gov.in/SEATS.html ಸಂಪರ್ಕಿಸಿ. 

6. ಆಕಾಶಕ್ಕೆ ಏಣಿ ಹಾಕಿ
ಚಿಕ್ಕಮಕ್ಕಳನ್ನು ಕೇಳಿ ನೋಡಿ, ಮುಂದೆ ಏನಾಗಬೇಕು ಅಂತ. ಶೇ.50ರಷ್ಟು ಮಕ್ಕಳು ಹೇಳ್ಳೋದು ಆ್ಯಸ್ಟ್ರೋನಾಟ್‌ ಆಗ್ತಿàನಿ ಅಂತ. ಆಕಾಶ, ನಕ್ಷತ್ರ, ಗ್ರಹ, ಖಗೋಳದ ಬಗ್ಗೆ ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಲ್ಲೂ ಮುಗಿಯದ ಕುತೂಹಲವಿದೆ. ಅಂಥ ಕುತೂಹಲಿ ಮಕ್ಕಳಿಗಾಗಿ ಅಮೆರಿಕದ NASA Ames Research Center ಮತ್ತು National Space Society ಸಹಯೋಗದಲ್ಲಿ ಪ್ರತಿವರ್ಷವೂ NASA Ames Space Settlement Contest ಎಂಬ  ಸ್ಪರ್ಧೆ ನಡೆಸುತ್ತದೆ. ವಿಶ್ವದ ಯಾವುದೇ ಮೂಲೆಯಲ್ಲಿನ 12ನೇ ತರಗತಿಯೊಳಗಿನ (18 ವರ್ಷದೊಳಗಿನ) ಮಕ್ಕಳು ಇದರಲ್ಲಿ ಭಾಗವಹಿಸಬಹುದು. ವೈಯಕ್ತಿಕವಾಗಿ, ಎರಡರಿಂದ ಐದು ಜನರ ಸಣ್ಣ ಗುಂಪು, ಆರಕ್ಕಿಂತ ಹೆಚ್ಚು ಜನರ ದೊಡ್ಡ ಗುಂಪುಗಳಲ್ಲಿ ಸ್ಪರ್ಧಿಸಬಹುದಾಗಿದ್ದು, ಪ್ರತ್ಯೇಕ ವಿಭಾಗಗಳನ್ನು ಬೇರೆ ಬೇರೆಯಾಗಿ ಜಡ್ಜ್ ಮಾಡಲಾಗುತ್ತದೆ. ಸ್ಪರ್ಧಿಗಳು ಬಾಹ್ಯಾಕಾಶಕ್ಕೆ ಸಂಬಂಧಿಸಿದ ಮಾದರಿಗಳನ್ನು ತಯಾರಿಸಿ ಫೆಬ್ರವರಿ 15ರೊಳಗೆ ನಾಸಾ ಅಮೆಸ್‌ ಸೆಂಟರ್‌ಗೆ ಕಳುಹಿಸಿಕೊಡಬೇಕು. ವಿಜೇತರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡುವುದರ ಜೊತೆಗೆ ಅವರ ಮಾದರಿಯನ್ನು ನಾಸಾ ಅಮೆಸ್‌ ವೆಬ್‌ಸೈಟ್‌ನಲ್ಲಿ ಹಾಕಲಾಗುತ್ತದೆ. ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೂ ಪ್ರಶಸ್ತಿಪತ್ರ ಹಾಗೂ ಲಾಸ್‌ ಏಂಜಲೀಸ್‌ನಲ್ಲಿ ನಡೆಯುವ ಇಂಟರ್‌ನ್ಯಾಶನಲ್‌ ಸ್ಪೇಸ್‌ ಡೆವಲಪ್‌ಮೆಂಟ್‌ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದವರನ್ನು ಭೇಟಿಯಾಗುವ ಒಂದೊಳ್ಳೆ ಅವಕಾಶವಿದು.  ಗೂಗಲ್‌ನಲ್ಲಿ NASA Ames Space Settlement Contest ಎಂದು ಟೈಪಿಸಿದರೆ ಹೆಚ್ಚಿನ ಮಾಹಿತಿ ಲಭ್ಯ.

7. ಕನಸಿನ “ನಾಸಾ’ಕ್ಕೆ ದಾರಿ
ಭಾರತೀಯರ ಆಕಾಶದ ಕನಸಿಗೆ ಮೊದಲು ಏಣಿ ಹಾಕಿಕೊಟ್ಟವರು ಕಲ್ಪನಾ ಚಾವ್ಲಾ. ಈಗಲೂ ಅಂತರಿಕ್ಷಾಕಾಂಕ್ಷಿಗಳಿಗೆ ಅವರೇ ದಾರಿದೀಪ. ಅವರ ಸ್ಮರಣಾರ್ಥ ನ್ಯೂ ಯುಗ್‌ ಎಡುಸಾಫ್ಟ್ ಪ್ರೈವೇಟ್‌ ಲಿ. ವತಿಯಿಂದ ಪ್ರತಿವರ್ಷವೂ “ಕಲ್ಪನಾ ಚಾವ್ಲ ನ್ಯಾಶನಲ್‌ ಸ್ಕಾಲರ್‌ ಎಕ್ಸಾಂ’ ನಡೆಯುತ್ತದೆ. 5-9ನೇ ತರಗತಿಯ ಮಕ್ಕಳು ಪರೀಕ್ಷೆ ಬರೆಯಬಹುದಾಗಿದ್ದು, ಅತಿ ಹೆಚ್ಚು ಅಂಕ ಪಡೆದ 21 ಮಕ್ಕಳು ನಾಸಾ ಕ್ಯಾಂಪ್‌ನಲ್ಲಿ ಭಾಗವಹಿಸುವ ಸುವರ್ಣಾವಕಾಶ ಪಡೆಯುತ್ತಾರೆ. ಎರಡನೇ ಬಹುಮಾನವಾಗಿ 21 ಮಕ್ಕಳಿಗೆ  ತಲಾ 1 ಲಕ್ಷ ರೂಪಾಯಿ, ಮೂರನೇ ಬಹುಮಾನ ಪಡೆವ 21 ಮಕ್ಕಳಿಗೆ ತಲಾ 51,000 ರೂ. ನಗದು ಸಿಗುತ್ತದೆ. ಸಮಾಧಾನಕರ ಬಹುಮಾನ ಪಡೆವ 21 ಮಕ್ಕಳಿಗೆ  ತಲಾ 21,000 ರೂ ಹಾಗೂ ಮೊದಲ ಬಹುಮಾನ  ಪಡೆದ ಟಾಪ್‌ ನಾಲ್ಕು ಶಾಲೆಯ ಶಿಕ್ಷಕರೂ ನಾಸಾ ಕ್ಯಾಂಪ್‌ಗೆ ಹೋಗುವ ಅವಕಾಶವಿದೆ. ಈ ಪರೀಕ್ಷೆಗೆ ಆಗಸ್ಟ್‌ 11ರಿಂದ ಆನ್‌ಲೈನ್‌ ರಿಜಿಸ್ಟ್ರೇಶನ್‌ ಪ್ರಾರಂಭವಾಗಲಿದ್ದು, ಅರ್ಜಿ ಸಲ್ಲಿಸಲು ಡಿ.5 ಕೊನೆಯ ದಿನ. ಆನ್‌ಲೈನ್‌ನಲ್ಲಿ ಸಿದ್ಧತಾ ಪರೀಕ್ಷೆಗಳೂ ನಡೆಯಲಿದ್ದು, ಡಿ.10ರಂದು ಅಂತಿಮ ಪರೀಕ್ಷೆ ಇದೆ. ಹೆಚ್ಚಿನ ಮಾಹಿತಿಗೆ http://educharya.comಗೆ ಸಂಪರ್ಕಿಸಿ.

– ನತಾಶ ರೋಡ್ರಿಗಸ್‌

ಟಾಪ್ ನ್ಯೂಸ್

M B Patil

ಲಿಂಗಾಯತ ಮತ ಬೇಟೆ ನಾಚಿಗೆಗೇಡಿನ ಸಂಗತಿ: ಕೈ ನಾಯಕರಿಗೆ ಬಿಜೆಪಿ ಟಾಂಗ್

ವಿಜಯಪುರ ಪಾಲಿಕೆ ವಾರ್ಡ್ ಮೀಸಲು ಬದಲಾವಣೆಗೆ 92 ಆಕ್ಷೇಪಣೆ : ಜಿಲ್ಲಾಧಿಕಾರಿ

ವಿಜಯಪುರ ಪಾಲಿಕೆ ವಾರ್ಡ್ ಮೀಸಲು ಬದಲಾವಣೆಗೆ 92 ಆಕ್ಷೇಪಣೆ : ಜಿಲ್ಲಾಧಿಕಾರಿ

8suttur

ಸುತ್ತೂರು ಮಠ ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿಗೆ ಪ್ರಸಿದ್ಧ: ರಾಜ್ಯಪಾಲ ಗೆಹ್ಲೋಟ್

1-asdsasd

ರೇಪ್ ಕೇಸ್; ಬಿಜೆಪಿ ನಾಯಕ ಶಹನವಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

ಹಾಡಲ್ಲಿ ಪಂಪ ಗುಣಗಾನ! ಸೆಪ್ಟೆಂಬರ್‌ 9ಕ್ಕೆ ಬಿಡುಗಡೆ ಸಾಧ್ಯತೆ

ಹಾಡಲ್ಲಿ ಪಂಪ ಗುಣಗಾನ! ಸೆಪ್ಟೆಂಬರ್‌ 9ಕ್ಕೆ ಬಿಡುಗಡೆಗೆ ಸಿದ್ಧತೆ

ಡಾಕ್ಟರ್‌ ಕಣ್ಣಲ್ಲಿ ಆ್ಯಕ್ಟರ್‌ ಕನಸು; ಲವ್‌ 360 ನಾಯಕ ಪ್ರವೀಣ್‌ ಮಾತು

ಡಾಕ್ಟರ್‌ ಕಣ್ಣಲ್ಲಿ ಆ್ಯಕ್ಟರ್‌ ಕನಸು; ಲವ್‌ 360 ನಾಯಕ ಪ್ರವೀಣ್‌ ಮಾತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

udayavani youtube

ಆಳವಾದ ಕಂದಕಕ್ಕೆ ಬಸ್ ಉರುಳಿ ಬಿದ್ದು, ಐಟಿಬಿಪಿಯ 6 ಯೋಧರು ಸಾವು

udayavani youtube

ಈ ನಡಿಗೆಯನ್ನು ಇಡೀ ದೇಶವೇ ಹಿಂತಿರುಗಿ ನೋಡಿತು!!

ಹೊಸ ಸೇರ್ಪಡೆ

M B Patil

ಲಿಂಗಾಯತ ಮತ ಬೇಟೆ ನಾಚಿಗೆಗೇಡಿನ ಸಂಗತಿ: ಕೈ ನಾಯಕರಿಗೆ ಬಿಜೆಪಿ ಟಾಂಗ್

ವಿಜಯಪುರ ಪಾಲಿಕೆ ವಾರ್ಡ್ ಮೀಸಲು ಬದಲಾವಣೆಗೆ 92 ಆಕ್ಷೇಪಣೆ : ಜಿಲ್ಲಾಧಿಕಾರಿ

ವಿಜಯಪುರ ಪಾಲಿಕೆ ವಾರ್ಡ್ ಮೀಸಲು ಬದಲಾವಣೆಗೆ 92 ಆಕ್ಷೇಪಣೆ : ಜಿಲ್ಲಾಧಿಕಾರಿ

ವಿಟ್ಲ-ಕಬಕ ರಸ್ತೆ ಸ್ಥಿತಿ ಶೋಚನೀಯ : ರಸ್ತೆ ವಿಸ್ತರಣೆಯೂ ಆಗಲಿಲ್ಲ, ಮರುಡಾಮರು ಕಾಣಲೇ ಇಲ್ಲ

ವಿಟ್ಲ-ಕಬಕ ರಸ್ತೆ ಸ್ಥಿತಿ ಶೋಚನೀಯ : ರಸ್ತೆ ವಿಸ್ತರಣೆಯೂ ಆಗಲಿಲ್ಲ, ಮರುಡಾಮರು ಕಾಣಲೇ ಇಲ್ಲ

8suttur

ಸುತ್ತೂರು ಮಠ ಧರ್ಮನಿಷ್ಠೆ, ಸಕಾರಾತ್ಮಕ ಶಕ್ತಿಗೆ ಪ್ರಸಿದ್ಧ: ರಾಜ್ಯಪಾಲ ಗೆಹ್ಲೋಟ್

1-asdsasd

ರೇಪ್ ಕೇಸ್; ಬಿಜೆಪಿ ನಾಯಕ ಶಹನವಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.