ನನ್ನ ಹೃದಯವೇನು ಸೇಫ್ಟಿ ಲಾಕರ್ರಾ?


Team Udayavani, Oct 30, 2018, 6:00 AM IST

v-1.jpg

ನನಗೆ ಗೊತ್ತಿರುವಂತೆ ನೀನು ಒಳ್ಳೆಯವಳೇ. ಆದರೆ, ನಿನಗೆ ಅತೀ ಅನ್ನಿಸುವಷ್ಟು ಸ್ವಾರ್ಥವಿದೆ. ಜೊತೆಗಿರುವವರನ್ನು ಗಿರಗಿಟ್ಲೆಯಂತೆ ತಿರುಗಿಸಬಲ್ಲ ಚಾಲಾಕಿತನವಿದೆ. ಇದೇ ಕಾರಣದಿಂದ ಹೀರೋಯಿನ್‌ ರೂಪಿನ ನೀನು ಲೇಡಿ ವಿಲನ್‌ ಆಗಿ ಕಾಣಿಸ್ತಿದೀಯ…

ಅದೆಷ್ಟು ವಿಷ ತುಂಬಿದೆಯೇ ನಿನ್ನೊಳಗೆ? ಮಹಾನ್‌ ಮೋಸಗಾತಿ ನೀನು. ವಿಶ್ವಾಸಘಾತುಕಿ.ಕೆನ್ನೆ ಮೇಲಿನ ಮಚ್ಚೆಯಷ್ಟೂ ಲಜ್ಜೆ ಇಲ್ಲವಲ್ಲೇ ನಿನಗೆ? ಕೈಬೆರಳುಗಳಂತೂ ಇಳಿಬಿದ್ದ ಮುಂಗುರುಳುಗಳ ಸುತ್ತುತ್ತಲೇ ನನ್ನ ಮನಸ್ಸನ್ನೂ ನಿನ್ನ ಸುತ್ತ ಸುತ್ತುವಂತೆ ಮಾಡಿದವು. ಸಮಯಸಾಧಕರಂತೆ ಹೊಂಚು ಹಾಕುತ್ತಿರುತ್ತವೆ ನಿನ್ನ ಕಣ್ಣುಗಳು. ಗುರುತ್ವಾಕರ್ಷಣೆಯ ಬಲದಿಂದಾಗಿ, ಭೂಮಿಯೆಡೆಗೆ ಬೀಳುವ ಆಕಾಶ ಕಾಯಗಳಿಗಿಂತಲೂ ವೇಗವಾಗಿ ಜಾರಿದೆ ನಾನು ನಿನ್ನ ಪ್ರೀತಿಯ ಆಕರ್ಷಣೆಗೆ.

ಆದರೆ ನೀನು ಮಾಡಿದ್ದೇನು? ಅದ್ಯಾವುದನ್ನೂ ಅರ್ಥಮಾಡಿಕೊಳ್ಳಲೇ ಇಲ್ಲ. ಬರೀ ನಿನ್ನ ಅನುಕೂಲಕ್ಕೆ ನನ್ನನ್ನು ಬಳಸಿಕೊಂಡೆಯಷ್ಟೇ. ನನ್ನ ಹೃದಯದೊಂದಿಗೆ ಚೆಲ್ಲಾಟವಾಡಿದೆ. ನನ್ನ ಹೃದಯವನ್ನೇನು ಸೇಫ್ಟಿ ಲಾಕರ್‌ ಅಂದುಕೊಂಡೆಯಾ, ನಿನ್ನ ಆಸೆ, ಪ್ರೀತಿ, ಕನಸುಗಳನ್ನೆಲ್ಲಾ ಭದ್ರವಾಗಿಡಲು? ಅವೋ ಒಂದೆರೆಡಲ್ಲಾ, ಟನ್ನುಗಳಷ್ಟು ಕನಸುಗಳು, ಹಿಡಿಸಲಾರದಷ್ಟು ಆಸೆಗಳು, ಜೊತೆಗೊಂದೆರೆಡು ಕಿಲೋಗಳಷ್ಟು ಸ್ವಾರ್ಥ, ಕೆಲವು ಲೀಟರಿನಷ್ಟು ದುಃಖ ಬೇರೆ.ಎಷ್ಟೆಂದು ಸಸಿಕೊಳ್ಳಲಿ ಇವನ್ನೆಲ್ಲಾ? ಇವುಗಳ ಸಂತೈಸುವ ಗೋಜಿನೊಳಗೆ ನನ್ನ ಸ್ವಂತದ ಕನಸುಗಳು ಕರಗಿವೆ, ಪ್ರೀತಿ ಮಾಯವಾಗಿದೆ, ದುಃಖವೂ ದೂರಾಗಿದೆ, ಸ್ವಾರ್ಥವೂ ಸಿಗದಾಗಿದೆ. ಥೇಟು ಬಾಡಿಗೆಗೆ ಬಿಟ್ಟ ಬಂಗಲೆಯಾಗಿದೆ ನನ್ನ ಹೃದಯವೆಂಬ ಪ್ರೇಮಮಂದಿರ.

ದೂರ್ವಾಸನ ಮಗಳು ನೀನು. ಪ್ರೀತಿ ಪ್ರೇಮದ ಅರ್ಥ ತಿಳಿಯದವಳು. ಅದನ್ನೊಂದು ಆಟದ ದಾಳವಾಗಿಸಿಕೊಂಡವಳು ನೀನು. ಪ್ರೀತಿಯ ಬೆಲೆ ತಿಳಿದ ದಿನ ನಿನಗೆ ಖಂಡಿತಾ ಪಾಪಪ್ರಜ್ಞೆ ಕಾಡಲಿದೆ. ರುಜುವಾತಾಗಲಿದೆ ಜಗತ್ತಿನೆದುರು ನಿನ್ನ ಸ್ವಾರ್ಥದ ಬದುಕು. ನಿಜವಾಗಿಯೂ ಹೃದಯವಂತೆ ನೀನು, ಆದರೆ ನಿನ್ನೊಳಗಿರುವ ಒಳಿತುಗಳ ಗುರುತಿಸಲಾರದೆ ಹೀಗಾಗಿದೆಯಷ್ಟೇ. ಈಗಲೂ ಒಂದು ಅವಕಾಶ ನೀಡುವೆ. ಪ್ರೀತಿಯ ಅಮೃತ ಪಾತ್ರೆಯಾಗಿಸುವೆ ನಿನ್ನನ್ನು. ಒಪ್ಪಿ ಬಂದುಬಿಡು, ಜೀವನ ಪೂರ್ತಿ ಜೊತೆಗಿರಲು ಕಾದಿಹೆ ನಾನು.

ಇಂತಿ ನಿನ್ನವ
ಪ.ನಾ.ಹಳ್ಳಿ.ಹರೀಶ್‌ ಕುಮಾರ್‌

ಟಾಪ್ ನ್ಯೂಸ್

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

arrested

Renuka Swamy ಹತ್ಯೆ ಪ್ರಕರಣ; A-8 ಆರೋಪಿ ಪೊಲೀಸರಿಗೆ ಶರಣು

drowned

Srirangapatna: ಕಾವೇರಿಯಲ್ಲಿ ಸ್ನಾನಕ್ಕಿಳಿದ ಇಬ್ಬರು ಯುವಕರು ನೀರುಪಾಲು

1-ajit

Security; ಮೂರನೇ ಬಾರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅಜಿತ್ ದೋವಲ್ ನೇಮಕ

3

Pradeep K Vijayan: ಮನೆಯಲ್ಲಿ ಶವವಾಗಿ ಪತ್ತೆಯಾದ ಖ್ಯಾತ ನಟ; ತನಿಖೆ ಆರಂಭ

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್

ಗ್ಯಾರಂಟಿ ಯೋಜನೆ ಕೈಬಿಡುವಂತೆ ಕಾಂಗ್ರೆಸ್ ಪಕ್ಷದಲ್ಲೇ ಒತ್ತಡ ಹೆಚ್ಚುತ್ತಿದೆ: ಶೆಟ್ಟರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಳಿಕೆಯಾದ ಘಟಪ್ರಭಾ ನದಿ

udayavani youtube

ಕಾಪು ಹೊಸ ಮಾರಿಗುಡಿ: ಮಾರಿಯಮ್ಮ, ಉಚ್ಚಂಗಿ ದೇವಿಗೆ ಸ್ವರ್ಣ ಗದ್ದುಗೆ ಸಮರ್ಪಣೆ ಸಂಕಲ್ಪ

udayavani youtube

ಕಟ್ಟಡದಲ್ಲಿ ಭೀಕರ ಅಗ್ನಿ ಅವಘಡ… 4 ಭಾರತೀಯರು ಸೇರಿ 41 ಮಂದಿ ದುರ್ಮರಣ

udayavani youtube

ಲಾಭದಾಯಕ ಮಲ್ಲಿಗೆ ಕೃಷಿ ಮಾಡುವುದು ಹೇಗೆ? | ಶಂಕರಪುರ ಮಲ್ಲಿಗೆ

udayavani youtube

ಪ್ಯಾಕೇಜ್ಡ್ ಫುಡ್ ಆರೋಗ್ಯಕರವಾದದ್ದೇ ? | ತಜ್ಞರು ಹೇಳುವುದೇನು?

ಹೊಸ ಸೇರ್ಪಡೆ

Modi Interview

J&K; ಉಗ್ರರ ನಿಗ್ರಹ ಸಾಮರ್ಥ್ಯಗಳ ಸಂಪೂರ್ಣ ಶ್ರೇಣಿ ನಿಯೋಜಿಸಲು ಮೋದಿ ಕರೆ

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

Padubidri: ಶೌಚಾಲಯದಲ್ಲಿ ಕುಸಿದು ಬಿದ್ದು ಸಾವು

6

Bantwal: ಅಕ್ರಮ ಮರಳು ಸಾಗಾಟ: ಪ್ರಕರಣ ದಾಖಲು

1-aaa

Kunigal; ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನ ಕೊಲೆ: ಐವರ ಬಂಧನ

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

ಅಪ್ಪನ ಬಗ್ಗೆ ಕೆಟ್ಟದಾಗಿ ಕಮೆಂಟ್‌ ಮಾಡಿದವರಿಗೆ ಧನ್ಯವಾದ… ದರ್ಶನ್‌ ಪುತ್ರನ ಪೋಸ್ಟ್ ವೈರಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.