ನೀವೇಕೆ ಬ್ರೂಸ್‌ಲೀ ಆಗ್ಬೇಕು?


Team Udayavani, Nov 7, 2017, 11:37 AM IST

lead-bruce-(1).jpg

ಆತ್ಮರಕ್ಷಣಾ ಕಲೆಗಳು ಅಥವಾ ಸೆಲ್ಫ್ ಡಿಫೆನ್ಸ್‌ ಅನ್ನೋದೇ ಒಂದು ಮ್ಯಾಜಿಕ್‌ ಇದ್ದಂತೆ. ಇದರ ಕಲಿಕೆಯಿಂದ ಶರೀರ ಬಲಿಷ್ಠವಾಗುತ್ತೆ ಅನ್ನೋದು ಒಂದು ಲಾಭವಾದರೆ, ಇನ್ನೊಂದು ಮಗ್ಗಲಿನಲ್ಲಿ ಇದರ ಲಾಭಗಳನ್ನು ಲೆಕ್ಕಹಾಕಿ ನಾವೇ ಸೋಲುತ್ತೇವೆ. ಇದು ನಮ್ಮ ವ್ಯಕ್ತಿತ್ವದಲ್ಲಿ ಹತ್ತುಹಲವು ಬದಲಾವಣೆಗಳಿಗೆ ಕಾರಣವಾಗುತ್ತದೆ… 

ಒಂದು ಸಣ್ಣ ಇರುವೆಗೂ ಹೋರಾಟ ಅನ್ನೋದು ಗೊತ್ತು. ತನ್ನ ಮೇಲೆ ಆಕ್ರಮಣ ಮಾಡಿದ ಜೀವಿಯನ್ನು ಹೇಗೆ ಹಿಮ್ಮೆಟ್ಟಿಸಬೇಕು ಎಂಬುದನ್ನು ತನ್ನದೇ ಆತ್ಮರಕ್ಷಣಾ ಕಲೆಯ ಮೂಲಕ ಅದು ತಿರುಗೇಟು ನೀಡಬಲ್ಲುದು. ಅದೇನು ಕುಂಗ್‌ಫ‌ು ಕಲಿತಿರುವುದಿಲ್ಲ. ಅದಕ್ಕೆ ಜೂಡೋ ಗೊತ್ತಿರುವುದಿಲ್ಲ. ಕುಸ್ತಿಯಂತೂ ಅದಕ್ಕೆ ತಿಳಿದೇ ಇಲ್ಲ. ಯಕಃಶ್ಚಿತ್‌ ಇರುವೆಯೇ ಆ ಸಂದಿಗ್ಧ ಕ್ಷಣದಲ್ಲಿ ಬ್ರೂಸ್‌ಲೀ ಆಗಬೇಕಾದರೆ, ಒಬ್ಬ ಸಾಮಾನ್ಯ ಮನುಷ್ಯನ ಸಾಮರ್ಥಯ ಹೇಗೆ ಪ್ರಕಟವಾಗಬೇಡ? ಆತನೂ ಹೋರಾಟಗಾರನೇ.

ಆದರೆ, ಇರುವೆಯಂತೆ ಸಹಜವಾಗಿ ಹೋರಾಡಿದರೆ, ಅನೇಕ ಸಲ ಸೋಲೇ ಮೈ ಮೇಲೆ ಬೀಳಬಹುದು. ಹಾಗೆ ಸೋಲಿನಿಂದ ತಪ್ಪಿಸಿಕೊಳ್ಳೋದು ಹೇಗೆ? ಅದಕ್ಕಂತಲೇ ಮಾನವ ರೂಪಿಸಿಕೊಂಡಿರುವುದು ಆತ್ಮರಕ್ಷಣಾ ಕಲೆ. ಎದುರಾಳಿಯಿಂದ ಆಗಬಹುದಾದ ಆಕ್ರಮಣಕ್ಕೆ ತಕ್ಕೆ ಉತ್ತರ ನೀಡಲು ಕಲಿಯುವ ವಿದ್ಯೆ ಇದು. ವ್ಯವಸ್ಥಿತವಾಗಿ ಆ ಕಲೆಯನ್ನು ರೂಢಿಸಿಕೊಳ್ಳದೇ ಹೋದರೆ, “ನಾವು ದುರ್ಬಲ’ ಎಂಬ ಭಾವ ಹುಟ್ಟುತ್ತದೆ.

ಹಾಗಾಗಿ, ಅನೇಕರು ಆತ್ಮರಕ್ಷಣಾ ಕಲೆಯನ್ನು ಕಲಿಯಲು ಉತ್ಸುಕರಾಗುತ್ತಾರೆ. ಕುಸ್ತಿ, ಕರಾಟೆ, ಜೂಡೋ, ಟೆಕ್ವಾಂಡೋ, ಕುಂಗ್‌ಫ‌ು ಮುಂತಾದ ಸಮರಕಲೆಗಳನ್ನು ಕಲಿಯುತ್ತಾರೆ. ದೇಹಕ್ಕೆ ಎಷ್ಟೇ ಕಷ್ಟವಾದರೂ, ಆ ಬ್ರಹ್ಮವಿದ್ಯೆಯನ್ನು ಕಲಿತೇ ಬಿಡೋಣವೆಂಬ ಉತ್ಸಾಹ ಪುಟಿಯುತ್ತದೆ. ಅಂದಹಾಗೆ, “ಸೆಲ್ಫ್ ಡಿಫೆನ್ಸ್‌’ ಎಂಬುದೇ ಒಂದು ಮ್ಯಾಜಿಕ್‌. ಇದು ನಮ್ಮೊಳಗೆ ಹತ್ತು ಹಲವು ಬದಲಾವಣೆಗಳನ್ನು ತರುತ್ತೆ. ಅವು ಏನೇನೆಂದರೆ…

1. ಆತ್ಮವಿಶ್ವಾಸ ತುಂಬುತ್ತೆ!
ಅನೇಕರಿಗೆ ಒಂದು ಅಳುಕಿರುತ್ತೆ; ಅಪಾಯದ ಸನ್ನಿವೇಶವನ್ನು ನನ್ನಿಂದ ಎದುರಿಸಲು ಸಾಧ್ಯ ಆಗುತ್ತೋ ಇಲ್ವೋ ಅಂತ. ಅದು ಯಾವಾಗ? ನಮ್ಮಲ್ಲಿ ಯಾವುದೇ ರಕ್ಷಣಾ ಕಲೆಗಳ ಬಗ್ಗೆ ಜ್ಞಾನವಿಲ್ಲದೇ ಇದ್ದಾಗ. ಒಂದು ವೇಳೆ, ಆತ್ಮರಕ್ಷಣಾ ಪಟ್ಟುಗಳನ್ನು ಕಲಿತಿದ್ದೇಯಾದರೆ, ನಾವು ಹಾಗೆ ಅಂಜುವುದೇ ಇಲ್ಲ. ನಮ್ಮ ಮನದಾಳದ ಋಣಾತ್ಮಕ ಅಂಶಗಳನ್ನು ಆ ಕಲೆ ಮಾಯಾರೂಪದಲ್ಲಿ ಆಚೆ ಹಾಕುತ್ತೆ.

2. ಬ್ಯಾಲೆನ್ಸ್‌ ಹೇಳ್ಕೊಡುತ್ತೆ!
ಅದು ರೈಲ್ವೆಯ ಟ್ರಾಕೋ, ಬಂಡೆಯ ಸಮೀಪವೋ ನಡೆಯುವ ಒಂದು ಸನ್ನಿವೇಶ. ಇನ್ನೇನು ಆಯಾತಪ್ಪಿ ಬೀಳ್ತೀರಿ ಎಂದಿಟ್ಟುಕೊಳ್ಳಿ, ರಕ್ಷಣಾ ತಂತ್ರಗಳು ತಲೆಯಲ್ಲಿದ್ದರೆ, ಆಗ ನಡೆಯೋ ಅವಘಢದಿಂದ ನಿಮಗೇನೂ ಆಗೋದಿಲ್ಲ. ಕಾರಣ, ಶರೀರವನ್ನು ಬ್ಯಾಲೆನ್ಸ್‌ ಮಾಡೋದು ಹೇಗೆಂಬುದು ಮೆದುಳಲ್ಲಿ ದಾಖಲಾಗಿರುತ್ತೆ. ಹೀರೋ ರೀತಿ ನೀವು ಹಾರುತ್ತೀರಿ. ಅಪಾಯದಿಂದ ಬಚಾವ್‌ ಆಗ್ತಿರಿ.

3. ನಿಮ್ಮೊಳಗೊಬ್ಬ ಸಿಪಾಯಿ
ಸುತ್ತ ಹತ್ತು ಮಂದಿ ಇರ್ತಾರೆ. ಒಬ್ಬೊಬ್ಬರು ಒಂದೊಂದು ರೀತಿ ಆಡ್ತಿರ್ತಾರೆ. ಒಬ್ಬ ಕೂಡ್ತಾನೆ, ಇನ್ನೊಬ್ಬ ವಿಚಿತ್ರವಾಗಿ ಆಡ್ತಾನೆ… ಹೀಗೆ. ಆದರೆ, ನಾವು ಮಾತ್ರ ಹಾಗೆ ವರ್ತಿಸೋಕ್ಕೆ ಸಾಧ್ಯವೇ ಇಲ್ಲ. ನಮ್ಮೊಳಗೊಂದು ಶಿಸ್ತು ನೆಲೆಯಾಗಿರುತ್ತೆ. ಆ ಶಿಸ್ತು ಬಂದಿದ್ದೇ ಆತ್ಮರಕ್ಷಣೆಯ ಕಲೆಯಿಂದ. ರಕ್ಷಣಾ ಕಲೆ ಕಲಿಯುವ ಪ್ರತಿ ವ್ಯಕ್ತಿಗೂ ಶಿಸ್ತು ಎನ್ನುವುದು ಒಂದು ಬೋನಸ್‌. ಕಲಿತ ವಿದ್ಯಾರ್ಥಿಗೆ ಶಿಸ್ತೇ ಆಭರಣ.

4. ಗೌರವ ಕೊಡ್ತೀರಿ…
ಗೌರವ ಅನ್ನೋದು ಈಗಿನ ಕಾಲದ ಮುಖ್ಯ ವಿಚಾರ. ಅದರಲ್ಲೂ ಯುವಕರು ಹಿರಿಯರನ್ನು ಕಾಣುವ ರೀತಿಯ ಬಗ್ಗೆ ನಾನಾ ಬಗೆಯಲ್ಲಿ ಸಮಾಜ ಮಾತಾಡುತ್ತೆ. ಆದರೆ, ಆತ್ಮರಕ್ಷಣಾ ಕಲೆಯನ್ನು ಕಲಿತ ಯುವಕನ ಮೇಲೆ ಒಂದು ನಂಬಿಕೆ ಇರುತ್ತೆ. ಆತ ಯಾವತ್ತೂ ಸುಮ್‌ಸುಮ್ನೆ ಯಾರನ್ನೂ ಕೆಣಕೋದಿಲ್ಲ. ಗೌರವದಿಂದಲೇ ನಡೆದುಕೊಳ್ತಾನೆ. ರಕ್ಷಣಾ ಕಲೆಯನ್ನು ಅಭ್ಯಸಿಸುವ ವೇಳೆ, ಎದುರಾಳಿಗೆ ಗೌರವ ಕೊಟ್ಟು ಹೋರಾಡುವ ನಿಯಮವಿರುತ್ತದೆ. ಅದೇ ಆತನಿಗೆ ರೂಢಿಯೂ ಆಗುತ್ತೆ.

5. ಸೈನಿಕನ ಉತ್ಸಾಹ
ರಸ್ತೇಲಿ ಹೋಗುತ್ತಿರುತ್ತೀರಿ. ಯಾರೋ ದುರುಳರು, ಮುಗ್ಧರಿಗೆ ಕಾಟ ಕಾಡ್ತಿರ್ತಾರೆ. ಇಲ್ಲವೇ, ಯಾರೋ ಅಸಹಾಯಕರು ಸಂಕಷ್ಟದಿಂದ ನಲುಗುತ್ತಿರ್ತಾರೆ. ಆಗ ಸುಮ್ಮನೆ ನಡೆದುಹೋಗಲು ನಿಮಗೆ ಮನಸ್ಸೇ ಆಗೋಲ್ಲ. ನಿಮ್ಮ ಒಳಮನಸ್ಸು ನಿಮಗೆ, “ಸೈನಿಕ ಆಗು, ಇಲ್ಲವೇ ಸ್ಪೈಡರ್‌ಮ್ಯಾನ್‌ ಆಗು’ ಅಂತ ಖಂಡಿತಾ ಪ್ರೇರೇಪಿಸುತ್ತೆ. ಅದಕ್ಕೆ ಕಾರಣ, ಸ್ಪೈಡರ್‌ಮ್ಯಾನ್‌ ಸಿನಿಮಾ ಅಲ್ಲ… ನೀವು ಕಲಿತಿರೋ ಆತ್ಮರಕ್ಷಣಾ ಕಲೆ!

ಸುಲಭವಾಗಿ ಸೆಲ್ಫ್ ಡಿಫೆನ್ಸ್‌ ಕಲಿಸುವ ಆ್ಯಪ್‌ಗ್ಳು
1. Self Defence Boxercise
2. Learn to Fight
3. Self Defense for Women
4. Bully Buster(ಮಕ್ಕಳಿಗೆ)
5. Karate WKF

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.